Homeಮುಖಪುಟಜ್ಯೋತಿಷಿಯ ಸಲಹೆಯ ಮೇರೆಗೆ ತಂಡವನ್ನು ಆಯ್ಕೆ ಮಾಡಿದ್ದ ಭಾರತೀಯ ಫುಟ್ಬಾಲ್ ಕೋಚ್: ವರದಿ

ಜ್ಯೋತಿಷಿಯ ಸಲಹೆಯ ಮೇರೆಗೆ ತಂಡವನ್ನು ಆಯ್ಕೆ ಮಾಡಿದ್ದ ಭಾರತೀಯ ಫುಟ್ಬಾಲ್ ಕೋಚ್: ವರದಿ

- Advertisement -
- Advertisement -

ಜೂನ್ 2022ರಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಷ್ಯನ್ ಕಪ್ ಪಂದ್ಯಕ್ಕೆ ದೆಹಲಿ ಜ್ಯೋತಿಷಿ ಭೂಪೇಶ್ ಶರ್ಮಾ ಅವರ ಸಲಹೆಯ ಮೇರೆಗೆ ಭಾರತೀಯ ಫುಟ್‌ಬಾಲ್ ತಂಡದ ಕೋಚ್ ಇಗೊರ್ ಸ್ಟಿಮ್ಯಾಕ್ ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (AIFF) ಶರ್ಮಾ ಅವರನ್ನು ಸ್ಟಿಮ್ಯಾಕ್‌ಗೆ ಪರಿಚಯಿಸಿದೆ ಎಂದು ವರದಿ ತಿಳಿಸಿದೆ.

ಸ್ಟಿಮ್ಯಾಕ್ ಪಂದ್ಯಕ್ಕಾಗಿ 11 ಸಂಭಾವ್ಯ ಆಟಗಾರರ  ಪಟ್ಟಿಯನ್ನು ಜ್ಯೋತಿಷಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಜೂನ್ 11 ರಂದು ಪಂದ್ಯ ನಡೆಯಬೇಕಿತ್ತು ಮತ್ತು ಜೂನ್ 9 ರಂದು ಪಟ್ಟಿಯನ್ನು ಜ್ಯೋತಿಷಿ ಸಲಹೆ ಮೇರೆಗೆ ಆಯ್ಕೆ ಮಾಡಲಾಗಿದೆ.

ಶರ್ಮಾ ಪ್ರತಿ ಆಟಗಾರನ ಹೆಸರಿನ ಎದುರು ಒಳ್ಳೆಯದು, ಉತ್ತಮವಾಗಿ ಆಡಬಹುದು, ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಬೇಕು, ಅವರಿಗೆ ತುಂಬಾ ಒಳ್ಳೆಯ ದಿನ, ಇವರಿಗೆ ಆ ದಿನ ಚೆನ್ನಾಗಿಲ್ಲ ಎಂದೆಲ್ಲಾ ಬರೆದಿದ್ದಾರೆ.

ಭಾರತ ತಂಡವು ಮೇ ಮತ್ತು ಜೂನ್ 2022ರಲ್ಲಿ ನಾಲ್ಕು ಪಂದ್ಯಗಳನ್ನು ಆಡಿತು. ಇವು ಜೋರ್ಡಾನ್, ಕಾಂಬೋಡಿಯಾ, ಅಫ್ಘಾನಿಸ್ತಾನ್ ಮತ್ತು ಹಾಂಗ್ ಕಾಂಗ್ ವಿರುದ್ಧ. ಪ್ರತಿ ಪಂದ್ಯಕ್ಕೂ ಮುನ್ನ ಸ್ಟಿಮ್ಯಾಕ್ ಆಟಗಾರರ ಪಟ್ಟಿಯನ್ನು ಶರ್ಮಾ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ವರದಿ ಹೇಳಿದೆ.

ಎರಡು ತಿಂಗಳವರೆಗೆ ಶರ್ಮಾ ಅವರ ಸೇವೆಗಾಗಿ 12 ರಿಂದ 15 ಲಕ್ಷ ರೂಪಾಯಿಗಳನ್ನು ಪಾವತಿಸಲಾಗಿದೆ ಎಂದು ದಾಸ್ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿ ಆಟದ ಮೊದಲು, ಸ್ಟಿಮ್ಯಾಕ್ ಶರ್ಮಾ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸಂದೇಶಗಳು ತೋರಿಸುತ್ತವೆ. ಈ ಸಂದೇಶಗಳು ಭಾರತೀಯ ತಂಡದ ಆಯ್ಕೆ ಪ್ರಕ್ರಿಯೆಯ ಸಮಗ್ರತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದೆ. ಪ್ರಮುಖ ತಂಡದ ಮಾಹಿತಿಯನ್ನು ಹೊರಗಿನವರ ಜೊತೆ ಹಂಚಿಕೊಳ್ಳುವುದರಿಂದ ದುರುಪಯೋಗವಾಗುವ ಅಪಾಯವಿದೆ ಎಂದು ಕೂಡ ವರದಿ ತಿಳಿಸಿದೆ.

ಇದನ್ನು ಓದಿ; ಕೇರಳ: ದೇವಸ್ಥಾನದ ಆವರಣದಲ್ಲಿ ಆರೆಸ್ಸೆಸ್ಸ್‌ಗೆ ಶಸ್ತ್ರಾಸ್ತ್ರ ತರಬೇತಿಗೆ ನಿಷೇಧಿಸಿದ ಹೈಕೋರ್ಟ್

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...