Homeಅಂಕಣಗಳುಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

ಇನ್ನು ಶಿವಮೊಗ್ಗದ ಲೀಡರುಗಳೆಲ್ಲ ಗಗನಗಾಮಿಗಳು!

- Advertisement -
- Advertisement -

ಈನಾಡಿಗೆ ದುಃಖಕರವಾದ ಸಂಗತಿಯೊಂದು ಹೊರಬಿದ್ದಿದೆಯಲ್ಲಾ. ನಮ್ಮ ಧೀಮಂತ ನಾಯಕ ಎಡೂರಪ್ಪನವರು ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಕಡೆಯ ಭಾಷಣವನ್ನು ಭಾವುಕವಾಗಿ ಮುಗಿಸಿ ದುಃಖತಪ್ತ ನಡಿಗೆಯಿಂದ ಹೊರನಡೆದಿದ್ದಾರೆ. ಅವರ ಜೊತೆ ಕರ್ನಾಟಕ ಕಂಡ ಅತ್ಯಂತ ದಕ್ಷ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಎಡೂರಪ್ಪನ ವಾಹನದವರೆಗೂ ಕಂಪನಿ ಕೊಟ್ಟಿರುವುದು ವಿಶೇಷ. ಎಡೂರಪ್ಪನವರ ಆಡಳಿತ ಅವಧಿಯ ದಾಖಲೆಗಳಲ್ಲಿ ಮೊದಲನೆಯದು ಯಾವುದೆಂದರೆ ತಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಪಡೆದ ಚಿಲ್ಲರೆ ಕಾಣಿಕೆಯನ್ನು ಚೆಕ್ ಮುಖಾಂತರ ಪಡೆದ ಆರೋಪದಲ್ಲಿ ಜೈಲಿಗೆ ಹೋದದ್ದು ಮತ್ತು ಜೈಲಿನಿಂದ ಹೊರಬಂದದ್ದು; ಬಿಡುಗಡೆಯಾದಾಗ ಅವರ ಮನೆಯವರು ಚಪ್ಪಾಳೆ ಹೊಡೆದು ಕುಣಿದದ್ದು ಇದೇ ಬಿಜೆಪಿ ಜನರ ಸಂತಸವಾಗಿ ಪ್ರಕಟವಾಯ್ತು. ಏಕೆಂದರೆ ಎಡೂರಪ್ಪ ಮಾತ್ರ ನಮ್ಮನ್ನ ಗೆಲ್ಲಿಸಬಲ್ಲರು ಎಂದು ತಿಳಿದಿದ್ದ ಕುಲಬಾಂಧವರಿಗೆ ಅವರ ಬಿಡುಗಡೆ ಸಂಭ್ರಮವುಂಟು ಮಾಡಿದ್ದು ಸಹಜ. ಆದರೇನು ಎಡೂರಪ್ಪ ಬಿಜೆಪಿಯಿಂದ ಸಿಡಿದು ಕೆಜಿಪಿ ಮಾಡಿಕೊಂಡು ಬಿಜೆಪಿಯನ್ನ ಮಕಾಡೆ ಮಲಗಿಸಿದ್ದು ಈಗ ಇತಿಹಾಸ. ಎಡೂರಪ್ಪನವರ ಶಕ್ತಿಯರಿತ ಬಿಜೆಪಿಗಳು ಮತ್ತೆ ಪಾರ್ಟಿಗೆ ಸೇರಿಸಿಕೊಂಡು ಕಾಂಗೈ ಮತ್ತು ಜೆಡಿಎಸ್‌ನಿಂದ ಮಾರಿಕೊಂಡವರನ್ನು ಕೊಂಡು ಇತಿಹಾಸ ಕಂಡರಿಯದ ಆಡಳಿತ ನೀಡಿದ್ದು ಅಲ್ಲದೆ, ಬೊಮ್ಮಾಯಿಯವರನ್ನು ತಂದು ಕರ್ನಾಟಕದ ಮೇಲೆ ಹೇರಿದ್ದೂ ಒಂದು ದಾಖಲೆಯಂತಲ್ಲಾ, ಥೂತ್ತೇರಿ.

*****

ಹಾಗೆ ನೋಡಿದರೆ ಎಡೂರಪ್ಪನ ಚರಿತ್ರೆ ಇನ್ನೂ ಮುಗಿದಿಲ್ಲ. ’ನಾನು ಸಕ್ರಿಯನಾಗಿ ಈ ನಾಡನ್ನು ತಿರುಗಿ ಪಾರ್ಟಿಯನ್ನು ಪವರ್ರಿಗೆ ತರುತ್ತೇನೆ. ಅದಕ್ಕಾಗಿ ವಿರೋಧಪಕ್ಷದವರ ಸಹಕಾರ ಪಡೆಯುತ್ತೇನೆ’ ಎಂದಿದ್ದಾರೆ. ಎಡೂರಪ್ಪನ ಒಬ್ಬ ಮಗ ಸಂಸದ, ಮತ್ತೊಬ್ಬ ಕೇಸರಿ ಪಾರ್ಟಿಯ ಉಪಾಧ್ಯಕ್ಷ. ಅವರ ಭವಿಷ್ಯ ಬಹಳ ಮುಖ್ಯ ವಿಷಯ. ಇಂತಿರುವಾಗ ಬಿಜೆಪಿಗಳು ವಂಶಾಡಳಿತದ ಬಗ್ಗೆ ಬೊಬ್ಬೆ ಹೊಡೆಯುವುದನ್ನು ನಿಲ್ಲಿಸಿಯೇ ಇಲ್ಲ. ಏಕೆಂದರೆ ಸತ್ಯ ಮರೆಮಾಚಿ ಸದಾ ಸುಳ್ಳು ಒದರುವಂತೆ ಆ ಪಾರ್ಟಿಯೇ ಟ್ರೇನಿಂಗ್ ಕೊಟ್ಟಿದೆ. ಆ ಪಾರ್ಟಿಯಿಂದ ಆಗಿರುವ ಪ್ರಧಾನಿಯೇ ಬಹಿರಂಗವಾಗಿ ಹೇಳಿರುವ ಸುಳ್ಳು ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ದೆಹಲಿಯ ಕನ್ನಡ ಸಾಂಸ್ಕೃತಿಕ ವೇದಿಕೆಯೊಂದರಲ್ಲಿ, ಕರ್ನಾಟಕಕ್ಕೆ ಅತ್ಯಧಿಕ ಅನುದಾನ ಕೊಟ್ಟಿದ್ದೇನೆ ಎಂದುಬಿಟ್ಟಿದ್ದಾರೆ ಪ್ರಧಾನಿ. ಬೆಚ್ಚಿಬಿದ್ದ ದೆಹಲಿ ಕನ್ನಡಿಗರು ಪ್ರಧಾನಿಯನ್ನ ಮಿಕಮಿಕ ನೋಡಿದರಂತೆ. ಏಕೆಂದರೆ ಕರ್ನಾಟಕ ಇತಿಹಾಸದಲ್ಲೇ ಕಂಡುಕಾಣದಿದ್ದಂತಹ ಪ್ರವಾಹಕ್ಕೆ ಸಿಕ್ಕಿ ತತ್ತರಿಸಿದಾಗ ಇಲ್ಲಿನ ಸರಕಾರ ಕೇಳಿದ 35 ಸಾವಿರ ಕೋಟಿಯ ಬದಲು ಕೇಂದ್ರ ಸರ್ಕಾರ ಕೊಟ್ಟದ್ದು ಕೇವಲ ನಾಲ್ಕೈದು ಸಾವಿರ ಕೋಟಿ. ಇನ್ನು ಜಿಎಸ್‌ಟಿ ಬಾಬ್ತಿನ ದೊಡ್ಡ ಪಾಲನ್ನ ಕೊಟ್ಟೆ ಇಲ್ಲ. ಕರ್ನಾಟಕವನ್ನ ಕೊಳ್ಳೆ ಹೊಡೆದು ಇತರ ರಾಜ್ಯಗಳಿಗೆ ಹಂಚುವುದನ್ನು ವಿರೋಧಿಸಿ ಬಿಜೆಪಿಗಳೇ ಮಾತನಾಡುತ್ತಿರುವಾಗ ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳಿದ ಪ್ರಧಾನಿಯನ್ನು ನೋಡಿ ಬಿಜೆಪಿಗಳೇ ದಂಗುಬಡಿದು ತತ್ತರಿಸಿಹೋದರಂತಲ್ಲಾ. ಯಾರದ್ದೇನಾದರೂ ಅಗಲಿ, ನನಗೆ ನನ್ನದೇ ಚಿಂತೆ ಅಂತ, ವೇದಿಕೆ ಮೇಲೆ ಕರೆಯದಿದ್ದಕ್ಕೆ ಸಿಟ್ಟಾದ ಸಾಹಿತ್ಯ ಪರಿಷತ್ ಜೋಶಿಯ ಮಂತ್ರಿ ಸ್ಥಾನಮಾನ ವ್ಯರ್ಥವಾಗಿ ಹೋಯ್ತಂತಲ್ಲ, ಥೂತ್ತೇರಿ.

*****

ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬಂತು. ನರೇಂದ್ರ ಮೋದಿಯವರು ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಬಿಜೆಪಿಗಳಿಗೆ ಜನ ಸೇರುವ ಅನುಮಾನ ಮೊದಲೇ ಕಾಡಿದ್ದರಿಂದ ಶಿವಮೊಗ್ಗದ ಬಡಾವಣೆಗಳಿಗೆ ಬಸ್ಸು ಕಳಿಸಿದರು. ಹಳ್ಳಿಹಳ್ಳಿಗೆ ವಾಹನಗಳನ್ನು ಕಳಿಸಿದರು. ಜೊತೆಗೆ ಕೈಗೆ ಕಾಸು ಕೊಟ್ಟು ಊಟ ಕೊಟ್ಟರು. ಆದರೆ, ಶಾಲಾ ಮಕ್ಕಳನ್ನ ತಂದು ಕುರ್ಚಿಗೆ ಕಟ್ಟಿಹಾಕಿದಂತೆ ಕೂರಿಸಿದ್ದು ಮಾತ್ರ ಅಕ್ಷಮ್ಯ ಅಪರಾಧ. ಏಕೆಂದರೆ ಶಾಲೆಯ ಮಕ್ಕಳನ್ನ ಕಳುಹಿಸಲು ಹಿಂಜರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕ್ರಮ ಜರುಗಿಸುವುದಾಗಿ ಬೆದರಿಸಿ ಮಕ್ಕಳನ್ನ ಹಿಂಸೆಗೆ ದೂಡಿದ್ದು ಮಕ್ಕಳ ದ್ವೇಷಿಗಳು ಮಾಡಿದ ಕೆಲಸ. ಏರೊಪ್ಲೇನ್ ನೋಡಿ ಊಟಮಾಡಿ ಬರುವ ಕೆಲಸ ಕೆಲವೇ ಕೆಲವು ಮಕ್ಕಳಿಗೆ ಸಂಭ್ರಮವಾಗಿ ಕಂಡರೂ ಈ ಬಿಜೆಪಿಗಳು ಮಕ್ಕಳ ಮನಸ್ಸನ್ನು ಕೆಡಿಸಲು ಕೈಹಾಕಿರುವುದು ಮಾತ್ರ ಅಕ್ಷಮ್ಯ. ವಾಸ್ತವ ಸ್ಥಿತಿ ಏನೆಂದರೆ ಶಿವಮೊಗ್ಗ ಜಿಲ್ಲೆಯ ಹಲವು ಹಳ್ಳಿಗಳ ಕಾಡುದಾರಿಯಲ್ಲಿ ಮಕ್ಕಳು ಶಾಲೆಗಾಗಿ ನಡೆಯುತ್ತಾರೆ, ಸರಿಯಾದ ರಸ್ತೆಗಳಿಲ್ಲ, ಸರಿಯಾದ ಸಮಯಕ್ಕೆ ಬರುವ ಬಸ್ಸುಗಳಿಲ್ಲ, ಮಲೆನಾಡಿನ ಜೀವನಾಡಿಯಾಗಿದ್ದ ಸಹಕಾರ ಸಾರಿಗೆ ಕಳ್ಳರ ಕೈಗೆ ಸಿಕ್ಕ ಫಲವಾಗಿ ನೂರಾರು ಬಸ್ಸುಗಳು ನಿಂತುಹೋಗಿವೆ.

ಇದನ್ನೂ ಓದಿ: ಏನಾದ್ರು ಮಾಡಿ ಮಂತ್ರಿಯಾಗಲೆಬೇಕು ಕಂಡ್ರೀ

ಅವುಗಳ ಮೇಲೆ ಗಿಡ ಬೆಳೆದಿದೆ. ವಿಮಾನ ನಿಲ್ದಾಣದ ಉದ್ಘಾಟನೆಗೆ ಖರ್ಚು ಮಾಡಿದ ಕಾಲು ಭಾಗವನ್ನ ವ್ಯಯಿಸಿದ್ದರೆ ಸಹಕಾರ ಸಾರಿಗೆಗೆ ಜೀವ ಬರುತ್ತಿತ್ತು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಖರ್ಚಾದ ಅರ್ಧ ಹಣಕ್ಕೆ ವಿಐಎಸ್‌ಎಲ್ ಸ್ಟೀಲ್ ಫ್ಯಾಕ್ಟರಿ ನಡೆಯುತ್ತಿತ್ತು, ಅದರ ಕಾಲು ಭಾಗಕ್ಕೆ ಎಂಪಿಎಂ ಕಾಗದ ಕಾರ್ಖಾನೆ ಚಾಲು ಆಗುತ್ತಿತ್ತು, ಬಡವರನ್ನು ಕಂಡರಾಗದ ಬಿಜೆಪಿಗಳಿಗೆ ಇವೆಲ್ಲಾ ಹೊಳೆಯುವುದಿಲ್ಲ. ಇದೆಲ್ಲಾ ಏನಾದರಾಗಲಿ, ಇನ್ನುಮುಂದೆ ಎಡೂರಪ್ಪ, ರಾಘವೇಂದ್ರ, ವಿಜ್ಯೇಂದ್ರ, ಈಶ್ವರಪ್ಪ, ಆತನ ಮಗ ಇವರೆಲ್ಲಾ ವಿಮಾನದಲ್ಲೇ ಶಿವಮೊಗ್ಗಕ್ಕೆ ಹೋಗುವುದಂತಲ್ಲಾ, ಥೂತ್ತೇರಿ

*****

ಮುಸ್ಲಿಂ ವಿದ್ವಾಂಸರೊಬ್ಬರು ಬ್ರಾಹ್ಮಣರ ಆಳ್ವಿಕೆಯಲ್ಲಿ ಆ ದೇಶ ಬಲಿಷ್ಠವಾಗುತ್ತದೆ ಎಂದಿದ್ದಾರೆ. ಈ ಮುಸ್ಲಿಂ ವಿದ್ವಾಂಸರ ಅಭದ್ರತೆಯ ಮಾತು ಕನಿಕರವೆನಿಸುತ್ತದೆ. ಮುಸಲ್ಮಾನನೊಬ್ಬ ಬ್ರಾಹ್ಮಣನನ್ನ ಹೊಗಳುವುದು, ಬ್ರಾಹ್ಮಣನು ಮುಸ್ಲಿಮರು ಹೇಗಿರಬೇಕೆಂಬ ಸೂಚನೆ ಕೊಡುವುದೇ ಈ ದೇಶದ ದುರಂತ; ಎಂದಾದರೂ ಬ್ರಾಹ್ಮಣರ ಆಳ್ವಿಕೆಯಲ್ಲಿ ಈ ದೇಶ ಎಂದು ಬಲಿಷ್ಠವಾಗಿತ್ತೇ ಎಂಬ ಬಗ್ಗೆ ಸಾಕ್ಷ್ಯಾಧಾರ ತೋರಿದ್ದರೆ ಚೆನ್ನಾಗಿತ್ತು. ಶತಮಾನಗಳ ಕಾಲ ಜಾತಿಯ ಶ್ರೇಣಿಕರಣದಿಂದ ಬಹುಸಂಖ್ಯಾತ ಶೂದ್ರ-ದಲಿತ ಶಕ್ತಿಯ ಅಂತಃಸತ್ವವೇ ನಾಶವಾಗಿ ಅವರೆಲ್ಲಾ ಗುಲಾಮರಂತೆ ಬದುಕುವಂತಾದಾಗ ವಿದೇಶಿಯರು ಈ ದೇಶಕ್ಕೆ ದಾಳಿ ಮಾಡಿ ಆಳತೊಡಗಿದರು. ಆಗ ’ಬುದ್ಧಿವಂತ’ರಾದ ಬ್ರಾಹ್ಮಣರು ವಿದೇಶಿ ಜನರ ಆಸ್ಥಾನದಲ್ಲಿ ಮಂತ್ರಿಗಳಾಗಿ ಕರಣಿಕರಾಗಿ ಆಸ್ಥಾನದ ವಿದೂಶಕರಾಗಿ ಅರಾಮವಾಗಿರತೊಡಗಿದ್ದು ಈಗ ಇತಿಹಾಸ. ಇನ್ನು ಬ್ರಿಟಿಷರು ಬಂದಾಗ ಇಂಗ್ಲಿಷ್ ಕಲಿತುಕೊಂಡು ಡಿ.ಸಿಗಳಾಗಿ, ಎಸ್ಪಿಗಳಾಗಿ ಬ್ರಿಟಿಷರ ಆಜ್ಞೆಯಂತೆ ನಮ್ಮವರನ್ನೇ ಬಗ್ಗುಬಡಿದು ಸೆರೆವಾಸಕ್ಕೆ ದೂಡಿದವರೂ ಇವರಲ್ಲಿದ್ದರು; ಬ್ರಾಹ್ಮಣ್ಯ ಪ್ರತಿಪಾದಿಸಿದ ಧರ್ಮ, ಅಸ್ಪೃಶ್ಯತೆ ಆಚರಿಸಿದ್ದರಿಂದ, ಅದಕ್ಕೆ ಸಿಕ್ಕಿದ ಜನ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಮೀಸಲಾತಿಯಿಂದ ಅಂತಹವರನ್ನು ಮೇಲೆತ್ತಬೇಕೆಂಬ ಕಾರ್ಯಕ್ರಮಕ್ಕೆ ಕೂಡ ಬೆಂಕಿಹಚ್ಚಿ ಸದ್ದಿಲ್ಲದೆ ಹತ್ತು ಪರಸೆಂಟ್ ಮೀಸಲಾತಿಯನ್ನು ಲಪಟಾಯಿಸಿದ್ದಾರೆ; ದಲಿತರೆಂದೂ ಮೇಲೆ ಬರದಂತೆ ನೋಡಿಕೊಳ್ಳಬೇಕು, ಸರಕಾರದ ಸಹಾಯಧನ ಅಥವಾ ಮೀಸಲಾತಿ ಕೊಡಬಾರದು, ಅವರು ಮೇಲೇಳದಂತೆ ನಮ್ಮ ಪಾದ ನೋಡಿಕೊಂಡು ಬದುಕಬೇಕೆಂದು ಹೇಳಿಹೋಗಿರುವ ಆರೆಸ್ಸೆಸಿನ ಗೋಳವಲಕರ ಮುಸ್ಲಿಮರನ್ನ ಎರಡನೇ ದರ್ಜೆ ಪ್ರಜೆಗಳನ್ನಾಗಿಸಿ ಎಂದಿದ್ದಾನೆ. ನೀವು ವಿದ್ವಾಂಸರಾದರೂ ಅವರ ಭಾಗಕ್ಕೆ ಎರಡನೇ ದರ್ಜೆ ಪ್ರಜೆ ಎಂಬುದು ಗೊತ್ತಿರಲಿ. ಥೂಥೂ ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...