Homeಅಂಕಣಗಳುಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

ಕರ್ನಾಟಕದ ಸುವರ್ಣ ಯುಗ ಅಂದರೆ ಇದೆ ಅಂತಲ್ಲಾ..

- Advertisement -
- Advertisement -

ಕರ್ನಾಟಕದ ಸುವರ್ಣ ಯುಗ ಅಂದರೆ ಇದೇ ಅಂತಲ್ಲಾ. ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿ ಕುಳಿತ ಕಾಗೇರಿ ಎಂಬ ಆರೆಸ್ಸೆಸ್ ಕಾರ್ಯಕರ್ತ ಸ್ಪೀಕರ್ ಸ್ಥಾನದ ಜವಬ್ದಾರಿಯನ್ನೇ ಮರೆತು ನಮ್ಮ ಆರೆಸ್ಸೆಸ್ ಎನ್ನುತ್ತಾರೆ. ಪ್ರಜಾಪ್ರಭುತ್ವವಾದಿ ಪ್ರತಿನಿಧಿಗಳು ಪ್ರತಿಭಟಿಸಿದಾಗ ಮುಂದೆ ನೀವೂ ಆರೆಸ್ಸೆಸ್, ಇಡೀ ದೇಶವೇ ಆರೆಸ್ಸೆಸ್‌ಮಯವಾಗುತ್ತದೆ ಎಂದು ಹೆಮ್ಮೆಯಿಂದ ಉತ್ತರಿಸುತ್ತಾರೆ. ಇದಕ್ಕೆ ಪೂರಕವಾಗಿ ಉಗ್ರ ಹಿಂದೂ ಪ್ರತಿಪಾದಕ ಆದರೆ ಲಿಂಗಾಯತ ಸಮುದಾಯಕ್ಕೆ ಸೇರಿರುವ ರೇಣುಕಾಚಾರ್ಯ ತನ್ನ ಮಗಳಿಗೆ ಬೇಡಜಂಗಮ ಸರ್ಟಿಫಿಕೇಟ್ ಪಡೆದಿರುವುದನ್ನು ಯಾವ ಅಳುಕೂ ಇಲ್ಲದೆ ಸದನದಲ್ಲಿ ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಾರೆ. ಹೆಮ್ಮೆ ಏಕೆಂದರೆ ನಾವಿನ್ನೂ ಯಾವ ಸವಲತ್ತನ್ನು ಪಡೆದಿಲ್ಲ ಎಂಬುದು. ಅಷ್ಟೇ ಅಲ್ಲದೆ ಅವರ ಮಗ ಮತ್ತು ತಮ್ಮನೂ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರಂತಲ್ಲಾ. ರೇಣುಕಾಚಾರ್ಯ ಕೃತ್ಯದಿಂದ ದಲಿತರು ದಂಗುಬಡಿದುಹೋಗಿರುವಾಗ, ಅತ್ತ ಸದನದ ನ್ಯಾಯಸ್ಥಾನದಲ್ಲಿರುವ ಕಾಗೇರಿ ಯಾವ ಅಳುಕೂ ಇಲ್ಲದೆ ರೇಣುಕಾಚಾರ್ಯ ತಪ್ಪೊಪ್ಪಿಗೆಯನ್ನ ಮುಗುಳುನಗುತ್ತಲೇ ಗಮನಿಸುತ್ತಿದ್ದಾಗ, ಬೆಂಗಳೂರು ಜನತಾ ಬಜಾರಿನ ಮಾಜಿ ಉದ್ಯೋಗಿಯಾದ ಸೋಮಣ್ಣ ತನ್ನ ಅಕ್ರಮ ಆಸ್ತಿ ಸಂಬಂಧ ಕೋರ್ಟಿನಿಂದ ಬಂದ ನೋಟಿಸಿಗೆ ಕೇರ್ ಮಾಡದೆ ತನ್ನಂತೆ ಆಸ್ತಿ ಮಾಡಿದವರ ಪಟ್ಟಿ ತಯಾರಿಸುತ್ತಿದ್ದಾರಂತಲ್ಲಾ. ಥೂತ್ತೇರಿ.

*****

ಸೋಮಣ್ಣ ರೇವಣ್ಣನಂತೆ ಕೆಲಸಗಾರ, ತಿನ್ನುವವನು ಕೆಲಸ ಮಾಡುತ್ತಾನೆ ತಿನ್ನದವನು ಸುಮ್ಮನಿದ್ದು ಹೋಗುತ್ತಾನೆ ಎಂಬ ನಂಬಿಕೆ ಉಳ್ಳವರಂತಲ್ಲಾ. ರಾಜಕಾರಣದ ಸೋಮಣ್ಣನನ್ನು ಸದನದಲ್ಲೇ ರೇವಣ್ಣ ಸಮರ್ಥಿಸಿಕೊಂಡರಲ್ಲಾ. ಹಾಗೆ ನೋಡಿದರೆ ರೇವಣ್ಣನೂ ಪಡುವಲಹಿಪ್ಪೆ ತೋಟದಲ್ಲಿದ್ದು ಸಾಕಾಗಿ ಸದನಕ್ಕೆ ಬಂದವರು. ಒಳ್ಳೆ ಪಿಡಬ್ಲುಡಿ ಕೆಲಸಗಾರ. ಆದರೆ ಸೋಮಣ್ಣನಂತೆ ಸಿಕ್ಕಿ ಬಿದ್ದಿಲ್ಲ. ನುರಿತ ಅಧಿಕಾರಿಗಳ ಸಲಹೆ ತೆಗೆದುಕೊಂಡು ದೇವೇಗೌಡರ ಒಪ್ಪಿಗೆ ಪಡೆದು ಮುಂದುವರಿಯುವ ರೇವಣ್ಣ ಏನಾದರಾಗಲೀ ಎಂದು ಹಲವು ನಿಂಬೆಹಣ್ಣುಗಳನ್ನು ಜೇಬಲ್ಲಿ ಮಡಗಿಕೊಂಡೇ ಸದನಕ್ಕೆ ಬರುತ್ತಾರಂತಲ್ಲಾ. ಆದರೂ, ಸೋಮಣ್ಣನಿಗೆ ಬಂದ ನೋಟಿಸು ನನಗೆ ಬಂದರೆ ಗತಿಯೇನು ಎಂದು ಸೋಮಣ್ಣನ ಸಮರ್ಥನೆಗೆ ನಿಂತರಂತಲ್ಲಾ. ಬೆಂಗಳೂರಲ್ಲಿ ಯಾರಾದರೂ ಗೆಲ್ಲಲಿ, ಆ ಸೋಮಣ್ಣ ಗೆಲ್ಲಬಾರದೆಂದು ದೇವೇಗೌಡರು ಆಡಿದ ಮಾತನ್ನ ಕೇಳಿಸಿಕೊಂಡಾಗಿನಿಂದ ದೇವೇಗೌಡರ ಕುಟುಂಬವನ್ನೇ ದ್ವೇಷಿಸುತ್ತಿದ್ದ ಸೋಮಣ್ಣ ರೇವಣ್ಣನ ರಕ್ಷಣಾತ್ಮಕ ಮಾತಿನಿಂದ ಎಚ್ಚರಗೊಂಡು ಜೆಡಿಎಸ್ ಅಭಿಮಾನಿಯಾಗಿದ್ದಾರಂತಲ್ಲಾ. ಈ ನಡುವೆ ಕರ್ನಾಟಕದಲ್ಲಿ ನಡೆಯುತ್ತಿರುವ ಯಾವ ವಿದ್ಯಮಾನಕ್ಕೂ ಬಾಯಿ ಬಿಡದೆ ಕುಳಿತಿರುವ ಮಾಜಿ ಪ್ರಧಾನಿಗಳ ಮಗನಾದ ಕುಮಾರಣ್ಣ ಇದ್ದಕ್ಕಿದ್ದಂತೆ ಮುಖ್ಯಮಂತ್ರಿಯ ಗಂಡಸ್ತನದ ಬಗ್ಗೆ ಹೇಳಿದ ಮಾತಿಗೆ ಜೆಡಿಎಸ್ ಗಂಡು ಹುಡುಗರೆಲ್ಲಾ ಎದ್ದು ನಿಂತು ಗುಟುರು ಹಾಕಿವೆಯಂತಲ್ಲಾ. ನಂತರ ಏನೋ ಭರದಲ್ಲಿ ಹಾಗಂದದ್ದು ಅಂದರಂತಲ್ಲಾ. ಇದನ್ನು ಕೇಳಿಸಿಕೊಂಡ ಕಾಂಗೈಗಳೂ ಕೂಡ ಎಚ್ಚರವಾದರಂತರಲ್ಲಾ. ಥೂತ್ತೇರಿ.

****

ಇದ್ದಕ್ಕಿದ್ದಂತೆ ಎಡೂರಪ್ಪನ ವಿರೋಧಿಗಳೂ ಕೂಡ ಏನೇ ಆಗಲಿ ಎಡೂರಪ್ಪನೇ ವಾಸಿ. ಅವರು ಯಂತದೇ ರಾಜಕಾರಣ ಮಾಡಿದರೂ ಕರ್ನಾಟಕವನ್ನು ಈ ಸ್ಥಿತಿಗೆ ದೂಡುತ್ತಿರಲಿಲ್ಲ ಎಂಬ ಉದ್ಘಾರ ತೆಗೆಯುತ್ತಿದ್ದಾರಲ್ಲಾ. ಹಾಗೆ ನೋಡಿದರೆ ಈ ಎಡೂರಪ್ಪ ಈಶ್ವರಪ್ಪನಂತೆ ಮುಸ್ಲಿಂ ದ್ವೇಷ ಮಾಡಿಕೊಂಡು ರಾಜಕಾರಣ ಮಾಡಿದವರಲ್ಲ. ಶಿಕಾರಿಪುರದಲ್ಲಿ ಮುಸ್ಲಿಮರು ಕೂಡ ಎಡೂರಪ್ಪನಿಗೆ ಓಟು ಮಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಒಮ್ಮೆ ಬಿಜೆಪಿಗೆ ಜಾಡಿಸಿ ಒದ್ದು ಕೆಜೆಪಿ ಪಕ್ಷ ಕಟ್ಟಿ ಕರ್ನಾಟಕವನ್ನ ಸುತ್ತಿ ಬಂದು ಬಿಜೆಪಿಗೆ ಮಣ್ಣು ಮುಕ್ಕಿಸಿದವರು ಅವರು. ಪ್ರಾಯವೇ ಇದ್ದಿದ್ದರೆ ಈಗಲೂ ಅಂತಹದೊಂದು ಸಾಹಸ ಮಾಡಿ ಬಿಜೆಪಿ ಬಾಯಿಗೆ ಬಿರುಡೆ ಇಕ್ಕುತ್ತಿದ್ದರು. ಆದರೇನು ಮಾಡೋದು, ವಯಸ್ಸು ಮತ್ತು ಮಕ್ಕಳ ಭವಿಷ್ಯ ಹಾಗೂ ಅಕ್ರಮ ಆಸ್ತಿ ಅವರನ್ನ ಬಿಜೆಪಿ ಗೊಂತಿನಲ್ಲೇ ಇರುವಂತೆ ಮಾಡಿದೆ. ನಾಗಪುರದ ಕಾರ್ಯಕ್ರಮಗಳನ್ನ
ಜಾರಿಮಾಡಬೇಕಾದರೆ ಎಡೂರಪ್ಪ ಹಿಂದೇಟು ಹಾಕಬಹುದೆಂದು ತೀರ್ಮಾನಿಸಿದ ಪರಿವಾರದವರು ಸಾದರ ಲಿಂಗಾಯತರ ಬೊಮ್ಮಾಯಿಯನ್ನ ಅಧಿಕಾರಕ್ಕೇರಿಸಿ, ತನ್ನ ಕಾರ್ಯಾಚರಣೆಯನ್ನು ಕಾರ್ಯಕರ್ತರಿಗೆ ವಹಿಸಿ ದೇಶದಲ್ಲೇ ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕಕ್ಕೆ ತನ್ನ ವಾನರ ಸೇನೆ ನುಗ್ಗಿಸಿ ಹಾಳು ಮಾಡುತ್ತಿವೆಯಲ್ಲಾ. ಇದನ್ನ ನೋಡುತ್ತ ಕುಳಿತಿರುವ ಕರ್ನಾಟಕದ ಮಠಮಾನ್ಯಗಳ ದಿಕ್ಕಿನಿಂದ ಭೋಜನದ ತೇಗಿನ ಶಬ್ದ ಬರುತ್ತಿದೆಯಂತಲ್ಲಾ. ಥೂತ್ತೇರಿ.

******

ಕರ್ನಾಟಕದಲ್ಲಿ ಜಾರಿಯಾಗುತ್ತಿರುವ ಮತೀಯ ಕ್ಷೋಭೆಯ ಕಾರ್ಯಕ್ರಮಗಳು ನಾಗಪುರದಲ್ಲಿ ತಯಾರಾಗಿ, ಮೊದಲ ಕಂತಾಗಿ ಉಡುಪಿ ಭಟ್ಟರ ಮುಖಾಂತರ ಕಾರ್ಯರೂಪಕ್ಕಿಳಿದವಂತಲ್ಲಾ. ಮೊದಲು ಹಿಜಾಬ್‌ನಿಂದ ಶುರುಮಾಡಿ, ಶಿವಮೊಗ್ಗದಲ್ಲೊಂದು ಹತ್ಯೆಯಾದ ನಂತರ ಅಲ್ಲಿ ಗಲಭೆಯೆಬ್ಬಿಸಿ, ನಂತರ ಜಾತ್ರೆಗಳಲ್ಲಿ ಮುಸ್ಲಿಮರು ಅಂಗಡಿ ಹಾಕಬಾರದೆಂಬ ಗಲಾಟೆಯ ಜೊತೆಗೆ, ಹಲಾಲ್ ಮಾಂಸದ ಜಗಳ ಹಚ್ಚಿ ಈಗ ಮಸೀದಿಗಳಲ್ಲಿ ಧ್ವನಿವಧಕ ನಿರ್ಬಂಧಿಸಬೇಕೆಂಬ ದಾಂಧಲೆಗೆ ಬಂದು ನಿಂತಿವೆಯಲ್ಲಾ. ಆತ್ತ ಬೀದಿಯಲ್ಲಿ ಈ ಕತೆಯಾದರೆ ಇತ್ತ ಸರಕಾರದ ಮಟ್ಟದಲ್ಲಿ ಟಿಪ್ಪುಸುಲ್ತಾನನ ಸಾಹಸಗಳನ್ನ ಮರೆಮಾಚಿ ಸಾಧಾರಣ ಸೈನಿಕನಂತೆ ಮರೆಮಾಚಲು ಹವಣಿಸುತ್ತಿವೆಯೆಲ್ಲಾ. ಬಿಜೆಪಿ ಬೃಹಸ್ಪತಿಗಳು ಟಿಪ್ಪು ಇತಿಹಾಸ ಕೆದಕಿ ನೋಡಿದರೆ ಆತನ ಆಡಳಿತದಲ್ಲಿ ಏಳೆಂಟು ಸಚಿವರ ಪೈಕಿ ಐದು ಜನ ಬ್ರಾಹ್ಮಣ ಮಂತ್ರಿಗಳಿದ್ದರು; ದಿವಾನ್ ಪೂರ್ಣಯ್ಯನೇ ಬ್ರಾಹ್ಮಣ; ಆತ ನೇಮಿಸಿದ ಶ್ಯಾನುಭೋಗರ ಪೈಕಿ ಎಲ್ಲ ಬ್ರಾಹ್ಮಣರಿದ್ದರು; ಅವರೆಲ್ಲಾ ಕೆರೆ ಹಿಂದಿನ ಗದ್ದೆಯನ್ನ ತಮ್ಮ ಹೆಸರಿಗೆ ಕಾತೆ ಮಾಡಿಸಿಕೊಂಡರು; ಒಕ್ಕಲಿಗರಿಂದ ಗದ್ದೆ ಗೇಯಿಸಿಕೊಂಡರು ಬದಲಾದ ಕಾಲಕ್ಕೆ ಬಹುಬೆಲೆಗೆ ಅದನ್ನು ಮಾರಿ ಬೆಂಗಳೂರು, ದೆಹಲಿ, ನ್ಯೂಯಾರ್ಕ್ ಸೇರಿಕೊಂಡರು; ಅವರ ಮಕ್ಕಳು ಪೋಸ್ಟಾಫೀಸು, ಬ್ಯಾಂಕು, ಇನ್ಸೂರೆನ್ಸ್ ಆಫೀಸು, ರೇಡಿಯೊ, ಪೇಪರ್, ಸಿನಿಮಾ, ಟಿವಿಯೊಳಗೆ ಸೇರಿಕೊಂಡರು. ಈ ಇತಿಹಾಸವನ್ನು ಗಮನಿಸಿದರೆ ಟಿಪ್ಪುವಿನಿಂದಾದ ತೊಂದರೆ ಪೂರ್ಣಯ್ಯನ ಸಂತತಿಯಿಂದ ನಡೆಯುತ್ತಿರುವ ಅನಾಹುತದ ಮುಂದೇ ಏನೇನೂ ಅಲ್ಲ ಎಂದು ಎಲ್ಲರಿಗೂ ಗುರುತಾಗಲಿದೆಯಂತಲ್ಲಾ. ಥೂತ್ತೇರಿ

– ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಸಿದ್ದರಾಮಯ್ಯ ರಾವಣನಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...