ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾಂತ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್ ಅವರ ವ್ಯಾಪಾರಕ್ಕೆ ಅಡ್ಡಿಪಡಿಸಿ, ಕಲ್ಲಂಗಡಿಗಳನ್ನು ರಸ್ತೆಗೆ ಎಸೆದು ವಿಕೃತಿ ಮೆರೆದ ಶ್ರೀರಾಮಸೇನೆಯ ದುಷ್ಕರ್ಮಿಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಶ್ರೀರಾಮಸೇನೆಯ ಗೂಂಡಾಗಳು ನಬಿಸಾಬ್ ಅವರಿಗೆ ಸೇರಿದ ಸುಮಾರು ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಒಡೆದು ಹಾಕಿರುವ ಪ್ರಕರಣದಲ್ಲಿ ಹಲವು ದುಷ್ಕರ್ಮಿಗಳ ವಿರುದ್ದ FIR ದಾಖಲಿಸಲಾಗಿದೆ.
ಬಂಧಿತ ದುಷ್ಕರ್ಮಿಗಳನ್ನು ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ, ಕುಮಾರ ಕಟ್ಟಿಮನಿ ಎಂದು ಗುರುತಿಸಲಾಗಿದೆ. ನಬಿಸಾಬ್ ಅವರು ನೀಡಿದ ದೂರಿನ ಅನ್ವಯ ಧಾರವಾಡ ಗ್ರಾಮಾಂತರ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಾನ್ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್, ಶ್ರೀರಾಮಸೇನೆಯ ಗೂಂಡಾಗಳಿಂದ ತೊಂದರೆಗೊಳಗಾಗಿದ್ದಾರೆ. ದೇವಸ್ಥಾನದ ಬಳಿ ಕಲ್ಲಂಗಡಿ ಮಾರುತ್ತಿದ್ದ ಕಾರಣಕ್ಕೆ ಗೂಂಡಾಗಳು ದಾಂಧಲೆ ನಡೆಸಿದ್ದಾರೆ. ಸುಮಾರು ಐದು ಕ್ವಿಂಟಾಲ್ ಕಲ್ಲಂಗಡಿಯನ್ನು ಒಡೆದು ಹಾಕಿ ವಿಕೃತಿ ಮೆರೆದಿದ್ದರು.
ಇದನ್ನೂ ಓದಿ: ಎಲ್ಲರೂ ನನ್ನ ಕೊಂದು ಬಿಡಿ: ಶ್ರೀರಾಮಸೇನೆಯ ಗೂಂಡಾಗಳಿಂದ ದಾಳಿಗೊಳಗಾದ ಮುಸ್ಲಿಂ ವ್ಯಾಪಾರಿಯ ಸಂಕಟ
ಘಟನೆ ನಡೆದ ದಿನ ಮಾಧ್ಯಮಗಳ ಮುಂದೆ ನೋವು ತೋಡಿಕೊಂಡಿದ್ದ ನಬಿಸಾಬ್, “ಬಂದವರು ಪಟ್ ಪಟ್ ಅಂತ ಕಲ್ಲಂಗಡಿ ಕಾಯಿಗಳನ್ನು ಒಡೆದರು. ಒಂದೆರಡು ಕಾಯಿಯಲ್ಲ, ತೆಗೆದುಕೊಳ್ಳುತ್ತೀವಿ ಸ್ವಾಮಿ ಸ್ವಲ್ಪ ನಿಲ್ಲಿಸಿ ಎಂದರೂ ಕೇಳಲಿಲ್ಲ. ಎಲ್ಲವನ್ನೂ ಒಡೆದುಹಾಕಿದರು. ನಾನೇನು ಮಾಡಬೇಕಾಗುತ್ರೀ?” ಎಂದು ಸಂಕಟ ವ್ಯಕ್ತಪಡಿಸಿದ್ದರು.
“ನಾವು ಸರಿದು ನಿಂತುಬಿಟ್ಟಿವಿ. ಅವರು ಒಡೆಯುತ್ತಿದ್ದಾಗ ನಾವೇನು ಮಾಡಲು ಆಗುತ್ರೀ? ಅವರು ಎಂಟು ಹತ್ತು ಇದ್ದರು, ನಾವೊಬ್ಬ ಇದ್ದೀನಿ. ಒಂದು ಕಾಯಿ ತೆಗೆದು ಇಡುವಷ್ಟರಲ್ಲಿ ಹತ್ತು ಕಾಯಿ ಒಡೆಯುತ್ತಿದ್ದರು. ಆರು ಕಿಂಟ್ವಾಲ್ ತೆಗೆದುಕೊಂಡು ಬಂದಿದ್ದೆ. ಒಂದು ಕಿಂಟ್ವಾಲ್ ಮಾತ್ರ ಮಾರಿದ್ದೆ. ಉಳಿದೆಲ್ಲವನ್ನೂ ಒಡೆದು ಹಾಕಿದ್ರು” ಎಂದು ನೋವು ತೋಡಿಕೊಂಡಿದ್ದರು.
ದುಷ್ಕರ್ಮಿಗಳ ಈ ಕೃತ್ಯಕ್ಕೆ ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಲವಾರು ಜನರು ನಬಿಸಾಬ್ ಅವರಿಗೆ ಮಿಡಿದಿದ್ದರು.
ಸೋಮವಾರದಂದು ಧಾರವಾಡ ಜಿಲ್ಲಾ ಕಚೇರಿಯ ಮುಂದೆ ಜನಪರ ಸಂಘಟನೆಗಳ ವೇದಿಕೆಯ ವತಿಯಿಂದ ದುಷ್ಕರ್ಮಿಗಳನ್ನು ಬಂಧಿಸಬೇಕು ಮತ್ತು ಸಂತ್ರಸ್ಥರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಶ್ರೀರಾಮಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಆದೇಶ ನೀಡಿ: ಸಿದ್ದರಾಮಯ್ಯ ಆಗ್ರಹ