Homeಮುಖಪುಟಕಡೆಗೂ ಬಿಡುಗಡೆಗೊಂಡ ಪತ್ರಕರ್ತ ಸಿದ್ದಿಕ್ ಕಪ್ಪನ್: 28 ತಿಂಗಳ ಜೈಲುವಾಸ ಅಂತ್ಯ

ಕಡೆಗೂ ಬಿಡುಗಡೆಗೊಂಡ ಪತ್ರಕರ್ತ ಸಿದ್ದಿಕ್ ಕಪ್ಪನ್: 28 ತಿಂಗಳ ಜೈಲುವಾಸ ಅಂತ್ಯ

- Advertisement -
- Advertisement -

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ 28 ತಿಂಗಳುಗಳಿಂದ ಬಂಧನದಲ್ಲಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್‌ ಕೊನೆಗೂ ಇಂದು ಲಕ್ನೋ ಜೈಲಿನಿಂದ ಹೊರಬಂದರು.

“28 ತಿಂಗಳ ಸುದೀರ್ಘ ಹೋರಾಟದ ನಂತರ ಬಿಡುಗಡೆಯಾಗಿದ್ದೇನೆ. ಜಾಮೀನು ಸಿಕ್ಕ ನಂತರವೂ ನನ್ನನ್ನು ಜೈಲಿನಲ್ಲಿಟ್ಟಿದ್ದರು. ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆಯೋ ಗೊತ್ತಿಲ್ಲ. ಈ ಎರಡು ವರ್ಷಗಳು ತುಂಬಾ ಕಠಿಣವಾಗಿದ್ದವು, ಆದರೆ ನಾನು ಎಂದಿಗೂ ಹೆದರಲಿಲ್ಲ. ಮುಂದೆಯೂ ಸರ್ಕಾರದ ಕಠಿಣ ಕಾನೂನುಗಳ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ” ಎಂದು ಬಿಡುಗಡೆ ಬಳಿಕ ಕಪ್ಪನ್ ಹೇಳಿದ್ದಾರೆ.

2020 ರ ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡುವುದಾಕ್ಕಾಗಿ ಕಪ್ಪನ್ ಇತರ ಮೂವರೊಂದಿಗೆ ಕಾರಿನಲ್ಲಿ ಹತ್ರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದರು. 2020 ರ ಅಕ್ಟೋಬರ್ 5 ರಂದು ಸಿದ್ದೀಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅಂದಿನಿಂದ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

ಕೇರಳ ಮೂಲದ ಪತ್ರಕರ್ತರಾಗಿರುವ ಸಿದ್ದಿಕ್‌ ಜಾತಿ ಆಧಾರಿತ ಗಲಭೆಯನ್ನು ಪ್ರಾರಂಭಿಸಲು ಮತ್ತು ಕೋಮು ಸೌಹಾರ್ದತೆಯನ್ನು ಸೃಷ್ಟಿಸಲು ಉದ್ದೇಶಿಸಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸರು ಮೊದಲು ಆರೋಪಿಸಿದ್ದರು. ತರುವಾಯ, ದೇಶದ್ರೋಹದ ಆರೋಪಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆನಂತರ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿತ್ತು.

“ಸಿದ್ದಿಕ್ ಕಪ್ಪನ್ ನಿರಪರಾಧಿಯಾಗಿದ್ದು ಅವರು ಸಾಮರಸ್ಯ ಕದಡಲು ಯಾವುದೇ ವೇದಿಕೆಯನ್ನು ಬಳಸಿಲ್ಲ. ಕಪ್ಪನ್‌ ಅವರಿಗೆ ಮರೆಮಾಚಲು ಏನೂ ಇಲ್ಲ. ಅವರು ತಮ್ಮ ಮುಗ್ಧತೆಯನ್ನು ಸಾಬೀತುಪಡಿಸಲು ನಾರ್ಕೋ ವಿಶ್ಲೇಷಣೆ ಅಥವಾ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಗಾಗಲು ಕೂಡಾ ತಯಾರು” ಎಂದು ನ್ಯಾಯಾಲಯದಲ್ಲಿ ಅವರ ಪರ ವಕೀಲರು ವಾದಿಸಿದ್ದರು.

ಕಪ್ಪನ್ ಮತ್ತು ಇತರರು ಮುಸ್ಲಿಮರು ಎಂಬ ಏಕೈಕ ಕಾರಣಕ್ಕಾಗಿ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ. ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ ಸಹ ಅವರನ್ನು ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿಡಲಾಗಿದೆ ಎಂದು ವಕೀಲರು ವಾದಿಸಿದ್ದರು.

ಸೆಪ್ಟಂಬರ್‌ನಲ್ಲಿ ಕಪ್ಪನ ಅವರಿಗೆ ಯುಎಪಿಎ ಪ್ರಕರಣದಲ್ಲಿ ಜಾಮೀನು ನೀಡುವಾಗ, ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಯುಯು ಲಲಿತ್‌ರವರ ಹೇಳಿಕೆ ನೀಡಿದ್ದರು.

ಕಪ್ಪನ್ ಬಳಿಯಿಂದ ಏನನ್ನು ವಶಪಡಿಸಿಕೊಂಡಿದ್ದೀರಿ? ಕಾರಿನಲ್ಲಿ ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ, ಅವನ ಬಳಿ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಹಾಗಿದ್ದ ಮೇಲೆ ಸ್ಪೋಟಕಗಳನ್ನು ಎಲ್ಲಿ ಬಳಸಿದರು ಎಂದು ಪ್ರಶ್ನಿಸಿದ ಲಲಿತ್‌ರವರು ಜಾಮೀನು ಮಂಜೂರು ಮಾಡಿದ್ದರು.

ಆನಂತರ ವಿಚಾರಣೆ ಆಲಿಸಿದ ಅಲಹಾಬಾದ್ ಹೈಕೋರ್ಟ್ ಕಪ್ಪನ್ ಮತ್ತು ಇತರ ಇಬ್ಬರೊಂದಿಗೆ ಬಂಧಿಸಲ್ಪಟ್ಟ ಕ್ಯಾಬ್ ಚಾಲಕನಿಗೆ ಇತ್ತೀಚೆಗೆ ಜಾಮೀನು ನೀಡಿತ್ತು.

ಇದನ್ನೂ ಓದಿ; ಒಕ್ಕೂಟ ಬಜೆಟ್ 2023-24: ‘ಕಡಿತ-ಬಡಿತ’ಗಳ ಬಜೆಟ್ – ಟಿ. ಆರ್. ಚಂದ್ರಶೇಖರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡು: 1 ಗಂಟೆಗಳ ಕಾಲ ಕಾರ್ಯನಿರ್ವಹಿಸದ ಮತಯಂತ್ರ ಸಂಗ್ರಹಿಸಿಟ್ಟಿದ್ದ ‘ಸ್ಟ್ರಾಂಗ್ ರೂಂ’ ಹೊರಗಿನ ಸಿಸಿಟಿವಿ

0
ತಮಿಳುನಾಡಿನ ಈರೋಡ್ ಸಂಸದೀಯ ಕ್ಷೇತ್ರದಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್‌ಗಳು (ಇವಿಎಂ) ಮತ್ತು ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಸಂಗ್ರಹಿಸಿಟ್ಟಿದ್ದ 'ಸ್ಟ್ರಾಂಗ್ ರೂಂ' ಹೊರಗೆ ಇರಿಸಲಾದ ಸಿಸಿಟಿವಿ ಕ್ಯಾಮೆರಾ ಸೋಮವಾರ...