Homeಚಳವಳಿ"ಇದು ಮಾಧ್ಯಮ ಸ್ವಾತಂತ್ರ್ಯದ ದಮನ" : ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ನಿರ್ಬಂಧ ಖಂಡಿಸಿ ಪ್ರತಿಭಟನೆ

“ಇದು ಮಾಧ್ಯಮ ಸ್ವಾತಂತ್ರ್ಯದ ದಮನ” : ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ನಿರ್ಬಂಧ ಖಂಡಿಸಿ ಪ್ರತಿಭಟನೆ

- Advertisement -
- Advertisement -

ಕಾಶ್ಮೀರದಲ್ಲಿ 370 ಆರ್ಟಿಕಲ್ ರದ್ದುಗೊಳಿಸಿದ ನಂತರ ಮಾಧ್ಯಮ ಸ್ವಾತಂತ್ರ್ಯವನ್ನು ನಿಗ್ರಹಿಸಲಾಗಿದೆ. ಕಾಶ್ಮೀರ ವಿಶೇಷಾಧಿಕಾರ ರದ್ದಾಗಿ 60 ದಿನಗಳು ಕಳೆದರೂ ಪತ್ರಕರ್ತರ ಮೇಲಿನ ನಿಷೇಧ ಮಾತ್ರ ತೆರವಾಗಿಲ್ಲ. ಸಂವಹನ ಮಾಧ್ಯಮದ ಮೇಲಿನ ನಿರ್ಬಂಧ ವಿರೋಧಿಸಿ, ಕಾಶ್ಮೀರ ಪತ್ರಕರ್ತರು ಶ್ರೀನಗರದಲ್ಲಿ ಮೌನ ಪ್ರತಿಭಟನೆ ನಡೆಸಿದ್ದಾರೆ.

ಇದು ಕಾಶ್ಮೀರದಿಂದ ಹೊರಗಿನ ಪ್ರಪಂಚಕ್ಕೆ ಮಾಹಿತಿ ಹರಿವು ತಡೆಯಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ಪ್ರಯತ್ನ ಎಂದು ಪತ್ರಕರ್ತರು ಆರೋಪಿಸಿದರು. ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಒಟ್ಟುಗೂಡಿ, ಪ್ರೆಸ್ ಕ್ಲಬ್ ಎದುರು ಭಿತ್ತಿಫಲಕ ಮತ್ತು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಸೇವೆಗಳ ಮೇಲಿನ ನಿರ್ಬಂಧ ತೆಗೆದು ಹಾಕುವಂತೆ ಒತ್ತಾಯಿಸಿದರು.

ಹಿರಿಯ ಪತ್ರಕರ್ತ ನಾಸೀರ್ ಎ. ಮಾತನಾಡಿ, ಇಂಟರ್ನೆಟ್ ಹಾಗೂ ಮೊಬೈಲ್ ಸೇವೆ ನಿರ್ಬಂಧದಿಂದಾಗಿ ಕಾಶ್ಮೀರದ ಸ್ಥಿತಿಗತಿಯ ಬಗ್ಗೆ ವರದಿ ಮಾಡಲು ಸಾಕಷ್ಟು ತೊಂದರೆಯಾಗಿದೆ. ಕಾಶ್ಮೀರದ ಮಾಧ್ಯಮದವರ ಸ್ವಾತಂತ್ರ್ಯವನ್ನು ದಮನ ಮಾಡಲಾಗುತ್ತಿದೆ. ಹೊರ ಜಗತ್ತಿಗೆ ಕಾಶ್ಮೀರದ ಸ್ಥಿತಿಗತಿಯ ವರದಿ ತಲುಪದಂತೆ ಮಾಡಲು ನಿರ್ಬಂಧಿಸಲಾಗುತ್ತಿದೆ ಎಂದರು.

ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ನಿರ್ಬಂಧ ಹೇರುವುದು ತಮಾಷೆಯ ವಿಷಯವಾಗಿದೆ. ದಿನಪತ್ರಿಕೆ ಹಾಗೂ ವಾರ ಪತ್ರಿಕೆಗಳು ಸರಿಯಾಗಿ ಪಬ್ಲಿಷ್ ಆಗುತ್ತಿಲ್ಲ. ಕೆಲವು ಪತ್ರಿಕೆಗಳು ಪುಟಗಳ ಸಂಖ್ಯೆಯನ್ನೂ ಕಡಿತಗೊಳಿಸಿವೆ. ಇಂಟರ್ನೆಟ್ ಇಲ್ಲದೇ ಆನ್ ಲೈನ್ ಗೆ ಸುದ್ದಿ ಅಪ್ ಡೇಟ್ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಕಾಶ್ಮೀರದ ವಿವಿಧ ಭಾಗಗಳಲ್ಲಿರುವ ವರದಿಗಾರರು ಕೆಲಸವಿಲ್ಲದೇ ಕುಳಿತಿದ್ದಾರೆ.

ಇಂಟರ್ನೆಟ್ ಕೇಂದ್ರವು ಒಂದೇ ಸಂಪರ್ಕ ಹೊಂದಿದ್ದು, ಒಂಭತ್ತು ಟರ್ಮಿನಲ್ ಗಳನ್ನು ಹೊಂದಿದೆ, ಅಂತಾರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ವರದಿ ಕಳುಹಿಸಲು ಮತ್ತು ಇಮೇಲ್ ಪರಿಶೀಲಿಸಲು ತಮ್ಮ ಸರದಿಗಾಗಿ ಕ್ಯೂನಲ್ಲಿ ನಿಂತು ಕಾಯಬೇಕು. ಮಾಹಿತಿ ಕೇಂದ್ರದಿಂದ ಈ ಅವಕಾಶ ಮಾಡಿಕೊಡಲಾಗಿದೆ. ಒಬ್ಬ ಪತ್ರಕರ್ತ 15 ನಿಮಿಷ ಇಂಟರ್ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ...

0
ಮೇ 2,2024ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ " ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದೆ" ಎಂದಿದ್ದಾರೆ. "ಕಾಂಗ್ರೆಸ್‌ನ ಪ್ರಣಾಳಿಕೆ...