Homeಕರ್ನಾಟಕಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

ಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

- Advertisement -
- Advertisement -

ಸೆಪ್ಟಂಬರ್ 2019ರಲ್ಲಿ ಕರ್ನಾಟಕ ಸರಕಾರ ಹೈದರಾಬಾದು ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿತು. ಆಗ ನಾನು ನನ್ನ ಸ್ನೇಹಿತರಲ್ಲಿ ಒಂದು ಸಂದೇಶ ಹಂಚಿಕೊಂಡಿದ್ದೆ- “ನಾಳೆ ಘನ ಸರಕಾರವು ತನ್ನೆಲ್ಲಾ ಸಚಿವರು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಮುಂತಾದವರನ್ನು ಈಶಾನ್ಯ ಭಾಗದ ಜಿಲ್ಲೆಗಳಿಗೆ ಕಳಿಸಲಿದೆ. ಅಲ್ಲಿನ ಎಲ್ಲಾ ಬಡವರನ್ನು ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿಸಲಿದ್ದಾರೆ. ಬಡವರೆಲ್ಲಾ ಸಾಲಾಗಿ ನಿಲ್ಲಲಿದ್ದಾರೆ. ಅವರ ಹೆಸರು, ವಿಳಾಸಗಳನ್ನು ಅಧಿಕಾರಿಗಳು ಬರೆದುಕೊಂಡು ದಾಖಲು ಮಾಡಲಿದ್ದಾರೆ. ಆ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಆ ಎಲ್ಲ ಬಡವರ ಹೆಸರುಗಳನ್ನು ಒಂದೊಂದಾಗಿ ಬದಲು ಮಾಡಿ ಎಲ್ಲರಿಗೂ ಲಕ್ಷ್ಮಿ ಪತಿ ಎಂದು ಹೊಸ ಹೆಸರು ಇಡಬೇಕು. ಈ ರೀತಿಯಿಂದ ಕಲ್ಯಾಣ ಕರ್ನಾಟಕದ ಉದ್ಘಾಟನೆ ಆಗಲಿದೆ” ಎಂದು. ಈ ರೀತಿ ಕರ್ನಾಟಕದ ಬಿಜೆಪಿ ಸರಕಾರ ಭಾರತದ ಅತಿ ಹಿಂದುಳಿದ ಭೂಪ್ರದೇಶದ ಕಲ್ಯಾಣ ಮಾಡಿಬಿಟ್ಟೆ ಎಂದು ತಿಳಿದುಕೊಂಡಿತು.

ಇದಕ್ಕೆ ಪ್ರತಿಕ್ರಿಯೆ ಭಿನ್ನವಾಗಿತ್ತು. ಬಹುತೇಕರು ಇದೊಂದು ‘ಗುಡ್ ಜೋಕ್’ ಅಂತ ನಕ್ಕರು. ಅಲ್ಲಿನ ನೆಲದ ಸಂಕಟ ಅರಿತವರು ನನ್ನೊಡನೆ ಮರುಗಿದರು. ಅಂದರೆ ಅಲ್ಲಿನ ಜನ ಮಾತ್ರ ನಗಲಿಲ್ಲ. ಅವರ ಪ್ರತಿಕ್ರಿಯೆ ರಚನಾತ್ಮಕವಾಗಿತ್ತು. ನಾಲ್ಕು ವರ್ಷದ ನಂತರ ಹೈದರಾಬಾದು ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿ ಮಾಡಿದ ಸರಕಾರವೆ ಬದಲಾಗಿಹೋಯಿತು.

ಈಶಾನ್ಯ ಕರ್ನಾಟಕದ ಇತಿಹಾಸದ ಭಾಗ ಆಗಿಹೋಗಿರುವ ನಿಜಾಮ ಸರಕಾರದ ಆಡಳಿತವನ್ನು ನೆನಪಿಸುವ ಹೆಸರು ಹೈದರಬಾದು ಕರ್ನಾಟಕ. ಅದನ್ನು ಅಳಿಸುವ ಪ್ರಯತ್ನ ಮಾಡಿದವರು ಕನಿಷ್ಟ ಪಕ್ಷ ನಿಜಾಮರಿಗಿಂತಲೂ ಒಳ್ಳೆಯ ಆಡಳಿತ ಕೊಡಬೇಕಾಗಿತ್ತು. ಅದನ್ನೂ ಕೊಡಲಿಲ್ಲ.

ಮಲ್ಲಿಕಾರ್ಜುನ್ ಖರ್ಗೆ

ಜಿಲ್ಲಾ ಹಾಗೂ ತಾಲೂಕು ಗಡಿ ಬದಲಾವಣೆಗಳು ಆಗಿದ್ದರಿಂದ 2018ರಲ್ಲಿ ಹೈದ್ರಾಬಾದು ಕರ್ನಾಟಕದಲ್ಲಿ ಇದ್ದ 40 ಸೀಟುಗಳು ಈಗ ಕಲ್ಯಾಣ ಕರ್ನಾಟಕದಲ್ಲಿ 41 ಆಗಿವೆ. ಜನರ ಮನಸ್ಸಿನಲ್ಲಿ ವಿವಿಧ ಪಕ್ಷಗಳ ಕಡೆ ಇದ್ದ ಒಲವೂ ಬದಲಾವಣೆ ಆಗಿದೆ. ಕೇವಲ ಐದು ವರ್ಷದ ಹಿಂದೆ 40ರಲ್ಲಿ 15 ಸೀಟು ಗೆದ್ದ ಆಳುವ ಪಕ್ಷ ಬಿಜೆಪಿ, 10ಕ್ಕೆ ಇಳಿಯಿತು. 21 ಸೀಟು ಗೆದ್ದಿದ್ದ ಕಾಂಗ್ರೆಸ್‌ನ ಬಲ 26ಕ್ಕೆ ಏರಿತು. ನಾಲ್ಕು ಸೀಟು ಗೆದ್ದಿದ್ದ ಜೆಡಿಎಸ್ ಒಂದೇ ಸೀಟು ಉಳಿಸಿಕೊಂಡಿತು. ಇಬ್ಬರು ಸ್ವತಂತ್ರರು ಗೆದ್ದರು.

2019ರಲ್ಲಿ ನಮ್ಮ ಕೆಲ ಪ್ರಜಾ ಪ್ರತಿನಿಧಿಗಳು ಪಕ್ಷ ಬದಲಾವಣೆ ಮಾಡಿದರು. ಅದು ಕೇವಲ ಪ್ರವಚನ-ಭಾಷಣ-ಸಭೆ-ಧ್ಯಾನಗಳಿಂದ ಆಗಲಿಲ್ಲ. ಅದಕ್ಕೆ ಒಂದು ಆಪರೇಷನ್ ಮಾಡಬೇಕಾಯಿತು. ಈ ಆಪರೇಷನ್ ಕಮಲವು ಯಾವುದೇ ಸ್ವಾರ್ಥಕ್ಕಾಗಿ ಅಲ್ಲದೆ, ಕೇವಲ ತಮ್ಮ ಮನ ಪರಿವರ್ತ ಯಿಂದ, ಸೈದ್ಧಾಂತಿಕ ಮರುಚಿಂತನೆಗಳಿಂದಾಗಿ ನಡೆಯಿತು ಎಂದು ಆ ಶಸ್ತ್ರ ಚಿಕಿತ್ಸೆಯಿಂದ ಗುಣವಾಗಿ ಹೊರಬಂದ ನಮ್ಮ ಪ್ರಜಾ ಹಿತರಕ್ಷಕರು ಹೇಳಿಕೊಂಡರು. ಆನಂತರ ಕಾಂಗ್ರೆಸ್ 18 ಸ್ಥಾನಕ್ಕೆ ಕುಸಿಯಿತು. ಬಿಜೆಪಿಯ ಸಂಖ್ಯಾಬಲ ಹೆಚ್ಚಿತು.

ಇದನ್ನೂ ಓದಿ: ನಾನು ಕಂಡಂತೆ ಸಿದ್ದರಾಮಯ್ಯ: ಲೇಖಕ ಕೆ. ಶ್ರೀನಾಥ್

ಈಗ ಸಾಕಷ್ಟು ಬದಲಾವಣೆ ಆಗಿದೆ. ಕಾಂಗ್ರೆಸ್‌ನ ಸಂಖ್ಯೆ 8ರಷ್ಟು ಹೆಚ್ಚಾಗಿದೆ. ಆ ಸೀಟುಗಳನ್ನು ಬಿಜೆಪಿ ಕಳೆದುಕೊಂಡಿದೆ. ಆದರೆ ಈ ಬದಲಾವಣೆ ಏಕರೂಪಿಯಾಗಿಲ್ಲ. ಬಳ್ಳಾರಿಯ ಎಲ್ಲಾ ಐದು ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದರೆ, ಬೀದರ್‌ನ ಆರು ಸ್ಥಾನಗಳಲ್ಲಿ ಕೇವಲ ಎರಡು ಕಾಂಗ್ರೆಸ್ ಹಾಗೂ ನಾಲ್ಕು ಬಿಜೆಪಿ ಗೆದ್ದುಕೊಂಡಿವೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜಿಲ್ಲೆ ಕಲಬುರ್ಗಿಯಲ್ಲಿ 9ರಲ್ಲಿ 7ನ್ನು ಅವರ ಪಕ್ಷದ ಹುರಿಯಾಳುಗಳು ಗೆದ್ದರೆ, ಕೊಪ್ಪಳದಲ್ಲಿ ಮೂವರು ವಿಜಯಿಯಾಗಿದ್ದಾರೆ. ಹೊಸ ಜಿಲ್ಲೆ ವಿಜಯನಗರದಲ್ಲಿ ಎರಡರಲ್ಲಿ ಕಾಂಗ್ರೆಸ್ ಹುದ್ದರಿಗಳು ಗೆದ್ದರು. ಹಟ ಮಾಡಿ ಹೊಸ ಜಿಲ್ಲೆ ನಿರ್ಮಾಣ ಮಾಡಿದ ಆನಂದ್ ಸಿಂಗ್ ಅವರ ಜಾಗದಲ್ಲಿ ನಿಂತಿದ್ದ ಅವರ ಮಗ ಸಿದ್ಧಾರ್ಥನನ್ನು ಅಲ್ಲಿಯ ಜನ ಸೋಲಿಸಿದರು.

ಹಾಗೆ ಅಂತಹ ಎಲ್ಲ ಕಡೆಗಳ ಫಲಿತಾಂಶಗಳಿಗೆ ರಾಜ್ಯ ಅಥವಾ ಜಿಲ್ಲಾ ಮಟ್ಟದ ಕಾರಣಗಳೇ ಇರಬೇಕು ಅಂತ ಅಲ್ಲ; ಬೀದರ್ ಜಿಲ್ಲೆಯಲ್ಲಿ ಅತಿ ಸ್ಥಳೀಯ ಕಾರಣಗಳಿಂದಾಗಿ, ವಿಪರೀತ ಪರಿಣಾಮ ಬಂದಿದೆ. ಕಲ್ಯಾಣ ಕರ್ನಾಟಕದ ಎಲ್ಲ ಕಡೆ ಕಾಂಗ್ರೆಸ್ ಬಂದರೆ ಇಲ್ಲಿ ಮಾತ್ರ ಬಿಜೆಪಿ ಹೆಚ್ಚು ಸೀಟು ಗೆದ್ದಿದೆ. ರಾಜ್ಯದ ಟ್ರೆಂಡ್‌ಗೆ ಇದು ವಿರುದ್ಧವಾಗಿದೆ. ಇದು ಹೊಸದಲ್ಲ. 1999ರಲ್ಲಿಯೂ ಕೂಡ ಹೀಗೆಯೇ ಆಗಿತ್ತು. ಜಿಲ್ಲೆಗೆ ಒಂದು ಮಂತ್ರಿ ಮಾಡಲೇಬೇಕು ಎಂದುಕೊಂಡು ಬಸವರಾಜ ಪಾಟೀಲ್ ಹುಮ್ನಾಬಾದ್ ಅವರನ್ನು ಪರಿಷತ್ತಿನ ಸದಸ್ಯರನ್ನಾಗಿಸಿ ಅವರನ್ನು ಮಂತ್ರಿಮಂಡಲಕ್ಕೆ ಸೇರಿಸಲಾಯಿತು.

ಈಶ್ವರ ಸಿಂಗ್ ಠಾಕೂರ್

ಈಗಿನ ಬೀದರ ಫಲಿತಾಂಶಕ್ಕೂ ಅಲ್ಲಿನ ಸ್ಥಳೀಯ ವಿದ್ಯಮಾನಗಳೇ ಕಾರಣ. ಅಲ್ಲಿನ ಕೆಲವು ಬಿಜೆಪಿ ನಾಯಕರು ಕೆಲ ವಿಷಯಗಳ ಬಗ್ಗೆ ಪ್ರತಿಷ್ಟೆ ಬೆಳೆಸಿಕೊಂಡು, ಅವರ ಹಿಂಬಾಲಕರು ಒಗ್ಗೂಡಿ ಕೆಲಸ ಮಾಡದೆ ಇರುವ ಕಾರಣಕ್ಕಾಗಿ ಹಾಗೂ, ತ್ರಿಕೋನ ಸ್ಪರ್ಧೆಯ ಗದ್ದಲದಲ್ಲಿ ಒಬ್ಬರನ್ನು ಸೋಲಿಸಲು ಇನ್ನೊಬ್ಬರನ್ನು ಗೆಲ್ಲಿಸುವ ಆಟ ನಡೆದಿದ. ಅಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಬಜರಂಗ ದಳ ಕಾರ್ಯಕರ್ತ ಈಶ್ವರ ಸಿಂಗ್ ಠಾಕೂರ್ ಅವರು ತಮ್ಮನ್ನು ತಮ್ಮ ಪಕ್ಷದ ಕೆಲ ನಾಯಕರು ಸೋಲಿಸಿದರು ಎಂದು ಆರೋಪಿಸಿದ್ದಾರೆ. ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ಬಿಜೆಪಿಯನ್ನು ಏಕವ್ಯಕ್ತಿ ಸಂಸ್ಥೆಯಾಗಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ, ಅದರಿಂದ ಹಳೆಯ ಕಾರ್ಯಕರ್ತರು ದೂರ ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಈ ರೀತಿ ಗಾಳಿ ಬೀಸುತ್ತಿದ್ದಾಗ ನಮ್ಮ ಮಾಧ್ಯಮದವರು ತಲೆಗೊಂದು ತರತರ ವಿಚಾರ ಮಾಡಿದರು.

ಬುದ್ಧಿವಂತರ ಜಿಲ್ಲೆಯ ಮೂಲದವರಾದ ಅತಿ ಬುದ್ಧಿವಂತ ದೆಹಲಿ ವಾಸಿ ಪತ್ರಕರ್ತರೊಬ್ಬರು ನನಗೆ ಫೋನು ಮಾಡಿದ್ದರು: “ಬಿಜೆಪಿ- ಸಂಘ ಪರಿವಾರದವರ ಪ್ರಯೋಗ ಕರಾವಳಿಯಲ್ಲಿ ಯಶಸ್ವಿಯಾದಂತೆ ಹೈದರಬಾದು ಕರ್ನಾಟಕದಲ್ಲಿ ಆಗುತ್ತಿಲ್ಲವಲ್ಲಾ ಯಾಕೆ” ಎನ್ನುವುದು ಅವರ ಪ್ರಶ್ನೆ. “ಬಹುಶಃ ಕರಾವಳಿಯಲ್ಲಿ ಅವರ ಬಂಡವಾಳಕ್ಕೆ ತಕ್ಕ ಲಾಭ ಸಿಕ್ಕಷ್ಟು ಈಶಾನ್ಯ ಭಾಗದಲ್ಲಿ ಸಿಕ್ಕಿಲ್ಲ. ಅದಕ್ಕೆ ಅವರು ಅಲ್ಲಿ ಪ್ರಯತ್ನ ಕೈಬಿಟ್ಟಿದ್ದಾರೆ” ಎಂಬ ಅವರ ಸಿದ್ಧಾಂತವನ್ನೂ ಪ್ರತಿಪಾದಿಸಿದರು. ಅದಕ್ಕೆ ನನ್ನ ಪ್ರತಿಕ್ರಿಯೆ ಕೇಳಿದರು.

“ಅದು ಕೇವಲ ರಾಜಕಾರಣ ಇರಲಿಕ್ಕಿಲ್ಲ. ಅದಕ್ಕೆ ಐತಿಹಾಸಿಕ ಕಾರಣ ಇರಬಹುದು. ಕೇವಲ ರಾಜಕೀಯ ಪಕ್ಷ ಅಥವಾ ಸಂಘಟನೆಯ ಪ್ರಯತ್ನವಷ್ಟೆ ಅದಕ್ಕೆ ಕಾರಣ ಅಲ್ಲ ಎಂದು ನಾನು ಹೇಳಿದೆ. “ಈಶಾನ್ಯ ಭಾಗದ ಸಾಂಸ್ಕೃತಿಕ ಪರಂಪರೆ ಅದಕ್ಕೆ ಮುಖ್ಯ ಕಾರಣ. ಅಲ್ಲಿನ ಸೂಫಿ-ಶರಣ ಚಳವಳಿಗಳು ಹಾಗೂ ಎಲ್ಲರಿಗೂ ಬಾಗಿಲು ತೆರೆಯುವ ದರ್ಗಾ ಹಾಗೂ ಮಠಗಳ ಸಂಸ್ಕೃತಿ ಸಹ ಕಾರಣ” ಎಂದು ಸೇರಿಸಿದೆ. “ಅದನ್ನೆಲ್ಲ ನಾನು ನೋಡಿಯೇ ಬಂದಿದ್ದೇನೆ. ಆದೇನೂ ಕಾರಣ ಇರಲಿಕ್ಕಿಲ್ಲ ಎಂದು ಅವರು ತಮ್ಮದೇ ವಾದ ಮಂಡಿಸಿದರು. ರಾಜ್ಯದ ವಿವಿಧ ಭಾಗದ ವಿವಿಧ ಬದಲಾವಣೆಗಳಿಗೆ ಪಕ್ಷ ರಾಜಕೀಯವೆ ಕಾರಣ ಎನ್ನುವ ಅರ್ಥ ಬರುವ ದೊಡ್ಡ ಲೇಖನವೊಂದನ್ನು ಅವರು ದೊಡ್ಡ ಪತ್ರಿಕೆಯೊಂದರಲ್ಲಿ ಬರೆದರು.

‘ಹೇಗಿದೆ?’ ಅಂತ ಆಮೇಲೆ ಕೇಳಿದರು. ‘ಒಳ್ಳೆ ದೂರದರ್ಶನ ವರದಿ ಇದ್ದ ಹಾಗೆ ಇದೆ’ ಎಂದೆ. ಅವರಿಗೆ ಜೋಕು ಅರ್ಥ ಆಗಲಿಲ್ಲ.

ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ
ಹಿಂದೂ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೃಷಿಕೇಶ ಅವರಿಗೆ ಕರ್ನಾಟಕದ ಬಹು ಸಂಸ್ಕೃತಿಗಳ ಬಗ್ಗೆ ಆಸಕ್ತಿ. ಬಹಮನಿ ಸುಲ್ತಾನರು, ನಿಜಾಮರ ಕಾಲದ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಂಗತಿಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಉರ್ದು ಭಾಷೆಯಿಂದ ಕವಿತೆಗಳನ್ನು ಅನುವಾದಿಸುವುದು ಅವರ ಆಸಕ್ತಿಗಳಲ್ಲಿ ಒಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...