Homeಕರೋನಾ ತಲ್ಲಣಬೆಂಗಳೂರಿನಲ್ಲಿ ಏರಿಕೆಯಾದ ಕೊರೊನಾ ಸೋಂಕು: 4 ಸಾವಿರಕ್ಕೆ ಏರಿದ ಸಕ್ರಿಯ ಪ್ರಕರಣ

ಬೆಂಗಳೂರಿನಲ್ಲಿ ಏರಿಕೆಯಾದ ಕೊರೊನಾ ಸೋಂಕು: 4 ಸಾವಿರಕ್ಕೆ ಏರಿದ ಸಕ್ರಿಯ ಪ್ರಕರಣ

- Advertisement -
- Advertisement -

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿವೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 833 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿನಿಂದ ಒಂದು ಸಾವುಂಟಾಗಿದೆ.  ಈ ಪೈಕಿ ಬೆಂಗಳೂರು ಒಂದರಲ್ಲೇ 791 ಪ್ರಕರಣಗಳು ದಾಖಲಾಗಿವೆ.

ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,371 ಆಗಿದ್ದು, ಅದರಲ್ಲಿ ರಾಜಧಾನಿಯೊಂದರಲ್ಲೇ 4,199 ಪ್ರಕರಣಗಳಿವೆ. 458 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ, ಪಾಸಿವಿಟಿ ರೇಟ್ 3.47% ರಷ್ಟಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದನ್ನೂ ಓದಿ: ಬೆಂಗಳೂರು: ನಿಧಾನಗತಿಯಲ್ಲಿ ಕೊರೊನಾ ಏರಿಕೆ, ಎರಡು ಶಾಲೆಗಳಲ್ಲಿ 31 ಪ್ರಕರಣಗಳು

ಬೆಂಗಳೂರಿನಲ್ಲಿ ಒಟ್ಟು 18 ಕಂಟೈನ್ಮೆಂಟ್ ವಲಯಗಳನ್ನು ಬಿಬಿಎಂಪಿ ಗುರುತಿಸಿದೆ. ಮಹದೇವಪುರದ 12 ಪ್ರದೇಶಗಳು ಕಂಟೈನ್ಮೆಂಟ್ ವ್ಯಾಪ್ತಿಯಲ್ಲಿವೆ. ಯಲಹಂಕದ 4 ಪ್ರದೇಶಗಳು ಹಾಗೂ ದಾಸರಹಳ್ಳಿಯ 2 ವಲಯಗಳನ್ನು ಕಂಟೈನ್ಮೆಂಟ್ ವಲಯಗಳು ಎಂದು ಘೋಷಿಸಲಾಗಿದೆ.

ಮೈಸೂರಿನಲ್ಲಿ 12, ರಾಮನಗರದಲ್ಲಿ 1, ಉಡುಪಿಯಲ್ಲಿ 5, ಬೆಳಗಾವಿಯಲ್ಲಿ 2, ಕೋಲಾರದಲ್ಲಿ 4, ಉತ್ತರ ಕನ್ನಡದಲ್ಲಿ 1, ಬಳ್ಳಾರಿಯಲ್ಲಿ 4 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 4 ಪ್ರಕರಣಗಳು ವರದಿಯಾಗಿವೆ. ಬೆಳಗಾವಿಯಲ್ಲಿ ಕೊರೊನಾ ಸಂಬಂಧಿತ ಸಾವು ವರದಿಯಾಗಿದೆ.

ಇನ್ನು ಕಳೆದ ವಾರವಷ್ಟೇ ದಾಸರಹಳ್ಳಿ ವಲಯದ ಪೀಣ್ಯ ಎರಡನೇ ಹಂತದ ಖಾಸಗಿ ಶಾಲೆಯ 5ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಜೂನ್ 9ರಂದು ರಾಜಗೋಪಾಲ ನಗರದ ಖಾಸಗಿ ಶಾಲೆಯ 5 ಮತ್ತು 6ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿತ್ತು.  ಎರಡು ಶಾಲೆಗಳಿಂದ ಒಟ್ಟು 31 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.


ಇದನ್ನೂ ಓದಿ: ಪುನರ್ ಪರಿಷ್ಕರಣೆ; ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ದೋಷಗಳದ್ದೇ ಕಾರುಬಾರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...