Homeರಾಷ್ಟ್ರೀಯಹಸಿ ಮೊಟ್ಟೆಯಿಂದ ತಯಾರಿಸಿದ ‘ಮಯೋನಿಸ್’ ಅನ್ನು ನಿಷೇಧಿಸಿದ ಕೇರಳ ಸರ್ಕಾರ

ಹಸಿ ಮೊಟ್ಟೆಯಿಂದ ತಯಾರಿಸಿದ ‘ಮಯೋನಿಸ್’ ಅನ್ನು ನಿಷೇಧಿಸಿದ ಕೇರಳ ಸರ್ಕಾರ

- Advertisement -
- Advertisement -

ವಿಷಾಹಾರ ಸೇವನೆಯಿಂದ ಒಬ್ಬರ ಸಾವು ಮತ್ತು ಹಲವರಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಕೇರಳದ ಆರೋಗ್ಯ ಇಲಾಖೆಯು ಹಸಿ ಮೊಟ್ಟೆಗಳಿಂದ ತಯಾರಿಸಿದ ‘ಮಯೋನಿಸ್’ (Mayonnaise) ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ – 2006 ರ ಅಡಿಯಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಹಸಿ ಮೊಟ್ಟೆಯಿಂದ ತಯಾರಿಸಿದ ‘ಮಯೋನಿಸ್’ ಅನ್ನು ಸಕಾಲದಲ್ಲಿ ಬಳಸದಿದ್ದರೆ ತುಂಬಾ ಅಪಾಯಕಾರಿ ಎಂದು ಕಂಡುಬಂದಿದೆ ಎಂದು ಸಚಿವೆ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹೋಟೆಲ್, ರೆಸ್ಟೊರೆಂಟ್, ಬೇಕರಿ, ಬೀದಿಬದಿ ವ್ಯಾಪಾರಿಗಳು ಮತ್ತು ಅಡುಗೆ ವಲಯದ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಹಸಿ ಮೊಟ್ಟೆಯಿಂದ ತಯಾರಿಸಿದ ಮೇಯನೇಸ್ ನಿಷೇಧಕ್ಕೆ ಸಂಪೂರ್ಣ ಬೆಂಬಲ ವ್ಯಕ್ತವಾಯಿತು. ಬದಲಿಗೆ ತರಕಾರಿ ಅಥವಾ ಪಾಶ್ಚರೀಕರಿಸಿದ ಮಯೋನಿಸ್‌ ಅನ್ನು ಬಳಸಬಹುದು ಎಂದು ನಿರ್ಧರಿಸಲಾಯಿತು.

“ಮಯೋನಿಸ್‌ ಸೇವಿಸಿದವರಿಂದ ಹಲವಾರು ದೂರುಗಳಿದ್ದು, ಇದನ್ನು ಷವರ್ಮಾ ಅಥವಾ ಸ್ಯಾಂಡ್‌ವಿಚ್‌ಗಳಲ್ಲಿ ಬಳಸಲಾಗುತ್ತದೆ. ಸರಿಯಾದ ಪಾಶ್ಚರೀಕರಣವಿಲ್ಲದೆ ಮಯೋನಿಸ್ ಅನ್ನು ಇರಿಸಿದರೆ, ಅದು ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವನ್ನು ಉತ್ಪಾದಿಸುತ್ತದೆ. ಈ ಬ್ಯಾಕ್ಟೀರಿಯಾ ಆರೋಗ್ಯವಂತ ವ್ಯಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.  ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವು ಕರುಳಿನ ಮೇಲೆ ಪರಿಣಾಮ ಬೀರುತ್ತದೆ” ಎಂದು ಸಚಿವೆ ವೀಣಾ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ವಿಭಾಗವು ಶುಕ್ರವಾರ ಆದೇಶ ಹೊರಡಿಸಿದ್ದು, ಆಹಾರ ಪ್ಯಾಕೆಟ್‌ಗಳ ಮೇಲೆ ತಯಾರಿಕೆಯ ದಿನಾಂಕ ಮತ್ತು ಸಮಯ ಮತ್ತು ಮುಕ್ತಾಯ ದಿನಾಂಕವನ್ನು ತೋರಿಸುವ ಸ್ಟಿಕ್ಕರ್ ಅನ್ನು ಅಂಟಿಸಬೇಕು ಎಂದು ಹೇಳಿದೆ.

ವಿಷಾಹಾರ ಸೇವನೆಯಿಂದ ಒಬ್ಬರ ಸಾವು ಮತ್ತು ಹಲವರಿಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ತಿನಿಸುಗಳು ಮತ್ತು ಇತರ ಆಹಾರ ಮಳಿಗೆಗಳಲ್ಲಿ ತಪಾಸಣೆಯನ್ನು ಬಲಪಡಿಸಿದೆ.

ಕೊಟ್ಟಾಯಂನ 33 ವರ್ಷದ ನರ್ಸ್ ರಶ್ಮಿ ಜನವರಿ 3 ರಂದು ವಿಷಾಹಾರ ಸೇವಿಸಿದ್ದರಿಂದ ಸಾವನ್ನಪ್ಪಿದ್ದರು. ಗುರುವಾರ ಕೊಚ್ಚಿಯ ಮನೆಯೊಂದರಿಂದ ಸುಮಾರು 500 ಕಿಲೋಗ್ರಾಂಗಳಷ್ಟು ಕೊಳೆತ ಫ್ರೀಜ್ ಕೋಳಿಯನ್ನು ವಶಪಡಿಸಿಕೊಳ್ಳಲಾಗಿದೆ. ಮನೆಯಲ್ಲಿ ಶೈತ್ಯೀಕರಿಸಿದ ಮಾಂಸವನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಲಾಗುತ್ತಿದ್ದು, ಅಲ್ಲಿಂದ ದುರ್ವಾಸನೆ ಬರುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿವಾಸವನ್ನು ಶೋಧಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...