Homeಮುಖಪುಟಲಡಕ್‍ಗೆ ಹೋಗಲು ಅಧಿಕಾರಿಗಳು ಹೆದರೋದ್ಯಾಕೆ ಗೊತ್ತೇ?

ಲಡಕ್‍ಗೆ ಹೋಗಲು ಅಧಿಕಾರಿಗಳು ಹೆದರೋದ್ಯಾಕೆ ಗೊತ್ತೇ?

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರ ಇಬ್ಭಾಗವಾಗಿದೆ. ಒಂದು ಜಮ್ಮುಕಾಶ್ಮೀರ ಮತ್ತೊಂದು ಲಡಕ್.ಇವೆರೆಡು ಈಗ ಕೇಂದ್ರಾಡಳಿತಕ್ಕೆ ಒಳಪಟ್ಟ ಪ್ರದೇಶಗಳು. ಜಮ್ಮುಕಾಶ್ಮೀರದಲ್ಲಿ ವಿಧಾನಸಭೆ ಇದ್ದರೆ, ಲಡಕ್‍ನಲ್ಲಿ ಇಲ್ಲ. ಇಲ್ಲಿಗೆ ಇಬ್ಬರು ಲೆಫ್ಟಿನೆಂಟ್ ಗೌರ್ನರ್ ಗಳು ನೇಮಕ ಆಗಬೇಕು. ಆದರೆ ಇದುವರೆಗೆ ಆ ಪ್ರಕ್ರಿಯೆ ನಡೆದಿಲ್ಲ. ಕಣಿವೆ ರಾಜ್ಯ ಎರಡು ಭಾಗವಾದ ಮೇಲೆ ಗಡಿಗಳನ್ನು ಗುರುತಿಸಿದೆ. ಲಡಕ್‍ನಲ್ಲಿ ಎರಡು ಜಿಲ್ಲೆಗಳು ಇದ್ದರೆ, ಜಮ್ಮುಕಾಶ್ಮೀರದಲ್ಲಿ 20 ಜಿಲ್ಲೆಗಳು ಉಳಿದಿವೆ. ವಿಂಗಡಣೆಯೇನೋ ಆಯಿತು. ಆದರೆ ನೌಕರರ ನಿಯೋಜನೆ ಆಗಬೇಕಲ್ಲವೇ? ಹೊಸ ನೇಮಕಾತಿಯೂ ನಡೆಯಬೇಕಲ್ಲವೇ? ಇದು ಸರ್ಕಾರಕ್ಕೆ ತಲೆನೋವು ಸೃಷ್ಟಿಸಿದೆ.

ಜಮ್ಮು ವಿಭಾಗದಲ್ಲಿ ಹತ್ತು ಜಿಲ್ಲೆಗಳು ಮತ್ತು ಕಾಶ್ಮೀರ ವಿಭಾಗದಲ್ಲಿ ಹತ್ತು ಜಿಲ್ಲೆಗಳು ಬರುತ್ತವೆ. ಜಮ್ಮು ಉಪವಿಭಾಗ 26,293 ಚದರ ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿ 53,50,811 ಮಂದಿ ಜನರು ವಾಸವಿದ್ದಾರೆ. ಅಂತೆಯೇ ಕಾಶ್ಮೀರ 15,948 ಚದರ ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಈ ವಿಭಾಗದಲ್ಲಿ 69,07,623 ಜನ ವಾಸಿಸುತ್ತಿದ್ದಾರೆ ಎಂಬ ಅಂಕಿ ಅಂಶಗಳು 2011 ಜನಗಣತಿಯಿಂದ ತಿಳಿಯುತ್ತದೆ. ಅಂದರೆ ಜಮ್ಮುಕಾಶ್ಮೀರ ಎರಡು ವಿಭಾಗಗಳಿಂದ ಸೇರಿದರೆ 1,22,58,434 ಜನ ನೆಲೆಸಿರುವ ಮಾಹಿತಿ ಲಭ್ಯವಾಗುತ್ತದೆ.

ಜಮ್ಮುಕಾಶ್ಮೀರದಲ್ಲಿ ಕೃಷಿ ಯೋಗ್ಯ ಭೂಮಿ ಇದ್ದು ಸೇಬು, ಕೇಸರಿ ಬೆಳೆಗೆ ಪ್ರಸಿದ್ದಿ ಪಡೆದಿದೆ. ಲಕ್ಷಾಂತರ ಮಂದಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಉತ್ತಮ ರಸ್ತೆಗಳು, ವಾಸ ಯೋಗ್ಯ ಮನೆಗಳು, ಹೋಟೆಲ್‍ಗಳು, ಸುಂದರವಾದ ಮರಗಿಡ, ಶುದ್ಧ ಕುಡಿಯುವ ನೀರು ಹೀಗೆ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ. ಐಶಾರಾಮಿ ರೆಸ್ಟೋರೆಂಟ್‍ಗಳಿಗೆ ಕೊರತೆ ಇಲ್ಲ. ಹೀಗಾಗಿ ಅಧಿಕಾರಿಗಳು ಇಲ್ಲಿರಲು ಇಷ್ಟಪಡುತ್ತಾರೆ.

ಲಡಕ್‍ನಲ್ಲಿ ಲೇಹ್ ಮತ್ತು ಕಾರ್ಗಿಲ್ ಎರಡು ಜಿಲ್ಲೆಗಳು ಬರುತ್ತವೆ. ಇದು ಶಿಖರ ಪ್ರದೇಶ. ಮರುಭೂಮಿ ಬಿಟ್ಟರೆ ಬೇರೆ ಏನನ್ನು ನೋಡಲು ಸಾಧ್ಯವಿಲ್ಲ. ಉತ್ತಮ ರಸ್ತೆ ಇಲ್ಲ. ಕಡಿದಾದ ದಾರಿಗಳು, ಸದಾ ಹಿಮ ಬೀಳುವ ಸ್ಥಳ. ಕುಡಿಯುವ ನೀರು ಸಿಗುವುದು ಕಷ್ಟ. ಮಂಜುಗಡ್ಡೆ ಕರಗಿಸಿ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ವರ್ಷಪೂರ್ತಿ ಹಿಮ ಬೀಳುತ್ತಲೇ ಇರುತ್ತದೆ. ವಾಸ ಯೋಗ್ಯ ಮನೆಗಳ ಕೊರತೆ ಇದೆ. ಮರಗಿಡಗಳಿಲ್ಲದ ಪ್ರದೇಶ ಇದಾಗಿದೆ. ಏಪ್ರಿಲ್-ಜುಲೈ ತಿಂಗಳವರೆಗೆ ವ್ಯವಸಾಯ ಮಾಡಲು ಆಗುವುದೇ ಇಲ್ಲ. ಲಡಕ್ 59,146 ಚದರ ಕಿಲೋ ಮೀಟರ್ ವ್ಯಾಪ್ತಿ ಹೊಂದಿದ್ದು 2,90,000 ಜನ ಇಲ್ಲಿ ವಾಸಿಸುತ್ತಾರೆ. ಕಾರ್ಗಿಲ್ ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದ್ದು 1,43,388 ಜನರಿದ್ದರೆ, ಲಡಕ್ ಬೌದ್ದರ ಪ್ರಾಬಲ್ಯವಿರುವ ಪ್ರದೇಶ. ಇಲ್ಲಿ ಬೌದ್ಧರ ಸಂಖ್ಯೆ 1,47,107 ಇದೆ. ಲಡಕ್‍ನಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಹವಾಮಾನವಿರುತ್ತದೆ. ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.

ಹೌದು, ಇದೇ ಕಾರಣಕ್ಕಾಗಿಯೇ ಜಮ್ಮುಕಾಶ್ಮೀರ ಬಿಟ್ಟು ಹೋಗಲು ಯಾವ ಅಧಿಕಾರಿಯೂ ಇಚ್ಚಿಸುತ್ತಿಲ್ಲ. ಇಲ್ಲಿನ ಹವಾಗುಣ, ಸೌಲಭ್ಯಗಳು, ರಸ್ತೆಗಳು, ಹೋಟೆಲ್‍ಗಳು, ಅಂಗಡಿಮುಂಗಟ್ಟುಗಳು, ವ್ಯವಸಾಯಯೋಗ್ಯ ಭೂಮಿ ಪ್ರಮುಖ ಕಾರಣ. ಜಮ್ಮುಕಾಶ್ಮೀರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ. ಇವರ ಪೈಕಿ 80 ಸಾವಿರ ಮಂದಿ ನೌಕರರು ಸ್ವತಂತ್ರರಾಗಿ ಮತ್ತು ಅರೆ ಸ್ವತಂತ್ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಸರ್ಕಾರ ಈಗ 350 ಮಂದಿ ಪೊಲೀಸ್ ಅಧಿಕಾರಿಗಳನ್ನು ಲಡಕ್‍ಗೆ ನಿಯೋಜನೆ ಮಾಡಿದೆ. ಅವರ್ಯಾರೂ ಅಲ್ಲಿಗೆ ಹೋಗಲು ಸುತಾರಾಂ ಇಷ್ಟಪಡುತ್ತಿಲ್ಲ.

ಕೆಲವು ನೌಕರರು ಲಡಕ್ ತಮ್ಮ ಸ್ವಂತ ಸ್ಥಳವಾಗಿದ್ದರೂ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಲಡಕ್‍ಗೆ ನಿಯೋಜನೆ ಗೊಂಡಿರುವ ಅಧಿಕಾರಿಗಳು ಮೌನ ವಹಿಸಿದ್ದಾರೆ. ಬಹುತೇಕ ಅಧಿಕಾರಿಗಳು ಲಡಕ್ ಅನ್ನು ಆಯ್ಕೆ ಮಾಡಿಕೊಳ್ಳಲು ತಣ್ಣಗಿನ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರಿಂದ ಯಾವ ಕ್ರಮ ಕೈಗೊಳ್ಳಬೇಕು ಎಂಬ ಪ್ರಶ್ನೆ ಸರ್ಕಾರಕ್ಕೆ ಎದುರಾಗಿದೆ. ಕೆಲವು ನೌಕರರು ಲಡಕ್ ಆಯ್ಕೆಗೆ ಸರ್ಕಾರ ಸೂಚಿಸಿದರೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.

ಪ್ರವಾಸಿಗರು ಲಡಕ್ ಕುರಿತು ಹೇಳುವ ಮಾತುಗಳು ಕೂಡ ಇಲ್ಲಿ ಗಮನಾರ್ಹ. ಲಡಕ್‍ನಲ್ಲಿ ಆಕ್ಸಿಜನ್ ಕಡಿಮೆ. ಒಣಭೂಮಿ ಮರಗಳಿಲ್ಲ. ದೈಹಿಕ ದೌರ್ಬಲ್ಯ ಇರುವವರು ಇಲ್ಲಿಗೆ ಭೇಟಿ ನೀಡುವುದೇ ಸರಿಯಲ್ಲ. ದೆಹಲಿಯಲ್ಲಿ ಮೂರು ಅಂತಸ್ತಿನ ಮಹಡಿ ಹತ್ತಿದಾಗ ಆಗುವಷ್ಟು ಸುಸ್ತು ಒಂದು ಮಹಿಡಿಯನ್ನು ಹತ್ತಿದಾಗ ಆಗುತ್ತದೆ. ಸಾಹಸ ಚಟುವಟಿಕೆ, ಚಾರಣ ನಡೆಸಲು ಪ್ರಶಸ್ತ ಸ್ಥಳ ಯುವಕರು ಇಲ್ಲಿ ಸಾಹಸ ಕಾರ್ಯಗಳನ್ನು ಕೈಗೊಳ್ಳಬಹುದು. ಲಡಕ್‍ನಿಂದ ಪ್ರತಿವರ್ಷ ಶೇಕಡ 45ರಷ್ಟು ಸ್ಥಳೀಯರು ದೆಹಲಿ ಮತ್ತು ಜಮ್ಮು ಪ್ರದೇಶಗಳಿಗೆ ವಲಸೆ ಹೋಗುತ್ತಾರೆ. ಪ್ರತಿ ವರ್ಷ 100 ಜನ ವೃದ್ಧರಲ್ಲಿ 10 ಮಂದಿ ಸಾವನ್ನಪ್ಪುತ್ತಾರೆ. ಹೀಗೆ ಹಲವು ವಿಷಯಗಳ ಬಗ್ಗೆ ಅನುಭವದ ಮಾತುಗಳನ್ನು ದಾಖಲಿಸಿದ್ದಾರೆ.

ಲಡಕ್ ಪ್ರದೇಶದಲ್ಲಿ ಪದೇಪದೇ ಪ್ರವಾಹ ಎದುರಾಗುತ್ತದೆ. ಭೂಕುಸಿತ ಉಂಟಾಗುತ್ತದೆ. ಹಲವು ಮಂದಿ ಸಾವನ್ನಪ್ಪಿರುವ ಘಟನೆಗಳು ಕಣ್ಣಮುಂದಿವೆ. ಇಷ್ಟೆಲ್ಲಾ ಅನಾನುಕೂಲಗಳನ್ನು ಇಟ್ಟುಕೊಂಡು ಅಧಿಕಾರಿಗಳು ಲಡಕ್ ಹೋಗುವುದಾದರೂ ಹೇಗೆ? ಸರ್ಕಾರ ಸೂಕ್ತ ಸೌಲಭ್ಯ ಕಲ್ಪಿಸಿದರೆ ಅಧಿಕಾರಿಗಳು ಅಲ್ಲಿಗೆ ಹೋಗಿ ನಿಷ್ಟೆಯಿಂದ ಕೆಲಸ ಮಾಡಲು ಸಾಧ್ಯ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...