Homeಮುಖಪುಟಮಮತಾ ಬ್ಯಾನರ್ಜಿ ನನ್ನ ವಿರುದ್ಧ ಒಮ್ಮೆ ಸ್ಪರ್ಧಿಸಲಿ: ಅಧೀರ್ ರಂಜನ್ ಚೌಧರಿ ಸವಾಲು

ಮಮತಾ ಬ್ಯಾನರ್ಜಿ ನನ್ನ ವಿರುದ್ಧ ಒಮ್ಮೆ ಸ್ಪರ್ಧಿಸಲಿ: ಅಧೀರ್ ರಂಜನ್ ಚೌಧರಿ ಸವಾಲು

- Advertisement -
- Advertisement -

ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಸೋಮವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಹ್ರಾಂಪುರದಿಂದ ತಮ್ಮ ವಿರುದ್ಧ ಸ್ಪರ್ಧಿಸುವಂತೆ ಸವಾಲು ಹಾಕಿದ್ದಾರೆ.

ಮಮತಾ ಬ್ಯಾನರ್ಜಿಯವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಬೆಹ್ರಾಂಪೋರ್ ಕ್ಷೇತ್ರದಿಂದ ಕಣಕ್ಕಿಳಿಸಿದ ಒಂದು ದಿನದ ನಂತರ ಅಧೀರ್ ರಂಜನ್ ಅವರ ಹೇಳಿಕೆ ಬಂದಿದೆ. ಯೂಸುಫ್ ಪಠಾಣ್ ಗುಜರಾತ್‌ನ ವಡೋದರ ಮೂಲದವರಾಗಿದ್ದು, ಈ ಹಿಂದೆ ಐಪಿಎಲ್ ತಂಡದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು.

ಯೂಸುಫ್ ಪಠಾಣ್ ಅವರ ಹೆಸರು ಘೋಷಣೆಯ ಕುರಿತು ಮಾತನಾಡಿದ ಅಧೀರ್ ರಂಜನ್ ಚೌಧರಿ, ‘ಭಾರತದ ಯಾವುದೇ ನಾಗರಿಕರು ದೇಶದ ಯಾವುದೇ ಭಾಗದಲ್ಲಿ ಮತ ಚಲಾಯಿಸಬಹುದು. ಮಮತಾ ಅವರೇ ಗೋವಾದಲ್ಲಿ ಯಾವುದೇ ತೊಂದರೆಯಿಲ್ಲದೆ ಹೋಗಿ ಸ್ಪರ್ಧಿಸಬಹುದಿತ್ತು. ಮಮತಾ ಬ್ಯಾನರ್ಜಿ ಅವರು ಒಮ್ಮೆ ನನ್ನ ವಿರುದ್ಧ ನಿಲ್ಲಬೇಕೆಂದು ನಾನು ಬಯಸುತ್ತೇನೆ. ನಾನು ಸವಾಲು ಹಾಕುತ್ತೇನೆ; ಅವರು ನನ್ನ ವಿರುದ್ಧ ಸ್ಪರ್ಧಿಸಲಿ ಅಥವಾ ನನ್ನ ವಿರುದ್ಧ ‘ಖೋಕಾಬಾಬು’ (ಅಭಿಷೇಕ್ ಬ್ಯಾನರ್ಜಿಯನ್ನು ಗೇಲಿ ಮಾಡಿ) ಕಳುಹಿಸಬೇಕು’ ಎದು ಲೇವಡಿ ಮಾಡಿದರು.

ಮಾರ್ಚ್ 10 ರಂದು ಮಾತನಾಡಿದ ಅಧೀರ್ ರಂಜನ್, ತೃಣಮೂಲ ಕಾಂಗ್ರೆಸ್ ಯೂಸುಫ್ ಪಠಾಣ್ ಅವರನ್ನು ಗೌರವಿಸಲು ಬಯಸಿದರೆ, ಅವರು ಹೊರಗಿನವರನ್ನು ಕಣಕ್ಕಿಳಿಸುವ ಬದಲು ರಾಜ್ಯಸಭೆಗೆ ಕಳುಹಿಸಬೇಕಿತ್ತು’ ಎಂದಿದ್ದರು.

“ಯೂಸುಫ್ ಪಠಾಣ್ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಒಳ್ಳೆಯ ಉದ್ದೇಶವಿದ್ದರೆ, ಅವರು ಗುಜರಾತ್‌ನಲ್ಲಿ (ಯೂಸುಫ್ ಪಠಾಣ್) ಅವರಿಗೆ (ಯೂಸುಫ್ ಪಠಾಣ್) ಸ್ಥಾನಕ್ಕಾಗಿ ಮೈತ್ರಿ ಪಕ್ಷಗಳನ್ನು ಕೇಳುತ್ತಿದ್ದರು. ಆದರೆ ಇಲ್ಲಿ ಪಶ್ಚಿಮ ಬಂಗಾಳದಲ್ಲಿ, ಸಾಮಾನ್ಯ ಜನರನ್ನು ಧ್ರುವೀಕರಿಸಲು ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಬಿಜೆಪಿಗೆ ಸಹಾಯ ಮಾಡಲು, ಇದರಿಂದ ಕಾಂಗ್ರೆಸ್ ಅನ್ನು ಸೋಲಿಸಬಹುದು’ ಎಂದು ಅಧೀರ್ ರಂಜನ್ ಹೇಳಿದ್ದಾರೆ.

ಅಧೀರ್ ರಂಜನ್ ಚೌಧರಿ ಅವರು 1999 ರಿಂದ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ಬೆಹ್ರಾಂಪುರದಿಂದ ಸಂಸತ್ ಸದಸ್ಯರಾಗಿದ್ದಾರೆ. ‘ಇಂಡಿಯಾ ಮೈತ್ರಿಕೂಟದಲ್ಲಿ ಮುಂದುವರಿದರೆ ಪ್ರಧಾನಿ ಮೋದಿ ಅತೃಪ್ತರಾಗುತ್ತಾರೆ ಎಂಬ ಭಯದಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ. ನನ್ನ ಬಗ್ಗೆ ಅತೃಪ್ತರಾಗಬೇಡಿ, ನಾನು ಬಿಜೆಪಿ ವಿರುದ್ಧ ಹೋರಾಡಲು ನಿಂತಿಲ್ಲ ಎಂದು ವಿಪಕ್ಷಗಳ ಮೈತ್ರಿಕೂಟದಿಂದ ಬೇರ್ಪಡುವ ಮೂಲಕ ಅವರು ಪಿಎಂಒಗೆ ಸಂದೇಶವನ್ನು ಕಳುಹಿಸಿದ್ದಾರೆ’ ಎಂದರು.

ಮಾರ್ಚ್ 10 ರಂದು ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾದ ನಂತರ ಮಮತಾ ಬ್ಯಾನರ್ಜಿ ಅವರ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲು ನಿರ್ಧರಿಸಿತ್ತು.

ಕುತೂಹಲಕಾರಿಯಾಗಿ, ತೃಣಮೂಲ ಕಾಂಗ್ರೆಸ್ ವಿಫಲ ಮಾತುಕತೆಗೆ ಅಧೀರ್ ರಂಜನ್ ಚೌಧುರಿ ಅವರನ್ನು ದೂಷಿಸಿದ್ದು, ಎರಡು ಪಕ್ಷಗಳ ನಡುವಿನ ಸಂಬಂಧದಲ್ಲಿ ಅವರನ್ನು ‘ದೊಡ್ಡ ಅಡಚಣೆ’ ಎಂದು ಕರೆದಿದೆ.

ಇದನ್ನೂ ಓದಿ; ಇಂದಿನಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...