Homeಕರ್ನಾಟಕಮುಸ್ಲಿಂ ಮಹಿಳೆಯರ ಬಗ್ಗೆ ಸುಳ್ಳು ಹರಡಿ, ನಂತರ ಪೋಸ್ಟ್ ಡಿಲೀಟ್ ಮಾಡಿದ ಪೋಸ್ಟ್ ಕಾರ್ಡ್ ಕನ್ನಡ

ಮುಸ್ಲಿಂ ಮಹಿಳೆಯರ ಬಗ್ಗೆ ಸುಳ್ಳು ಹರಡಿ, ನಂತರ ಪೋಸ್ಟ್ ಡಿಲೀಟ್ ಮಾಡಿದ ಪೋಸ್ಟ್ ಕಾರ್ಡ್ ಕನ್ನಡ

- Advertisement -
- Advertisement -

ಪೋಸ್ಟ್ ಕಾರ್ಡ್ ಕನ್ನಡ ಸದಾ ಫೇಕ್ ನ್ಯೂಸ್‍ಗಳನ್ನೆ ಹಾಸೊದ್ದುಕೊಂಡಿರುವ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಒಂದು ಬಲಪಂಥೀಯ ಸಾಮಾಜಿಕ ಜಾಲತಾಣ. ಸುಳ್ಳು ಸುದ್ದಿಗಳಿಗೆ ಕುಖ್ಯಾತಿಯಾಗಿರುವ ಆ ಸಾಮಾಜಿಕ ಜಾಲತಾಣ ಈಗ ಮತ್ತೊಂದು ಅಂತಹದ್ದೆ ಸುಳ್ಳು ಸುದ್ದಿಯನ್ನು ಹೊಂದಿರುವ ಪೋಸ್ಟರ್‌ವೊಂದನ್ನು ಶೇರ್ ಮಾಡಿತ್ತು, ಆ ಪೋಸ್ಟರ್‌ನಲ್ಲಿ ಮುಸ್ಲಿಂ ಮಹಿಳೆಯರ ಕುರಿತು ಅವಹೇಳನಕಾರಿ ಬರಹವನ್ನು ಪ್ರಕಟಿಸಿತ್ತು, ಪೋಸ್ಟರ್‌ನಲ್ಲಿರುವುದು ಹಸಿ ಸುಳ್ಳು ಎಂದು ವಾರ್ತಾಭಾರತಿ ಆಧಾರ ಸಹಿತ ವರದಿ ಮಾಡಿತ್ತು. ಅಲ್ಲಿ ಸುದ್ದಿ ಪ್ರಕಟಣೆಯಾಗುತ್ತಿದಂತೆ ಇತ್ತ ಪೋಸ್ಟ್ ಕಾರ್ಡ್ ತನ್ನ ಪೇಜ್ ನಲ್ಲಿ ಪ್ರಕಟಗೊಂಡ ಸುಳ್ಳು ಸುದ್ದಿಯ ಪೋಸ್ಟರ್‌ ಅನ್ನು ಡಿಲೀಟ್ ಮಾಡುವ ಮೂಲಕ ಮತ್ತೆ ಜನರೆದುರು ಬೆತ್ತಲಾಗಿದೆ.

ಪೋಸ್ಟ್ ಕಾರ್ಡ್ ತಾನು ಪ್ರಕಟಿಸಿದ್ದ ಪೋಸ್ಟರ್‌ನಲ್ಲಿ “ ನಮ್ಮ ಇಸ್ಲಾಂನಲ್ಲಿ ಹೆಣ್ಣನ್ನ ಮಕ್ಕಳನ್ನು ಹೆರುವ ಕೃಷಿ ಎಂದು ಪರಿಗಣಿಸಲಾಗಿದೆ. ನಾವೆಲ್ಲರೂ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಆಗಲಿದ್ದೇವೆ ಮತ್ತು ಹಿಂದೂ ಹುಡುಗರನ್ನು ಮದುವೆಯಾಗುತ್ತೇವೆ, ಮತ್ತೆ ಯಾವುದೇ ತಲಾಕ್ ಇಲ್ಲ, ಹಲಾಲ್ ಕೂಡ ಇಲ್ಲ. ಸನಾತನ ಹಿಂದೂ ಧರ್ಮ ನಮ್ಮದಾಗಲಿ” ಎಂದು ಬರೆದಿದ್ದ ಪೋಸ್ಟರ್ ನಲ್ಲಿ ಫಾತಿಮಾ ಖುರೇಷಿ, ಮುಂಬೈ ಎಂದು ಹೆಸರು ಹಾಕಿ ಮುಸ್ಲಿಂ ಮಹಿಳೆಯೊಬ್ಬರ ಫೋಟೋ ಹಾಕಲಾಗಿತ್ತು. ಜೊತೆಗೆ “ಇಸ್ಲಾಂನಲ್ಲಿ ಹೆಣ್ಣನ್ನು ಭೋಗದ ವಸ್ತುವಂತೆ ಬಳಸುತ್ತಿದ್ದಾರೆ ಎಂದು ಮುಸ್ಲಿಂ ಹೆಣ್ಣು ಮಕ್ಕಳೇ ಒಪ್ಪಿಕೊಂಡು ಹಿಂದೂ ಧರ್ಮದತ್ತ ಮುಖ ಮಾಡಸುತ್ತಿದ್ದಾರೆ .” ಎಂದು ಬರೆದ ಪೋಸ್ಟರ್‌ಅನ್ನು ಪ್ರಕಟಿಸಿತ್ತು.

ಪೋಸ್ಟ್ ಕಾರ್ಡ್ ಕನ್ನಡ ಪ್ರಕಟಿಸಿದ್ದ ಸುಳ್ಳು ಸುದ್ದಿ

ಈ ಪೋಸ್ಟರ್ ಎರಡು ವಾರಗಳ ಹಿಂದೆ ಹಿಂದಿ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದೇ ಮಹಿಳೆಯ ಫೋಟೋ ಬಳಸಿ, ಹಿಂದಿಯಲ್ಲಿ ಬರೆದಿದ್ದ ಬರಹವನ್ನು ಕನ್ನಡಕ್ಕೆ ಅನುವಾದಿಸಿ ಮತ್ತಷ್ಟು ದ್ವೇಷ ಹರಡುವ ಸಾಲುಗಳನ್ನು ಸೇರಿಸಿ ಪೋಸ್ಟರ್ ರೂಪಿಸಿರುವುದು ಫ್ಯಾಕ್ಟ್‌ ಚೆಕ್ ಮೂಲಕ ತಿಳಿದುಬಂದಿದೆ. ನಕಲು ಮಾಡಿರುವ ಸುದ್ದಿಯು 2019ರಲ್ಲಿ ನ್ಯೂಸ್ ಮೊಬೈಲ್.ಇನ್ ಪ್ರಕಟವಾಗಿರುವುದನ್ನು ಕಾಣಬಹುದು. ಹಾಗಾಗಿ ಇದೊಂದು ತಿರುಚಲ್ಪಟ್ಟ ಸುದ್ದಿ ಎಂದು ತಿಳಿದುಬಂದಿದೆ.

ಗೂಗಲ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಪೋಸ್ಟರ್ ನಲ್ಲಿ ಇರುವ ಮಹಿಳೆಯ ಫೋಟೋ ಮರಿಯಮ್ ಖಾಲಿಕ್ ಎಂಬುವವರದು ಎಂದು ತಿಳಿದು ಬಂದಿದ್ದು, ಪೋಸ್ಟ್ ಕಾರ್ಡ್ ನಲ್ಲಿ ಅವರ ಹೆಸರನ್ನು ಫಾತಿಮಾ ಖುರೇಷಿ, ಮುಂಬೈ ಎಂಬ ಹೆಸರಿನಲ್ಲಿ ಕಪೋಲಕಲ್ಪಿತ ಹೇಳಿಕೆಯನ್ನು ಪ್ರಕಟಿಸಿದೆ. 2013ರ ಸೆಪ್ಟಂಬರ್ 20 ರಂದು ಗ್ಲೋಬಲ್ ಎಜುಕೇಶನ್ ಮಾನಿಟರಿಂಗ್ (GEM) ಸೈಟ್‍ನಲ್ಲಿ  ಪ್ರಕಟಿಸಿದ ವರದಿಯಲ್ಲಿ ಈ ಮಹಿಳೆಯು ನೊಬೆಲ್ ಪುರಸ್ಕೃತೆ ಮಲಾಲಾ ಯೂಸಫ್‍ಜಾಯ್ ಅವರ ಶಿಕ್ಷಕಿ ಮರಿಯಮ್ ಖಾಲಿಕ್ ಎಂದು ತಿಳಿದುಬಂದಿದೆ. ನ್ಯೂಯಾರ್ಕ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾಲಕಿಯರ ಶಿಕ್ಷಣದ ಮಹತ್ವ ಕುರಿತು ಮರಿಯಮ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ತೆಗೆದ ಫೋಟೋ ಆಗಿದ್ದು, “ ನ್ಯೂಯಾರ್ಕ್‍ನಲ್ಲಿ ನಡೆದ ಇಎಫ್ಎ ವರದಿ ಸಮಾರಂಭದಲ್ಲಿ ಭಾಷಣ ನೀಡುತ್ತಿರುವ ಮರಿಯಲ್” ಎಂದು ಶೀರ್ಷಿಕೆ ನೀಡಲಾಗಿದೆ.

ಇದೇ ಲೇಖನವನ್ನು ವಿಶ್ವಸಂಸ್ಥೆಯ ಬಾಲಕಿಯರ ಶಿಕ್ಷಣ ಉಪಕ್ರಮದ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಿದೆ. ವಿಶ್ವ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್‍ನಲ್ಲಿ ಕೂಡ ಈ ವಿಡಿಯೊ ಅಪ್ಲೋಡ್ ಮಾಡಲಾಗಿದೆ. ಇನ್ನು ಪೋಸ್ಟ್ ಕಾರ್ಡ್ ಪ್ರಕಟಿಸಿದ ಪೋಸ್ಟರ್‌ನಲ್ಲಿ ದಾಖಲಾಗಿರುವ ಹೇಳಿಕೆಗಳಿಗೆ ಯಾವುದೇ ದಾಖಲೆಗಳಿಲ್ಲ ಎಂಬುದು ಖಚಿತವಾಗಿದೆ.

ಈ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ ಪೋಸ್ಟ್ ಕಾರ್ಡ್‍ನಲ್ಲಿ ಪೋಸ್ಟ್ ಮಾಡಿದ್ದ ಸುಳ್ಳು ಸುದ್ದಿಯ ಪೋಸ್ಟರ್ ಮಾಯವಾಗಿದೆ. ಅದನ್ನು ಪೋಸ್ಟ್ ಕಾರ್ಡ್ ಡಿಲೀಟ್ ಮಾಡಿದೆ. ಇದರಿಂದ ನಾವೆಲ್ಲ ತಿಳಿದುಕೊಳ್ಳಬೇಕಿರುವುದು ಏನೆಂದರೆ ಈ ಪೇಜ್‍ಅನ್ನು ಫಾಲೋ ಮಾಡುವ ಅನೇಕ ಮುಗ್ದ ಜನರು ಇವರು ಹೇಳುವ ಸುಳ್ಳನ್ನೆ ನಿಜವೆಂದು ನಂಬಿ ಮೋಸಹೋಗುವ ಮತ್ತು ಈಗಾಗಲೇ ಮೋಸ ಹೋಗಿರವ ಅಸಂಖ್ಯ ಜನರಿದ್ದಾರೆ. ಹಾಗಾಗಿ ಪೋಸ್ಟ್ ಕಾರ್ಡ್‍ನಲ್ಲಿ ಬರುವ ಸುದ್ದಿಗಳನ್ನು ನಂಬಿ ಮೋಸ ಹೋಗುವ ಮುನ್ನ ಅದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಎಂಬುದು ನಾನು ಗೌರಿ ಪತ್ರಿಕೆಯ ಆಶಯ. ಪೋಸ್ಟ್ ಕಾರ್ಡ್ ಬಿತ್ತುವ ವಿಷ ಬೀಜಗಳಿಗೆ ಬಲಿಯಾಗುವ ಮುನ್ನ ಮುಗ್ದ ಜನರು ಎಚ್ಚೆತ್ತುಕೊಳ್ಳಬೆಕು.


ಇದನ್ನು ಓದಿರಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಠ್ಯ ಪರಿಷ್ಕರಣೆ ವಿವಾದಕ್ಕೆ ಕಾರ್ಟೂನ್‌ಗಳು ಸ್ಪಂದಿಸಿದ್ದು ಹೀಗೆ…

0
ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೆರಿದೆ. ಕರ್ನಾಟಕ ಸರ್ಕಾರ ನೇಮಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಪರಿಷ್ಕರಣೆಗಳು ಸಂವಿಧಾನ ವಿರೋಧಿಯಾಗಿದ್ದು, ಒಂದು ಸಮುದಾಯವನ್ನು ಮಾತ್ರ ಪರಿಗಣಿಸಿವೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಎಳೆಯ...