Homeಕರ್ನಾಟಕಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ

ಹಿಜಾಬ್ ವಿವಾದ: ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಿಲ್ಲ ಎಂದ ಶಿಕ್ಷಣ ಇಲಾಖೆ

’ಹಿಜಾಬ್ ಹಾಕಿಕೊಂಡು ಬರಲು ಅನುಮತಿ ನೀಡುವುದಿಲ್ಲ. ಬೇಕಿದ್ದರೇ ಆನ್‌ಲೈನ್ ತರಗತಿಗಳನ್ನು ಮಾಡಿ, ಪರೀಕ್ಷೆಗೆ ಅವಕಾಶ ನೀಡುತ್ತೇವೆ’: ಶಾಸಕ ರಘುಪತಿ ಭಟ್

- Advertisement -
- Advertisement -

ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರ ಹಿಜಾಬ್ ವಿವಾದದ ಹಿನ್ನೆಲೆ ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ನಿಗದಿಗೊಳಿಸಿ, ಕಡ್ಡಾಯಗೊಳಿಸಿಲ್ಲ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಶಿಕ್ಷಣ ಇಲಾಖೆ ಸಮವಸ್ತ್ರ, ವಸ್ತ್ರ ಸಂಹಿತಿ ಕಡ್ಡಾಯಗೊಳಿಸಿಲ್ಲ. ಆದರೆ,  ತಮ್ಮ ಆಯ್ಕೆಯ ವಸ್ತ್ರವನ್ನು ಧರಿಸಿ ಬರಲು ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವ ಉಡುಪಿ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು, ಕಾಲೇಜಿಗೆ ಪ್ರವೇಶ ಪಡೆಯುವ ವೇಳೆಯಲ್ಲಿ  ಕಾಲೇಜಿನ ವಸ್ತ್ರಸಂಹಿತೆಯ ಮಾಹಿತಿ ಪಡೆದು, ಒಪ್ಪಿಕೊಂಡು ಸ್ವಇಚ್ಛೆಯಿಂದ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ. ಆದರೆ, ಇಷ್ಟು ದಿನ ಇಲ್ಲದ ಗೊಂದಲಗಳನ್ನು ಈಗ ಸೃಷ್ಟಿಸುತ್ತಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳಿತಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳ ಪದವಿಪೂರ್ವ ಕಾಲೇಜುಗಳಲ್ಲಿ ಜಾರಿಯಿರುವ ಸಮವಸ್ತ್ರ ನೀತಿಸಂಹಿತೆಯನ್ನು ಪರಿಶೀಲಿಸಲು ಹಾಗೂ ಈ ಕುರಿತು ಸುಪ್ರೀಂ ಕೋರ್ಟ್‌, ರಾಜ್ಯಗಳ ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಅವಲೋಕಿಸಿ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ/ ವಸ್ತ್ರಸಂಹಿತೆ ನಿಗದಿಗೊಳಿಸಲು ಚಿಂತನ ಮಂಥನ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ವಸ್ತ್ರಸಂಹಿತೆ ಅಥವಾ ಸಮವಸ್ತ್ರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದ್ದು, ವರದಿ  ಪರಿಶೀಲಿಸಿ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ. ಅಲ್ಲಿಯವರೆಗೆ ಕಾಲೇಜಿನಲ್ಲಿ ಯಥಾಸ್ಥಿತಿ ಮುಂದುವರೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹಿಜಾಬ್‌ v/s ಕೇಸರಿ ಶಾಲು: ಮತೀಯ ದ್ವೇಷದ ಹಿಂದೆ ಎಬಿವಿಪಿ ಕೈವಾಡ- ಎಸ್‌ಎಫ್‌ಐ

Image

ಇನ್ನು, ಪ್ರತಿಭಟನಾ ನಿರತ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿಗಳಿಗೆ ಬರಲು ಅವಕಾಶ ನೀಡುವುದಿಲ್ಲ. ಕಾಲೇಜಿನ ಸಮವಸ್ತ್ರ ಧರಿಸಿ ಬರಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

“ಇನ್ನು ಒಂದು ತಿಂಗಳು ಮಾತ್ರ ತರಗತಿಗಳು ನಡೆಯಲಿವೆ. ಆಮೇಲೆ ಪರೀಕ್ಷೆ. ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ. ಅವರು ಒಪ್ಪದಿದ್ದರೇ…ಅವರಿಗೆ ಹಿಜಾಬ್ ಹಾಕಿಕೊಂಡು ಬರಲು ಅನುಮತಿ ನೀಡುವುದಿಲ್ಲ. ಬೇಕಿದ್ದರೇ ಅವರಿಗೆ ಆನ್‌ಲೈನ್ ತರಗತಿಗಳನ್ನು ಮಾಡಿ, ಪರೀಕ್ಷೆಗೆ ಅವಕಾಶ ನೀಡುತ್ತೇವೆ. ಅವರಿಗೆ ಇನ್ನೂ ಆಗುವುದಿಲ್ಲ ಎಂದರೆ, ಮುಂದಿನ ವರ್ಷದಿಂದ ಅವರು ಬೇರೆ ಕಾಲೇಜಿಗೆ ಹೋಗಬಹುದು” ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಹಿಜಾಬ್ ಹಾಕಿಕೊಂಡು ಬರುತ್ತಾರೆಂದು ಕಳೆದ ಒಂದು ತಿಂಗಳಿನಿಂದ ತರಗತಿಯಿಂದ ಹೊರಹಾಕಲ್ಪಟ್ಟ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಗೇಟಿನ ಬಳಿ ಭಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ. “ಹಿಜಾಬ್ ಹಾಕಿದ್ದಕ್ಕಾಗಿ ನಾವು ತರಗತಿಯಿಂದ ಹೊರಗೆ ಕುಳಿತು ಕೊಳ್ಳುವಂತಾಗಿದೆ. ಹಿಜಾಬ್ ನನ್ನ ಹಕ್ಕು, ಅದನ್ನು ಪಡೆದೆ ತೀರುತ್ತೇವೆ, ಇದು ನನ್ನ ಮೂಲಭೂತ ಹಕ್ಕು- ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: ಹಿಜಾಬ್‌ ಧರಿಸುವುದು ಅಶಿಸ್ತು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ವಿವಾದಾತ್ಮಕ ಹೇಳಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಹಿಜಾಬ್ ನಂತಹ ಧಾರ್ಮಿಕ ದಿರಿಸುಗಳನ್ನು college ಗಳಲ್ಲಿಯೂ ಧರಿಸಬೇಕು ಎಂಬ ಹಠ ಏಕೆ ಎನ್ನುವುದೇ ಅರ್ಥ ಆಗೋಲ್ಲ.
    ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಬಾಲಕಿಯರು ಧರಿಸುತ್ತಿರುವ ಸಮ ವಸ್ತ್ರವನ್ನು ಈ ಐದಾರು ಜನ ಏಕೆ ನಿರಾಕರಿಸುತ್ತಿದ್ದಾರೆ , ಇದರ ಹಿನ್ನೆಲೆಯೇನು.

    ಒಟ್ಟಾರೆಯಾಗಿ ಇದೊಂದು ಅನಪೇಕ್ಷಿತ ಮತ್ತು ಗೊಂದಲಮಯ ನಡವಳಿಕೆ ಎನುವುದಂತು ಸತ್ಯ.

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಂ ಉದ್ಯಮಿಯ ಹೆಸರನ್ನು ‘ಅನಂತ ರಾಮನ್’ ಎಂದು ಬರೆದ ಸಿಎಂ!; ಸಂಘಪರಿವಾರದ ಭಯವೇ ಎಂದ ನೆಟ್ಟಿಗರು | Naanu Gauri

ಮುಸ್ಲಿಂ ಉದ್ಯಮಿ, ಲುಲು ಮುಖ್ಯಸ್ಥ ಯೂಸುಫ್ ಅಲಿ ಹೆಸರಿಸದ ಸಿಎಂ ಬೊಮ್ಮಾಯಿ!; ಸಂಘಪರಿವಾರದ ಭಯವೇ...

2
ಸ್ವಿಟ್ಸರ್ಲೆಂಡಿನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಭಾಗವಹಿಸಿರುವ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿಯವರು ಕೇರಳ ಮೂಲದ ಮುಸ್ಲಿಂ ಉದ್ಯಮಿ, ಲುಲು ಕಂಪನಿ ಛೇರ್ಮನ್ ‘ಯೂಸುಫ್‌ಅಲಿ ಎಂ.ಎ.’ ಅವರೊಂದಿಗೆ ಹೂಡಿಕೆಯ ಬಗ್ಗೆ ಚರ್ಚೆ...