HomeಮುಖಪುಟTCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

- Advertisement -
- Advertisement -

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು ಬಲವಂತದ ಧಾರ್ಮಿಕ ಮತಾಂತರದ ಗಂಭೀರ ಆರೋಪಗಳು ಕೇಳಿ ಬಂದಿವೆ.

ಕಂಪನಿಯ ಹಲವು ಮಹಿಳಾ ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಂದ (ಟೀಮ್ ಲೀಡರ್‌ಗಳು) ಲೈಂಗಿಕ ದೌರ್ಜನ್ಯ, ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದೂ ಮಹಿಳಾ ಉದ್ಯೋಗಿಗಳಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಲಾಗುತ್ತಿತ್ತು. ಇದಕ್ಕೆ ಸಮ್ಮತಿಸದಿದ್ದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿತ್ತು ಎಂಬ ಗಂಭೀರ ಆರೋಪ ಮಾಡಲಾಗಿದೆ.

ಉದ್ಯೋಗಿಗಳು ಮಾನವ ಸಂಪನ್ಮೂಲ (ಎಚ್‌ಆರ್‌) ವಿಭಾಗಕ್ಕೆ ಇಮೇಲ್ ಮೂಲಕ ದೂರು ನೀಡಿದ್ದರೂ, ಎಚ್‌ಆರ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದರು ಎಂದು ಎಲ್ಲಾ ತರಹದ ಬಹುತೇಕ ಮಾಧ್ಯಮಗಳು, ಬಿಜೆಪಿ-ಸಂಘ ಪರಿವಾರ ಹಾಗೂ ಬಲಪಂಥೀಯ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾಸಿಕ್ ಪೊಲೀಸರು ಆರು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಂಡರ್‌ಕವರ್ ಏಜೆಂಟ್‌ಗಳಾಗಿ (ಉದ್ಯೋಗಿಗಳಂತೆ) 40 ದಿನಗಳ ಕಾಲ ಕಂಪನಿಯೊಳಗೆ ಕಳುಹಿಸಿದ್ದರು ಎಂದು ಹೇಳಲಾಗ್ತಿದೆ. ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇನ್ನು ಪ್ರಕರಣ ಸಂಬಂಧ ಒಟ್ಟು ಎಂಟು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಮಹಿಳಾ ಉದ್ಯೋಗಿ ನಿಧಾ ಖಾನ್ ಮತ್ತು ಹಲವು ಟೀಮ್ ಲೀಡರ್‌ಗಳು ಸೇರಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣದ ವಿಚಾರಣೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಆರೋಪ ಎದುರಿಸುತ್ತಿರುವ ಎಲ್ಲಾ ಉದ್ಯೋಗಿಗಳನ್ನು ಟಿಸಿಎಸ್ ತಕ್ಷಣವೇ ಅಮಾನತುಗೊಳಿಸಿದೆ. ಕಂಪನಿಯು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸಮಗ್ರ ತನಿಖೆಗಾಗಿ ಹೊರಗಿನ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ ಎಂದು ವರದಿಗಳು ಹೇಳಿವೆ.

ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ನಾಸಿಕ್ ಘಟಕದ ಉದ್ಯೋಗಿಗಳಿಗೆ ತಾತ್ಕಾಲಿಕವಾಗಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ನಡುವೆ ಬಿಜೆಪಿ, ಸಂಘ ಪರಿವಾರ, ಹಿಂದುತ್ವವಾದಿಗಳು, ಬಲಪಂಥೀಯ ಮಾಧ್ಯಮಗಳು, ಸಾಮಾಜಿಕ ಜಾಲತಾಣ ಬಳಕೆದಾರರು ಈ ಪ್ರಕರಣವನ್ನು ‘ಕಾರ್ಪೋರೇಟ್ ಜಿಹಾದ್’ ಎಂದು ಹೆಸರಿಸಿದ್ದು, ಕೇರಳ ಸ್ಟೋರಿಯಂತಹ ಕಾಲ್ಪನಿಕ ಸಿನಿಮಾದ ಕಥೆಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಿ ಇಡೀ ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಪಸರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

“ಇದೊಂದು ವ್ಯವಸ್ಥಿತ ಸಂಚು, ಇದಕ್ಕೆ ಅಂತಾರಾಷ್ಟ್ರೀಯ ಲಿಂಕ್ ಇದೆ” ಎಂದು ಬಲಪಂಥೀಯ ಹಿಂದುತ್ವಾದಿಗಳು ಆರೋಪಿಸಿದರೆ, “ಈ ಪ್ರಕರಣದ ಹಿಂದೆ ಆರ್‌ಎಸ್‌ಎಸ್‌, ಬಜರಂಗದಳ ಇದೆ. ಇದು ಮುಸ್ಲಿಮರನ್ನು ಉನ್ನತ ಉದ್ಯೋಗಗಳಿಂದ ದೂರವಿಡಲು ಹೂಡಿದ ವ್ಯವಸ್ಥಿತ ಷಡ್ಯಂತ್ರ” ಎಂದು ಬಂಧಿತರ ಕುಟುಂಬಸ್ಥರು ಮತ್ತು ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಹೇಳುತ್ತಿದ್ದಾರೆ.

ಆರೋಪಿ ಸ್ಥಾನದಲ್ಲಿ ಮುಸ್ಲಿಮರಿದ್ದರೆ ಇಡೀ ಮುಸ್ಲಿಂ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಭಾರತದಲ್ಲಿ ಈಗ ಸಾಮಾನ್ಯವಾಗಿ ಬಿಟ್ಟಿದೆ. ಅದು ಈ ಪ್ರಕರಣದಲ್ಲೂ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ದ್ವೇಷದ ಪೋಸ್ಟ್‌ಗಳು ರಾರಾಜಿಸುತ್ತಿವೆ.

ಯಾವುದೇ ಪ್ರಕರಣ ನಡೆದಾಗ ರಾಜಕೀಯ, ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯಗಳು, ಚರ್ಚೆಗಳು, ಪ್ರೊಪಗಂಡಾಗಳು ನಡೆಯುವುದು ಇದ್ದೆ ಇರುತ್ತದೆ. ಈ ಸಂದರ್ಭಗಳಲ್ಲಿ ಸಂವಿಧಾನ ನಾಲ್ಕನೇ ಸ್ತಂಭ ಎನ್ನಲಾಗುವ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಬೇಕಿದೆ. ಪತ್ರಿಕಾ ಧರ್ಮ, ನೈತಿಕತೆ, ಸಾಮಾರಸ್ಯವನ್ನು ಕಾಪಾಡಬೇಕಿದೆ.

ಆದರೆ, ಈ ಪ್ರಕರಣದಲ್ಲಿ ಮಾಧ್ಯಮಗಳು ಇವೆಲ್ಲವನ್ನೂ ಮರೆತು, ವಾಟ್ಸಾಪ್ ಯೂನಿವರ್ಸಿಟಿಯ ಸುದ್ದಿಗಳನ್ನು ಪರಿಶೀಲಿಸದೆ ವೈಭವೀಕರಿಸಿ ಪ್ರಕಟಿಸುವ ಮೂಲಕ ಜನ ಸಾಮಾನ್ಯರನ್ನು ಬಹಳ ವ್ಯವಸ್ಥಿತವಾಗಿ ದಾರಿತಪ್ಪಿಸುತ್ತಿವೆ. ಜೊತೆಗೆ, ದ್ವೇಷದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆ.

ಟಿಸಿಎಸ್‌ ನಾಸಿಕ್ ಪ್ರಕರಣದಲ್ಲಿ ಮಾಧ್ಯಮಗಳು ಆತುರವಾಗಿ ಬಿತ್ತಿರುವ ಕೆಲವು ಸುಳ್ಳುಗಳು ಮತ್ತು ಕಂಪನಿ ಅಧಿಕೃತವಾಗಿ ಹೇಳಿರುವ ಸತ್ಯಗಳನ್ನು ಪುರಾವೆ ಸಹಿತ ಕೆಳಗಡೆ ವಿವರಿಸಲಾಗಿದೆ.

1. ನಿದಾ ಖಾನ್ ಹೆಚ್‌ಆರ್‌ : ನಾಸಿಕ್ ಪ್ರಕರಣದ ಬಗ್ಗೆ ಮಾಧ್ಯಮಗಳು ವರದಿ ಮಾಡಲು ಶುರು ಮಾಡಿದಾಗ ಆರೋಪಿಗಳ ಪೈಕಿ ಪ್ರಮುಖವಾಗಿ ಉಲ್ಲೇಖಿಸಿದ ಹೆಸರು ನಿದಾ ಖಾನ್ ಎಂಬಾಕೆಯದ್ದಾಗಿದೆ. ಈಕೆ ಟಿಸಿಎಸ್‌ ನಾಸಿಕ್‌ನ ಮುಖ್ಯ ಹೆಚ್‌ ಆರ್‌ (HR Head), ಈಕೆಯೇ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು. ಇದಕ್ಕೆ ಮಾಧ್ಯಮಗಳು ಅವಲಂಭಿಸಿದ ಮೂಲದ ಬಗ್ಗೆ ನಮಗೆ ಮಾಹಿತಿಯಿಲ್ಲ. ಆದರೆ, ಮಾಧ್ಯಮಗಳು ನಿದಾ ಖಾನ್ ಮುಖ್ಯ ಹೆಚ್ಆರ್‌ ಎಂದಿರುವ ವರದಿಗಳು ಈಗಲೂ ಇಂಟರ್‌ನೆಟ್‌ನಲ್ಲಿ ಲಭ್ಯವಿದೆ.

ಎಕಾನಾಮಿಕ್ ಟೈಮ್ಸ್ 2026ರ ಏಪ್ರಿಲ್ 14ರಂದು ಮಾಡಿರುವ ವರದಿ

    ಎನ್‌ಡಿವಿ ವಿಡಿಯೋ ವರದಿಯನ್ನು ಅಜಿತ್ ಕುಮಾರ್ ಎಂಬವರು ಲಿಂಕ್ಡ್ ಇನ್‌ನಲ್ಲಿ ಹಂಚಿಕೊಂಡಿದ್ದರು.

    ವಿಯೋನ್ ಸುದ್ದಿ ವೆಬ್‌ಸೈಟ್ 2026ರ ಏಪ್ರಿಲ್ 16ರಂದು ವರದಿ ಮಾಡಿತ್ತು

    ನ್ಯೂಸ್‌ ಎಕ್ಸ್‌ 2026ರ ಏಪ್ರಿಲ್ 14ರಂದು ಮಾಡಿರುವ ವರದಿ

    ನ್ಯೂಸ್‌ 18 2026ರ ಏಪ್ರಿಲ್ 14ರಂದು ಮಾಡಿರುವ ವರದಿ

    ಮಾಧ್ಯಮಗಳು ನಿದಾ ಖಾನ್ ಹೆಚ್‌ಆರ್ ಎಂದಿರುವ ವಿಡಿಯೋ ವರದಿಗಳ ಕೆಲ ಯೂಟ್ಯೂಬ್ ಲಿಂಕ್ ಇಲ್ಲಿದೆ- ಎನ್‌ಡಿಟಿವಿ, ನ್ಯೂಸ್‌ 18

    ಕಂಪನಿ ಹೇಳಿದ್ದೇನು? “ಟಿಸಿಎಸ್‌ನ ಹೆಚ್‌ಆರ್‌ ವ್ಯವಸ್ಥಾಪಕಿ ಎಂದು ಪತ್ರಿಕೆಗಳಲ್ಲಿ ಪದೇ ಪದೇ ಉಲ್ಲೇಖಿಸಲ್ಪಡುತ್ತಿರುವ ನಿದಾ ಖಾನ್, ಮಾನವ ಸಂಪನ್ಮೂಲ ವ್ಯವಸ್ಥಾಪಕಿಯೂ ಅಲ್ಲ ಅಥವಾ ನೇಮಕಾತಿಗೆ ಜವಾಬ್ದಾರರೂ ಅಲ್ಲ. ಅವರು ಪ್ರೋಸೆಸ್ ಅಸೋಸಿಯೇಟ್ ಆಗಿ ಸೇವೆ ಸಲ್ಲಿಸಿದ್ದರು ಮತ್ತು ಯಾವುದೇ ನಾಯಕತ್ವದ ಜವಾಬ್ದಾರಿಗಳನ್ನು ಹೊಂದಿರಲಿಲ್ಲ.”

    2. ಪ್ರಕರಣದ ಬಳಿಕ ಟಿಸಿಎಸ್‌ ನಾಸಿಕ್ ಘಟಕ ಬಾಗಿಲು ಮುಚ್ಚಿದೆ

    ಮೇಲ್ಗಡೆ ಉಲ್ಲೇಖಿಸಿದ ಗಂಭೀರ ಆರೋಪಗಳು ಕೇಳಿ ಬಂದ ಬಳಿಕ ಟಿಸಿಎಸ್‌ ನಾಸಿಕ್ ಘಟಕ ಬಾಗಿಲು ಮುಚ್ಚಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತ ಕೆಲ ಸ್ಕ್ರೀನ್‌ ಶಾಟ್‌ಗಳನ್ನು ಕೆಳಗಡೆ ನೋಡಬಹುದು.

    ಇಂಡಿಯಾ ಟುಡೇ ವರದಿ

    ಔಟ್‌ ಲುಕ್‌ ಬಿಸಿನೆಸ್ ವರದಿ

    ಇಟಿ ನೌ ವರದಿ

    ವಿಡಿಯೋ ವರದಿಗಳ ಯೂಟ್ಯೂಬ್ ಲಿಂಕ್ ರಿಪಬ್ಲಿಕ್ ವರ್ಲ್ಡ್, ಬಿಸಿನಸ್ ಟುಡೇ

    ಕಂಪನಿ ಹೇಳಿದ್ದೇನು? : “ನಾಸಿಕ್‌ನಲ್ಲಿರುವ ನಮ್ಮ ಘಟಕವು ಕಾರ್ಯನಿರ್ವಹಿಸುವುದನ್ನು ಮತ್ತು ನಮ್ಮ ಗ್ರಾಹಕರಿಗೆ ಸೇವೆ ಸಲ್ಲಿಸುವುದನ್ನು ಮುಂದುವರೆಸಿದೆ. ಘಟಕವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ಪತ್ರಿಕೆಗಳಲ್ಲಿನ ವರದಿಗಳು ಸಂಪೂರ್ಣವಾಗಿ ಸುಳ್ಳು.”

    3. ಹಲವು ಮಹಿಳಾ ಉದ್ಯೋಗಿಗಳು ಕಿರುಕುಳದ ಬಗ್ಗೆ ಆರೋಪ ಮಾಡಿದ್ದಾರೆ

    ಟಿಸಿಎಸ್‌ ನಾಸಿಕ್ ಘಟಕದ ಹಲವು ಮಹಿಳಾ ಉದ್ಯೋಗಿಗಳು ಲೈಂಗಿಕ ಕಿರುಕುಳ, ಮತಾಂತರ, ನಮಾಝ್ ಮಾಡಲು ಮತ್ತು ಬೀಫ್ ತಿನ್ನಲು ಒತ್ತಾಯಿಸಿದ್ದ ಬಗ್ಗೆ ಆರೋಪ ಮಾಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಸ್ಕ್ರೀನ್ ಶಾಟ್ ಮತ್ತು ಲಿಂಕ್‌ಗಳು ಕೆಳಗಿವೆ..

    ಟೈಮ್ಸ್‌ ನೌ ವರದಿ

    ಟೈಮ್ಸ್ ಆಫ್ ಇಂಡಿಯಾ ವರದಿ

    ವಿಡಿಯೋ ವರದಿಗಳ ಯೂಟ್ಯೂಬ್ ಲಿಂಕ್ – ಬಿಸಿನೆಸ್ ಟುಡೇ

    ಕಂಪನಿ ಹೇಳಿದ್ದೇನು? : “ನಾಸಿಕ್ ಘಟಕಕ್ಕೆ ಸಂಬಂಧಿಸಿದ ವ್ಯವಸ್ಥೆಗಳು ಮತ್ತು ದಾಖಲೆಗಳ ಪ್ರಾಥಮಿಕ ಪರಿಶೀಲನೆಯು ಇನ್ನೂ ಪ್ರಗತಿಯಲ್ಲಿದೆ. ಆದಾಗ್ಯೂ, ಈ ಪ್ರಾಥಮಿಕ ವರದಿಯ ಪ್ರಕಾರ, ಪ್ರಸ್ತುತ ಕೇಳಿಬರುತ್ತಿರುವ ಆರೋಪಗಳ ಸ್ವರೂಪಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ನಮ್ಮ ನೈತಿಕತೆ (Ethics) ಅಥವಾ ಲೈಂಗಿಕ ಕಿರುಕುಳ ತಡೆ (POSH) ವೇದಿಕೆಗಳಲ್ಲಿ ಈವರೆಗೆ ದಾಖಲಾಗಿಲ್ಲ ಎಂಬುದು ಕಂಡುಬಂದಿದೆ.”

    ಗಮನಿಸಿ : ಈ ಪ್ರಕರಣದಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ನಾವು ಈ ವರದಿಯ ಮೂಲಕ ಸಂಪೂರ್ಣವಾಗಿ ಸುಳ್ಳು ಎನ್ನುತ್ತಿಲ್ಲ. ಮಹಿಳೆಯರು ವಿವಿಧ ರೀತಿಯ ಕಿರುಕುಳ ಅನುಭವಿಸಿದ ಬಗ್ಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ. ಅದು ನಿಜವೋ..ಸುಳ್ಳೋ ಎನ್ನುವುದು ಸೂಕ್ತ ತನಿಖೆಯಿಂದ ತಿಳಿದು ಬರಬೇಕಿದೆ. ಅದಕ್ಕಿಂತ ಮೊದಲು ಈ ವಿಚಾರದಲ್ಲಿ ನಾವು ನಿರ್ಧಾರಕ್ಕೆ ಬರುವುದಿಲ್ಲ. ಆದರೆ, ಈ ಕಿರುಕುಳ ಆರೋಪಗಳಿಗೆ ಸಂಬಂಧಪಟ್ಟಂತೆ ಕಂಪನಿಯಲ್ಲಿ ಆಂತರಿಕವಾಗಿ ಅವರು ಯಾವುದೇ ದೂರು ನೀಡಿಲ್ಲ ಎಂದು ಟಿಸಿಎಸ್‌ ಸ್ಪಷ್ಟಪಡಿಸಿದೆ. ಅದನ್ನು ಇಲ್ಲಿ ಉಲ್ಲೇಖಿಸಿದ್ದೇವೆ.  

    ಟಿಸಿಎಸ್‌ ಪತ್ರಿಕಾ ಪ್ರಕಟಣೆಯ ಇತರ ಅಂಶಗಳು

    1.ಟಿಸಿಎಸ್‌ನ ಅಧ್ಯಕ್ಷೆ ಮತ್ತು ಸಿಒಒ ಆರತಿ ಸುಬ್ರಮಣಿಯನ್ ನೇತೃತ್ವದ ಆಂತರಿಕ ತನಿಖೆಗೆ ನಾವು ಡೆಲಾಯ್ಟ್ ಮತ್ತು ಪ್ರಮುಖ ಕಾನೂನು ಸಂಸ್ಥೆ ಟ್ರೈಲೀಗಲ್‌ನ ತಜ್ಞ ತಂಡಗಳ ಸೇವೆಗಳನ್ನು ಸ್ವತಂತ್ರ ಸಲಹೆಗಾರರಾಗಿ ನೇಮಿಸಿಕೊಂಡಿದ್ದೇವೆ.

    2. ನಾವು ಟಿಸಿಎಸ್‌ನ ಸ್ವತಂತ್ರ ನಿರ್ದೇಶಕರಾದ ಕೇಕಿ ಮಿಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದ್ದೇವೆ.

    3. ಆಂತರಿಕ ತನಿಖೆಯ ವರದಿಯನ್ನು ಯಾವುದೇ ಶಿಫಾರಸುಗಳ ಪರಿಶೀಲನೆ ಮತ್ತು ಅನುಷ್ಠಾನಕ್ಕಾಗಿ ಮೇಲ್ವಿಚಾರಣಾ ಸಮಿತಿಗೆ ಸಲ್ಲಿಸಲಾಗುತ್ತದೆ.

    ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

    LEAVE A REPLY

    Please enter your comment!
    Please enter your name here

    - Advertisment -

    ‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

    ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

    ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

    ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

    ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

    ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

    ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

    ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

    ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

    ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

    ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

    ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

    ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

    ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

    ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

    ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

    ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

    ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

    ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

    ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...