Homeರಾಜಕೀಯಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಲೆಫ್ಟಿನೆಂಟ್ ‘ವಿದೇಶಿ.. ಬಂಧನದಲ್ಲೀಗ ಅವರು ‘ಪರದೇಶಿ’...

- Advertisement -
- Advertisement -

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ ಅಡಿಯಲ್ಲಿ ಭಾರತೀಯ ಸೇನೆಯಲ್ಲಿ 30 ಬರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಒಬ್ಬರನ್ನು ವಿದೇಶಿ ಎಂದು ಗುರುತಿಸಿ ಬಂಧಿಸಲಾಗಿದೆ. ಅವರು ಮುಸ್ಲಿಂ ಎನ್ನುವುದು ಕಾಕತಾಳೀಯವಲ್ಲ…
ಎನ್‍ಆರ್‍ಸಿ ಮುಂದೆ ಸೃಷ್ಟಿಸಲಿರುವ ಅನಾಹುತಗಳಿಗೆ ಸಾಕ್ಷಿಯಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹಲವಾರು ಜನರನ್ನು ವಿದೇಶಿ ವಲಸಿಗರು ಎಂದು ಗುರುತಿಸುವ ಸಂಚು ಶುರುವಾಗಿದೆ. ಮೊನ್ನೆ ಮೇ 29ರಂದು ಅಸ್ಸಾಂ ಪೊಲೀಸರು ಮೊಹಮ್ಮದ್ ಸನಾವುಲ್ಲಾ ಎಂಬ ನಿವೃತ್ತ ಗೌರವಾನ್ವಿತ ಲೆಫ್ಟಿನೆಂಟ್‍ರನ್ನು ವಶಕ್ಕೆ ಪಡೆದಿದ್ದಾರೆ. ‘ಬೋಕೊ ಫಾರಿನರ್ಸ್ ಟ್ರಿಬ್ಯುನಲ್’ ಅವರನ್ನು ವಿದೇಶಿಯೆಂದು ಗುರುತಿಸಿದೆ.
ಇದೇನೂ ಮೊದಲಲ್ಲ. ಹಲವಾರು ನಿವೃತ್ತ ಸೇನಾಧಿಕಾರಿಗಳು ಈಗಾಗಲೇ ವಿಚಾರಣೆ ಹೆಸರಲ್ಲಿ ಕಿರುಕುಳ ಅನುಭವಿಸಿದ್ದಾರೆ. ದೇಶಕ್ಕೆ ಅವರು ನೀಡಿದ ಕೊಡುಗೆಯೂ ಈ ಭಯಾನಕ ಎನ್‍ಆರ್‍ಸಿ ಮುಂದೆ ನಗಣ್ಯ. ಹೀಗಾದರೆ ಅಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಿ.
ಈ ಸಲದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವಾರು ಕಡೆ ಎನ್‍ಆರ್‍ಸಿ ವಿಷಯ ಪ್ರಸ್ತಾಪಿಸಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಕಡೆ ಎನ್‍ಆರ್‍ಸಿ ಬಳಸಿ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ. ಇದರಲ್ಲಿ ಹಿಂದೂ ನಿರಾಶ್ರಿತರಿದ್ದರೆ ಅವರಿಗೆ ಇಲ್ಲಿಯ ನಾಗರಿಕತ್ವ ನೀಡುತ್ತೇವೆ. ಉಳಿದವರನ್ನು ಎತ್ತಿ ಬಿಸಾಡುತ್ತೇವೆ’ ಎಂದು ಪ್ರಚೊದನಾಜಾರ ಭಾಷಣಗಳನ್ನು ಮಾಡಿದ್ದರು. ಅವರ ಗುರಿ ಬಾಂಗ್ಲಾ ಮೂಲದ ಮುಸ್ಲಿಂರೇ ಎಂಬುದು ಸ್ಪಷ್ಟ. ಇದನ್ನು ದೇಶಾದ್ಯಂತ ವಿಸ್ರಿಸಿದರೆ ಘನಘೋರ ದೌರ್ಜನ್ಯಗಳಾಗುವುದಂತೂ ಸತ್ಯ. ಹಿಂದೊಮ್ಮೆ ಬಾಂಗ್ಲಾ ವಲಸಿಗರನ್ನು ಇದೇ ಶಾ ಕ್ರಿಮಿಕೀಟಗಳಿಗೆ ಹೋಲಿಸಿದ್ದರು. ಈ ಪುಣ್ಯಾತ್ಮನಿಗೆ ಗೃಹ ಖಾತೆ ನೀಡಿದರಂತೂ ಪರಿಸ್ಥಿತಿ ಅಧ್ವಾನವಾಗಲಿದೆ.
51 ವರ್ಷದ ಸನಾವುಲ್ಲಾ ಭಾರತೀಯ ಸೇನೆಗೆ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿ, ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಆಂತರಿಕ ಸಶಸ್ತ್ರ ಬಂಡಾಯಗಳ ವಿರುದ್ಧದ ಹೋರಾಟದಲ್ಲಿ ಪಾಲೊಂಡಿದ್ದಾರೆ. ಅವರ ಸೇವೆ ಮನ್ನಿಸಿ 2014ರಲ್ಲಿ ರಾಷ್ಟ್ಪತಿ ಅವರಿಗೆ ಜೂನಿಯರ್ ಕಮೀಚನ್ ಅಧಿಕಾರಿ ದರ್ಜಗೆ ಬಡ್ತಿ ನೀಡಿದ್ದಾರೆ.
ನಿವೃತ್ತಿ ನಂತರ ಅವರು ಅಸ್ಸಾಂ ಗಡಿ ಭದ್ರತಾ ಪಡೆಗೆ ಎಸ್‍ಐ ಎಂದು ನೇಮಕಗೊಂಡಿದ್ದರು. ಈಗ ಫಾರಿನರ್ಸ್ ಟ್ರಿಬ್ಯುನಲ್ (ಎಫ್‍ಟಿ) ಸೂಚನೆಯ ಮೇರೆಗೆ ಅದೇ ಪೊಲೀಸರೇ ಅವರನ್ನು ಅರೆಸ್ಟಟ ಮಾಡಿದ್ದಾರೆ. ಅವರನ್ನು ಈಗ ಗೋಲ್‍ಪಾರಾ ಡಿಟೆನ್ಸನ್ ಕೇಂದ್ರದಲ್ಲಿ ಇಡಲಾಗಿದೆ. ಸನಾವುಲ್ಲಾ ಬಂಧನದ ವಿರುದ್ಧ ಹೈಕೋರ್ಟಿಗೆ ಹೋಗಲಿರುವ ವಕೀಲ ಅಮಾನ್ ವಡುದ್ ‘ಕ್ವಿಂಟ್’ನೊಂದಿಗೆ ಮಾತನಾಡಿ, ಫಾರಿನರ್ಸ್ ಟ್ರಿಬ್ಯುನಲ್ ಸರಿಯಾದ ತನಿಖೆ ಮಾಡದೇ ಸನಾವುಲ್ಲಾ ಅವರನ್ನು ವಿದೇಶಿ ನಾಗರಿಕ ಎಂದು ಹೇಳಿರುವುದು ಅಕ್ಷಮ್ಯ, 30 ವರ್ಷ ಈ ದೇಶದ ಸೇನೆಯ ಭಾಗವಾಗಿದ್ದವರಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ಗಡಿ ಭದ್ರತಾ ಪೊಲೀಸರ5ನ್ನೂ ದೂರಿರುವ ಅವರು, ವೆರಿಫಿಕೆಷನ್ ರಿಪೋರ್ಟಿನಲ್ಲಿ ಸನಾವುಲ್ಲಾ ಒಬ್ಬ ದಿನಗೂಲಿ ಕಾರ್ಮಿಕ ಎಂದು ಉಲ್ಲೇಖಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಎಫ್‍ಟಿ ವರದಿಯಲ್ಲಿ ಸನಾವುಲ್ಲಾ ವಿದೇಶಿ ಎಂದು ನಿರ್ಧರಿಸಲು, ‘1986ರ ಮತದಾರರ ಪಟ್ಟಿಯಲ್ಲಿ 20 ವರ್ಷದವರಾಗಿದ್ದ ಅವರು ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ’ ಎಂಬ ವಿಚುತ್ರ ಕಾರಣವನ್ನೂ ನೀಡಲಾಗಿದೆ. ಆದರೆ, ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು 1989ರಲ್ಲಿ ಎಂಬ ವಾಸ್ತವವನ್ನೂ ಕಡೆಗಣಿಸಲಾಗಿದೆ.
‘ಕೋರ್ಟಿನ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ನಾವು ಬಂಧಿಸಿದ್ದೇವೆ. ಎಫ್‍ಟಿ ವರದಿಯೇ ನಮಗೆ ಫೈನಲ್/ ಸನಾವುಲ್ಲಾ ಅವರು ಕೋರ್ಟಿಗೆ ಹೋಗಲು ಅವಕಾಶಗಳಿವೆ’ ಎಂದು ಅನಿನ್‍ಗಾಂವ್‍ನ ಹೆಚ್ಚುವರಿ ಎಸ್‍ಪಿ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ನೋಟಿಸ್ ಬಂದಾದ ಮೇಲೆ ಸನಾವುಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ವಿವರ ಪರಿಶೀಲಿಸಿದ್ದಾರೆ. ಆದರೆ, ಬೋಕೊ ಎಫ್‍ಟಿ ವರದಿಯಲ್ಲಿ ಆಗಿಚ್ಯಾ ಗ್ರಾಮದ ಮೊಹಮ್ಮದ್ ಸಮಸ್ಯಲ್ ಹಕ್ ಎಂಬುವರ ಹೆಸರಿದ್ದು, ಅದನ್ನೇ ತಪ್ಪಾಗಿ ನನ್ನ ಮೇಲೆ ಕೇಸಉ ಹೂಡಲು ಎಫ್‍ಟಿ ಬಳಸಿಕೊಂಡಿದ್ದಾರೆ…. 30 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನನಗೆ ವಿದೇಶಿ ಪಟ್ಟ ಕಟ್ಟಿ ಬಂಧನದಲ್ಲಿ ಇಡುವ ಉಡುಗೊರೆಯನ್ನು ನೀಡಲಾಗುತ್ತಿದೆ’ ಎಂದು ಸ್ವತ: ಸನಾವುಲ್ಲಾ ನ್ಯೂಸ್ 18 ಮಾಧ್ಯಮದ ಮುಂದೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ ಕೋರ್ಟ್) ಜಾಮೀನು...

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...

‘ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ’ : ಎಎಪಿ ಆರೋಪಗಳನ್ನು ತಳ್ಳಿ ಹಾಕಿದ ರಾಘವ್ ಚಡ್ಡಾ

ತನ್ನ ವಿರುದ್ದ ಆಮ್‌ ಆದ್ಮಿ ಪಕ್ಷ (ಎಎಪಿ) ಮಾಡಿರುವ ಎಲ್ಲಾ ಆರೋಪಗಳನ್ನು ರಾಘವ್ ಚಡ್ಡಾ ಶನಿವಾರ (ಏ.4) ಅಲ್ಲಗಳೆದಿದ್ದು, "ಅವೆಲ್ಲವೂ ಸುಳ್ಳು ಮತ್ತು ಸಂಘಟಿತ ಅಭಿಯಾನದ ಭಾಗ" ಎಂದಿದ್ದಾರೆ. "ಸಂಸತ್ತಿನಲ್ಲಿ ನನ್ನ ಉದ್ದೇಶ...

ಎಡರಂಗದಲ್ಲಿ ಎಡಪಂಥೀಯರೇ ಇಲ್ಲ; ದ್ವೇಷ ಹರಡುವ ಜನರೊಂದಿಗೆ ಪಿಣರಾಯಿ ಪಾಲುದಾರಿಕೆ ಹೊಂದಿದ್ದಾರೆ: ರಾಹುಲ್ ಗಾಂಧಿ

ಕೇರಳ ವಿಧಾನಸಭಾ ಚುನಾವಣೆ ಪ್ರಚಾರವು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ ತೀಕ್ಷ್ಣವಾದ ರಾಜಕೀಯ ದಾಳಿಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸಿಪಿಐ-ಎಂ ನೇತೃತ್ವದ ಎಡಪಕ್ಷವು ತನ್ನ ಸೈದ್ಧಾಂತಿಕ ತಿರುಳನ್ನು ಕಳೆದುಕೊಳ್ಳುತ್ತಿದೆ" ಎಂದು ಆರೋಪಿಸಿದ್ದಾರೆ. "ಎಲ್‌ಡಿಎಫ್...

ಬಿಜೆಪಿ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಅಂದಿದ್ದೆ : ಅಣ್ಣಾಮಲೈ

"ವಿಧಾನಸಭಾ ಚುನಾವಣೆಗೆ ಬಿಜೆಪಿ ನನಗೆ ಟಿಕೆಟ್ ನಿರಾಕರಿಸಿಲ್ಲ, ನಾನೇ ಸ್ಪರ್ಧಿಸಲ್ಲ ಎಂದು ಮುಂಚಿತವಾಗಿ ಹೈಕಮಾಂಡ್‌ಗೆ ತಿಳಿಸಿದ್ದೆ" ಎಂದು ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಶನಿವಾರ...

ಸುರಕ್ಷಿತವಾಗಿ ಹಾರ್ಮುಜ್ ದಾಟಿದ 7ನೇ ಎಲ್‌ಪಿಜಿ ಹಡಗು; ಸರದಿಯಲ್ಲಿ ಕಾಯುತ್ತಿವೆ ಭಾರತದ 17 ಟ್ಯಾಂಕರ್‌ಗಳು

ಭಾರತದ ಧ್ವಜ ಹೊಂದಿದ್ದ ಮತ್ತೊಂದು ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಟ್ಯಾಂಕರ್, ಗ್ರೀನ್ ಸಾನ್ವಿ ಹೆಸರಿನ ಹಡಗು ಹಾರ್ಮುಜ್ ಜಲಸಂಧಿಯ ಪೂರ್ವಕ್ಕೆ ಯಶಸ್ವಿಯಾಗಿ ತಲುಪಿದೆ. ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ನಡೆಯುತ್ತಿರುವ ಪಶ್ಚಿಮ...

ಸಿಬಿಎಸ್‌ಇ ಹಿಂದಿ ಹೇರಿಕೆಯು ತ್ರಿಭಾಷಾ ಸೂತ್ರ ಜಾರಿಯ ‘ರಹಸ್ಯ ಕಾರ್ಯವಿಧಾನ’: ಸ್ಟಾಲಿನ್ ಆರೋಪ

ಸಿಬಿಎಸ್‌ಇ ಇತ್ತೀಚೆಗೆ ಅನಾವರಣಗೊಳಿಸಿದ ಪಠ್ಯಕ್ರಮ ಚೌಕಟ್ಟಿನ ಕುರಿತು ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, "ಮೂರು ಭಾಷಾ ಸೂತ್ರ ಎಂದು ಕರೆಯಲ್ಪಡುವುದು ವಾಸ್ತವದಲ್ಲಿ ಹಿಂದಿ ಮಾತನಾಡದ ಪ್ರದೇಶಗಳಿಗೆ ಹಿಂದಿ ವಿಸ್ತರಿಸುವ ರಹಸ್ಯ ಕಾರ್ಯವಿಧಾನವಾಗಿದೆ"...

‘ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ, ನಿಮ್ಮ ಅಧಿಕ ಪ್ರಸಂಗ ಕರ್ನಾಟಕದ ಜನತೆ ಒಪ್ಪುವುದಿಲ್ಲ’ : ರಾಜ್ಯಪಾಲರ ವಿರುದ್ಧ ಕರವೇ ಕಿಡಿ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ...

‘ತಪ್ಪಾಗಿದೆ’ : ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್‌ ವಿಧೇಯಕದ ಕುರಿತ ಟೀಕೆಗಳನ್ನು ಕೈಬಿಟ್ಟ ರಾಜಸ್ಥಾನ ಹೈಕೋರ್ಟ್

ಟ್ರಾನ್ಸ್‌ಜೆಂಡರ್ ಕಾಯ್ದೆ, 2019ರಲ್ಲಿ ಬದಲಾವಣೆಗಳನ್ನು ತರಲಿರುವ ಕೇಂದ್ರ ಸರ್ಕಾರದ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ವಿಧೇಯ, 2026ರ ಕುರಿತು ಈ ಹಿಂದೆ ಮಾಡಿದ್ದ ವಿಮರ್ಶಾತ್ಮಕ ಟಿಪ್ಪಣಿಗಳನ್ನು ರಾಜಸ್ಥಾನ ಹೈಕೋರ್ಟ್ ತೆಗೆದುಹಾಕಿದೆ ಎಂದು...