ಮಧ್ಯಪ್ರದೇಶದ ಭೋಪಾಲ್ ಬಳಿಯ ಬೆರಾಸಿಯಾ ಪಟ್ಟಣದಲ್ಲಿ ಬಿಜೆಪಿ ನಾಯಕಿ ನಡೆಸುತ್ತಿರುವ ಗೋಶಾಲೆಯಲ್ಲಿ ಸಾವಿಗೀಡಾದ 100 ಕ್ಕೂ ಹೆಚ್ಚು ಹಸುಗಳ ಸಾವಿನ ಸಂಖ್ಯೆ ಜನರಲ್ಲಿ ಆತಂಕ ಮೂಡಿಸಿದೆ. ಆದರೂ, ಗೋವುಗಳ ವಿಷಯವಿಟ್ಟುಕೊಂಡು ರಾಜಕೀಯ ಮಾಡುವ ಬಿಜೆಪಿಯವರು ಮತ್ತು ಇಲ್ಲಿನ ಸರ್ಕಾರ ಈ ಬಗ್ಗೆ ಮೌನವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೋಪಾಲ್ ಬಳಿಯ ಬೆರಾಸಿಯಾದಲ್ಲಿ ಬಿಜೆಪಿ ನಾಯಕಿ ನಿರ್ಮಲಾ ದೇವಿ ಶಾಂಡಿಲ್ಯ ಅವರ ಗೋಶಾಲೆಯಲ್ಲಿ ಈ ಸಾವುಗಳು ಸಂಭವಿಸಿವೆ. ಭಾನುವಾರ (ಜ.30) ಗೋಶಾಲೆಯ ಬಾವಿಯಲ್ಲಿ 20 ಹಸುಗಳ ಶವ ಪತ್ತೆಯಾಗಿದ್ದವು. ಬಳಿಕ ಗೋಶಾಲೆಯ ಪಕ್ಕದ ಖಾಲಿ ಜಾಗದಲ್ಲಿ 80ಕ್ಕೂ ಹೆಚ್ಚು ಹಸುಗಳ ಶವ ಹಾಗೂ ಅಸ್ಥಿಪಂಜರಗಳು ಪತ್ತೆಯಾಗಿವೆ.
ಇಚ್ಟೊಂದು ಹಸುಗಳು ಸಾವನ್ನಪ್ಪಿರುವ ಕುರಿತು ಗೋಶಾಲೆಯ ಹೊರಗೆ ಸ್ಥಳೀಯ ನಿವಾಸಿಗಳು ಮತ್ತು ಗೋರಕ್ಷಕರು ಪ್ರತಿಭಟನೆ ನಡೆಸಿದ್ದಾರೆ. ಗೋಶಾಲೆಯನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗೋಶಾಲೆಯ ಬಾವಿಯಲ್ಲಿನ ಹಸುಗಳ ಮೃತದೇಹಗಳು ಮತ್ತು ಗೋಶಾಲೆ ಪಕ್ಕದ ಖಾಲಿ ಸ್ಥಳದಲ್ಲಿ ಬಿದ್ದಿರುವ ಮೃತದೇಹಗಳು, ಅಸ್ಥಿಪಂಜರಗಳ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ಜಿಂದಾಲ್ ಯೋಜನೆ ವಿರುದ್ಧ ಸಂತ್ರಸ್ತರನ್ನು ಬೆಂಬಲಿಸಿದ ‘O.P. ಜಿಂದಾಲ್ ಗ್ಲೋಬಲ್ ವಿವಿ’ ವಿದ್ಯಾರ್ಥಿಗಳು
ध्यान से देख लीजिए यह विडीयो !
और अगर अगली बार कोई BJP का नेता गाय पर ज्ञान दे, उसको यह दिखाइए।
गड्ढे में जिन गायों की हड्डियां डाली जा रही हैं वो @BJP4MP से जुड़ी नेत्री की गौशाला में मिली है।
सरकारी आंकड़ा 80+ गायों का है पर नगर निगम के अनुसार 400-500 गायों की गड्डियां है। pic.twitter.com/ckaMmcq3tv
— काश/if Kakvi (@KashifKakvi) January 31, 2022
ಹಸುಗಳ ಈ ದಾರುಣ ಸ್ಥಿತಿಯನ್ನು ಕಂಡು ಜನ ಆಕ್ರೋಶಗೊಂಡು, ಗೋಶಾಲೆ ಮುಖ್ಯಸ್ಥೆ ನಿರ್ಮಲಾದೇವಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಬಿಜೆಪಿ ನಾಯಕಿ ನಿರ್ಮಲಾ ದೇವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭೋಪಾಲ್ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಬೆರಸಿಯಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269 (ನಿರ್ಲಕ್ಷ್ಯದ ಕ್ರಿಯೆಯಿಂದ ಜೀವಕ್ಕೆ ಅಪಾಯಕಾರಿ ರೋಗವನ್ನು ಹರಡುವ ಸಾಧ್ಯತೆ) ಮತ್ತು 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ನಾಯಕಿ ನಿರ್ಮಲಾ ದೇವಿ ಕಳೆದ 18 ವರ್ಷಗಳಿಂದಲೂ ಗೋಶಾಲೆ ನಡೆಸುತ್ತಿದ್ದಾರೆ.
RSS VHP संचालित बैरसिया गौशाला का हृदय विदारक दृश्य।
क्या ऐसे लोग जो शासन से अनुदान ले कर इसका संचालन कर रहे हैं, उन्हें हम कभी माफ़ कर सकते हैं?
कभी नहीं। #मामूगेंग@RSSorg
@VHPDigital
@CMMadhyaPradesh
@INCIndia
@INCMP pic.twitter.com/57fBLGX74v— digvijaya singh (@digvijaya_28) January 31, 2022
ಹಸುಗಳ ಸಾವು ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಘಟನೆಯ ಗಂಭೀರತೆಯನ್ನು ಅರಿತು ಜಿಲ್ಲಾಧಿಕಾರಿ ಅವಿನಾಶ್ ಲಾವಾನಿಯಾ ಮತ್ತು ಹಲವಾರು ಆಡಳಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತಲುಪಿ, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಜನರ ಪ್ರತಿಭಟನೆ, ಆಕ್ರೋಶದಿಂದಾಗಿ ಸ್ಥಳದಲ್ಲಿ ಭದ್ರತೆಗಾಗಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಹಸುಗಳ ಸಾವಿನ ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದು, ಹಸುಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಆದೇಶಿಸಿದ್ದಾರೆ. ಸಂಬಂಧಪಟ್ಟ ಗೋಶಾಲೆಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಬೆರಸಿಯಾ ಅಭಿವೃದ್ಧಿ ಬ್ಲಾಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
हालाकि भोपाल के बैरसिया में गो सेवा भारती गौशाला में हुई गाय की मौत पर भोपाल कलेक्टर ने संज्ञान में लेते हुए गौ शाला कब्जे में ली और संचालक पर FIR दर्ज़ हुई।
इस गौशाला को पिछले 5 सालों में 37 लाख अनुदान मिला और आधिकारिक रूप से 50+ से ज़्यादा गायों की मौत हुईं।
2/3 pic.twitter.com/Iz5WOOOFJL
— काश/if Kakvi (@KashifKakvi) January 31, 2022
ಸ್ಥಳೀಯ ನಿವಾಸಿ ಘನಶ್ಯಾಮ್ ಗುಪ್ತಾ ಅವರು ಗೋಶಾಲೆಯ ಮುಖ್ಯಸ್ಥರು ಹಸುಗಳನ್ನು ಕೊಂದು ನಂತರ ಸತ್ತ ಹಸುಗಳ ಚರ್ಮ ಮತ್ತು ಮೂಳೆಗಳನ್ನು ವ್ಯಾಪಾರ ಮಾಡುವ ದಂಧೆಯನ್ನು ನಡೆಸುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸ್ಥಳೀಯ ವಿಎಚ್‌ಪಿ ನಾಯಕ ಜನಕ್ ಸಿಂಗ್ ರಜಪೂತ್, “ಗೋಶಾಲಾ ಮತ್ತು ಅದರ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗೋಶಾಲೆಯಲ್ಲಿ ಹಸುವಿನ ಚರ್ಮ ಮತ್ತು ಮೂಳೆಗಳ ವ್ಯಾಪಾರ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ತನಿಖೆ ನಡೆಸುವಂತೆ ನಾವು ಒತ್ತಾಯಿಸುತ್ತೇವೆ” ಎಂದಿದ್ದಾರೆ.
ಆದರೆ, ಗೋಶಾಲೆ ಮುಖ್ಯಸ್ಥೆ ನಿರ್ಮಲಾ ದೇವಿ ಶಾಂಡಿಲ್ಯ, ಸ್ಥಳೀಯ ನಿವಾಸಿಗಳ ಆರೋಪಗಳನ್ನು ನಿರಾಕರಿಸಿದ್ದಾರೆ. “ಜನರು ತಮ್ಮ ಅನಾರೋಗ್ಯದ ಹಸುಗಳನ್ನು ಇಲ್ಲಿ ಬಿಡುತ್ತಾರ. ನೀವು ನೋಡುತ್ತಿರುವ ಶವಗಳು ಅನಾರೋಗ್ಯದಿಂದ ಸತ್ತ ಹಸುಗಳವು. ಈ ಹಸುಗಳು ನಮ್ಮ ಗೋಶಾಲೆಗೆ ಸೇರಿದವುಗಳಲ್ಲ. ನಾನು ಇಲ್ಲಿ ಜೂಜು ಮತ್ತು ಕಳ್ಳತನವನ್ನಿ ನಿಲ್ಲಿಸಿರುವ ಕಾರಣ ಗ್ರಾಮಸ್ಥರು ನನ್ನ ಗೋಶಾಲೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಯಾವುದೇ ತನಿಖೆ, ಪ್ರಕರಣವನ್ನು ಎದುರಿಸಲು ಸಿದ್ಧ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟ್ರಾಫಿಕ್ ಅಧಿಕಾರಿಯಿಂದ ವಿಕಲಾಂಗ ಮಹಿಳೆಗೆ ಥಳಿತ: ಬೆಂಗಳೂರಿನಲ್ಲಿ ಸದ್ಯಕ್ಕಿಲ್ಲ ಟೋಯಿಂಗ್


