Homeಮುಖಪುಟಮಣಿಪುರ: ಮೈತಿ ವಿದ್ಯಾರ್ಥಿಗಳ ಬರ್ಬರ ಹತ್ಯೆ ಪ್ರಕರಣ; ಐದನೇ ಆರೋಪಿಯ ಬಂಧನ

ಮಣಿಪುರ: ಮೈತಿ ವಿದ್ಯಾರ್ಥಿಗಳ ಬರ್ಬರ ಹತ್ಯೆ ಪ್ರಕರಣ; ಐದನೇ ಆರೋಪಿಯ ಬಂಧನ

- Advertisement -
- Advertisement -

ಜುಲೈ 6 ರಂದು ಮಣಿಪುರದ ಇಬ್ಬರು ಮೈತಿ ವಿದ್ಯಾರ್ಥಿಗಳ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ದಳ (ಸಿಬಿಐ) 22 ವರ್ಷದ ವ್ಯಕ್ತಿಯನ್ನು ಬಂಧಿಸಿದೆ ಎಂದು ಶುಕ್ರವಾರ ವಿಷಯ ತಿಳಿದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಐದನೇ ಬಂಧನವಾಗಿದೆ.

ಪೌಲುನ್ ಮಾಂಗ್ ಬಂಧಿತ ವ್ಯಕ್ತಿ. ಈತನನ್ನು ಮಹಾರಾಷ್ಟ್ರದ ಪುಣೆಯಿಂದ ಬುಧವಾರ ಬಂಧಿಸಿ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 16ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

”ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಕೊಲೆಯ ಹಿಂದೆ ಮಾಂಗ್ ಪಾತ್ರವು ಪ್ರಮುಖವಾಗಿದೆ. ಈ ಹಿಂದೆ ಬಂಧಿತರಾಗಿರುವ ನಾಲ್ವರ ವಿಚಾರಣೆ ಆಧರಿಸಿ ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ” ಎಂದು ಹೆಸರು ಹೇಳಲಿಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐ ನೇತೃತ್ವದ ಭದ್ರತಾ ಪಡೆಗಳ ತಂಡವು ಅಕ್ಟೋಬರ್ 1 ರಂದು ಇಬ್ಬರು ವಿದ್ಯಾರ್ಥಿಗಳನ್ನು ಅಪಹರಣ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಪಾವೊಮಿನ್ಲುನ್ ಹಾಕಿಪ್, ಎಸ್ ಮಾಲ್ಸಾಮ್ ಹಾಕಿಪ್, ಲಿಂಗ್ನಿಚಾಂಗ್ ಬೈಟೆಕುಕಿ ಮತ್ತು ಟಿನ್ನೆಲ್ಹಿಂಗ್ ಹೆಂತಾಂಗ್ ಬಂಧಿತರಾಗಿದ್ದಾರೆ.

ಜುಲೈ 6 ರಂದು ಲೈಮಾಟನ್‌ನಲ್ಲಿ ಕುಕಿ ಸಮುದಾಯದ ಗುಂಪು ಟಕಿಲ್‌ನ ಫಿಜಾಮ್ ಹೇಮನ್‌ಜಿತ್ ಸಿಂಗ್ (20) ಮತ್ತು ಲುವಾಂಗ್ಬಿ ಲಿಂಥೋಂಗಂಬಿ ಹಿಜಾಮ್ (17) ಅವರನ್ನು ಅಪಹರಿಸಿದ್ದಾರೆ ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ. ಸೆಪ್ಟೆಂಬರ್‌ನಲ್ಲಿ ಅವರನ್ನು ಹತ್ಯೆ ಮಾಡಿರುವ ಫೋಟೋಗಳು ವೈರಲ್ ಆಗಿದ್ದವು.

ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವವರೆಗೂ, ವಿದ್ಯಾರ್ಥಿಗಳ ಕುಟುಂಬಗಳು ತಮ್ಮ ಮಕ್ಕಳು ಕಾಣೆಯಾಗಿದ್ದಾರೆ ಎಂದು ನಂಬಿದ್ದರು. ಆದರೆ ಸೆಪ್ಟೆಂಬರ್ 25 ರಂದು, ರಾಜ್ಯ ಸರ್ಕಾರವು ಸೆಲ್ಯುಲಾರ್ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸಿದ ಎರಡು ದಿನಗಳ ನಂತರ, ವಿದ್ಯಾರ್ಥಿಗಳ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದವು.

ಇದನ್ನೂ ಓದಿ: ಹಿಂಸಾಚಾರ ತೋರಿಸುವ ಫೋಟೋ, ವೀಡಿಯೊಗಳ ಪ್ರಸಾರಕ್ಕೆ ನಿಷೇಧ: ಮಣಿಪುರ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...