Homeಮುಖಪುಟಒಬಿಸಿ ಪಾಲಿನ ತಟ್ಟೆಯಲ್ಲಿ ಮರಾಠರು ತಿನ್ನಲು ಸಾಧ್ಯವಿಲ್ಲ: ಪ್ರಕಾಶ್ ಅಂಬೇಡ್ಕರ್

ಒಬಿಸಿ ಪಾಲಿನ ತಟ್ಟೆಯಲ್ಲಿ ಮರಾಠರು ತಿನ್ನಲು ಸಾಧ್ಯವಿಲ್ಲ: ಪ್ರಕಾಶ್ ಅಂಬೇಡ್ಕರ್

- Advertisement -
- Advertisement -

ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಮರಾಠರ ಕೋಟಾಗಳನ್ನು ಪ್ರತ್ಯೇಕವಾಗಿ ಇರಿಸಿದರೆ ಮಾತ್ರ ಮಹಾರಾಷ್ಟ್ರದಲ್ಲಿ ಪ್ರಗತಿ ಸಾಧ್ಯ. ಒಬಿಸಿ ಮೀಸಲಾತಿಯ ಪಾಲನ್ನು ಮರಾಠರು ತಿನ್ನಲು ಸಾಧ್ಯವಿಲ್ಲ ಎಂಬುದು ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಗೆ ಪಾಟೀಲ್ ಅವರಿಗೆ ಹೇಳಬೇಕು ಎಂದು ವಂಚಿತ್ ಬಹುಜನ ಅಘಾಡಿ (ವಿಬಿಎ) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಭಾನುವಾರ ಹೇಳಿದ್ದಾರೆ.

ಮರಾಠರಿಗೆ ಒಬಿಸಿ ಕೋಟಾ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಜಾರಂಗೆ ಪಾಟೀಲ್ ಅವರ ಬೇಡಿಕೆಗಳನ್ನು ಎದುರಿಸಲು ಒಬಿಸಿ ಸಂಘಟನೆಗಳು ನಾಂದೇಡ್ ಜಿಲ್ಲೆಯಲ್ಲಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

‘ರಾಜ್ಯ ಸರ್ಕಾರಕ್ಕೆ ಹೊಸ ಜಾತಿಯನ್ನು ರಚಿಸಲು ಯಾವುದೇ ಅಧಿಕಾರವಿಲ್ಲ. ಆದರೆ, ಅಸ್ತಿತ್ವದಲ್ಲಿರುವ ಜಾತಿಯು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಮಾತ್ರ ಸಾಧ್ಯ ಎಂದು ಹೇಳಿದರು.

‘ಈಗಿನ ಆಡಳಿತ ವರ್ಗವನ್ನು ಅಲುಗಾಡಿಸಲು ನೀವು ಹೋರಾಟ [ಮರಾಠಾ ಆಂದೋಲನ] ಮಾಡುತ್ತಿದ್ದರೆ ಅದು ಒಳ್ಳೆಯದು ಎಂದು ನಾನು ಜಾರಂಗೆ ಪಾಟೀಲರಿಗೆ ವಿವರಿಸಿದೆ. ಈಗಿನ ಕೊಳೆತ ನಾಯಕತ್ವಕ್ಕೆ ದಲಿತರು, ಒಬಿಸಿಗಳು ಅಥವಾ ಮರಾಠಾ ಸಮುದಾಯದ ಬಡ ವರ್ಗಗಳಿಗೆ ನ್ಯಾಯ ಸಿಗುವುದನ್ನು ನೋಡುವ ಆಸಕ್ತಿಯೇ ಇಲ್ಲ. ಜಾರಂಗೆ ಪಾಟೀಲ್ ನೇತೃತ್ವದಲ್ಲಿ ಹೊಸ [ಮರಾಠ ಸಮುದಾಯ] ನಾಯಕತ್ವವನ್ನು ನಾನು ಸ್ವಾಗತಿಸುತ್ತೇನೆ. ಅವರು ಒಬಿಸಿ ಮೀಸಲಾತಿ ಫಲಕದ ಬಳಿ ಬರಬಾರದು ಎಂದು ಅವರು ತಿಳಿದಿರಬೇಕು’ ಎಂದು ಅಂಬೇಡ್ಕರ್ ಹೇಳಿದರು.

ಜಾರಂಗೆ ಪಾಟೀಲ್ ಮತ್ತು ಮರಾಠರು ಮೀಸಲಾತಿಗಾಗಿ ಬೇರೆ ತಟ್ಟೆ ಬಯಸಿದರೆ, ಒಬಿಸಿಗಳು ಖಂಡಿತವಾಗಿಯೂ ಸಮುದಾಯಕ್ಕೆ ಸಹಾಯ ಮಾಡುತ್ತಾರೆ. ಆಗ ಎರಡೂ ಕೋಟಾಗಳು ಪ್ರತ್ಯೇಕವಾಗಿರುತ್ತವೆ. ಆದರೆ, ನಮ್ಮ ತಟ್ಟೆಯಿಂದ ತಿನ್ನಬೇಡಿ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆರಡೂ ಮೀಸಲಾತಿಯನ್ನು ಹೊಂದಿವೆ. ಆದರೆ ಅವು ಪ್ರತ್ಯೇಕ ಕೋಟಾಗಳಾಗಿವೆ. ಮರಾಠ ಮತ್ತು ಒಬಿಸಿ ಕೋಟಾಗಳು ಪ್ರತ್ಯೇಕವಾಗಿ ಉಳಿದರೆ ಮಾತ್ರ ಮಹಾರಾಷ್ಟ್ರದಲ್ಲಿ ಬದಲಾವಣೆ ಸಾಧ್ಯ’ ಎಂದು ಹೇಳಿದರು.

ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕೇಸರಿ ಪಕ್ಷವು ದೇಶದ ಸಂವಿಧಾನವನ್ನು ಬದಲಾಯಿಸಲು ಸಂಚು ನಡೆಸುತ್ತಿದೆ. ಈ ಸಂವಿಧಾನವನ್ನು ಉಳಿಸಿದರೆ ಮಾತ್ರ, ನಮ್ಮ ಮೀಸಲಾತಿಯು ಉಳಿಯುತ್ತದೆ’ ಎಂದು ಅಂಬೇಡ್ಕರ್ ಹೇಳಿದರು.

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂವಿಧಾನದ ಬಗ್ಗೆ ಬಹಿರಂಗ ಚರ್ಚೆಗೆ ಎಂದಿಗೂ ಮುಂದಾಗುವುದಿಲ್ಲ. ನಮ್ಮ ಸಂವಿಧಾನದಲ್ಲಿ ಯಾವುದು ಕೆಟ್ಟದು ಹೇಳಿ ಎಂದು ನಾನು ಅವರನ್ನು ಕೇಳಲು ಹೊರಟಿದ್ದೆ. ಆದರೆ, ಅವರು ಎಂದಿಗೂ ಮುಖಾಮುಖಿ ಚರ್ಚೆಗೆ ಬರುವುದಿಲ್ಲ’ ಎಂದು ಅಂಬೇಡ್ಕರ್ ಆರೋಪಿಸಿದರು.

ಇದನ್ನೂ ಓದಿ; ‘ಭಾರತೀಯ ವಿಜ್ಞಾನ ಕಾಂಗ್ರೆಸ್‌’ಗೆ ನೆರವು ಸ್ಥಗಿತಗೊಳಿಸಿದ ಕೇಂದ್ರ ಸರಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...