Homeಮುಖಪುಟಅಂಡಮಾನ್‌- ನಿಕೋಬಾರ್‌ ದ್ವೀಪದಲ್ಲಿ ತೀವ್ರ ಭೂಕಂಪನ

ಅಂಡಮಾನ್‌- ನಿಕೋಬಾರ್‌ ದ್ವೀಪದಲ್ಲಿ ತೀವ್ರ ಭೂಕಂಪನ

- Advertisement -
- Advertisement -

ಇಂದು ಮುಂಜಾನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಭೂಕಂಪವು ಭೂಮಿಯಿಂದ 75 ಕಿ.ಮೀ. ಆಳದಲ್ಲಿ ಆಗಿದ್ದು, ಮುಂಜಾನೆ 2:30ರ ಸಮಯದಲ್ಲಿ ಕಂಪನ ಸಂಭವಿಸಿದೆ.

ಭೂಕಂಪನದ ತೀವ್ರತೆ: 6.1, ಸಂಭವಿಸಿದ ದಿನ ಹಾಗೂ ಸಮಯ: 24-09-2022, 02:23:00 (ಭಾರತೀಯ ಕಾಲಮಾನ), ಲ್ಯಾಟ್: 3.71, ಉದ್ದ: 95.96, ಆಳ: 75 ಕಿಮೀ, ಸ್ಥಳ: 431 ಕಿಮೀ ಎಸ್‌ಎಸ್‌ಇ ಆಫ್ ಕ್ಯಾಂಪ್‌ಬೆಲ್ ಬೇ, ಅಂಡಮಾನ್ ದ್ವೀಪ.

ಚಿಲಿಯಲ್ಲಿ ಭೂಕಂಪನ

ಇದೇ ರೀತಿಯಲ್ಲಿ 6.1 ತೀವ್ರತೆಯ ಭೂಕಂಪವು ಶನಿವಾರ ಚಿಲಿಯಲ್ಲಿ ಘಟಿಸಿದೆ. ಭೂಕಂಪನವು ಭೂಮಿಯಿಂದ 10 ಕಿ.ಮೀ ಆಳದಲ್ಲಿದೆ. ಮುಂಜಾನೆ 04:23ಕ್ಕೆ ಕಂಪನ ಸಂಭವಿಸಿದೆ ಎಂದು ವರದಿಯಾಗಿದೆ.

ಭೂಕಂಪನದ ತೀವ್ರತೆ: 6.1, ದಿನ ಹಾಗೂ ಸಮಯ: 24-09-2022, 04:23:27 (ಭಾರತೀಯ ಕಾಲಮಾನ), ಲ್ಯಾಟ್: -41.34, ಉದ್ದ: -75.61, ಆಳ: 10 ಕಿಮೀ , ಸ್ಥಳ: 979ಕಿಮೀ ಎಸ್‌ಎಸ್‌ಡಬ್ಲ್ಯೂ ಆಫ್ ಸ್ಯಾಂಟಿಯಾಗೊ, ಚಿಲಿ.

ಮೆಕ್ಸಿಕೋ: ಇಬ್ಬರು ನಿಧನ

6.8 ತೀವ್ರತೆಯ ಭೂಕಂಪವು ಮೆಕ್ಸಿಕೋದಲ್ಲಿ ಗುರುವಾರ ವರದಿಯಾಗಿದೆ. ಕನಿಷ್ಠ ಇಬ್ಬರು ಕೊನೆಯುಸಿರೆಳೆದಿದ್ದು, ಕಟ್ಟಡಗಳಿಗೆ ಹಾನಿಯುಂಟಾಗಿದೆ, ಭೂಕುಸಿತ ಸಂಭವಿಸಿದೆ.

ಗುರುವಾರ ಮಧ್ಯರಾತ್ರಿ 1 ಗಂಟೆಯಲ್ಲಿ ಭೂಕಂಪ ಸಂಭವಿಸಿದೆ. ಮೆಕ್ಸಿಕೋ ಸಿಟಿ ಮೇಯರ್ ಕ್ಲೌಡಿಯಾ ಶೀನ್‌ಬಾಮ್ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ತನ್ನ ಮನೆಯ ಮೆಟ್ಟಿಲುಗಳಿಂದ ಕೆಳಗೆ ಬಿದ್ದ ಮಹಿಳೆ ಹಾಗೂ ಹೃದಯಾಘಾತಕ್ಕೊಳಗಾದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಭೂಕಂಪನದ ಅನುಭವವಾದ ತಕ್ಷಣ ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬಂದು ಬೀದಿಯಲ್ಲಿ ನಿಂತಿದ್ದರು.

Mexico quake

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...