Homeಮುಖಪುಟವರದಕ್ಷಿಣೆ ಕಾನೂನು "ಸೆಕ್ಷನ್ 498 ಎ" ದುರ್ಬಳಕೆ ಮಾಡಲಾಗುತ್ತಿದೆ: ಹೈಕೋರ್ಟ್

ವರದಕ್ಷಿಣೆ ಕಾನೂನು “ಸೆಕ್ಷನ್ 498 ಎ” ದುರ್ಬಳಕೆ ಮಾಡಲಾಗುತ್ತಿದೆ: ಹೈಕೋರ್ಟ್

- Advertisement -
- Advertisement -

ಕೆಲವು ಮಹಿಳೆಯರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕೋಲ್ಕತ್ತಾ ಹೈಕೋರ್ಟ್  ಹೇಳಿದೆ.

ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಮಹಿಳೆಯೋರ್ವರು,  ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಎರಡು ಕ್ರಿಮಿನಲ್ ದೂರುಗಳನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ  ನಡೆಸಿದ  ಕೋರ್ಟ್ ವೈದ್ಯಕೀಯ ಪುರಾವೆ ಮತ್ತು ಸಾಕ್ಷಿಯ ಹೇಳಿಕೆ ಪಡೆದಿದೆ. ಈ ವೇಳೆ ಪತಿ ಕುಟುಂಬದ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ ದೂರು ನೀಡಿದ ಮಹಿಳೆ  ವಿಫಲರಾಗಿದ್ದಾರೆ. ಇದರಿಂದಾಗಿ  ನ್ಯಾಯಮೂರ್ತಿ ಸುಭೇಂದು ಸಮಂತಾ ಅವರ ಏಕ-ಪೀಠವು ಈ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿದ್ದಾರೆ.

ವಿವಾಹದ ಬಳಿಕ  ದಂಪತಿಗಳು  ಕುಟುಂಬದ ಜೊತೆ ವಾಸಿಸದೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಬಳಿಕ ಮಹಿಳೆಗೆ ಅತ್ತೆ ಜೊತೆ ವಾಸಿಸಲು ಇಚ್ಛೆ ಇಲ್ಲದ ಕಾರಣ ಪ್ರತ್ಯೇಕ ಮನೆಯನ್ನು ಮಾಡಿಕೊಡಲಾಗಿತ್ತು ಎನ್ನುವುದನ್ನು ವಿಚಾರಣೆ ವೇಳೆ ಕೋರ್ಟ್ ಗಮನಿಸಿದೆ ಮತ್ತು ದೂರು  ನೀಡಿದ ಮಹಿಳೆಯ ಆರೋಪ ಸುಳ್ಳು ಎನ್ನುವುದನ್ನು ಕೋರ್ಟ್ ಗಮನಿಸಿದೆ.

ಸಮಾಜದಿಂದ ವರದಕ್ಷಿಣೆ ಪಿಡುಗನ್ನು ತೊಡೆದು ಹಾಕಲು  ಸೆಕ್ಷನ್ 498 ಎ ನಿಬಂಧನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಇದನ್ನು ಹಲವಾರು ಸಂದರ್ಭಗಳಲ್ಲಿ ದುರ್ಬಳಕೆ ಮಾಡಿರುವುದನ್ನು ನ್ಯಾಯಾಲಯ ಗಮನಿಸಿದೆ ಎಂದು ಪ್ರಕರಣದ ರದ್ಧತಿ ಆದೇಶದ ವೇಳೆ ಕೋರ್ಟ್ ಹೇಳಿದೆ.

ಇದನ್ನು ಓದಿ: ಹರ್ಯಾಣ: ಮುಸ್ಲಿಮರಿಗೆ ಪ್ರವೇಶ ಬ್ಯಾನ್; ಪಂಚಾಯತ್‌ಗೆ ನೋಟಿಸ್ ನೀಡಿದ್ದ ಅಧಿಕಾರಿಯ ವರ್ಗಾವಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read