Homeಮುಖಪುಟಹೈದರಾಬಾದ್ ಕೇಂದ್ರೀಯ ವಿ.ವಿಯಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಯಶಸ್ವಿ: JNU, ಕೇರಳದಲ್ಲಿ ಇಂದು

ಹೈದರಾಬಾದ್ ಕೇಂದ್ರೀಯ ವಿ.ವಿಯಲ್ಲಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನ ಯಶಸ್ವಿ: JNU, ಕೇರಳದಲ್ಲಿ ಇಂದು

ಒಳ್ಳೆಯದ್ದು, ಕೆಟ್ಟದ್ದು, ಕೊಳಕಾದುದ್ದು ಏನೇ ಇರಲಿ. ಏನು ನೋಡಬೇಕೆಂದು ನಾವು ನಿರ್ಧರಿಸುತ್ತೇವೆಯೇ ಹೊರತು ಸರ್ಕಾರ ಹೇಳುವುದಲ್ಲ ಎಂದು ಟಿಎಂಸಿ ಸಂಸದೆ ಮೊಹುವ ಮೊಯಿತ್ರ ಹೇಳಿದ್ದಾರೆ.

- Advertisement -
- Advertisement -

2002ರ ಗುಜರಾತ್‌ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತಾಗಿ ಬಿಬಿಸಿ ನಿರ್ಮಿಸಿರುವ  ‘‘ಇಂಡಿಯಾ: ಮೋದಿ ಪ್ರಶ್ನೆ” ಸಾಕ್ಷ್ಯಚಿತ್ರವನ್ನು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಸೋಮವಾರ ರಾತ್ರಿ ಪ್ರದರ್ಶಿಸಲಾಗಿದೆ.

ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಫ್ರೆಟರ್ನಿಟಿ ಗ್ರೂಪ್ ಎಂದು ಕರೆಯಲ್ಪಡುವ ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ಸಂಘಟನೆಗಳು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದವು. ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರ ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಅಧಿಕೃತವಾಗಿ ಜನವರಿ 17ರಂದು ಬಿಡುಗಡೆಯಾಗಿದ್ದ ‘ಮೋದಿ ಪ್ರಶ್ನೆ’ ಎಂಬ ಶೀರ್ಷಿಕೆಯ ಈ ಸಾಕ್ಷ್ಯಚಿತ್ರದ ಮೊದಲ ಎಪಿಸೋಡ್ ಅನ್ನು ಯೂಟ್ಯೂಬ್‌ನಿಂದ ಬುಧವಾರ ತೆಗೆದುಹಾಕಲಾಗಿತ್ತು. ಬಿಬಿಸಿ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋವನ್ನು ಸಹ ತದನಂತರ ಭಾರತದಲ್ಲಿ ಕಾಣದಂತೆ ತಡೆಹಿಡಿಯಲಾಗಿತ್ತು. ಅಲ್ಲದೆ ವಿಮೋ ಪ್ಲೇಯರ್, ಟೆಲಿಗ್ರಾಂಗಳಲ್ಲಿ ಆ ಡಾಕ್ಯುಮೆಂಟರಿ ವೈರಲ್ ಆಗುತ್ತಿದ್ದಂತೆ ಅಲ್ಲಿಂದಲೂ ಡಿಲೀಟ್ ಮಾಡಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮೊಹುವಾ ಮೊಯಿತ್ರ, “ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವಾಗುವ ಹೊಸ ಲಿಂಕ್ ಇಲ್ಲಿದೆ. ಒಳ್ಳೆಯದ್ದು, ಕೆಟ್ಟದ್ದು, ಕೊಳಕಾದುದ್ದು ಏನೇ ಇರಲಿ. ಏನು ನೋಡಬೇಕೆಂದು ನಾವು ನಿರ್ಧರಿಸುತ್ತೇವೆಯೇ ಹೊರತು ಸರ್ಕಾರ ಹೇಳುವುದಲ್ಲ” ಎಂದು ಕಿಡಿಕಾರಿಕಾರಿದ್ದಾರೆ.

‘‘ಇಂಡಿಯಾ: ಮೋದಿ ಪ್ರಶ್ನೆ” ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಜವಾಹರ್‌‌‌ಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ವಿದ್ಯಾರ್ಥಿ ಸಂಘ ಇಂದು ಪ್ರದರ್ಶಿಸಲು ಯೋಜಿಸಿದೆ. ಆದರೆ ಈ ಪ್ರದರ್ಶನವನ್ನು ರದ್ದುಗೊಳಿಸುವಂತೆ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಕೇಳಿದೆ.

ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಜನವರಿ 24 ರಂದು ರಾತ್ರಿ 9 ಗಂಟೆಗೆ ನಿಗದಿ ಪಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕರಪತ್ರವನ್ನು ಬಿಡುಗಡೆ ಮಾಡಿರುವುದು ಆಡಳಿತದ ಗಮನಕ್ಕೆ ಬಂದಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಲಹೆಯಲ್ಲಿ ತಿಳಿಸಿದ್ದಾರೆ.

ಅದೇ ರೀತಿ ಕೇರಳದಲ್ಲಿ ಹಲವಾರು ಕಡೆ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸುವುದಾಗಿ ಆಡಳಿತರೂಢ ಸಿಪಿಎಂ ಪಕ್ಷದ ಯುವಜನ ಸಂಘಟನೆಯಾದ ಡಿವೈಎಫ್‌ಐ ತಿಳಿಸಿದೆ.

2019 ರಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರ ಮೋದಿ ಸರ್ಕಾರದ ಟ್ರ್ಯಾಕ್ ರೆಕಾರ್ಡ್‌ ಅನ್ನು ಪರಿಶೀಲಿಸುವ ಸಾಕ್ಷ್ಯಚಿತ್ರದ ಎರಡನೇ ಭಾಗವು ಜನವರಿ 24ರ ಮಂಗಳವಾರ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಸಿ ಹೇಳಿದೆ.

ಇದನ್ನೂ ಓದಿ: ಆಳವಾದ ಸಂಶೋಧನೆ ನಡೆಸಿದ್ದೇವೆ: ಮೋದಿ ಕುರಿತು ಸಾಕ್ಷ್ಯಚಿತ್ರ ಸಮರ್ಥಿಸಿಕೊಂಡ ಬಿಬಿಸಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...