Homeಮುಖಪುಟಮೋದಿ ತನ್ನ 'ಉದ್ಯಮಿ ಮಿತ್ರರಿ'ಗಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ: ರಾಹುಲ್ ಗಾಂಧಿ ವಾಗ್ಧಾಳಿ

ಮೋದಿ ತನ್ನ ‘ಉದ್ಯಮಿ ಮಿತ್ರರಿ’ಗಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ: ರಾಹುಲ್ ಗಾಂಧಿ ವಾಗ್ಧಾಳಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಕೋಟ್ಯಾಧಿಪತಿಗಳಿಗಾಗಿ ಸರ್ಕಾರವನ್ನು ನಡೆಸುತ್ತಿದ್ದರೆ, ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಒಡಿಶಾದಲ್ಲಿ’ಆಯ್ದ ಜನರಗಾಗಿ ಕೆಲಸ ಮಾಡುವ ಆಡಳಿತ’ವನ್ನು ಮುನ್ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿಯನ್ನು ನಡೆಸಿದ್ದಾರೆ.

ಒಡಿಶಾದ ಕಟಕ್‌ನ ಸಲೇಪುರ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಬಿಜೆಡಿ ಮತ್ತು ಬಿಜೆಪಿ ಚುನಾವಣೆಯಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದರೂ, ವಾಸ್ತವದಲ್ಲಿ ಅವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ನೀವು ಪಾಲುದಾರಿಕೆ ಅಥವಾ ಮದುವೆ ಎಂದು ಕರೆಯಿರಿ, ಬಿಜೆಡಿ ಮತ್ತು ಬಿಜೆಪಿ ಎರಡೂ ಒಟ್ಟಿಗೆ ಇವೆ. ಪಟ್ನಾಯಕ್ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಪಟ್ನಾಯಕ್ ಸಿಎಂ ಆಗಿರಬಹುದು. ಆದರೆ ಸರ್ಕಾರವನ್ನು ಪಟ್ನಾಯಕ್ ಆಪ್ತ ವಿ.ಕೆ.ಪಾಂಡಿಯನ್ ನಡೆಸುತ್ತಿದ್ದಾರೆ. ಬಿಜೆಪಿ ಹಾಗೂ ಬಿಜೆಡಿ ಸೇರಿ ಒಡಿಶಾದ ಸಂಪತ್ತನ್ನು ಲೂಟಿ ಹೊಡೆದಿವೆ ಎಂದು ಹೇಳಿದ್ದಾರೆ.

ಪಿಎಂ ಮೋದಿಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಅಂಕಲ್-ಜಿ ಮತ್ತು ನವೀನ್-ಬಾಬು ಒಡಿಶಾಗೆ ಪಾನ್ ನೀಡಿದ್ದಾರೆ, ಅಂದರೆ ಪಾಂಡಿಯನ್, ಅಮಿತ್ ಶಾ, ನರೇಂದ್ರ ಮೋದಿ, ನವೀನ್ ಪಟ್ನಾಯಕ್ ಅವರು ನಿಮ್ಮ ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಇದಕ್ಕೂ ಮೊದಲು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದ ರಾಹುಲ್‌ ಗಾಂಧಿ, ಬಿಜೆಪಿ ನಾಯಕರು ಮತ್ತು ನರೇಂದ್ರ ಮೋದಿಯವರ ಆಪ್ತರ ಹೇಳಿಕೆಗಳಿಂದ ಈಗ ಸ್ಪಷ್ಟವಾಗಿದೆ. ಅವರ ಉದ್ದೇಶ ಸಂವಿಧಾನವನ್ನು ಬದಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸುವುದು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಸಿದುಕೊಳ್ಳುವುದು ಮತ್ತು ದೇಶವನ್ನು ಮುನ್ನಡೆಸುವಲ್ಲಿ ಈ ಸಮುದಾಯಗಳ ಭಾಗವಹಿಸುವಿಕೆಯನ್ನೂ ತಡೆಯುವುದು ಬಿಜೆಪಿಯ ಗುರಿಯಾಗಿದೆ ಎಂದು ಹೇಳಿದ್ದರು. ಸಂವಿಧಾನ ಮತ್ತು ಮೀಸಲಾತಿಯನ್ನು ರಕ್ಷಿಸಲು ಬಿಜೆಪಿಯ ಹಾದಿಯಲ್ಲಿ ಕಾಂಗ್ರೆಸ್ ಬಂಡೆಯಂತೆ ನಿಂತಿದೆ.  ಕಾಂಗ್ರೆಸ್ ಇರುವವರೆಗೆ ಜಗತ್ತಿನ ಯಾವ ಶಕ್ತಿಯೂ ವಂಚಿತ ಜನರ ಮೀಸಲಾತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಇದನ್ನು ಓದಿ: ಎಎಪಿ ಜೊತೆಗಿನ ಮೈತ್ರಿಗೆ ಅಸಮಾಧಾನ: ದೆಹಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅರವಿಂದರ್ ಸಿಂಗ್ ರಾಜೀನಾಮೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read