ಲೋಕಸಭಾ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಚುನಾವಣಾ ಆಯೋಗದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೇ ರೀತಿಯ ಬಾಕಿ ಇರುವ ಪ್ರಕರಣಗಳೊಂದಿಗೆ ಈ ಅರ್ಜಿಯನ್ನೂ ಪಟ್ಟಿಗೆ ಸೇರಿಸುವಂತೆ ಕೋರಿ, ವಕೀಲ ನಿಝಾಮುದ್ದೀನ್ ಪಾಷಾ ಅವರು ಇಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಮುಂದೆ ವಿಷಯವನ್ನು ಪ್ರಸ್ತಾಪಿಸಿದರು. ತಾವು ಪರಿಶೀಲಿಸಿ, ಇದೇ ರೀತಿಯ ಪ್ರಕರಣಗಳೊಂದಿಗೆ ಈ ಪ್ರಕರಣವನ್ನೂ ಪಟ್ಟಿಗೆ ಸೇರಿಸುವುದಾಗಿ ಮುಖ್ಯ ನ್ಯಾಯಮೂರ್ತಿಗಳು ತಿಳಿಸಿದರು ಎಂದು livelaw.in ವರದಿ ಮಾಡಿದೆ.
ಇತ್ತೀಚೆಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ 9 ನಾಯಕರು ಎಸ್ಐಆರ್ ಅನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ, ಸೌಗತ ರಾಯ್ (ತೃಣಮೂಲ ಕಾಂಗ್ರೆಸ್-ಮಮತಾ ಬ್ಯಾನರ್ಜಿ), ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ತೇಜಸ್ವಿ ಪ್ರಸಾದ್ ಯಾದವ್ (ಆರ್ಜೆಡಿ), ಸಂಜಯ್ ರಾವುತ್ (ಶಿವಸೇನೆ ಯುಬಿಟಿ), ಎಂಎ ಬೇಬಿ (ಸಿಪಿಐ(ಎಂ)), ಡಿ ರಾಜಾ (ಸಿಪಿಐ), ಶರ್ಮಾ ಬೇಬಿ (ಸಿಪಿಐಎಂ) ಪವಾರ್) ಮತ್ತು ಇಟಿ ಮುಹಮ್ಮದ್ ಬಶೀರ್ (ಐಯುಎಂಎಲ್) ಇತರ ಅರ್ಜಿದಾರರು.


