ಮುಂಬೈ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಮೂರು ವಾರಗಳ ಜೈಲು ವಾಸದ ನಂತರ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ರೂಸ್ ಹಗಡಿನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ದಾಳಿ ನಡೆಸಿದ ಕೆಲವು ಗಂಟೆಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್‌ರನ್ನು ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು.
ಅಕ್ಟೋಬರ್ 8 ರಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್ ಅವರಿಗೆ ಈ ಹಿಂದೆ ಎರಡು ಬಾರಿ ಜಾಮೀನು ನಿರಾಕರಿಸಲಾಗಿತ್ತು.
ಪ್ರಕರಣದಲ್ಲಿ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ವಿರುದ್ಧ ಆರ್ಯನ್ ಖಾನ್‌ಗೆ ಮತ್ತು ಸಹ-ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮುನ್‌ಮುನ್ ಧಮೇಚಾ ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಮೂರು ದಿನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.
ಇದನ್ನೂ ಓದಿ: ಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವಿಡಿಯೋ ಟ್ವೀಟ್ ಮಾಡಿದ ಶಿವಸೇನೆ ಸಂಸದ!
Bombay HC has granted bail to Aryan Khan, Arbaz Merchant, Munmun Dhamecha after hearing the arguments for 3 days. The detailed order will be given tomorrow. Hopefully, all they will come out of the jail by tomorrow or Saturday: Former AG Mukul Rohatgi, who represented Aryan Khan pic.twitter.com/jQGKYIBxrn
— ANI (@ANI) October 28, 2021
ಆರ್ಯನ್ ಖಾನ್ ಪರ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಆರ್ಯನ್ ಖಾನ್ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಎಂಬುದನ್ನು ಒತ್ತಿ ಹೇಳಿದ್ದರು.
ಆದರೆ, ಎನ್‌ಸಿಬಿ ಮಾತ್ರ ಆರ್ಯನ್ ಖಾನ್ ಕೂಡ ಈ ಪಿತೂರಿಯ ಭಾಗವಾಗಿದ್ದರು. ಅವರ ವಾಟ್ಸಾಪ್ ಚಾಟ್‌ಗಳು ಅಕ್ರಮ ಡ್ರಗ್ ದಂಧೆಯಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ವಾದಿಸಿದ್ದರು.
ಗುರುವಾರ ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ಆರ್ಯನ್ ಜಾಮೀನು ಅರ್ಜಿಯನ್ನು ವಿರೋಧಿಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಕೀಲ ಎಎಸ್‌ಜಿ ಅನಿಲ್ ಸಿಂಗ್, ’ಅರ್ಜಿದಾರ ಆರ್ಯನ್ ಖಾನ್ ಮೊದಲ ಗ್ರಾಹಕರಲ್ಲ, ಆದರೆ ಕಳೆದ ಎರಡು ವರ್ಷಗಳಿಂದ ನಿಯಮಿತವಾಗಿ ಡ್ರಗ್ಸ್ ಸೇವಿಸುತ್ತಿದ್ದಾರೆ” ಎಂದರು.
“ಒಬ್ಬ ವ್ಯಕ್ತಿಯು ಮಾದಕ ದ್ರವ್ಯವನ್ನು ಸೇವಿಸದಿರುವ ಪ್ರಕರಣವಿದೆ. ಆದರೆ, ಅವರು ಅದನ್ನು ಹೊಂದಿದ್ದಲ್ಲಿ, ಅವರ ಮೇಲೆ NDPS ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು. ಆರೋಪಿ ಆರ್ಯನ್ ಪ್ರಜ್ಞಾಪೂರ್ವಕವಾಗಿ ಕಳ್ಳಸಾಗಣೆಯನ್ನು ಮಾಡಿರುವುದು ಕಂಡುಬಂದಿದೆ” ಎಂದು ಸಿಂಗ್ ವಾದಿಸಿದರು.
ಆರ್ಯನ್ ಖಾನ್ ಮತ್ತು ಆತನ ಸಹ ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದರೂ ಆದೇಶ ನಾಳೆಯೊಳಗೆ ಲಭ್ಯವಾಗುವುದರಿಂದ ಆರೋಪಿಗಳು ಇಂದು ರಾತ್ರಿ ಜೈಲಿನಲ್ಲೆ ಉಳಿಯಬೇಕಾಗುತ್ತದೆ.
ಇದನ್ನೂ ಓದಿ: ವಂಚನೆ ಪ್ರಕರಣ: ಆರ್ಯನ್ ಖಾನ್ ಪ್ರಕರಣದ ಸಾಕ್ಷಿ ಕೆ.ಪಿ ಗೋಸಾವಿ ಬಂಧನ


