Homeಮುಖಪುಟ‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ - ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

‘ಬೆಳಕಿನ ಬೆಳೆ’ ಮಾಲಿಕೆಯ ‘ಜಿ.ಎನ್. ದೇವಿ – ಆಯ್ದ ಬರಹಗಳು’ ಪುಸ್ತಕ ಬಿಡುಗಡೆ ನಾಳೆ

- Advertisement -
- Advertisement -

ಆಧುನಿಕ ಭಾರತೀಯ ಚಿಂತಕರ ಆಯ್ದ ಬರಹಗಳ ಮೂಲಕ ಅವರ ಚಿಂತನೆ ಪರಿಚಯ ಮಾಡುವ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ‘ಬೆಳಕಿನ ಬೆಳೆ’  ಎಂಬ ಮಾಲಿಕೆಯಡಿ ಪ್ರಕಟಿಸಿದ 7 ಪುಸ್ತಕಗಳು ಗಮನ ಸೆಳೆದಿದ್ದವು. ಈ ಮಾಲಿಕೆಯ ಪ್ರಕಟಣೆಯನ್ನು ಡಾ.ಎಂ.ಜಿ. ಹೆಗಡೆ ಅವರ ಸಂಪಾದಕತ್ವದಲ್ಲಿ ಮುಂದುವರೆಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ರಿಯಾ ಮಾಧ್ಯಮ ವಹಿಸಿಕೊಂಡಿದೆ.  ‘ಬೆಳಕಿನ ಬೆಳೆ’ ಮಾಲಿಕೆಯ ಎಂಟನೆಯ ಪುಸ್ತಕವಾಗಿ ಮತ್ತು ಈ ಮಾಲಿಕೆಯಲ್ಲಿ ಕ್ರಿಯಾ ಮಾಧ್ಯಮದ ಪ್ರಕಟಣೆಗಳಲ್ಲಿ ಮೊದಲನೆಯದಾಗಿ, ಪ್ರಸಿದ್ಧ ಚಿಂತಕ ”ಜಿ.ಎನ್. ದೇವಿ ಅವರ ಆಯ್ದ ಬರಹಗಳು’ ಕೃತಿಯು ಅಕ್ಟೋಬರ್ 29 ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಯಾಗುತ್ತಿದೆ.

ಕೃತಿ ವಾಚನದ ಮೂಲಕ ಡಾ.ಶ್ರೀಪಾದ ಭಟ್ ರವರು ಕೃತಿ ಬಿಡುಗಡೆ ಮಾಡಲಿದ್ದು,  ಡಾ.ಸಿರಾಜ್ ಅಹ್ಮದ್ ಮತ್ತು ಡಾ.ರಾಜೇಂದ್ರ ಚೆನ್ನಿಯವರು ಡಾ.ಜಿ.ಎನ್ ದೇವಿಯವರ ಬರಹಗಳ ಕುರಿತು ಮಾತನಾಡಲಿದ್ದಾರೆ. ಡಾ.ದೇವಿದಾಸ ನಾಯ್ಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತ ಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ದೇವಿ ಅವರ ಈ ಐದು ಪ್ರಸಿದ್ಧ ಲೇಖನಗಳು ಪುಸ್ತಕದಲ್ಲಿ ಇವೆ. ಈ ಪುಸ್ತಕದ ಆಯ್ದ ಭಾಗ ನಿಮ್ಮ ಓದಿಗಾಗಿ….

ಪರ್ಯಾಯದ ಹುಡುಕಾಟ

ಪ್ರಸ್ತುತ ಕೃತಿಯಲ್ಲಿ ಮೂರು ಬಹುಮುಖ್ಯ ವಿಷಯಗಳನ್ನು ಕುರಿತು ದೇವಿಯವರು ಧ್ಯಾನಿಸಿ ಬರೆದ ಬರಹಗಳ ಅನುವಾದಗಳಿವೆ. ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪುರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ. ಅಪ್ರಾಮಾಣಿಕವಾದ ಭಾಷಾಡಂಬರದ “ಜಾಗತಿಕ” ಚಿಂತನೆಯ ಹಗಲುವೇಷದ ಬದಲಾಗಿ ಇಪ್ಪತ್ತನೆಯ ಶತಮಾನದಿಂದ ಇತ್ತೀಚೆಗೆ ಮನುಷ್ಯ ಕುಲವು ಎದುರಿಸಿದ ಆತ್ಮ ಘಾತುಕವಾದ ಹಿಂಸೆಗಳು, ಅತಾರ್ಕಿಕವಾದ ಸ್ವವಿನಾಶ, ಸಿನಿಕತನವುಳ್ಳ ಹತಾಶೆ ಇವುಗಳ ಜೊತೆಗೆ ಇವೆಲ್ಲವನ್ನು ಬದಲಾಯಿಸಬೇಕು ಎನ್ನುವ, ‘ಇನ್ನೊಂದುಜಗತ್ತು ಸಾಧ್ಯವಿದೆ ಎನ್ನುವ ನೈತಿಕವಾದ ನಂಬಿಕೆ ಈ ಬರಹಗಳಲ್ಲಿದೆ. ಎಂ.ಜಿ. ಹೆಗಡೆಯವರ ಮಾಂತ್ರಿಕ ಅನುವಾದವು ದಟ್ಟವಾದ, ಸಂಕೀರ್ಣವಾದ ಅನುಭವಗಳನ್ನು ಕನ್ನಡದಲ್ಲಿಅದ್ಭುತವಾಗಿ ಹಿಡಿದುಕೊಡುತ್ತದೆ. ನನಗಂತೂ ಈ ಕೃತಿಯನ್ನುಓದಿದ್ದು ಇಳಿವಯಸ್ಸಿನಲ್ಲಿ ದೊರೆತ ಶಿಕ್ಷಣವಾಗಿದೆ.

– ಡಾ. ರಾಜೇಂದ್ರಚೆನ್ನಿ

ಒರ್ಫಿಯಸ್‌ನ ಹಾಡು

ಬಹಳ ಹಿಂದೆ–ಎಷ್ಟೆಂದರೆ ಐತಿಹಾಸಿಕ ಯುಗಗಳಲ್ಲಿಅಲ್ಲ, ಪೌರಾಣಿಕ ಕಲ್ಪಗಳಲ್ಲಿ- ಒರ್ಫಿಯಸ್‌ತನ್ನ ಪ್ರೀತಿಯ ಯುರಿಡಿಸಿಯನ್ನು ಮೃತ್ಯುಲೋಕದಿಂದ ಮರಳಿ ತರಲು ಹೋರಾಟ ನಡೆಸಿದ. ಮೃತ್ಯು ದೇವತೆಯು ಒರ್ಫಿಯಸ್‌ಗೆ ಯುರಿಡಿಸಿಯನ್ನು ಹಿಂತಿರುಗಿಸಲು ಒಪ್ಪಿದ. ಆದರೆ ಅವಳು ಅವನನ್ನು ಅನುಸರಿಸಿಕೊಂಡು ಹೋಗುತ್ತಿರುವಾಗ ನಿಜಕ್ಕೂ ಅವಳು ತನ್ನನ್ನು ಹಿಂಬಾಲಿಸುತ್ತಿರುವಳೆ ಎಂದು ಅವನು ಹಿಂತಿರುಗಿ ನೋಡುವಂತಿಲ್ಲಎಂದು ಷರತ್ತು ವಿಧಿಸಿದ. ಒರ್ಫಿಯಸ್‌ ಕತ್ತಲೆಯಚಿಂನ ಜಗತ್ತಿನಿಂದ ಹೊರಬಂದಾಗ ಯುರಿಡಿಸಿ ದಿಟವಾಗಿಯೂ ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾಳೆ ಎಂಬ ನಂಬಿಕೆಯ ಬಲದ ಮೇಲೇ ಕವನಗಳನ್ನು ರಚಿಸಿ ಪಟ್ಟಿಯಾಗಿ ಹಾಡುತ್ತಿದ್ದ– ಯುರಿಡಿಸಿಗೆ ತನ್ನೆದೆಯ ತವಕ ತಲ್ಲಣಗಳ ನಿವೇದನೆ; ಪ್ರಿಯತಮೆಯನ್ನು ಮೃತ್ಯುಮುಖದಿಂದ ರಕ್ಷಿಸಿ ತಂದಯ ಶೋಕಗೀತೆಯಾಗಿ; ಅದೆಲ್ಲಕ್ಕಿಂತ, ಯುರಿಡಿಸಿ ವಾಸ್ತವವಾಗಿಯೂ ತನ್ನನ್ನು ಹಿಂಬಾಲಿಸುತ್ತಿರುವುದು ಹೌದೇ ಎಂಬ ಆಂತಕವನ್ನು ಗೆಲ್ಲುವ ಉಪಾಚಿಂತವಾಗಿ. ಅವನ ದೈವಿಕ ಸಂಗೀತಕ್ಕೆ ಮರುಳಾಗಿ ಲಕ್ಷಂತರ ಹಕ್ಕಿಗಳು ಯುರಿಡಿಸಿಯನ್ನು ಹಿಂಬಾಲಿಸಿದವೆಂದು ಹೇಳುತ್ತಾರೆ. ಅವುಗಳ ಕಿವಿಯಿಂಪದು ಸಂಗೀತ; ಅದರೆ ಒರ್ಫಿಯಸ್‌ಗೆ ಅದು ಯಾತನೆಗೀತೆ; ಹಾಗೆಯೇ ನಂಬಿಕೆಯಘೋಷಣೆ! ಒರ್ಫಿಯಸ್‌ನ ಆ ಹಾಡು ಪ್ರತಿಯೊಬ್ಬ ಪ್ರವರ್ತಕನ ಕ್ರಿಯೆಯಲ್ಲೂ ಪ್ರತಿಧ್ವನಿಸುತ್ತ…

– ಗಣೇಶ್‌ದೇವಿ (ಒರ್ಫಿಯಸ್‌ನ ಹಾಡು)


ಇದನ್ನೂ ಓದಿ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬರೋಡ: ಪ್ರೊ. ಜಿ ಎನ್ ದೇವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂಸತ್ತು ಅಂಗೀಕರಿಸಿರುವ ಹೊಸ ಕ್ರಿಮಿನಲ್ ಕಾನೂನುಗಳ ವಿರುದ್ಧದ ಅರ್ಜಿ: ಸುಪ್ರೀಂ ಕೋರ್ಟಿನಲ್ಲಿ ನಾಳೆ ವಿಚಾರಣೆ

0
"ಹಲವು ದೋಷಗಳು ಮತ್ತು ವ್ಯತ್ಯಾಸಗಳಿವೆ" ಎಂದು, ಭಾರತ ದಂಡ ಸಂಹಿತೆಗಳನ್ನು (ಐಪಿಸಿ) ಕೂಲಂಕಷವಾಗಿ ಪರಿಶೀಲಿಸುವ ಮೂರು ಹೊಸ ಕಾನೂನುಗಳ ಜಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆಗೆ ನಿಗದಿಪಡಿಸಿದೆ. ನ್ಯಾಯಮೂರ್ತಿಗಳಾದ ಬೇಲಾ...