Homeಮುಖಪುಟಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವಿಡಿಯೋ ಟ್ವೀಟ್ ಮಾಡಿದ ಶಿವಸೇನೆ ಸಂಸದ!

ಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವಿಡಿಯೋ ಟ್ವೀಟ್ ಮಾಡಿದ ಶಿವಸೇನೆ ಸಂಸದ!

- Advertisement -
- Advertisement -

ಬಾಲಿವುಡ್ ನಟ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್ ಬಂಧನದಲ್ಲಿರುವ ಹೊಸ ವೀಡಿಯೊವೊಂದನ್ನು ಶಿವಸೇನೆ ಸಂಸದ ಸಂಜಯ್‌‌ ರಾವತ್ ಹಂಚಿಕೊಂಡಿದ್ದು, ಡ್ರಗ್ಸ್ ಪ್ರಕರಣದ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, “ಆಘಾತಕಾರಿ” ಎಂದು ಕರೆದಿದ್ದಾರೆ. ಎನ್‌ಸಿಬಿ ಅವರು ಆರ್ಯನ್ ಡ್ರಗ್ಸ್ ಪ್ರಕರಣದ ಸಾಕ್ಷಿಗಳನ್ನು ಖಾಲಿ ಕಾಗದಕ್ಕೆ ಸಹಿ ಹಾಕಿಸಿರುವುದು ಅಘಾತಕಾರಿಯಾಗಿದೆ ಎಂದು ಆರೋಪಿಸಿದ್ದಾರೆ.

“ಪ್ರಕರಣವು ಮಹಾರಾಷ್ಟ್ರದ ಹೆಸರನ್ನು ಹಾಳುಮಾಡುವ ಪ್ರಯತ್ನವಾಗಿದೆ” ಎಂದು ಸಂಜಯ್ ರಾವತ್‌ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಆರ್ಯನ್‌ ಖಾನ್‌ಗೆ ಡ್ರಗ್ಸ್ ಪೂರೈಕೆ ಆರೋಪ ನಿರಾಕರಿಸಿದ ನಟಿ ಅನನ್ಯ ಪಾಂಡೆ: ವರದಿ

ಸಂಜಯ್ ರಾವತ್‌ ಹೊಸ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, “ ಎನ್‌ಸಿಬಿ ಅವರು ಆರ್ಯನ್ ಡ್ರಗ್ಸ್ ಪ್ರಕರಣದ ಸಾಕ್ಷಿಗಳನ್ನು ಖಾಲಿ ಕಾಗದಕ್ಕೆ ಸಹಿ ಹಾಕಿಸಿರುವುದು ಅಘಾತಕಾರಿಯಾಗಿದೆ. ಅವರಿಗೆ ಭಾರೀ ಹಣದ ಬೇಡಿಕೆ ನೀಡಲಾಗಿತ್ತು ಎಂದು ವರದಿಗಳಿವೆ. ಸಿಎಂ ಉದ್ಧವ್ ಠಾಕ್ರೆ ಈ ಪ್ರಕರಣ ಮಹಾರಾಷ್ಟ್ರವನ್ನು ಅವಹೇಳನ ಮಾಡಲು ಮಾಡಲಾಗಿದೆ ಎಂದು ಹೇಳಿದರು. ಇದು ನಿಜವಾಗುತ್ತಿರುವಂತೆ ತೋರುತ್ತಿದ್ದು, ಮಹಾರಾಷ್ಟ್ರದ ಗೃಹಮಂತ್ರಿಗಳೆ ಪೋಲಿಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ: ಪೇಪರ್‌ವರ್ಕ್‌ಗಾಗಿ ನಟ ಶಾರುಖ್ ಖಾನ್ ಮನೆಗೆ ಎನ್‌ಸಿಬಿತಲೆಮರೆಸಿಕೊಂಡಿರುವ ಕೆಪಿ ಗೋಸಾವಿಯ ಸಹಾಯಕ ಪ್ರಭಾಕರ್ ಸೈಲ್, ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ಖಾಲಿ ಪಂಚನಾಮಕ್ಕೆ ಸಹಿ ಹಾಕಿಸಿದ್ದರು ಎಂದು ಆರೋಪಿಸಿದ್ದಾರೆ. ಇದರ ಬೆನ್ನಿಗೆ ಸಂಜಯ್ ರಾವತ್ ಈ ಬಗ್ಗೆ ಆರೋಪಿಸಿದ್ದಾರೆ.

“ನಾನು ಗೋಸಾವಿಯ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದೆ. ಎನ್‌ಸಿಬಿ ದಾಳಿ ನಡೆಸಿದ ರಾತ್ರಿ ತಾನು ಗೋಸಾವಿಯ ಜೊತೆಗಿದ್ದೆ. ಅಧಿಕಾರಿಗಳು ಪಂಚನಾಮವಾಗಿ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಮಾಡಿದ್ದಾರೆ” ಎಂದು ಪ್ರಭಾಕರ್‌ ಸೈಲ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ಹೇಳಿದ್ದಾರೆ.

 

ಕೆಪಿ ಗೋಸಾವಿ ‘ಅನುಮಾನಾಸ್ಪದವಾಗಿ’ ನಾಪತ್ತೆಯಾದ ನಂತರ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಂದ ತನ್ನ ಜೀವಕ್ಕೆ ಅಪಾಯವಿದೆ ಎಂದು ಸೈಲ್ ಆರೋಪಿಸಿದ್ದಾರೆ.

ಇದೇ ವೇಳೆ ಪ್ರಭಾಕರ್ ಸೈಲ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಸಮೀರ್ ವಾಂಖೆಡೆ, ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದರು.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಮಗ ಆರ್ಯನ್ ಖಾನ್‌ರನ್ನು ಭೇಟಿಯಾದ ನಟ ಶಾರುಖ್ ಖಾನ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...