Homeರಾಜಕೀಯ‘ನನ್ನ ಫೋನ್ ಕದ್ದಾಲಿಸಲಾಗಿದ್ದು, ಖಾಸಗಿತನ ಉಲ್ಲಂಘನೆಯಾಗಿದೆ’: ತೆಲಂಗಾಣ ಗವರ್ನರ್‌‌ ಗಂಭೀರ ಆರೋಪ

‘ನನ್ನ ಫೋನ್ ಕದ್ದಾಲಿಸಲಾಗಿದ್ದು, ಖಾಸಗಿತನ ಉಲ್ಲಂಘನೆಯಾಗಿದೆ’: ತೆಲಂಗಾಣ ಗವರ್ನರ್‌‌ ಗಂಭೀರ ಆರೋಪ

- Advertisement -
- Advertisement -

‘ನನ್ನ ಫೋನ್‌ ಅನ್ನು ಟ್ಯಾಪ್ ಮಾಡಲಾಗಿದ್ದು, ಖಾಸಗಿತನವನ್ನು ಉಲ್ಲಂಘಿಸಲಾಗಿದೆ’ ಎಂದು ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರಾಜನ್ ಅವರು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.

ತೆಲಂಗಾಣದ ಟಿಆರ್‌ಎಸ್‌ ಶಾಸಕರನ್ನು ಆಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದ್ದು, ಬಿಜೆಪಿ ಏಜೆಂಟರು ಎಂದು ಮೂವರನ್ನು ಬಂಧಿಸಲಾಗಿತ್ತು. ಈ ಬಗ್ಗೆ ಟಿಆರ್‌‌ಎಸ್ ಸೋಷಿಯಲ್ ಮೀಡಿಯಾ ಉಸ್ತುವಾರಿ ವಹಿಸಿದ ಟ್ವೀಟರ್‌ ಖಾತೆಯಲ್ಲಿ, ಆಪಾದಿತ ಆಪರೇಷನ್ ಕಮಲದಲ್ಲಿ ರಾಜ್ ಭವನ ಕೂಡಾ ಪಾತ್ರ ವಹಿಸಿದೆ ಎಂದು ಆರೋಪಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಆ ಟ್ವೀಟ್‌‌ ಅನ್ನು ಉಲ್ಲೇಖಿಸಿರುವ ರಾಜ್ಯಪಾಲರು ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ರಾಜ್ಯಪಾಲರ ಕಚೇರಿಯನ್ನು ವಿವಾದಕ್ಕೆ ಎಳೆಯಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: TRS ಶಾಸಕರ ಅಪರೇಷನ್ ಕಮಲ ಪ್ರಕರಣ: ತನಿಖೆ ಮೇಲಿನ ತಡೆಯಾಜ್ಞೆ ಹಿಂಪಡೆದ ತೆಲಂಗಾಣ ಹೈಕೋರ್ಟ್

“ನನ್ನ ಫೋನ್ ಅನ್ನು ಟ್ಯಾಪ್ ಮಾಡಲಾಗಿದ್ದು, ಖಾಸಗಿತದ ಉಲ್ಲಂಘನೆಯಾಗಿದೆ. ನನ್ನ ಹಿಂದಿನ ಎಡಿಸಿ ಹೆಸರು ತುಷರ್ ಆಗಿದ್ದು, ದೀಪಾವಳಿ ಶುಭಾಶಯ ಕೋರಲು ಅವರು ನನಗೆ ಕರೆ ಮಾಡಿದ್ದರು. ಅದೇ ದಿನ ತೆಲಂಗಾಣ ಸರ್ಕಾರವು ಈ ಪ್ರಕರಣದಲ್ಲಿ ತುಷಾರ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರು ರಾಜ್ ಭವನ ಕಚೇರಿಯನ್ನು ವಿವಾದಕ್ಕೆ ಎಳೆದಿದೆ” ಎಂದು ಅವರು ಹೇಳಿದ್ದಾರೆ.

“ನನ್ನ ಫೋನ್ ಅನ್ನು ಟ್ಯಾಪ್ ಮಾಡದಿದ್ದರೆ, ಈ ಪ್ರಕರಣದಲ್ಲಿ ತುಷಾರ್ ಭಾಗಿಯಾಗಿದ್ದಾರೆ ಮತ್ತು ರಾಜ ಭವನಕ್ಕೆ ಇದರಲ್ಲಿ ಸಂಪರ್ಕವಿದೆ ಎಂಬ ಪ್ರತಿಪಾದನೆಯನ್ನು ಅವರು ಹೇಗೆ ಮಾಡುತ್ತಾರೆ?”ಎಂದು ತಮಿಲಿಸೈ ಪ್ರಶ್ನಿಸಿದ್ದಾರೆ.

“ನನ್ನ ಫೋನ್ ಅನ್ನು ಟ್ಯಾಪ್ ಮಾಡಿದರೂ ನಾನು ಚಿಂತೆ ಮಾಡುತ್ತಿಲ್ಲ. ನನಗೆ ಮರೆಮಾಚಲು ಏನೂ ಇಲ್ಲ. ರಾಜ ಭವನದಲ್ಲಿ ಎಲ್ಲವೂ ತುಂಬಾ ಪಾರದರ್ಶಕವಾಗಿದೆ. ಒಂದು ವೇಳೆ ಅವರು ಬಯಸಿದರೆ ನಾನು ಅವರಿಗೆ ನನ್ನ ಫೋನ್ ಅನ್ನು ತೋರಿಸುತ್ತೇನೆ” ಎಂದು ರಾಜ್ಯಪಾಲರು ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ: ವಿಡಿಯೊ ಪ್ರದರ್ಶಿಸಿದ ಮುಖ್ಯಮಂತ್ರಿ ಕೆಸಿಆರ್‌

ಟಿಆರ್‌ಎಸ್‌ ಶಾಸಕರನ್ನು ಅಪರೇಷನ್ ಕಮಲ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ  ಮೂವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸುವುದರೊಂದಿಗೆ ಪ್ರಕರಣ ಇತ್ತೀಚೆಗೆ ಭಾರಿ ವಿವಾದವನ್ನು ಹುಟ್ಟುಹಾಕಿದೆ. ಆರೋಪಿಗಳು ಶಾಸಕರೊಂದಿಗೆ ಮಾತನಾಡುತ್ತಿರುವುದನ್ನು, ಪೊಲೀಸರು ಹಿಡನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಈ ಘಟನೆಯ ನಂತರ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಿಎಂ ಕೆಸಿಆರ್, ಕೇರಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಮಿತ್ರಪಕ್ಷ ಬಿಡಿಜೆಯ ಮುಖ್ಯಸ್ಥ ತುಷಾರ್ ವೆಲ್ಲಪಲ್ಲಿ ಅವರು ಪೊಲೀಸರು ಬಂಧನಕ್ಕೊಳಗಾದ ಮೂವರಲ್ಲಿ ಒಬ್ಬರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ. ಬಂಧನಕ್ಕೆ ಒಳಗಾದ ಮೂವರು ಕೂಡಾ ಬಿಜೆಪಿಯ ಏಜೆಂಟರು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಂದೋರ್‌ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಹಿಂಪಡೆಯಲು ಬೆದರಿಕೆ, ಚಿತ್ರಹಿಂಸೆ ಕಾರಣ?

0
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರು ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದು, ಅವರನ್ನು ಬೆದರಿಸಿ ಚಿತ್ರಹಿಂಸೆ ನೀಡಿ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಮಧ್ಯಪ್ರದೇಶದ ವಿರೋಧ...