HomeರಾಜಕೀಯTRS ಶಾಸಕರ ಅಪರೇಷನ್ ಕಮಲ ಪ್ರಕರಣ: ತನಿಖೆ ಮೇಲಿನ ತಡೆಯಾಜ್ಞೆ ಹಿಂಪಡೆದ ತೆಲಂಗಾಣ ಹೈಕೋರ್ಟ್

TRS ಶಾಸಕರ ಅಪರೇಷನ್ ಕಮಲ ಪ್ರಕರಣ: ತನಿಖೆ ಮೇಲಿನ ತಡೆಯಾಜ್ಞೆ ಹಿಂಪಡೆದ ತೆಲಂಗಾಣ ಹೈಕೋರ್ಟ್

- Advertisement -
- Advertisement -

ಟಿಆರ್‌ಎಸ್ ಶಾಸಕರ ಮೇಲೆ ನಡೆಸಲು ಉದ್ದೇಶಿಸಲಾಗಿದೆ ಎಂದು ಆರೋಪಿಸಲಾಗಿರುವ ಅಪರೇಷನ್‌‌ ಕಮಲ ಪ್ರಕರಣದ ಪೊಲೀಸ್ ತನಿಖೆಯ ಮೇಲಿದ್ದ ತಡೆಯಾಜ್ಞೆಯನ್ನು ತೆಲಂಗಾಣ ಹೈಕೋರ್ಟ್‌ ಹಿಂಪಡೆದಿದ್ದು, ಇಂತಹ ಪ್ರಕರಣದಲ್ಲಿ ಹೆಚ್ಚಿನ ಅವಧಿಗೆ ತಡೆ ಮುಂದುವರಿಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಮೂರ್ತಿ ಬಿ. ವಿಜಯಸೇನ್ ರೆಡ್ಡಿ ಅವರು ತನಿಖೆಯನ್ನು ಮುಂದುವರಿಸಲು ಪೊಲೀಸರಿಗೆ ಅವಕಾಶ ಮಾಡಿಕೊಟ್ಟಿದ್ದು, ಪ್ರಕರಣದಲ್ಲಿ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಹಿಂಪಡೆದರು. ಆದಾಗ್ಯೂ, ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಯಾವುದೇ ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸುವಂತೆ ಬಿಜೆಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದುವರಿಸಲು ನ್ಯಾಯಾಲಯ ನಿರ್ಧರಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಅರ್ಜಿಯ ಕುರಿತು ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದು, ತನಿಖೆಯ ಪ್ರಗತಿಯ ಕುರಿತು ಪ್ರತಿ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದ್ದಾರೆ.

ಇದನ್ನೂ ಓದು: ಮಾತು ಮರೆತ ಭಾರತ-27; ಲಾಕ್‌ಡೌನ್ ಫೈಲ್ಸ್: ನೀರು ಕೇಳಿದ ದಲಿತ ಯುವಕನ ಉಸಿರು ನಿಲ್ಲಿಸಿದರು

ನ್ಯಾಯಾಲಯದ ಆದೇಶವು ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಲು ದಾರಿ ಮಾಡಿಕೊಟ್ಟಿದೆ. ನ್ಯಾಯಾಲಯ ತಡೆಯಾಜ್ಞೆ ಹಿಂಪಡೆದಿದ್ದರಿಂದ, ಪೊಲೀಸರು ಇದೀಗ ಹೆಚ್ಚಿನ ವಿಚಾರಣೆಗಾಗಿ ಮೂವರು ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಬಿಜೆಪಿ ಮತ್ತು ಮೂವರು ಆರೋಪಿಗಳು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

ಪ್ರಕರಣದ ವಾದದ ವೇಳೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಜೆ.ರಾಮಚಂದ್ರರಾವ್ ಅವರು ಆರೋಪಿಗಳಿಗೆ ಬಿಜೆಪಿಯ ಜೊತೆಗಿನ ಸಂಬಂಧವನ್ನು ಪ್ರಶ್ನಿಸಿ, ಆರೋಪಿಗಳು ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಿಂದ ಪ್ರಕರಣಗಳ ಮೂಲಕ ಶಾಸಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಸಿಬಿಐ ಒಕ್ಕೂಟ ಸರ್ಕಾರದ ಗೃಹ ಇಲಾಖೆಯ ಹಿಡಿತದಲ್ಲಿದ್ದು, ಹೀಗಾಗಿ ತನಿಖೆ ನಡೆಸಬೇಕು ಎಂದು ಬಿಜೆಪಿ ಬಯಸುತ್ತದೆ ಎಂದು ಅವರು ವಾದಿಸಿದ್ದಾರೆ.

ಹರಿಯಾಣದ ಫರಿದಾಬಾದ್‌ನ ಅರ್ಚಕ ಸತೀಶ್ ಶರ್ಮಾ ಅಲಿಯಾಸ್ ರಾಮಚಂದ್ರ ಭಾರತಿ, ತಿರುಪತಿಯ ಶ್ರೀಮನಾಥ ರಾಜ ಪೀಠದ ಮಠಾಧೀಶ ಸಿಂಹಯಾಜಿ ಮತ್ತು ಹೈದರಾಬಾದ್‌ನ ರೆಸ್ಟೋರೆಂಟ್ ಮಾಲೀಕ ನಂದಕುಮಾರ್ ಅವರು ನಾಲ್ವರು ಟಿಆರ್‌ಎಸ್ ಶಾಸಕರನ್ನು ಬಿಜೆಪಿಗೆ ಸೇರಿಸಲು ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದು: ಭಾರತವು ಮನಮೋಹನ್‌ ಸಿಂಗ್ ಅವರಿಗೆ ಋಣಿಯಾಗಿದೆ: ನಿತಿನ್ ಗಡ್ಕರಿ

ಬಿಜೆಪಿ ಏಜೆಂಟ್ ಎಂದು ಹೇಳಲಾದ ಈ ಮೂವರು ಆರೋಪಿಗಳನ್ನು ಅಕ್ಟೋಬರ್ 26 ರ ರಾತ್ರಿ ಹೈದರಾಬಾದ್ ಬಳಿಯ ಮೊಯಿನಾಬಾದ್‌ನಲ್ಲಿರುವ ಫಾರ್ಮ್‌ಹೌಸ್‌ನಿಂದ ಪೊಲೀಸರು ಬಂಧಿಸಿದ್ದು, ಅವರು ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಭಾರಿ ಹಣದ ಆಮಿಷಗಳೊಂದಿಗೆ ಆಮಿಷ ಒಡ್ಡಲು ಪ್ರಯತ್ನಿಸುತ್ತಿದ್ದರು.

ಶಾಸಕರಲ್ಲಿ ಒಬ್ಬರಾದ ರೋಹಿತ್ ರೆಡ್ಡಿ ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ್ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳು ತಮಗೆ 100 ಕೋಟಿ ಹಾಗೂ ಇತರ ಮೂವರಿಗೆ ತಲಾ 50 ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದು: ಬೆಂಗಳೂರು: ಹಾಸ್ಯ ಕಾರ್ಯಕ್ರಮ ರದ್ದು ಮಾಡುವಂತೆ ದೂರು ನೀಡಿದ ಬಲಪಂಥೀಯರು; ಹಾಸ್ಯನಟ ವೀರ್‌‌ ದಾಸ್ ವಿರುದ್ಧ FIR

ಈ ನಡುವೆ ಅಕ್ಟೋಬರ್ 29 ರಂದು ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು ಮತ್ತು ಬಿಜೆಪಿ ಅರ್ಜಿಗೆ ಕೌಂಟರ್ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ಸೂಚಿಸಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...