Homeಮುಖಪುಟರಾಷ್ಟ್ರೀಯ ಭದ್ರತೆಗೆ ಹಾನಿಕಾರಕ ಎಂದು ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್ ನಿರಾಕರಣೆ

ರಾಷ್ಟ್ರೀಯ ಭದ್ರತೆಗೆ ಹಾನಿಕಾರಕ ಎಂದು ಮೆಹಬೂಬಾ ಮುಫ್ತಿಗೆ ಪಾಸ್‌ಪೋರ್ಟ್ ನಿರಾಕರಣೆ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಲಾಗಿದೆ ಎಂದು ಪಾಸ್‌ಫೋರ್ಟ್ ನಿರಾಕರಣೆಯ ವರದಿಯನ್ನು ಉಲ್ಲೇಖಿಸಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.

“ಸಿಐಡಿಯ ವರದಿಯ ಆಧಾರದ ಮೇಲೆ ನನ್ನ ಪಾಸ್‌ಪೋರ್ಟ್ ನೀಡಲು ಪಾಸ್‌ಪೋರ್ಟ್ ಕಚೇರಿ ನಿರಾಕರಿಸಿದೆ. ಅದು ‘ಭಾರತದ ಭದ್ರತೆಗೆ ಹಾನಿಕಾರಕ’ ಎಂದು ಉಲ್ಲೇಖಿಸಿದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಪಾಸ್‌ಪೋರ್ಟ್ ಹೊಂದಿರುವುದು ಪ್ರಬಲ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂಬುದು ಆಗಸ್ಟ್ 2019 ರಿಂದ ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯಾಗಿದೆ” ಎಂದಿದ್ದಾರೆ.

ಮೆಹಬೂಬಾ ಮುಫ್ತಿ ಈ ಟ್ವೀಟ್‌ನೊಂದಿಗೆ ಪಾಸ್‌ಪೋರ್ಟ್ ಅಧಿಕಾರಿಗಳ ಪತ್ರವನ್ನು ಲಗತ್ತಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಪೊಲೀಸ್ ಪರಿಶೀಲನೆಗಾಗಿ ಸಲ್ಲಿಸಿರುವುದನ್ನು ಸೂಚಿಸುತ್ತದೆ. ಆದರೆ ಪಾಸ್‌ಪೋರ್ಟ್ ನಿರಾಕರಿಸಲಾಗಿದೆ.

ಇದನ್ನೂ ಓದಿ: ’ನನ್ನನ್ನು ಮತ್ತೊಮ್ಮೆ ಗೃಹಬಂಧನದಲ್ಲಿ ಇಡಲಾಗಿದೆ’: ಮೆಹಬೂಬಾ ಮುಫ್ತಿ

 

ಸಿಐಡಿ ವರದಿ ಉಲ್ಲೇಖಿಸಿರುವ ಕಚೇರಿಯು ಪಾಸ್‌ಪೋರ್ಟ್‌ ನೀಡಲು ಇದು ಸೂಕ್ತವಾದ ಪ್ರಕರಣವಲ್ಲ ಎಂದಿದ್ದು, ಈ ನಿರ್ಧಾರ ಪ್ರಶ್ನಿಸಿ ಮುಖ್ಯ ಕಚೇರಿ ಸಂಪರ್ಕಿಸಲು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸ್ವತಂತ್ರರಿದ್ದಾರೆ ಎಂದು ಹೇಳಲಾಗಿದೆ.

2019 ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ನೂರಾರು ರಾಜಕೀಯ ಮುಖಂಡರೊಂದಿಗೆ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ಬಂಧನದಲ್ಲಿಡಲಾಗಿತ್ತು. ಒಕ್ಕೂಟ ಸರ್ಕಾರವು ಸಂವಿಧಾನವು ನೀಡಿರುವ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.

ಮೆಹಬೂಬಾ ಮುಫ್ತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದರು. ಪ್ರಸ್ತುತ, ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.


ಇದನ್ನೂ ಓದಿ: ನಂದಿಗ್ರಾಮ: ವೀಲ್‌ಚೇರ್‌ನಲ್ಲಿಯೇ ರ್‍ಯಾಲಿ ನಡೆಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...