ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 71 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಹುಟ್ಟಿದ ದಿನದ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರೆ ಹೆಚ್ಚಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್ ಕೂಡ
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿಯವರು ಸೃಷ್ಟಿಸಿದ್ದು ಐತಿಹಾಸಿಕ ನಿರುದ್ಯೋಗ” ಎಂದು ಟೀಕೆ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬೆಳಗ್ಗೆಯಿಂದ ರಾಷ್ಟ್ರೀಯ ನಿರುದ್ಯೋಗ ದಿನ (#NationalUnemploymentDay, #राष्ट्रीय_बेरोजगार_दिवस), ಮೋದಿ ನಮಗೆ ಉದ್ಯೋಗ ನೀಡಿ(#मोदी_रोजगार_दो), ಅಖಂಡ ಗ್ರಹಚಾರ ದಿವಸ (#अखंड_पनौती_दिवस) ಹ್ಯಾಶ್‌ಟ್ಯಾಗ್‌ಗಳು ಕ್ರಮವಾಗಿ ಟ್ವಿಟರ್ ಟ್ರೆಂಡ್‌ನಲ್ಲಿದೆ. ಇದರ ಜೊತೆಗೆ ‘ವಿಶ್ವ ಫೇಕು ದಿನ’ #WorldFekuDay ಮತ್ತು ಜುಮ್ಲಾ ದಿವಸ್ #JumlaDiwas ಹ್ಯಾಶ್‌ಟ್ಯಾಗ್‌ಗಳು ಕೂಡಾ ಟ್ರೆಂಡ್ ಆಗಿವೆ.
“ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿಯವರು ಸೃಷ್ಟಿಸಿದ್ದು ಐತಿಹಾಸಿಕ ನಿರುದ್ಯೋಗ. ತಾವೇನೋ ದುಡಿಯಲಾರದ ಸೋಂಬೇರಿತನದಲ್ಲಿ ಸ್ವಾಭಿಮಾನ ಮರೆತು ಭಿಕ್ಷೆ ಬೇಡಿರಬಹುದು, ಆದರೆ ದೇಶದ ಸ್ವಾಭಿಮಾನಿ ಯುವಜನತೆ ಭಿಕ್ಷೆ ಬೇಡಲಾರರು! ಬದುಕಲು ಜನತೆಗೆ ಉದ್ಯೋಗ ಬೇಕಿದೆ” ಎಂದು ಟೀಕಿಸಿದೆ.
ಇದನ್ನೂ ಓದಿ: #NationalUnemploymentDay | ಪ್ರಧಾನಿ ಜನ್ಮದಿನದಂದೆ ಉದ್ಯೋಗ ಕೇಳಿದ ದೇಶದ ಜನತೆ
ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಅಧಿಕಾರ ಹಿಡಿದ ಪ್ರಧಾನಿ ಮೋದಿಯವರು ಸೃಷ್ಟಿಸಿದ್ದು ಐತಿಹಾಸಿಕ ನಿರುದ್ಯೋಗ.
ತಾವೇನೋ ದುಡಿಯಲಾರದ ಸೋಂಬೇರಿತನದಲ್ಲಿ ಸ್ವಾಭಿಮಾನ ಮರೆತು ಭಿಕ್ಷೆ ಬೇಡಿರಬಹುದು, ಆದರೆ ದೇಶದ ಸ್ವಾಭಿಮಾನಿ ಯುವಜನತೆ ಭಿಕ್ಷೆ ಬೇಡಲಾರರು!
ಬದುಕಲು ಜನತೆಗೆ ಉದ್ಯೋಗ ಬೇಕಿದೆ.#NationalUnemploymentDay
— Karnataka Congress (@INCKarnataka) September 17, 2021
“ಉದ್ಯೋಗ ಸೃಷ್ಟಿಯ ಪ್ರಶ್ನೆಗೆ ಯುವಕರು ಪಕೋಡಾ ಮಾರುತ್ತಿಲ್ಲವೇ ಎಂದು ಕೇಳಿದ ಜಗತ್ತಿನ ಏಕೈಕ ಪ್ರಧಾನಿ
ನರೇಂದ್ರ ಮೋದಿ!. ಇದು ಬೇಜವಾಬ್ದಾರಿತನ ಹಾಗೂ ಮೂರ್ಖತನದ ಪರಮಾವಧಿ. ಗ್ಯಾಸ್, ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ, ದೇಶವನ್ನು ಪಕೋಡಾ ಮಾಡಲೂ ಆಗದ ಸ್ಥಿತಿಗೆ ತಂದಿಟ್ಟಿದ್ದಾರೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತ, ಪ್ರಧಾನಿ ಮೋದಿಯ ಜನ್ಮದಿನವನ್ನು ‘ರಾಷ್ಟ್ರೀಯ ನಿರುದ್ಯೋಗ ದಿನ’ ಎಂದು ಆಚರಿಸುವುದಾಗಿ ಕಾಂಗ್ರೆಸ್ ಸೇರಿದಂತೆ ಹಲವಾರು ವಿಪಕ್ಷಗಳು, ಜನಪರ ಸಂಘಟನೆಗಳು ಈ ಹಿಂದೆಯೆ ಹೇಳಿದ್ದವು. ಯುವ ಕಾಂಗ್ರೆಸ್ ಇಂದು ದೇಶದಾದ್ಯಂತ ಪ್ರತಿಭಟನೆಯನ್ನೂ ನಡೆಸುತ್ತಿದೆ.
2018 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರದಲ್ಲಿ ದೇಶದಲ್ಲಿ ಅತಿ ಕಡಿಮೆ ನಿರುದ್ಯೋಗ ದರ ಹೊಂದಿದ ಎರಡನೆ ರಾಜ್ಯ ಕರ್ನಾಟಕವಾಗಿತ್ತು. ಆದರೆ ಈಗ ಕರ್ನಾಟಕ ಉದ್ಯೋಗ ಸೃಷ್ಟಿಯಲ್ಲಿ ಶೇ.4 ಮಾತ್ರ ಸಾಧನೆ ಮಾಡಿದ್ದು ಬಿಜೆಪಿ ರಾಜ್ಯವನ್ನು ದಿವಾಳಿ ಮಾಡುತ್ತಿದೆ#NationalUnemploymentDay pic.twitter.com/VDicLi9yec
— IYC Karnataka (@IYCKarnataka) September 17, 2021
ರೈತ ಹೋರಾಟದ ಟ್ವಿಟರ್‌ನ ಮುಖವಾದ ಕಿಸಾನ್ ಏಕ್ತಾ ಮೋರ್ಚಾ, “ಅನಿರೀಕ್ಷಿತವಾಗಿ, ಪ್ರಧಾನಿ ಮೋದಿಯವರ ಜನ್ಮವು ರಾಷ್ಟ್ರವನ್ನು ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹಾಳುಮಾಡಿದೆ. ಮೋದಿ ಸರ್ಕಾರ, ತನ್ನ ಜನರನ್ನು ಕೊಲ್ಲುವುದು, ಆಹಾರ ಉತ್ಪಾದಿಸುವವರನ್ನು ಅವಮಾನಿಸುವುದು, ಕೀಳುಮಟ್ಟದ ಮತ್ತು ಕ್ರೂರ ವಿಧಾನಗಳನ್ನು ಅಳವಡಿಸಿ ಸಾಮಾನ್ಯ ಮನುಷ್ಯನ ಹಕ್ಕುಗಳನ್ನು ದಮನಿಸುತ್ತಿದೆ. ನಾಚಿಕೆಗೇಡು, ಎಷ್ಟು ನಿರ್ದಯ ಪ್ರಧಾನಿ ಆಗಿರಬಹುದು ಅವರು. ಮೋದಿ ಹುಟ್ಟಿದ್ದೇ ಪ್ರಜಾಪ್ರಭುತ್ವವನ್ನು ನಾಶ ಮಾಡಲು” ಎಂದು ಅದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ 15 ಲಕ್ಷ ಭಾರತೀಯರ ಉದ್ಯೋಗ ನಷ್ಟ; ಶೇ. 8.32ಕ್ಕೇರಿದ ನಿರುದ್ಯೋಗ ಪ್ರಮಾಣ


