Homeಕರ್ನಾಟಕಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ?

- Advertisement -
- Advertisement -

“ನಮ್ಮ ಅಭಿಮಾನಿಗಳು ಏನನ್ನು ಮಾಡಲಿಕ್ಕೂ ಸಿದ್ಧರಿದ್ಧಾರೆ…. ಆದರೆ ನಾವೇ ಬೇಡವೆಂದು ತಡೆದಿದ್ದೇವೆ….”- ಇದು ಧರ್ಮಸ್ಥಳ ದೇವಳದ “ಧರ್ಮ ದಂಡ”ಧಾರಿ- ಬಿಜೆಪಿ ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆ, ಅಮಾಯಕ ಹುಡುಗಿ ಸೌಜನ್ಯ ಗೌಡ ಅತ್ಯಾಚಾರ-ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ “ಪ್ರವಚನ”ದ ಒಂದು ಅಣಿಮುತ್ತು!

ಸತ್ಯ-ಧರ್ಮ-ನ್ಯಾಯದ ಧರ್ಮಸ್ಥಳ ಮಂಜುನಾಥ ದೇವರ ಅಪರಾವತಾರವೆಂದೇ ಅಪಾರ ಭಕ್ತಾದಿಗಳು ನಂಬಿರುವ “ಧರ್ಮಾಧಿಕಾರಿ” ವೀರೇಂದ್ರ ಹೆಗ್ಗಡೆ ಬಾಯಿಂದ ಕಳಪೆ ರಾಜಕೀಯ ಪುಢಾರಿ ಶೈಲಿಯಲ್ಲಿ ಮಾತುಗಳು ಹೊರಬರುತ್ತಿರುವುದು ಸಾಮಾಜಿಕ-ಧಾರ್ಮಿಕ-ರಾಜಕೀಯ ವಲಯದಲ್ಲಿ ಅನೇಕ ಅಚ್ಚರಿ-ಅನುಮಾನದ ಚರ್ಚೆಗಳನ್ನು ಹುಟ್ಟುಹಾಕಿಬಿಟ್ಟಿದೆ. ಬರ್ಬರ ಬಲಾತ್ಕಾರ ಮತ್ತು ಹತ್ಯೆಗೀಡಾಗಿದ್ದ ಅಮಾಯಕ ಹುಡುಗಿ ಸೌಜನ್ಯ ಗೌಡ ಪ್ರಕರಣದಲ್ಲಿ ಸಿಬಿಐ ಫಿಕ್ಸ್ ಮಾಡಿದ್ದ ಸಂತೋಷ್ ರಾವ್ ನಿರ್ದೋಷಿಯೆಂದು ತೀರ್ಪು ಬಂದ ಬಳಿಕ ಭುಗಿಲೆದ್ದಿರುವ ಮರುತನಿಖೆ ಒತ್ತಾಯದ ಆಕ್ರೋಶ, ಕೂಗು, ಪ್ರತಿಭಟನೆಗಳ ಹಿನ್ನಲೆಯಲ್ಲಿ ದೈವಾಂಶ ಸಂಭೂತ ಇಮೇಜಿನ ವೀರೇಂದ್ರ ಹಗ್ಗಡೆ ನಡೆ-ನುಡಿಗೆ ಮಹತ್ವ ಬಂದಿದೆ.

ಸುಮಾರು 11 ವರ್ಷದ ಹಿಂದೆ ಧರ್ಮಸ್ಥಳದ ಬಳಿಯ ಪಾಂಗಾಳದ ಒಕ್ಕಲಿಗ ಸಮುದಾಯದ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ ಮೃತ ಶರೀರ ರೇಪ್-ಮರ್ಡರ್ ಆಗಿರುವ ಸ್ಥಿತಿಯಲ್ಲಿ ದೊರೆತಿತ್ತು. ಆರಂಭದಿಂದಲೂ ಈ ಅಮಾನುಷ ಪಾತಕದ ತನಿಖೆ ಅದ್ಯಾಕೋ ಪಾರದರ್ಶಕ-ಪ್ರಾಮಾಣಿಕವಾಗಿ ನಡೆಯುತ್ತಿಲ್ಲ; ತನಿಖಾಧಿಕಾರಿ ಪೊಲೀಸರ ಮತ್ತು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ವರ್ತನೆ “ಯಾರನ್ನೋ” ರಕ್ಷಿಸಲು ಹುನ್ನಾರದಲ್ಲಿ ತೊಡಗಿರುವಂತಿದೆ ಎಂಬ ಶಂಕೆ ಆರಂಭದಲ್ಲೇ ಸಾರ್ವಜನಿಕರಲ್ಲಿ ಹಟ್ಟುಹಾಕಿತ್ತು. ಧರ್ಮಸ್ಥಳದಲ್ಲಿ ಅಂಡಲೆಯುತ್ತಿದ್ದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್ ರಾವ್ ಎಂಬ ಯಾತ್ರಿಕನನ್ನು ಅತ್ಯಾಚಾರಿಯೆಂದು ಕೇಸುಹಾಕಿ 11 ವರ್ಷ ಯಮಯಾತನೆಕೊಟ್ಟು ಕಾಡಲಾಗಿತ್ತು. ಸೌಜನ್ಯಳನ್ನು ಹೆತ್ತವರೇ ಈತ ಆರೋಪಿಯಾಗಲು ಸಾಧ್ಯವಿಲ್ಲ; ನಮಗೆ ಧರ್ಮಸ್ಥಳದ ದೇಗುಲದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರಿವಾರದ ಮೂರ್ನಾಲ್ಕು ತರುಣರ ಮೇಲೆ ಅನುಮಾವಿದೆ ಎಂದು ಹೇಳಿದರೂ ಪೊಲೀಸರು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿದ್ದರು. ಈಗ ಒಂದು ತಿಂಗಳ ಹಿಂದೆ ಸಿಬಿಐ ನ್ಯಾಯಾಲಯವೇ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಕೊಟ್ಟಿದೆ.

ಸಂತೋಷ್ ರಾವ್ ನಿರ್ದೋಷಿಯಾದರೆ ಪಾತಕಿಗಳು ಯಾರು? ಲೋಕಲ್ ಪೊಲೀಸರ, ಸಿಓಡಿ-ಸಿಬಿಐನಂಥ ಉನ್ನತ ಪೊಲೀಸ್ ಏಜೆನ್ಸಿಗಳಿಂದಲೂ ಏಕೆ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಗಿಲ್ಲ? ಸಿಒಡಿ ಮತ್ತು ಸಿಬಿಐ ಪೊಲೀಸರ ಕೈ ಕಟ್ಟಿಹಾಕಿದವರು ಯಾರು? ಸೌಜನ್ಯಳ ತಂದೆ ಚಂದಪ್ಪ ಗೌಡರು, ‘ಸಿಬಿಐ ನ್ಯಾಯಾಲಯದಲ್ಲಿ ಮಲ್ಲಿಕ್ ಜೈನ್, ಧೀರಜ್ ಕೆಲ್ಲ ಮತ್ತು ಉದಯ್ ಜೈನ್‌ರನ್ನು ವಿಚಾರಣೆಗೆ ಒಳಪಡಿಸಬೇಕು; ನನಗಿವರ ಮೇಲೆ ಅನುಮಾನವಿದೆ’ ಎಂದು ಹೇಳಿದರೂ ಸಿಬಿಐ ಉದಾಸೀನ ಮಾಡಿತು ಏಕೆ? ಈ ಶಂಕಿತರೆಲ್ಲ ಸಾಮಾಜಿಕ-ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ದೇವಮಾನವ ವರ್ಚಸ್ಸು ಹೊಂದಿರುವ ವೀರೇಂದ್ರ ಹೆಗ್ಗಡೆಗೆ ಒಂದಲ್ಲ ಒಂದು ರೀತಿಯಲ್ಲಿ ನಿಕಟವಾಗಿರುವ ಅವರ ಜೈನ ಪರಿವಾರದ ಕುಲಕಂಠೀರವರೆಂದೇ? ಎಂಬಿತ್ಯಾದಿ ಜಿಜ್ಞಾಸೆ ಸಿಬಿಐ ನ್ಯಾಯಾಲಯದ ತೀರ್ಪು ಬಂದ ಮರುಗಳಿಗೆಯಿಂದಲೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸಂಸದ ವೀರೇಂದ್ರ ಹೆಗ್ಗಡೆ ಹಸ್ತಕ್ಷೇಪವನ್ನು ಅರೋಪಿಸಿಯೂ ಚರ್ಚೆಗಳು ಭುಗಿಲೆದ್ದವು.

ಆರಂಭದಿಂದಲೂ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವ ಹೋರಾಟ ಕಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯ್ತಂದೆ, ಪ್ರಾಸಿಕ್ಯೂಶನ್ ವಿರುದ್ದ ವಾದಿಸಿದ್ದ ವಕೀಲರುಗಳು, ಪ್ರಕರಣದ ಲೋಪ-ದೋಷ, ಸಿಬಿಐ-ಸಿಓಡಿ ಮತ್ತು ಲೋಕಲ್ ಪೊಲೀಸರು-ಮರಣೋತ್ತರ ಪರೀಕ್ಷೆ ಮಾಡಿದ್ದ ವೈದ್ಯರು ಅಡಿಗಡಿಗೆ ಸಾಕ್ಷ್ಯ ನಾಶಮಾಡಿದ ಪರಿ, ತನ್ಮೂಲಕ ತನಿಖೆಯ ನಾಟಕವಾಡಿ ಅಸಲಿ ಪಾಪಿಗಳು ಪಾರಾಗಲು ಅವಕಾಶ ಕಲ್ಪಿಸಿದ್ದನ್ನು ಮಾಧ್ಯಮದ ಮೂಲಕ ಜನರ ಮುಂದಿಟ್ಟರು. ವಿವಿಧ ಸಂಘಟನೆಗಳು ಪ್ರಕರಣದ ಮರು ತನಿಖೆ ಆಗಬೇಕೇಂದು ಬೀದಿಗಿಳಿದವು. ಸೌಜನ್ಯ ತಾಯ್ತಂದೆಯಂತೂ, ‘ಈಗಾಗಿರುವುದು ಪಕ್ಕಾ ನಕಲಿ ತನಿಖೆ; ತಕ್ಷಣ ಪ್ರಾಮಾಣಿಕ-ನಿಷ್ಠುರ ಮರುತನಿಖೆ ಆಗಬೇಕು’ ಎಂಬ ಬೇಡಿಕೆ ಮುಂದಿಟ್ಟರು. ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಬೆಳ್ತಂಗಡಿಯಲ್ಲಿ ಓಡಾಡಿ ಸೌಜನ್ಯಳಿ ಪ್ರಕರಣಕ್ಕೆ ನ್ಯಾಯ ಕೊಡಿಸುವ ಗಂಭೀರ ಪ್ರಯತ್ನಕ್ಕೆ ಶುರುವಿಟ್ಟುಕೊಂಡರು. ಮೈಸೂರಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ನಂತರ ಹೋರಾಟದ ಕಿಚ್ಚು ರಾಜ್ಯದಾದ್ಯಂತ ಹಬ್ಬುವ ಲಕ್ಷಣ ಕಾಣತೊಡಗಿದೆ.

ಅನಾಯಾಸವಾಗಿ ಕೋಟಿಕೋಟಿ ರೂ ಹರಿದು ಬರುವ ಧರ್ಮಸ್ಥಳ ದೇವಳದ ಉಸ್ತುವಾರಿ ಪರಿವಾರದ ಯಜಮಾನ ವೀರೇಂದ್ರ ಹೆಗ್ಗಡೆ ಸಹಜವಾಗಿಯೇ ಸಂಶಯದ ಕೇಂದ್ರಬಿಂದುವಾದರು. ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ? ದೊಡ್ಡ ಜನಾಂದೋಲನವೇ ಸೌಜನ್ಯಳಿಗಾಗಿ ನಡೆಯುತ್ತಿದ್ದರೂ ಹೆಗ್ಗಡೆಯವರೇಕೆ ಭಾಗವಹಿಸುತ್ತಿಲ್ಲ? ಹೆಗ್ಗಡಯವರೇಕೆ ಇಂದಿಗೂ ಸೌಜನ್ಯಳ ಮನೆಗೆ ಹೋಗಿ ನಾಲ್ಕು ಸಾಂತ್ವನದ ಮಾತಾಡುವ ಮನಸ್ಸು ಮಾಡುತ್ತಿಲ್ಲ? ಸೌಜನ್ಯಳ ಹೆತ್ತವರ ಒಡಲ ಸಂಕಟವೇಕೆ ಹೆಗ್ಗಡೆಯವರಿಗೆ ಅರ್ಥವಾಗುತ್ತಿಲ್ಲ? ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರತೊಡಗಿತು.

ಈ ನಡುವೆ ಧರ್ಮಸ್ಥಳ ಸಂಸ್ಥಾನದಲ್ಲಿ ಭೂಮಿ, ಹೆಣ್ಣು, ಸಂಪತ್ತು ಮತ್ತು ಪಾಳೇಗಾರಿ ಪ್ರತಿಷ್ಠೆಗಾಗಿ ಅತ್ಯಾಚಾರ-ಅನಾಚಾರ-ದೌರ್ಜನ್ಯಗಳು ನಾಲ್ಕೈದು ದಶಕದಿಂದ ನಿರಂತರ-ನಿರಾತಂಕವಾಗಿ ನಡೆಯುತ್ತಿದೆ; ನೂರಾರು ಹೆಣ್ಣುಗಳ ಹೆಣ ನಿಶ್ಯಬ್ದವಾಗಿ ನೇತ್ರಾವತಿ ನದಿಯಲ್ಲಿ ತೇಲಿಹೋಗಿವೆ; ಸೌಜನ್ಯ ಸಾವಿನ ಪೂರ್ವದ 10 ವರ್ಷದಲ್ಲಿ ಧರ್ಮಸ್ಥಳದ ದೇವಸನ್ನಿಧಿಯಲ್ಲಿ 462 ಅಸಹಜ ಸಾವುಗಳಾಗಿವೆ ಎಂದು ಅಧಿಕೃತ ಪೊಲೀಸ್ ದಾಖಲೆಗಳೇ ಹೇಳುತ್ತವೆ. ಇದರಲ್ಲಿ 90ರಷ್ಟು ಹೆಣ್ಣುಮಕ್ಕಳಿದ್ದಾರೆ! ಇದರಲ್ಲಿ ಯಾತ್ರಿಕರು, ಸ್ಥಳೀಯರು ಸೇರಿದ್ದಾರೆ.

ವಿಚಾರವಾದಿ ನರೇಂದ್ರ ನಾಯಕ್ ಧರ್ಮಸ್ಥಳ ಸಂಸ್ಥಾನದ ದೌರ್ಜನ್ಯ-ಅನ್ಯಾಯದ ಬಗೆಗಿನ ಸಂವಾದದಲ್ಲಿ ಸುಮಾರು ಮೂರು ದಶಕದ ಹಿಂದೆ ನಡೆದ ಎರಡು ಮಹಿಳೆಯರ ಹತ್ಯೆ ಸಂಶಯದ ಕಥೆ-ವ್ಯಥೆ ಬಿಚ್ಚಿಟ್ಟಿದ್ದರು! ಧರ್ಮಸ್ಥಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸದಂತೆ ಕಮ್ಯುನಿಸ್ಟ್ ಮುಂದಾಳಾಗಿದ್ದ ದೇವಾನಂದ ಎನ್ನುವವರಿಗೆ ದೇವಧೂತ ಪರಿವಾರ ತಾಕೀತು ಮಾಡಿತ್ತು. ನಾಸ್ತಿಕನಾದ ಈತ ಪಂಚಾಯ್ತಿ ಮೆಂಬರ್ ಆದರೆ ತೊಂದರೆ ಆಗುತ್ತದೆಂಬ ದೂ(ದು)ರಾಲೋಚನೆ ದೇವಮಾನವ ಪರಿವಾರದಾಗಿತ್ತು ಎಂಬ ಆರೋಪವಿದೆ. ಆ ಮಾರ್ಕ್ಸ್ ವಾದಿ ದೇವದೂತರ ಮಾತಿಗೆ ಸೊಪ್ಪು ಹಾಕಲಿಲ್ಲ. ಮರು ದಿನವೇ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದ ಅವರ ಮಗಳು ಪದ್ಮಲತಾ ನಾಪತ್ತೆಯಾಗುತ್ತಾರೆ. ಸುಮಾರು ಒಂದು ತಿಂಗಳ ಬಳಿಕ ಕೈಗಳನ್ನು ಕಟ್ಟಿದ ಆಕೆಯ ಮೃತದೇಹ ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಗುತ್ತದೆ! ತಿಂಗಳಾನುಗಟ್ಟಲೆ ಅತ್ಯಾಚಾರ ನಡೆಸಿ ಕೊನೆಗೆ ಕೊಂದುಹಾಕಲಾಗಿದೆ ಎಂಬ ಮಾತು ಇವತ್ತಿಗೂ ಬೆಳ್ತಂಗಡಿ-ಉಜಿರೆ ಪರಿಸರದಲ್ಲಿ ಕೇಳಿಬರುತ್ತಿದೆ.

ಉಜಿರೆಯಲ್ಲಿ ವೈದ್ಯರಾಗಿದ್ದ ಡಾ.ಹರಳೆ ಎಂಬವರ ಮಡದಿ ವೇದವಲ್ಲಿ ಧರ್ಮಸ್ಥಳ ಸಂಸ್ಥಾನದವರು ನಡೆಸುವ ಹೈಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿದ್ದರು. ಸೇವಾ ಜ್ಯೇಷ್ಠತೆಯಂತೆ ಅವರಿಗೆ ಮುಖ್ಯೋಪಾಧ್ಯಾಯಿನಿ ಹುದ್ದೆ ಸಿಗುವುದಿತ್ತು. ಅದನ್ನು ಬಿಟ್ಟುಕೊಡುವಂತೆ ಸಂಸ್ಥಾನದ ಮುಖ್ಯ ವ್ಯಕ್ತಿ ಒತ್ತಡ ಹಾಕುತ್ತಿದ್ದನಂತೆ; ತನಗೆ ಬೇಕಾದವರಿಗೆ ಆ ಹುದ್ದೆ ಕೊಡಿಸುವ ಹುನ್ನಾರ ಆತನದಾಗಿತ್ತು. ಆದರೆ ವೇದವಲ್ಲಿ ಅದಕ್ಕೊಪ್ಪಲಿಲ್ಲ. ವೇದವಲ್ಲಿಯನ್ನು ಅವರ ಮನೆಯಲ್ಲೇ ಪೆಟ್ರೋಲ್ ಸರಿದು ಸುಟ್ಟುಹಾಕಲಾಗಿತ್ತು. ಆ ಕೇಸ್ ಮಂಜುನಾಥ ಮತ್ತು ಅಣ್ಣಪ್ಪ ಅರಗಿಸಿಕೊಂಡರೆಂದು ಮಾನವತಾವಾದಿ ನರೇಂದ್ರ ನಾಯಕ್ ಹೇಳುತ್ತಾರೆ. ಈ ಮೂರ್ನಾಲ್ಕು ದಶಕದ ಹಿಂದಿನ ಕ್ರೌರ್ಯ ಕಥನಗಳು ಈಗ ಸೌಜನ್ಯ ಪ್ರಕರಣದೊಂದಿಗೆ ಥಳಕು ಹಾಕಿಕೊಂಡು ಚರ್ಚೆಗಳನ್ನು ಹುಟ್ಟುಹಾಕಿದೆ.

ಸೌಜನ್ಯ ಪ್ರಕರಣದ ನಿಷ್ಠುರ ತನಿಖೆಗಾಗಿ ರಾಜ್ಯದಾದ್ಯಂತ ಹೋರಾಟ ಭುಗಿಲೇಲುತ್ತಿರುವುದರಿಂದ ಸಂಸದ ವೀರೇಂದ್ರ ಹೆಗ್ಗಡೆ ಹತಾಶರಾಗಿದ್ದಾರೆಂದು ಹೋರಾಟಗಾರರು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಿ ಪತ್ರ ಬರೆದಿರುವುದು ಈ ಹೆದರಿಕೆಯ ಭಾಗವಾಗಿಯೇ ನಡೆದಿರುವ ತಂತ್ರಗಾರಿಕೆಯೆಂದು ಹೋರಾಟಗಾರ ತಿಮರೋಡಿ ವ್ಯಾಖ್ಯಾನಿಸುತ್ತಾರೆ. ಒಟ್ಟಿನಲ್ಲಿ ಹೋರಾಟಗಾರರನ್ನು ಬೆದರಿಸುವ ಭಾಷೆ “ದೇವರ” ಬಾಯಿಂದ ಹೊರಬರುತ್ತಿರುವುದು ಸೌಜನ್ಯ ಕೇಸಿನ ಮರುತನಿಖೆಯ ಅನಿವಾರ್ಯತೆ ಹೆಚ್ಚಿಸಿಬಿಟ್ಟಿದೆ.

ಇದನ್ನೂ ಓದಿ: ವೀರೇಂದ್ರ ಹೆಗಡೆ ಬೆಂಬಲಿಗರಿಂದ ಸೌಜನ್ಯ ತಾಯಿ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. How many persons are convicted in such cases as a offenders in india..I think almost all cases are same..then why every one are focusing on this only.. what’s the agenda…

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...