Homeಮುಖಪುಟತನ್ನ ಕೊನೆ ಚುನಾವಣೆ ಎಂದು ನಿತೀಶ್ ಸೋಲೊಪ್ಪಿಕೊಂಡಿದ್ದಾರೆ: ಪಿ.ಚಿದಂಬರಂ

ತನ್ನ ಕೊನೆ ಚುನಾವಣೆ ಎಂದು ನಿತೀಶ್ ಸೋಲೊಪ್ಪಿಕೊಂಡಿದ್ದಾರೆ: ಪಿ.ಚಿದಂಬರಂ

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ಜನರಲ್ಲಿ ಇದು ನನ್ನ ’ಕೊನೆಯ ಚುನಾವಣೆ’ ಎಂದು ಕರುಣೆ ತೋರುವಂತೆ ಮನವಿ ಮಾಡುತ್ತಿದ್ದಾರೆ ಎಂದು ಪಿ.ಚಿದಂಬರಂ ಆರೋಪಿಸಿದ್ದಾರೆ.

- Advertisement -
- Advertisement -

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ನನ್ನ ಕೊನೆ ಚುನಾವಣೆಯೆಂದು ಘೋಷಿಸುವ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.

ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಯಾವುದೇ ಕೆಲಸ ಮಾಡದೇ, ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜನರಲ್ಲಿ ಇದು ನನ್ನ ’ಕೊನೆಯ ಚುನಾವಣೆ’ ಎಂದು ಕರುಣೆ ತೋರುವಂತೆ ಮನವಿ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪಿ.ಚಿದಂಬರಂ “ಇದು ಅವರ ‘ಕೊನೆಯ ಚುನಾವಣೆ’ ಎಂದು ನಿತೀಶ್ ಕುಮಾರ್ ಘೋಷಿಸುವ ಮೂಲಕ ಅವರೇ ಸೋಲನ್ನು ಸಮರ್ಥವಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

 

ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್‌ ಮೇಲೆ ಈರುಳ್ಳಿ ಎಸೆದು ಆಕ್ರೋಶ!

ಮಾಜಿ ಹಣಕಾಸು ಸಚಿವ ಚಿದಂಬರಂ, “ಕೊನೆ ಚುನಾವಣೆ ಎನ್ನುವ ನಿತೀಶ್ ಕುಮಾರ್ ಅವರ ಈ ತಂತ್ರವು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಜನರ ಬೆಂಬಲಕ್ಕಾಗಿ ಮಾಡಿದ ಮನವಿಯಲ್ಲ. ಅವರ ವೈಫಲ್ಯಗಳ ಹಿನ್ನೆಲೆ ರಾಜ್ಯದ ಜನತೆಯಲ್ಲಿ ಕರುಣೆಗಾಗಿ ಮಾಡಿದ ಮನವಿ” ಎಂದು ಆರೋಪಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರನ್ನು ಕುಂಟು ಬಾತುಕೋಳಿಗೆ ಹೋಲಿಸಿದ್ದಾರೆ.  “ಚುನಾಯಿತರಾದ ಮೊದಲ ದಿನದಿಂದ ಕುಂಟು ಬಾತುಕೋಳಿಯಾಗುವ ವ್ಯಕ್ತಿಗೆ ಬಿಹಾರದ ಜನರು ಯಾಕೆ ಮತ ನೀಡಬೇಕು” ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಬಿಹಾರ ಚುನಾವಣೆಯ ಮೂರನೇ ಹಂತದ ಪ್ರಚಾರದ ಕೊನೆಯ ದಿನದಂದು, ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗಳು ತಮ್ಮ ಕೊನೆ ಚುನಾವಣೆ ಎಂದು ಹೇಳಿ ಜನರಲ್ಲಿ ಗೊಂದಲ ಮೂಡಿಸಿದ್ದರು.

ನಿನ್ನೆ(ನ.5) ಬಿಹಾರದ ಪೂರ್ಣಿಯಾ ಜಿಲ್ಲೆಯ ಧಾಮ್‌ದಾಹದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಇಂದು ಪ್ರಚಾರದ ಕೊನೆ ದಿನ. ನಾಳೆಯ ನಂತರ ಮತದಾನ ನಡೆಯಲಿದೆ. ಇದು ನನ್ನ ಕೊನೆಯ ಚುನಾವಣೆ. ಎಲ್ಲವೂ ಚೆನ್ನಾಗಿ ಮುಗಿಯುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದರು.

ಬಿಹಾರ ಚುನಾವಣೆಯ ಕೊನೆಯ ಹಂತದ ಮತದಾನ ನಾಳೆ (ನವೆಂಬರ್ 7) ರಂದು ನಡೆಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.


ಇದನ್ನೂ ಓದಿ: ’ಮೋದಿಜಿಯ ವೋಟಿಂಗ್ ಮಷಿನ್ & ಮೋದಿಜಿಯ ಮೀಡಿಯಾಕ್ಕೆ ನಾನು ಹೆದರುವುದಿಲ್ಲ’- ರಾಹುಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...