Homeಮುಖಪುಟವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸ್ಥಿತಿ ಉತ್ತಮವಾಗಿದೆ: ರಾಹುಲ್ ಗಾಂಧಿ

ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಸ್ಥಿತಿ ಉತ್ತಮವಾಗಿದೆ: ರಾಹುಲ್ ಗಾಂಧಿ

- Advertisement -
- Advertisement -

‘ವಿಪಕ್ಷಗಳ ಇಂಡಿಯಾ (INDIA) ಬಣವು ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಸಮಾನ ಮನಸ್ಕ ಪಕ್ಷಗಳ’ ಮೈತ್ರಿ ಗೆಲ್ಲಲಿದೆ’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯ ಭಾಗವಾಗಿ ನಾಗಾಲ್ಯಾಂಡ್‌ನ ಚಿಫೊಬೊಝೌದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 14ರಂದು ಮಣಿಪುರದಿಂದ ತಮ್ಮ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಪ್ರಾರಂಭಿಸಿದ್ದು, ಅದು ಸೋಮವಾರ ಸಂಜೆ ನಾಗಾಲ್ಯಾಂಡ್ ತಲುಪಿತು.

ನಾಗಾಲ್ಯಾಂಡ್‌ನಲ್ಲಿ ಮಾತನಾಡಿದ ಅವರು, ‘ಇಂಡಿಯಾ ಮೈತ್ರಿಕೂಟದ ಸ್ಥಿತಿ ಉತ್ತಮವಾಗಿದೆ. ನಾವು ನಮ್ಮ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸೀಟು ಹಂಚಿಕೆಯ ವಿಷಯದ ಚರ್ಚೆಗಳು ನಡೆಯುತ್ತಿವೆ. ಮೈತ್ರಿ ಮಾತುಕತೆ ಸಾಕಷ್ಟು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಸೀಟು ಹಂಚಿಕೆ ಸಂಕೀರ್ಣವಾದ ಚರ್ಚೆಗಳಲ್ಲ. ಹಾಗಾಗಿ ಅವು ಆದಷ್ಟು ಬೇಗ ಬಗೆಹರಿಯುತ್ತವೆ ಎಂಬ ವಿಶ್ವಾಸ ನನಗಿದೆ’ ಎಂದರು.

‘2024ರಲ್ಲಿ ಬಿಜೆಪಿಯನ್ನು ಮಣಿಸಲು ಇಂಡಿಯಾ ಮೈತ್ರಿಕೂಟವು ಉತ್ತಮ ಸ್ಥಾನವನ್ನು ಪಡೆದುಕೊಳ್ಳುವುದನ್ನು ನಾನು ನೋಡುತ್ತೇನೆ. ಭಾರತ್ ಜೋಡೋ ಒಂದು ಸೈದ್ಧಾಂತಿಕ ಯಾತ್ರೆಯಾಗಿದ್ದು, ಕೆಲವು ಪ್ರಮುಖ ಸಮಸ್ಯೆಗಳನ್ನು ವೇದಿಕೆ ಮೇಲೆ ಇರಿಸಲು ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದರು.

‘ಇದು ಕಾಲ್ನಡಿಗೆಯ ಯಾತ್ರೆಯಾಗಬೇಕೆಂದು ನಾನು ಬಯಸಿದ್ದೆ. ಆದರೆ, ಅದು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ನಮಗೆ ಹೆಚ್ಚು ಸಮಯವಿರಲಿಲ್ಲ. ಹಾಗಾಗಿ, ಇದು ಹೈಬ್ರಿಡ್ ಯಾತ್ರೆ’ ಎಂದು ವಿವರಿಸಿದರು.

‘ಇದು ಭಾರತ್ ಜೋಡೋ ನ್ಯಾಯ್ ಯಾತ್ರೆ. ಇದರ ಗುರಿ, ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯ, ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಬಗ್ಗೆಯಾಗಿದೆ. ನಾವು ಮಣಿಪುರದಿಂದ ಪ್ರಾರಂಭಿಸಿದ್ದೇವೆ, ಮಣಿಪುರಕ್ಕೆ ಘೋರ ಅನ್ಯಾಯವಾಗಿದೆ’ ಎಂದರು.

‘ಇತಿಹಾಸದಲ್ಲಿ ಮೊದಲ ಬಾರಿಗೆ, ದೇಶದ ರಾಜ್ಯವೊಂದರಲ್ಲಿ ಹಿಂಸಾಚಾರವು ತಿಂಗಳುಗಟ್ಟಲೆ ನಡೆಯುತ್ತಿದೆ. ಪ್ರಧಾನಿ ಮತ್ತು ಬಿಜೆಪಿಯ ಜನರು ಸಂತ್ರಸ್ತರನ್ನು ಭೇಟಿ ಮಾಡಲಿಲ್ಲ. ಹಿಂಸಾಚಾರ ಆರಂಭವಾದ ನಂತರ ನಾವು ನಾಗಾಲ್ಯಾಂಡ್‌ಗೆ ಹೋದೆವು’ ಎಂದು ಹೇಳಿದರು.

‘ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯು ರಾಜಕೀಯ ಕಾರ್ಯಕ್ರಮವಾಗಿದೆ, ಬಿಜೆಪಿ-ಆರ್‌ಎಸ್‌ಎಸ್‌ ಇದಕ್ಕೆ ಚುನಾವಣಾ ಪರಿಮಳವನ್ನು ನೀಡುತ್ತಿದೆ. ಅದಕ್ಕಾಗಿಯೇ ನಮಗೆ ಹಾಜರಾಗಲು ಕಷ್ಟವಾಗುತ್ತಿದೆ’ ಎಂದರು.

ಇದು ಆರ್‌ಎಸ್‌ಎಸ್‌-ಬಿಜೆಪಿ ಕಾರ್ಯಕ್ರಮವಾಗಿದ್ದು, ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷರು ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಹೇಳಿದರು. ನಾವು ಎಲ್ಲಾ ಧರ್ಮಗಳು, ಎಲ್ಲಾ ಆಚರಣೆಗಳಿಗೆ ಮುಕ್ತರಾಗಿದ್ದೇವೆ. ಹಿಂದೂ ಧರ್ಮದ ಅಧಿಕಾರಿಗಳು, ಹಿಂದೂ ಧರ್ಮದ ದೊಡ್ಡ ಅಧಿಕಾರಿಗಳು ಸಹ ಜನವರಿ 22ರ ಸಮಾರಂಭದ ಬಗ್ಗೆ ತಮ್ಮ ಅಭಿಪ್ರಾಯವನ್ನು ರಾಜಕೀಯ ಕಾರ್ಯವೆಂದು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ನೀಡದ ಕಾರಣ ಭಾರತ್ ಜೋಡೋ ನ್ಯಾಯ್ ಯಾತ್ರೆ ನಡೆಯುತ್ತಿದೆ. ಇದು ಚುನಾವಣಾ ಯಾತ್ರೆಯಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಮೆರವಣಿಗೆಯು “ಸಂವಿಧಾನದಲ್ಲಿ ಪ್ರತಿಪಾದಿಸಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಮರುಸ್ಥಾಪಿಸುವ ಗುರಿಯನ್ನು ಹೊಂದಿದೆ” ಎಂದು ಅದು ಹೇಳಿದೆ.

ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳುವ ಮೊದಲು ಯಾತ್ರೆಯು 15 ರಾಜ್ಯಗಳ 100 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಮಣಿಪುರದ ಜೊತೆಗೆ, ಯಾತ್ರೆಯು ನಾಲ್ಕು ಈಶಾನ್ಯ ರಾಜ್ಯಗಳನ್ನು ಒಳಗೊಂಡಿದೆ. ನಾಗಾಲ್ಯಾಂಡ್ (ಎರಡು ದಿನಗಳಲ್ಲಿ 257 ಕಿಮೀ), ಅರುಣಾಚಲ ಪ್ರದೇಶ (ಒಂದು ದಿನದಲ್ಲಿ 55 ಕಿಮೀ), ಮೇಘಾಲಯ (ಒಂದು ದಿನದಲ್ಲಿ ಐದು ಕಿಮೀ) ಮತ್ತು ಅಸ್ಸಾಂ (ಎಂಟು ದಿನಗಳಲ್ಲಿ 833 ಕಿಮೀ)ನಲ್ಲಿ ಯಾತ್ರೆ ಸಂಚರಿಸಲಿದೆ.

ಇದನ್ನೂ ಓದಿ; ಚಂಡೀಗಢ ಮೇಯರ್ ಚುನಾವಣೆ ಲೋಕಸಭೆ ಕದನಕ್ಕೆ ದಿಕ್ಸೂಚಿ: ರಾಘವ್ ಚಡ್ಡಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...