Homeಮುಖಪುಟಎನ್.ಪಿ.ಆರ್ - ಜನಗಣತಿಗೆ ಸಿದ್ದತೆ : ಏ.15 ರಿಂದ ಕುಟುಂಬದ ಸಮಗ್ರ ಮಾಹಿತಿ ನೀಡಬೇಕು

ಎನ್.ಪಿ.ಆರ್ – ಜನಗಣತಿಗೆ ಸಿದ್ದತೆ : ಏ.15 ರಿಂದ ಕುಟುಂಬದ ಸಮಗ್ರ ಮಾಹಿತಿ ನೀಡಬೇಕು

- Advertisement -
- Advertisement -

ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ ರಾಜ್ಯ ಸರ್ಕಾರ ಸಕಲ ಸಿದ್ದತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ತರಬೇತಿ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ಜನರಿಂದ ಯಾವ ರೀತಿ ಮಾಹಿತಿ ಪಡೆಯಬೇಕು, ಯಾವ ಪ್ರಶ್ನೆಗಳನ್ನು ಕೇಳಬೇಕು ಎಂಬ ಬಗ್ಗೆ ತರಬೇತಿ ನೀಡಿ ಶಿಕ್ಷಕರನ್ನು ಸಜ್ಜುಗೊಳಿಸಲಾಗಿದೆ. ಶಿಕ್ಷಕರು ಎನ್.ಪಿ.ಆರ್ ಮತ್ತು ಜನಗಣತಿಗೆ ಸಂಬಂಧ ಏಪ್ರಿಲ್ 15 ರಿಂದ ಮನೆಮನೆ ಭೇಟಿ ನೀಡಿ ಕುಟುಂಬದ ಸಮಗ್ರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಸಿದ್ದರಾಗಿ ನಿಂತಿದ್ದಾರೆ.

ಎನ್ ಪಿ.ಆರ್ ಗಣತಿ ವೇಳೆ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪ್ರತಿಯೊಂದು ಪ್ರಶ್ನೆಗೂ ಉತ್ತರ ಸಮರ್ಪಕವಾಗಿರಬೇಕು. ಆಧಾರ್ ನಂಬರ್, ಜನ್ಮದಿನಾಂಕ, ತಂದೆ-ತಾಯಿಯ ಸಂಪೂರ್ಣ ಮಾಹಿತಿ ನೀಡಬೇಕು. ತಂದೆ ಹುಟ್ಟಿದ ಗ್ರಾಮ, ತಾಯಿಯ ತವರಿನ ಕುರಿತು ಮಾಹಿತಿ ನೀಡಬೇಕು. ಪ್ರತಿಯೊಬ್ಬ ವ್ಯಕ್ತಿಯ ಆಧಾರ್ ಮತ್ತು ಜನ್ಮದಿನಾಂಕವನ್ನು ನೀಡಲೇಬೇಕು. ವ್ಯಕ್ತಿಯ ತಂದೆ, ತಾಯಿ, ಹೆಂಡತಿ, ಗಂಡ, ಮಕ್ಕಳ ವಿವರಗಳನ್ನು ಕೊಡಬೇಕು.

ಬಹುತೇಕರಿಗೆ ತಮ್ಮ ತಂದೆ-ತಾಯಿಗಳು ಯಾವ ಗ್ರಾಮದಲ್ಲಿ ಜನಿಸಿದರು.  ಎಲ್ಲಿಂದ ಬಂದವರು ಎಂಬ ಬಗ್ಗೆ ಮಾಹಿತಿಯೇ ಇಲ್ಲ. ತಂದೆ-ತಾಯಿಗಳ ಜನ್ಮದಿನಾಂಕವೂ ಇಲ್ಲ. ಅಷ್ಟೇ ಅಲ್ಲ ಬಹುತೇಕರಿಗೆ 1980ಕ್ಕೂ ಮೊದಲು ಜನಿಸಿದವರಿಗೆ ಜನ್ಮ ಪ್ರಮಾಣ ಪತ್ರಗಳೇ ಇಲ್ಲ. ನಂತರದವರಿಗೂ ಇಲ್ಲ. ಎಸ್.ಎಸ್.ಎಲ್.ಸಿ ಅಂಕಪಟ್ಟಿಯಲ್ಲಿ ಇರುವ ಜನ್ಮದಿನಾಂಕವನ್ನು ಬಿಟ್ಟರೆ ಬೇರೊಂದು ಪ್ರಮಾಣ ಪತ್ರ ಇಲ್ಲ. ಹಾಗಾಗಿ ಮಾಹಿತಿ ನೀಡುವಾಗ ಅಪ್ಪ-ಅಮ್ಮಂದಿರ ಹುಟ್ಟಿದ ಗ್ರಾಮದ ಬಗ್ಗೆ ಮಾಹಿತಿ ನೀಡದಿದ್ದರೆ ಮಾಹಿತಿ ಕೊಡಲು ನಿರಾಕರಿಸಿದ್ದಾರೆ ಎಂದು ಬರೆದುಕೊಂಡು ಹೋಗಲಾಗುತ್ತದೆ..

ಕೇಂದ್ರ ಸರ್ಕಾರ ಎನ್.ಪಿ.ಆರ್ ಗಣತಿಯ ಬಗ್ಗೆ ಪ್ರಶ್ನಾವಳಿ ಅಂತಿಮಗೊಳಿಸಿಲ್ಲ ಎಂದು ಹೇಳುತ್ತಿದೆ. ಕೆಲವು ಪ್ರಶ್ನೆಗಳನ್ನು ತೆಗೆದುಹಾಕುವಂತೆ ಪ್ರತಿಪಕ್ಷಗಳು ಆಗ್ರಹಿಸುತ್ತಿವೆ. ದೇಶಾದ್ಯಂತ ಪ್ರತಿಭಟನೆಗಳು ನಡೆಸುತ್ತಿವೆ. ಸುಮಾರು 10ಕ್ಕೂ ಹೆಚ್ಚು ರಾಜ್ಯಗಳು ಎನ್.ಪಿ.ಆರ್. ನಡೆಸುವುದಿಲ್ಲವೆಂದು ನಿರ್ಣಯ ಕೈಗೊಂಡಿವೆ. ಕೇಂದ್ರ ಸರ್ಕಾರ ಎನ್.ಪಿ.ಆರ್ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಜನರನ್ನು ಗೊಂದಲದಲ್ಲಿಟ್ಟಿದೆ. ಎನ್.ಪಿ.ಆರ್ ಪ್ರಶ್ನಾವಳಿಗಳು ಸ್ಪಷ್ಟಗೊಂಡಿಲ್ಲ. ಆದರೆ ತರಬೇತಿ ಪಡೆದಿರುವ ಶಿಕ್ಷಕರು ಜನರ ವಿರೋಧದ ನಡುವೆಯೂ ಎನ್.ಪಿ.ಆರ್ ಗಣತಿಗೆ ಸಿದ್ದತೆ ನಡೆಸಿದ್ದಾರೆ.

ಎನ್.ಪಿ.ಆರ್. ಗಣತಿದಾರರಿಗೆ ಮಾಹಿತಿ ನೀಡುವುದು ಕಡ್ಡಾಯವೇನಲ್ಲ. ಆದರೆ ಜನರು ಮಾಹಿತಿ ನೀಡದಿದ್ದರೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಬರೆದುಕೊಂಡು ಹೋಗುತ್ತಾರೆ. ಇಂಥವರ ಮೇಲೆ ಮುಂದಿನ ದಿನಗಳಲ್ಲಿ ಕಣ್ಗಾವಲು ಇಡುವ ಸಾಧ್ಯತೆ ಇದೆ. ಎನ್.ಪಿ.ಆರ್. ಗಣತಿಯಲ್ಲಿ 14 ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಪೂರ್ಣ ಮಾಹಿತಿ ನೀಡಬೇಕೆಂದೇನೂ ಇಲ್ಲದಿದ್ದರು ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು. ಗಣತಿದಾರರು ಏಪ್ರಿಲ್ 15ರಿಂದ ಮಾಡಲಿರುವ ಎನ್.ಪಿ.ಆರ್ ಗಣತಿಯ ಸಂದರ್ಭ ಯಾವ ಸಮಸ್ಯೆಗಳನ್ನು ಎದುರಿಸುತ್ತಾರೋ, ಜನರ ಪ್ರತಿಕ್ರಿಯೆ ಹೇಗಿರುತ್ತದೋ ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...