Homeಕರ್ನಾಟಕಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

ಸರಳತೆ ನೇರಗುಣ ದಿಟ್ಟತನಗಳನ್ನು ಬದುಕಿದ ಲೇಖಕಿ

- Advertisement -
- Advertisement -

ಕರಾವಳಿಯಿಂದಲೇ ‘ಇಂದಿರಾಬಾಯಿ’, ‘ಚೋಮನದುಡಿ’, ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಗಳು ಬಂದಿದ್ದು ಕುತೂಹಲಕರ. ಇವು ನಮ್ಮ ಸಮಾಜದ ವಿಧವಾಪದ್ಧತಿ, ಅಸ್ಪೃಶ್ಯತೆ, ಭೂಮಿಪ್ರಶ್ನೆ, ಸ್ತ್ರೀಶೋಷಣೆಯಂತಹ ಪ್ರಧಾನವಾದ ಸಮಸ್ಯೆಗಳನ್ನು ಕುರಿತವಾಗಿವೆ. ಒಂದರ್ಥದಲ್ಲಿ ಸಾರಾ, ಎಂಟು ದಶಕಗಳ ತರುವಾಯ ‘ಇಂದಿರಾಬಾಯಿ’ಯ ಉತ್ತರಾಧಿಕಾರಿಗಳಂತಿರುವ ಕತೆ ಕಾದಂಬರಿಗಳನ್ನು ರಚಿಸಿದರು. ವಿಧವೆಯಾಗಿ ಸಾರ್ವಜನಿಕ ಬದುಕನ್ನು ಕಳೆದುಕೊಳ್ಳುವ, ಜೀವನ ಅನುಭವಿಸಬೇಕಾದ ಸ್ವಾತಂತ್ರ್ಯ ಕಳೆದುಕೊಳ್ಳುವ ಸಮಸ್ಯೆಯನ್ನು ಗುಲ್ವಾಡಿಯವರಂತೆ ಅವರ ಬರೆಹವೂ ಜೀವನ್ಮರಣದ ತುರ್ತಿನಲ್ಲಿ ಶೋಧಿಸಿತು.

ಮಹಿಳೆಯರಿಗೆ ಬಿಡುಗಡೆ ಮಾಡುವುದು ಆಧುನಿಕ ಶಿಕ್ಷಣವೆಂದು ನಂಬಿದ್ದ ಭಾರತದ ಪ್ರಥಮ ಶಿಕ್ಷಕಿ ಫಾತಿಮಾ ಶೇಖ್ ಅವರ ಜನ್ಮದಿನದ ಮಾರನೇದಿನವೇ ಸಾರಾ ಅವರು ತೀರಿಕೊಂಡಿದ್ದು ಮಾರ್ಮಿಕ. ಫಾತಿಮಾ ಒಬ್ಬ ಶಿಕ್ಷಕಿಯಾಗಿ ಕೊಟ್ಟ ಸೂಚನೆಯನ್ನು, ‘ಮುಸ್ಲಿಂ ಹುಡುಗಿ ಶಾಲೆ ಕಲಿತಿದ್ದು’ ಎಂಬ ಲೇಖನದ ಮೂಲಕ ಬರವಣಿಗೆ ಆರಂಭಿಸಿದ ಸಾರಾ, ಒಬ್ಬ ವಿದ್ಯಾರ್ಥಿಯಾಗಿ ಬದುಕಿ ಸಾಧಿಸಿದವರು. ವಸಾಹತುಶಾಹಿ ಶಾಲೆಗಳಲ್ಲಿ ಕಲಿತ ನಾವು ನಮ್ಮ ಪರಂಪರೆಯ ಮೂಲಬೇರುಗಳನ್ನು ಕಳೆದುಕೊಂಡೆವು ಎಂದು ಅಳಲುವವರು ಇದ್ದಾರೆ. ಅವರ ಮಾತಲ್ಲಿ ಕೆಲವು ನಿಜಗಳಿವೆ. ಆದರೆ ಬ್ರಿಟಿಷರು ಬಾರದೆ ಹೋಗಿದ್ದರೆ, ಸ್ಕೂಲು ಕಾಲೇಜುಗಳನ್ನು ಮುಕ್ತವಾಗಿ ತೆರೆಯದೆ ಹೋಗಿದ್ದರೆ, ನಾವು ನಾವಾಗಿರುತ್ತಿರಲಿಲ್ಲ ಎಂದು ಈ ದೇಶದ ದಲಿತರು ಮತ್ತು ಮಹಿಳೆಯರು ಮತ್ತೆಮತ್ತೆ ಯಾಕೆ ಹೇಳುತ್ತಾರೆ ಎಂಬ ಪ್ರಶ್ನೆಯನ್ನು ಅವರು ಸೂಕ್ಷ್ಮವಾಗಿ ಪರಿಶೀಲಿಸುವುದಿಲ್ಲ. ಸಾರಾ ಓದಿದ್ದು ಹತ್ತನೇ ತರಗತಿ ಮಾತ್ರ. ಬರೆಯಲು ಆರಂಭಿಸಿದ್ದು ತಮ್ಮ 50ರ ಪ್ರಾಯದಲ್ಲಿ. ಈ ಸೀಮಿತ ಶಿಕ್ಷಣ, ವಯಸ್ಸುಗಳ ಮಿತಿ, ಅವರ ಬರೆಹಕ್ಕೆ ದೊಡ್ಡ ತೊಡಕುಗಳಾಗಲಿಲ್ಲ. ಅವರು ಆಧುನಿಕ ಶಿಕ್ಷಣದಂತೆ ಸಾಹಿತ್ಯ ಕೂಡ ಬದುಕನ್ನು ಬದಲಿಸಬಹುದು ಎಂದು ನಂಬಿದ್ದವರು. ತಮ್ಮ ಕತೆ ಕಾದಂಬರಿ ಓದಿ, ತಮ್ಮ ಆಲೋಚನೆ ಬದಲಿಸಿಕೊಂಡ ಮಹಿಳೆಯರ ನಿದರ್ಶನಗಳನ್ನು ಅವರು ಸದಾ ಉಲ್ಲೇಖಿಸುತ್ತಿದ್ದರು. ಆಕ್ಟಿವಿಸ್ಟ್ ಬರೆಹಗಾರರನ್ನು ಸಿದ್ಧ ಕಲಾ ಮಾನದಂಡಗಳಿಂದ ಅಳೆಯುವುದು ಸುಲಭವಲ್ಲ.

ಸಾರಾ ಅವರ ಬದುಕು, ಆಲೋಚನೆ, ಕ್ರಿಯೆಗಳನ್ನು ರೂಪಿಸಿದ ಅಕ್ಷರ ಮತ್ತು ಬರೆಹಗಳ ಹಿಂದಿನ ವೈಚಾರಿಕತೆಯು, ಅವರು ಜೀವಂತವಾಗಿ ಅನುಭವಿಸಿದ ಬದುಕಿನ ಅನುಭವಗಳಿಂದ ಬಂದಿದ್ದು. ಅವರೊಬ್ಬ ರ್‍ಯಾಶನಲಿಸ್ಟ್ ಆಗಿ ಭಾರತದ ಆಧುನಿಕ ಚಿಂತಕರಿಂದ ಪ್ರೇರಣೆ ಪಡೆದಿದ್ದರು. ಅವರ ಬರೆಹದ ಹಿಂದೆ 70-80ರ ದಶಕಗಳು ಬಿಡುಗಡೆ ಮಾಡಿದ ಚಾರಿತ್ರಿಕ ಶಕ್ತಿಗಳೂ ಇದ್ದವು. ಅವರು ಸಮಾಜವನ್ನು ಅರಿಯಲು, ಎದುರಿಸಲು ಮತ್ತು ಬದಲಿಸಲು ಬೇಕಾದ ಚಿಂತನೆಯನ್ನು ಧಾರ್ಮಿಕ ನೆಲೆಯಿಂದಲೂ ಪಡೆಯುತ್ತಿದ್ದರು. ಅವರು ಕುರಾನಿನಲ್ಲಿ ಗಂಡುಹೆಣ್ಣು ಬೇಧವಿಲ್ಲವೆಂದೂ, ವಿದ್ಯೆ ಕಲಿಯಲು ಚೀನಾದವರೆಗೂ ಹೋಗಬೇಕಾದರೆ ಹೋಗೆಂದು ಪೈಗಂಬರರು ಹೇಳುತ್ತಿದ್ದರೆಂದೂ ಸದಾ ಉಲ್ಲೇಖಿಸುತ್ತಿದ್ದರು. ಧಾರ್ಮಿಕ ಭಾವುಕತೆಯು ಆಳವಾಗಿರುವ ಸಮಾಜದಲ್ಲಿ ಹೀಗೆ ಧಾರ್ಮಿಕ ನೆಲೆಯ ತಿಳಿವನ್ನು ಉಪಯೋಗಿಸುವುದು ಅಗತ್ಯವೂ ಆಗಿತ್ತು. ಯುದ್ಧತಂತ್ರವೋ ಶ್ರದ್ಧೆಯೋ ಹೇಳಲಾಗದ ಈ ವಿಧಾನವು ಅವರ ಸಮಕಾಲೀನ ಬರೆಹಗಾರರಾದ ಫಕೀರ್ ಕಟ್ಪಾಡಿಯವರಲ್ಲೂ, ಚಿಂತಕ ಅಸ್ಘರ್ ಅಲಿ ಇಂಜಿನಿಯರ್ ಅವರಲ್ಲೂ ಇತ್ತು.

ಸಾರಾ ಅವರು ತಮ್ಮ ಬರೆಹಗಳಲ್ಲಿ ಕಾಣಿಸುವ ಮುಸ್ಲಿಂ ಸಮಾಜವು ಮುಖ್ಯವಾಗಿ ಕರಾವಳಿಯದು ಅಥವಾ ಕೇರಳದ್ದಾಗಿದ್ದರೂ, ಅದು ವಿಶಾಲ ಅರ್ಥದಲ್ಲಿ ಭಾರತದ ಮಹಿಳೆಯರದೂ ಆಗಿತ್ತು. ಮುಸ್ಲಿಂ ಸಮುದಾಯವು ಒಳಗಿನ ಮೂಲಭೂತವಾದ ಮತ್ತು ಹೊರಗಿನ ಮತೀಯವಾದಗಳ ನಡುವೆ ಚಾರಿತ್ರಿಕವಾದ ಇಕ್ಕಟ್ಟಿಗೆ ಸಿಕ್ಕಿಕೊಂಡಿರುವ ಕಾಲದಲ್ಲಿ, ದರ್ಗಾ, ಸಾರಾ, ಕಟ್ಪಾಡಿ, ಬೊಳುವಾರು, ಬಾನುಮುಷ್ತಾಕ್ ಬರೆಯಲು ಆರಂಭಿಸಿದವರು. ಪುರುಷ ಲೇಖಕರು ಎರಡೂ ಕೆಡುಕುಗಳ ವಿರುದ್ಧ ಸಮಾನ ಎಚ್ಚರದಲ್ಲಿ ಬರೆದರೆ, ಮಹಿಳೆಯರು ಹೆಚ್ಚಾಗಿ ಒಳಗಿನ ಸಮಸ್ಯೆಯತ್ತಲೇ ಕೇಂದ್ರೀಕರಿಸಿದರು. ಇದಕ್ಕೆ ಕಾರಣ, ಈ ಸಮಸ್ಯೆಯು ಅವರ ವೈಚಾರಿಕ ಗ್ರಹಿಕೆಯ ಪರಿಣಾಮವಾಗಿರಲಿಲ್ಲ. ಸ್ವಂತಾನುಭವದ್ದಾಗಿತ್ತು. ಆದರೆ ಸಮುದಾಯವನ್ನು ಅದರ ಗಂಡಾಳಿಕೆ ಮತ್ತು ಪುರೋಹಿತಶಾಹಿ ಕೇಡುಗಳ ಬಾಧೆಯ ಚೌಕಟ್ಟಿನಲ್ಲಿ ಗ್ರಹಿಸಿದಾಗ, ಅದು ಧರ್ಮ ಅಥವಾ ಸಮುದಾಯಗಳನ್ನು ದ್ವೇಷಿಸುವ ಮತೀಯವಾದಿಗಳಿಗೆ ಹತ್ಯಾರಗಳು ಕೂಡ ಆಗಿಬಿಡುವ ಅಪಾಯವಿರುತ್ತದೆ. ಸಾರಾ ಅವರ ಪಠ್ಯಗಳನ್ನು ತರಗತಿಗಳಲ್ಲಿ ಪಾಠಮಾಡುತ್ತಿದ್ದ ದುಷ್ಟ ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಮುಸ್ಲಿಮರ ಬಗ್ಗೆ ಇದೊಂದು ಕೊಳೆತುಹೋದ ಜನಾಂಗವೆಂಬ ಗ್ರಹಿಕೆಯನ್ನು ಉತ್ಪಾದಿಸಿರುವ ಸಾಧ್ಯತೆಗಳಿವೆ. ಒಳವಿಮರ್ಶಕರಾಗಿ ಸಮುದಾಯವನ್ನು ಅನುಸಂಧಾನ ಮಾಡುವ ಎಲ್ಲ ಲೇಖಕರು ಎದುರಿಸಬೇಕಾದ ದುರಂತಮಯ ಇಕ್ಕಟ್ಟು ಇದು.

ಸಾರಾ, ನೇರ ದಿಟ್ಟಗುಣದ ಲೇಖಕಿಯಾಗಿದ್ದರು. ಕೆಲವೊಮ್ಮೆ ಸನ್ನಿವೇಶದ ಜಟಿಲತೆ ಅರ್ಥವಾಗಿಲ್ಲವೇನೋ ಎಂಬಂತೆ ಸರಳವಾಗಿ ಅವರು ಪ್ರತಿಕ್ರಿಯಿಸುತ್ತಿದ್ದರು. ಅವರ ಆಕ್ರೋಶವು ಕೊನೆಯ ತನಕವೂ ಧಗಧಗಿಸುತ್ತಿತ್ತು. ಬದುಕನ್ನು ಅದು ಸಮಸ್ಯಾತ್ಮಕವಾಗಿದೆ ಎಂಬ ನೆಲೆಯಲ್ಲಿ ಅನುಸಂಧಾನ ಮಾಡುವ ಎಲ್ಲ ಸಮಾಜಸುಧಾರಕ ಬರೆಹವೂ, ತನ್ನ ಸಮುದಾಯದ ಸುಖದುಃಖಗಳನ್ನು, ಬಾಳಿನ ಸಣ್ಣಪುಟ್ಟ ಸಂತಸಗಳನ್ನು ಕಾಣಿಸುವ ಕಲಾತ್ಮಕ ಸೂಕ್ಷ್ಮತೆಗೆ ಕೆಲವೊಮ್ಮೆ ಎರವಾಗುತ್ತದೆ. ಹೀಗೆ ಎರವಾದ ಕುಶಲತೆಯನ್ನು ಕುವೆಂಪು, ಕಟ್ಪಾಡಿ, ಬೊಳುವಾರು ಅಂತಹವರಲ್ಲಿ ಕಾಣಬಹುದು. ಸಾರಾ ಬರೆಹ ಈ ಆಯಾಮದಿಂದ ವಂಚಿತವಾಯಿತೇ ಎಂಬ ಶಂಕೆ ನನಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನರಿಗೆ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿ

ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್‌ ರಾಮ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ...

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...