Homeಮುಖಪುಟಬಿಜೆಪಿ ಸೇರಲು ರೂ.5 ಕೋಟಿ ಆಫರ್: ಎಎಪಿ ಶಾಸಕಿಯಿಂದ ಆರೋಪ

ಬಿಜೆಪಿ ಸೇರಲು ರೂ.5 ಕೋಟಿ ಆಫರ್: ಎಎಪಿ ಶಾಸಕಿಯಿಂದ ಆರೋಪ

- Advertisement -
- Advertisement -

ಬಿಜೆಪಿಗೆ ಸೇರುವಂತೆ ನನಗೆ 5 ಕೋಟಿ ರೂಪಾಯಿಯ ಆಫರ್ ನೀಡಲಾಗಿದ್ದು, ದೆಹಲಿಯಲ್ಲಿ ಪಕ್ಷದ ಉನ್ನತ ಮಟ್ಟದ ನಾಯಕರ ಜೊತೆ ಸಭೆ ಏರ್ಪಡಿಸಲಾಗುವುದು. ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಲಾಗುವುದು ಎಂದು ಆಮಿಷ ಒಡ್ಡಿರುವುದಾಗಿ ಪಂಜಾಬ್‌ನ ದಕ್ಷಿಣ ಲುಧಿಯಾನದ ಶಾಸಕಿ ರಾಜಿಂದರ್‌ಪಾಲ್ ಕೌರ್ ಛಿನಾ ಆರೋಪಿಸಿದ್ದಾರೆ.

ಛಿನಾ ಅವರು ನೀಡಿರುವ ದೂರಿನ ಪ್ರಕಾರ ಬಿಜೆಪಿಗೆ ಸೇರುವಂತೆ ಅವರಿಗೆ +46 ಕೋಡ್ ಇರುವ ದೇಶದಿಂದ ಕರೆ ಬಂದಿದೆ. ಈ ಕೋಡ್ ಸ್ವೀಡನ್ ದೇಶದ್ದಾಗಿದೆ. ಸೇವಕ ಸಿಂಗ್ ಎಂಬಾತ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡು ಕರೆ ಮಾಡಿದ್ದಾರೆ. ಆತ ಪ್ರಸ್ತುತ ದೆಹಲಿಯಲ್ಲಿ ಇರುವುದಾಗಿ ಹೇಳಿದ್ದಾರೆ. ಆತನ ಹೆಸರನ್ನೇ ಎಫ್‌ಐರ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಬಿಜೆಪಿ ಪ್ರತಿನಿಧಿಯಾದ ಸೇವಕ್ ಸಿಂಗ್ ಎಂಬಾತ ಬೆದರಿಕೆ ಹಾಕಿ, ಲಂಚದ ಆಮಿಷವೊಡ್ಡುವ ಮೂಲ ಬಿಜೆಪಿಗೆ ಸೇರಲು ಕಾನೂನು ಬಾಹಿರವಾಗಿ ಒತ್ತಡ ಹೇರಿದ್ದಾರೆ ಎಂದು ಶಾಸಕಿ ರಾಜಿಂದರ್ ಪಾಲ್ ಕೌರ್ ಆರೋಪಿಸಿದ್ದಾರೆ.

ಕಳೆದ 3-4 ದಿನಗಳಿಂದ ಜರ್ಮನಿ ಸೇರಿದಂತೆ ವಿವಿಧ ಕಡೆಗಳಿಂದ ನನಗೆ ಕರೆಗಳು ಬರುತ್ತಿವೆ. ಹಾಗಾಗಿ, ಚುನಾವಣೆ ಮುಗಿಯುವವರೆಗೆ ಭದ್ರತೆ ಒದಗಿಸಲು ಪೊಲೀಸರಿಗೆ ಮಮವಿ ಮಾಡಿದ್ದೇನೆ ಎಂದು ಶಾಸಕಿ ಕೌರ್ ತಿಳಿಸಿದ್ದಾರೆ.

ಲುಧಿಯಾನದ ದಾಬಾ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 171-ಇ (ಲಂಚಕ್ಕೆ ಶಿಕ್ಷೆ) ಮತ್ತು ಜನ ಪ್ರತಿನಿಧಿ ಕಾಯ್ದೆಯ 123 (1) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಪ್ರಕರಣ: ತಿಹಾರ್ ಜೈಲಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...