Homeಪುಸ್ತಕ ವಿಮರ್ಶೆಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

ಪ್ರಕಟವಾಗಲಿರುವ ಪುಸ್ತಕ: ಆ 117 ದಿನಗಳು

- Advertisement -
- Advertisement -

ಪ್ರಿಯ ಮಿತ್ರರಾದ ಗಿರೀಶ್ ತಾಳಿಕಟ್ಟೆ ಅನುವಾದ ಮಾಡಿರುವ, ಮರಲಿನ್ ಮತ್ತು ಮರೈಸ್ ಬೈಲಿ ಅವರು ರಚಿಸಿರುವ ‘ಆ 117 ದಿನಗಳು’ ಪುಸ್ತಕದ ಹಸ್ತಪ್ರತಿಯನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಪ್ರವಾಸಪ್ರಿಯನಾದ ನನಗಿದು ಬಹಳ ಖುಷಿ ಕೊಟ್ಟಿತು. ಸಾಹಸಿಗಳಾದ ಮರಲಿನ್ ಮತ್ತು ಮೈರಸ್ ದಂಪತಿಗಳು ಇಂಗ್ಲೆಂಡಿನಿಂದ ಚಿಕ್ಕದೊಂದು ನಾವೆಯಲ್ಲಿ ಹೊರಟು, ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಹಾಯುತ್ತ, ನಡುವೆ ನಾವೆ ದುರಂತಕ್ಕೊಳಗಾಗಿ, ಜೀವನ್ಮರಣದ ಗಳಿಗೆಗಳನ್ನು ಎದುರಿಸುತ್ತ ಬದುಕಿ ಬಂದ ಕಥೆಯದು. ಅವರು ಪಯಣ ಆರಂಭಿಸಿದ ಮತ್ತು ತಲುಪಿದ ಬಿಂದುಗಳ ನಡುವಿನ ಕಡಲಿನ ಹರಹನ್ನು ಭೂಪಟದಲ್ಲಿ ನೋಡಿದರೆ ದಂಗುಬಡಿಯುತ್ತದೆ. ಈ ಕಥನದಲ್ಲಿ ಪಯಣದ ಪೂರ್ವದಲ್ಲಿ, ಪಯಣದಲ್ಲಿ ಹಾಗೂ ಪಯಣದ ಬಳಿಕ ಅವರ ಬಾಳಿನಲ್ಲಿ ಪ್ರೇಮ ಸಾಹಸ ಆನಂದ ದುಃಖ ಅಗಲಿಕೆಗಳು, ಸಮುದ್ರದ ಅಲೆಗಳಂತೆ ಒಂದಾದಮೇಲೆಒಂದು ಬಂದು ಅಪ್ಪಳಿಸುತ್ತವೆ. ಇದೊಂದು ರೋಚಕವಾದ ಪ್ರವಾಸ ಕಥನ. ಇದನ್ನು ಓದುವಾಗ, ತೇಜಸ್ವಿಯವರ ‘ಮಹಾಪಲಾಯನ’ ನೆನಪಿಗೆ ಬಂದಿತು; ಎವರೆಸ್ಟ್ ಶಿಖರವನ್ನು ಏರಿ ಹಿಮಪಾತಕ್ಕೆ ಸಿಕ್ಕು ಸಾವಿನಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿ ಬಂದ ಅಮೆರಿಕನ್ ಪರ್ವತಾರೋಹಿ ಪೇವರ್ ಮೈಕಲ್‌ನ ‘ಥಿನ್ ಏರ್’; ಸುನ್ ಶುಯೆನ್ ಎಂಬ ಇತಿಹಾಸಜ್ಞೆ, ಚೀನಾದಿಂದ ಭಾರತಕ್ಕೆ ಹ್ಯೂಯನ್‌ತ್ಸಾಂಗ್ ಪಯಣಿಸಿದ ಹಾದಿಯಲ್ಲೆ ಪಯಣಿಸುತ್ತ ಬಂದು ಬರೆದ ಕಥನ, ‘ಟೆನ್‌ಥೌಸಂಡ್ ಮೈಲ್ಸ್ ವಿಥೌಟ್ ಕ್ಲೌಡ್’ ಮುಂತಾದ ಕೃತಿಗಳು ಮನಃಪಟಲದ ಮೇಲೆ ಹಾದುಹೋದವು.

ಮೇಲ್ಕಾಣಿಸಿದ ಪ್ರವಾಸ ಕಥನಗಳ ವಿಶಿಷ್ಟತೆಯೆಂದರೆ, ಕೆಲವು ಸಾಹಸಿಗಳಾದ ವ್ಯಕ್ತಿಗಳು ತಮ್ಮ ಜೀವನದಲ್ಲಿ ವಿಶಿಷ್ಟವಾದ ಗುರಿಯನ್ನು ಇಟ್ಟುಕೊಂಡು, ಕಷ್ಟ ಅಪಾಯಗಳಿಂದ ಕೂಡಿರುವ ಹಾದಿಯಲ್ಲಿ ಪಯಣಿಸುವುದು. ಘಾತಕ ತಿರುವುಗಳಲ್ಲಿ ಮೃತ್ಯುವಿನ ಜತೆ ಮುಖಾಬಿಲೆ ಮಾಡುತ್ತ, ಬದುಕಿನ ಹೊಸ ಅನುಭವಗಳಿಗೆ ತೆರೆದುಕೊಳ್ಳುವುದು. ಎಂತಲೇ ಅವರ ಅನುಭವದಿಂದ ಹುಟ್ಟಿದ ಈ ಕೃತಿಗಳು ಕೇವಲ ಹುಚ್ಚುಸಾಹಸಿಗಳು ಮಾಡಿದ ರೋಚಕ ಪ್ರವಾಸ ವರದಿಗಳಾಗಿಲ್ಲ. ದಾರ್ಶನಿಕವಾಗಿ ಮಾನವ ಚೈತನ್ಯದಲ್ಲಿ ಹುದುಗಿರುವ ಅದಮ್ಯ ಸಾಹಸ ಪ್ರವೃತ್ತಿಯನ್ನು ಲೋಕಕ್ಕೆ ಕಾಣಿಸುವ ಕಥನಗಳಾಗಿವೆ. ನೂರರಲ್ಲಿ ಒಬ್ಬರಾಗಿ ಸಾಮಾನ್ಯ ಲಯದ ಬದುಕನ್ನು ಬಾಳಲು ನಿರಾಕರಿಸಿ, ಎಲ್ಲರಿಗಿಂತ ವಿಶಿಷ್ಟವಾದ ಬದುಕನ್ನು ನಡೆಸುವ ವಿಶಿಷ್ಟ ಲೋಕದೃಷ್ಟಿಯುಳ್ಳವರ ಜೀವನಗಾಥೆಗಳಾಗಿವೆ. ಅಪಾರವಾದ ಜೀವನಪ್ರೀತಿಯುಳ್ಳ ವ್ಯಕ್ತಿಗಳು ತಾವು ಹೋಗುವ ಅಪರಿಚಿತ ಎಡೆಯಲ್ಲಿ ಸಿಗುವ ಜನರೊಟ್ಟಿಗೆ ಮನುಷ್ಯ ಸಂಬಂಧ ಬೆಳೆಸುವ ಮಾನವೀಯ ಅಧ್ಯಾಯಗಳಾಗಿವೆ. ಆನಂದದಾಯಕವೂ ಕಠೋರವೂ ಆದ ಬಾನು ಕಡಲು ಕಾಡು ಮರುಭೂಮಿಯಂತಹ ನಿಸರ್ಗದ ಜತೆ ಅನುಸಂಧಾನ ಮಾಡುವ ಪ್ರಯೋಗಗಳಾಗಿವೆ.

ಮರಲಿನ್ ಮತ್ತು ಮರೈಸ್ ಜೋಡಿಯ ಯಾನವನ್ನು ನೋಡುವಾಗ ‘ಜುಗಾರಿ ಕ್ರಾಸ್’ನ ಸುರೇಶ್ ಮತ್ತು ಗೌರಿಯರು ನೆನಪಾದರು. ತೇಜಸ್ವಿಯವರ ಕಥನಗಳಲ್ಲಿ ಪ್ರೇಮಿಗಳು ಮಾಡುವ ಸಾಹಸಗಳಲ್ಲಿ ಗಂಡು ಹೆಚ್ಚು ಕ್ರಿಯಾಶೀಲ, ಧೈರ್ಯಶಾಲಿ. ಮಹಿಳೆ ಅನುಸರಿಸುವವಳು. ಆದರೆ ಈ ಪ್ರವಾಸ ಕಥನ ಬಿಚ್ಚಿಡುವ ಬಾಳಕಡಲಿನಲ್ಲಿ ಕಡೆಗೋಲನ್ನು ಗಂಡು ಕೈಬಿಟ್ಟಾಗಲೆಲ್ಲ ಅದನ್ನು ಎತ್ತಿಕೊಂಡು ಮಹಿಳೆ ದಿಟ್ಟತನವನ್ನು ಪ್ರದರ್ಶಿಸುತ್ತಾಳೆ. ನಿಸರ್ಗವು ಸ್ತ್ರೀಯೊಳಗಿನ ಅಪಾರ ಚೈತನ್ಯ ಧೈರ್ಯ ತಾಯ್ತನಗಳನ್ನು ಲೋಕಕ್ಕೆ ಕಾಣಿಸಲೆಂದೇ ಸೃಷ್ಟಿಸಿದ ನಿಗೂಢ ಪ್ರಾಕೃತಿಕ ನಾಟಕದಂತಿದೆ ಇದು. ಈ ದೃಷ್ಟಿಯಿಂದ ಕೃತಿಯನ್ನು ಗಿರೀಶ್ ಹೆಣ್ಣಿಗೆ ಅರ್ಪಿಸುತ್ತ ಆಡಿರುವ ಮಾತುಗಳು ಮಾರ್ಮಿಕವೂ ಅರ್ಥಪೂರ್ಣವೂ ಆಗಿವೆ. ಮರಲಿನ್ ತೀರಿಕೊಂಡ ಬಳಿಕ ಏಕಾಂಗಿಯಾದ ಮರೈಸ್, ಆಕೆಯನ್ನು ನೆನಪಿಸಿಕೊಳ್ಳುತ್ತ ಹೇಳುವುದು ಕೂಡ ಇದಕ್ಕೆ ಪೂರಕವಾಗಿದೆ; ‘ಎಂಥಾ ಸಂಕಷ್ಟ ಎದುರಾದಾಗಲೂ ಮರಲಿನ್ ತನ್ನೊಳಗಿನ ಬದುಕುವ ತುಡಿತವನ್ನು ಕಳೆದುಕೊಳ್ಳಲಿಲ್ಲ. ಆತ್ಮವಿಶ್ವಾಸವನ್ನು ಘಾಸಿ ಮಾಡಿಕೊಳ್ಳಲಿಲ್ಲ. ಹೆಣ್ಣು ಎಂಬ ಆ ಅದ್ಭುತ ಸೃಷ್ಟಿಗೆ ಇರುವ ಶಕ್ತಿಯೇ ಅಂತಹದ್ದು… ಮರಲಿನ್‌ಳನ್ನು ಭೇಟಿಯಾಗುವವರೆಗೆ ಪ್ರೀತಿ ವಾತ್ಸಲ್ಯ ಎಂಬುದೇ ನನಗೆ ತಿಳಿದಿರಲಿಲ್ಲ. ಆಕೆ ನನ್ನ ಬಾಳಿಗೆ ಬೆಳಕಾದಳು. ನನ್ನ ಬದುಕಿಗೆ ಬೇಕಿದ್ದ ಸುಖ, ಸಂತೋಷ, ನೆಮ್ಮದಿ ಧೈರ್ಯ ಎಲ್ಲವನ್ನೂ ತಂದವಳು. ಆಕೆಯಿಲ್ಲದೆ ನಾನು ಅಪೂರ್ಣ’; ಜ್ಞಾನೋದಯ ಸಾಕ್ಷಾತ್ಕಾರ ಎಂದರೆ ಇದುವೇ.

ಗಿರೀಶ್ ತಾಳಿಕಟ್ಟೆ

ಲವಲವಿಕೆಯ ಗದ್ಯ ಲೇಖಕರಾದ ಗಿರೀಶ್ ತಾಳಿಕಟ್ಟೆ ಕೃತಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಇದರಿಂದ ಹೊರಲೋಕದಲ್ಲಿ ಚೈತನ್ಯಶೀಲರಾದ ಜನ ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯುತ್ತದೆ. ದೇಶವನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಕಟ್ಟುವುದಕ್ಕೆ ಸಾಧ್ಯ. ಯೂರೋಪು ವಸಾಹತುಶಾಹಿಯಾಗಿ ಏಶಿಯಾ ಆಫ್ರಿಕಾಗಳನ್ನು ವಶಪಡಿಸಿಕೊಂಡು ಮಾಡಿರುವ ಕೃತ್ಯಗಳು ಚಾರಿತ್ರಿಕ ಅಪರಾಧಗಳು ದಿಟ. ಆದರೆ ಅಲ್ಲಿನ ಜನರಲ್ಲಿರುವ ಸಾಹಸಪ್ರವೃತ್ತಿ, ಅನ್ವೇಷಕ ಕುತೂಹಲ, ಸಾವಿಗೆ ಹೆದರದೆ ಕೈಗೊಳ್ಳುವ ಯಾನ, ವಿಜ್ಞಾನ ಮತ್ತು ತಂತ್ರಜ್ಞಾನಗಳು ದೊಡ್ಡ ಮೌಲ್ಯಗಳು. ಶಿವರಾಮ ಕಾರಂತ, ಲಂಕೇಶ್, ತೇಜಸ್ವಿಯವರಿಗೆ ಪಶ್ಚಿಮವು ಸೆಳೆದಿದ್ದೇ ಈ ದಿಸೆಯಲ್ಲಿ. ಈ ಪುಸ್ತಕ ಪ್ರಕಟವಾಗುವ ಕಾಲಕ್ಕೆ ತೇಜಸ್ವಿ ಇದ್ದಿದ್ದರೆ ಖಂಡಿತ ಇಷ್ಟಪಡುತ್ತಿದ್ದರು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....