Homeಮುಖಪುಟಈ ವರ್ಷದ ನನ್ನ ಮೊದಲ ಕಾರ್ಯಕ್ರಮದ ವಿಜ್ಞಾನಕ್ಕೆ ಸಂಬಂಧಿಸಿರುವುದರಿಂದ ಸಂತೋಷವಾಗಿದೆ: ಮೋದಿ

ಈ ವರ್ಷದ ನನ್ನ ಮೊದಲ ಕಾರ್ಯಕ್ರಮದ ವಿಜ್ಞಾನಕ್ಕೆ ಸಂಬಂಧಿಸಿರುವುದರಿಂದ ಸಂತೋಷವಾಗಿದೆ: ಮೋದಿ

- Advertisement -
- Advertisement -

ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ 107 ನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹೊಸ ದಶಕದ ಮತ್ತು ಹೊಸ ವರ್ಷದ ಆರಂಭದಲ್ಲಿ ನನ್ನ ಮೊದಲ ಕಾರ್ಯಕ್ರಮ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಸಂಬಂಧಿಸಿದ್ದಾಗಿರುವುದು ಮತ್ತು ಈ ಕಾರ್ಯಕ್ರಮವು ವಿಜ್ಞಾನ ಮತ್ತು ನಾವೀನ್ಯತೆಗೆ ಸಂಬಂಧಿಸಿರುವ ಬೆಂಗಳೂರಿನಲ್ಲಿ ನಡೆಯುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ಅಭಿವೃದ್ಧಿಯ ಸಕಾರಾತ್ಮಕತೆ ಮತ್ತು ಆಶಾವಾದದೊಂದಿಗೆ ನಾವು 2020 ವರ್ಷವನ್ನು ಪ್ರಾರಂಭಿಸಿದ್ದೇವೆ, ನಮ್ಮ ಕನಸನ್ನು ಈಡೇರಿಸುವತ್ತ ನಾವು ಮತ್ತೊಂದು ಹೆಜ್ಜೆ ಇಡುತ್ತೇವೆ ಎಂದಿದ್ದಾರೆ.

ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 52 ಕ್ಕೆ ಸುಧಾರಿಸಿದೆ ಎಂದು ತಿಳಿಯಲು ನನಗೆ ಸಂತೋಷವಾಗಿದೆ. ನಮ್ಮ ಯೋಜನೆಗಳು ಹಿಂದಿನ 50 ವರ್ಷಗಳಿಗಿಂತ ಕಳೆದ 5 ವರ್ಷಗಳಲ್ಲಿ ಹೆಚ್ಚಿನ ತಂತ್ರಜ್ಞಾನ ವ್ಯವಹಾರಗಳನ್ನು ಸಾಧಿಸಿವೆ. ಈ ಸಾಧನೆಗಳಿಗಾಗಿ ನಮ್ಮ ವಿಜ್ಞಾನಿಗಳನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಹೊಸತನ, ಪೇಟೆಂಟ್, ಉತ್ಪಾದನೆ ಮತ್ತು ಸಮೃದ್ಧಿ’ ಇವು ನಾಲ್ಕು ಹಂತಗಳು ದೇಶವನ್ನು ವೇಗವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದು ಮೋದಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಾವಿತ್ರಿಬಾಯಿ ಫುಲೆಯವರ ಜನ್ಮದಿನದ ವಾರ್ಷಿಕೋತ್ಸವದ ಅಂಗವಾಗಿ ಅವರಿಗೆ ಗೌರವ ಸಲ್ಲಿಸುತ್ತಾರೆ. ಅವರು ತಮ್ಮ ಜೀವನವನ್ನು ಸಾಮಾಜಿಕ ಐಕ್ಯತೆ, ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಅರ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read