Homeಕ್ರೀಡೆಒಲಂಪಿಕ್ಪ್ಯಾರಾಲಿಂಪಿಕ್ಸ್: ಇತಿಹಾಸ ಬರೆದ ಭವಿನಾ ಪಟೇಲ್; ಚಿನ್ನದ ಬೇಟೆಯತ್ತ ಚಿತ್ತ!

ಪ್ಯಾರಾಲಿಂಪಿಕ್ಸ್: ಇತಿಹಾಸ ಬರೆದ ಭವಿನಾ ಪಟೇಲ್; ಚಿನ್ನದ ಬೇಟೆಯತ್ತ ಚಿತ್ತ!

- Advertisement -
- Advertisement -

ಭಾರತದ ಭವಿನಾ ಪಟೇಲ್ ಅವರು ಶನಿವಾರ ಟೋಕಿಯೊದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಕ್ಲಾಸ್ 4 ಈವೆಂಟ್‌ನಲ್ಲಿ, ವಿಶ್ವದ 3 ನೇ ಶ್ರೇಯಾಂಕಿತ ಚೀನಾದ ಜಾಂಗ್ ಮಿಯಾವೊ ವಿರುದ್ಧ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ದಾಖಲೆ ಸೃಷ್ಟಿಸಿದ್ದಾರೆ.

ಭವಿನಾ ಅವರು ಜ್ಯಾಂಗ್ ಮಿಯಾವೊ ಅವರನ್ನು 7-11, 11-7, 11-4, 9-11, 11-8 ರಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಚಿನ್ನದ ಪದಕಕ್ಕಾಗಿ ಭವಿನಾ ಅವರು ಫೈನಲ್‌ನಲ್ಲಿ ಚೀನಾದ ಯಿಂಗ್ ಜ್ಸಾವು ಅವರನ್ನು ಭಾನುವಾರ ಎದುರಿಸಲಿದ್ದಾರೆ.

34 ವರ್ಷದ ಭವಿನಾ ಅವರು ಇದಕ್ಕೂ ಮುನ್ನ ವಿಶ್ವದ 5 ನೇ ಶ್ರೇಯಾಂಕಿತ ಆಟಗಾರ್ತಿ ಸರ್ಬಿಯಾದ ಬೋರಿಸ್ಲಾವಾ ಪೆರಿಕ್ ರಾಂಕೋವಿಕ್ ಅವರನ್ನು 11-5, 11-6, 11-7 ನೇರ ಗೇಮ್‌ಗಳಲ್ಲಿ ಸೋಲಿಸಿದ್ದರು.

ಇದನ್ನೂ ಓದಿ: ರೋಹಿಂಗ್ಯಾ ನಿರಾಶ್ರಿತರಿಗೆ ದೆಹಲಿ ಸರ್ಕಾರ ಸೌಲಭ್ಯಗಳನ್ನು ಒದಗಿಸಿದೆ ಎಂದು ಸುಳ್ಳು ಸುದ್ದಿ ಹಂಚುತ್ತಿರುವ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...