Homeಚಳವಳಿಸ್ವಯಂಪ್ರೇರಿತರಾಗಿ ಭಾರತ್ ಬಂದ್‌ ಬೆಂಬಲಿಸಿದ ಜನ; ಬೆಂಗಳೂರು ಮೈಸೂರು ರಸ್ತೆ ಖಾಲಿ ಖಾಲಿ!

ಸ್ವಯಂಪ್ರೇರಿತರಾಗಿ ಭಾರತ್ ಬಂದ್‌ ಬೆಂಬಲಿಸಿದ ಜನ; ಬೆಂಗಳೂರು ಮೈಸೂರು ರಸ್ತೆ ಖಾಲಿ ಖಾಲಿ!

ಮುಂಜಾನೆಯೆ ಹೂ, ಹಣ್ಣು ತರಕಾರಿ ಮಾರುವ ಬಹುತೇಕ ಬೀದಿಬದಿ ವ್ಯಾಪಾರಿಗಳು ಅಂಗಡಿ ತೆರೆಯದೆ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

- Advertisement -
- Advertisement -

ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಕಳೆದ 13 ದಿನಗಳಿಂದ ಕೊರೆವ ಚಳಿಯಲ್ಲಿ ಹೋರಾಟ ನಡೆಸಿರುವ ರೈತರು ಕರೆ ನೀಡಿದ್ದ ಇಂದಿನ ಭಾರತ್ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು ತಮ್ಮ ದಿನನಿತ್ಯದ ಕೆಲಸಗಳಿಗೆ ಹಾಜರಾಗದೇ ಮನೆಯಲ್ಲಯೇ ಉಳಿದಿದ್ದಾರೆ. ಹಾಗಾಗೆ ಬೆಂಗಳೂರಿನ ಬಹುತೇಕ ರಸ್ತೆಗಳು ಖಾಲಿ ಖಾಲಿಯಾಗಿವೆ.

ಬೆಂಗಳೂರು – ಮೈಸೂರು ರಸ್ತೆಯಲ್ಲಿ ವಾಹನಗಳ ಸಂಖ್ಯೆ ವಿರಳಾತೀ ವಿರಳವಾಗಿವೆ. ಇನ್ನು ಮುಂಜಾನೆಯೆ ಹೂ, ಹಣ್ಣು ತರಕಾರಿ ಮಾರುವ ಬಹುತೇಕ ಬೀದಿಬದಿ ವ್ಯಾಪಾರಿಗಳು ಅಂಗಡಿ ತೆರೆಯದೆ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಬಂದ್‌ಗೆ ಕರೆ ನೀಡಿರುವ ರೈತ-ದಲಿತ-ಕಾರ್ಮಿಕರ ‘ಐಕ್ಯ ಹೋರಾಟ’ ಸಮಿತಿಯು ಬೆಳಿಗ್ಗೆಯಿಂದಲೇ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಬಳಿ ಜಮಾಯಿಸಿ ಹೋರಾಟ ಆರಂಭಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಪಕ್ಷವು ವಿಧಾನಸೌಧದ ಎದುರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಮೂಲಕ ಭಾರತ್ ಬಂದ್ ಅನ್ನು ಬೆಂಬಲಿಸಿದೆ.

ಪಶ್ಚಿಮ ಬಂಗಾಳದಲ್ಲಿ ರೈಲು ತಡೆ ನಡೆಸಿ ಎಡಪಕ್ಷಗಳು ಭಾರತ್ ಬಂದ್ ಹೋರಾಟವನ್ನು ಆರಂಭಿಸಿವೆ.

ತೆಲಂಗಾಣದಲ್ಲಿ ರಸ್ತೆ ಸಾರಿಗೆ ನಿಗಮದ ಕಾರ್ಮಿಕರು ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ವಿರೋಧ ಪಕ್ಷಗಳು ಸಹ ಇದೇ ಕೃಷಿ ಕಾನೂನು ತರಬಯಸಿದ್ದವು, ಈಗ ವಿರೋಧಿಸುವುದು ಅವರ ಇಬ್ಬಂದಿತನ – ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...