ಪ್ರಧಾನಿ ನರೇಂದ್ರ ಮೋದಿಯನ್ನು ‘ಗಾಂಪರ ಗುರು’ ಹಾಗೂ ‘ಕಾರ್ಪೊರೇಟ್ ಸೇವಕ’ ಮತ್ತು ರಾಜ್ಯ ಬಿಜೆಪಿಯನ್ನು ‘ಗಾಂಪರ ಗುಂಪು’ ಎಂಬುವುದಾಗಿ ಕಾಂಗ್ರೆಸ್ ಪಕ್ಷವು ಮಂಗಳವಾರ ಲೇವಡಿ ಮಾಡಿದೆ. ಪ್ರಧಾನಿಯು ತನ್ನ ಉದ್ಯಮಿ ಗೆಳೆಯರಿಗಾಗಿ ಇಂಧನ ತೈಲಗಳ ದರ ಏರಿಕೆ ಮಾಡುವ ಮೂಲಕ ಜನರ ಸುಲಿಗೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ತೈಲ ದರ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ‘ಪೆಟ್ರೋಲ್ ಸೆಂಚುರಿ ನಾಟೌಟ್’ ಎಂಬ ಸರಣಿ ಪ್ರತಿಭಟನೆಯನ್ನು ಇತ್ತೀಚೆಗೆ ದೇಶದಾತ್ಯಂತ ಆಯೋಜಿಸಿತ್ತು.
ಇದನ್ನೂ ಓದಿ: ಮಾನನಷ್ಟ ಪ್ರಕರಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 2 ಕೋಟಿ ದಂಡ
ಇಂದು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್‌ನ ಅಧೀಕೃತ ಖಾತೆ, “ಗಾಂಪರ ಗುರು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೊರೇಟ್ ಸೇವಕನಾಗಿ ತನ್ನ ಉದ್ಯಮಿ ಗೆಳೆಯರಿಗಾಗಿ ಇಂಧನ ತೈಲಗಳ ದರ ಏರಿಕೆ ಮೂಲಕ ಜನರ ಸುಲಿಗೆ ನಡೆಸಿದ್ದಾರೆ. ಈ ಸುಲಿಗೆಯನ್ನು ಸಮರ್ಥಿಸಿಕೊಳ್ಳಲು ಗಾಂಪರ ಗುಂಪು ಎನಿಸಿರುವ ರಾಜ್ಯ ಬಿಜೆಪಿ ತಮ್ಮ ವೈಫಲ್ಯಕ್ಕೆ ನೆಹರೂ ಮತ್ತು ಕಾಂಗ್ರೆಸ್‌ನ್ನು ದೋಷಿಸುವುದನ್ನು ‘ಚಟ’ವನ್ನಾಗಿಸಿಕೊಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಗಾಂಪರ ಗುರು @narendramodi ಅವರು ಕಾರ್ಪೊರೇಟ್ ಸೇವಕನಾಗಿ ತನ್ನ ಉದ್ಯಮಿ ಗೆಳೆಯರಿಗಾಗಿ ಇಂಧನ ತೈಲಗಳ ದರ ಏರಿಕೆ ಮೂಲಕ ಜನರ ಸುಲಿಗೆ ನಡೆಸಿದ್ದಾರೆ.
ಈ ಸುಲಿಗೆಯನ್ನು ಸಮರ್ಥಿಸಿಕೊಳ್ಳಲು ಗಾಂಪರ ಗುಂಪು ಎನಿಸಿರುವ @BJP4Karnataka ತಮ್ಮ ವೈಫಲ್ಯಕ್ಕೆ ನೆಹರೂ & ಕಾಂಗ್ರೆಸ್‌ನ್ನು ದೋಷಿಸುವುದನ್ನ 'ಚಟ'ವನ್ನಾಗಿಸಿಕೊಂಡಿದೆ.#petrol100notout
— Karnataka Congress (@INCKarnataka) June 22, 2021
ರಾಜ್ಯ ಕಾಂಗ್ರೆಸ್ ಮತ್ತು ಬಿಜೆಪಿಯು ಇತ್ತೀಚೆಗೆ ಟ್ವಿಟರ್‌ನಲ್ಲಿ ನಿರಂತರವಾಗಿ ವಾದ ಪ್ರತಿವಾದಗಳನ್ನು ನಡೆಸುತ್ತಿದೆ. ಪೆಟ್ರೋಲ್ ಮತ್ತು ಡಿಸೆಲ್ ದರ ಹೆಚ್ಚಳದ ಬಿಸಿ ರಾಜ್ಯದಲ್ಲೂ ಪರಿಣಾಮ ಬೀರಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ನ ಇಂದಿನ ದರ ಒಂದು ಲೀಟರ್‌ಗೆ 100.17 ರೂ ಆಗಿದ್ದರೆ, ಡೀಸಲ್ ಒಂದು ಲೀಟರ್‌ಗೆ 93.54 ರೂ ಆಗಿದೆ.
ಇದನ್ನೂ ಓದಿ: ಪತ್ರಕರ್ತೆ ರಾಣಾ ಅಯ್ಯೂಬ್ ಅವರ ಬಂಧನಕ್ಕೆ ಬಾಂಬೆ ಹೈಕೋರ್ಟ್‌ನಿಂದ 4 ವಾರಗಳ ತಡೆ