Homeಮುಖಪುಟಥ್ಯಾಂಕ್ಯೂ ಅಮೀರ್ ಖಾನ್ ಎಂದ ಪ್ರಧಾನಿ ನರೇಂದ್ರ ಮೋದಿ...

ಥ್ಯಾಂಕ್ಯೂ ಅಮೀರ್ ಖಾನ್ ಎಂದ ಪ್ರಧಾನಿ ನರೇಂದ್ರ ಮೋದಿ…

- Advertisement -
- Advertisement -

ಏಕಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಪ್ರಧಾನ ಮಂತ್ರಿಯ ಕ್ರಮವನ್ನು ಶ್ಲಾಘಿಸಿದ್ದ ನಟ ಅಮೀರ್ ಖಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಧನ್ಯವಾದ ತಿಳಿಸಿದ್ದಾರೆ

ತಮ್ಮ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಮಾತನಾಡಿದ್ದ ಪ್ರಧಾನಿಯವರು, ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಾದ ಅಕ್ಟೋಬರ್ 2 ರಿಂದ ಪ್ಲಾಸ್ಟಿಕ್ ವಿರುದ್ಧ ಹೊಸ ಕ್ರಾಂತಿಯನ್ನು ಪ್ರಾರಂಭಿಸಬೇಕೆಂದು ಜನರನ್ನು ಕೋರಿದ್ದರು. ಈ ತಿಂಗಳ ಆರಂಭದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಾಡಿದ ಪ್ಲಾಸ್ಟಿಕ್ ಮುಕ್ತ ಭಾರತದ ಮನವಿಯ ಮುಂದುವರಿಕೆಯಾಗಿತ್ತು.

“ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ಏಕ ಬಳಕೆಯ ಪ್ಲಾಸ್ಟಿಕ್ ’ಅನ್ನು ನಿಗ್ರಹಿಸುವ ಪ್ರಯತ್ನವನ್ನು ನಾವೆಲ್ಲರೂ ಬಲವಾಗಿ ಬೆಂಬಲಿಸಬೇಕಾಗಿದೆ. ನಾವು ‘ಏಕ ಬಳಕೆಯ ಪ್ಲಾಸ್ಟಿಕ್’ ಬಳಕೆಯನ್ನು ನಿಲ್ಲಿಸುತ್ತೇವೆ ಎಂದು ಖಚಿತಪಡಿಸಿವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ನಟ ಅಮೀರ್ ಖಾನ್ ಟ್ವೀಟ್ ಮಾಡಿದ್ದರು.

ಇದಕ್ಕಿ ಪ್ರತಿಕ್ರಿಯಿಸಿರುವ ಪ್ರಧಾನಿಯವರು “ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತೆಗೆದುಹಾಕುವ ಆಂದೋಲನಕ್ಕೆ ಅಮೂಲ್ಯವಾದ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು ಅಮೀರ್ ಖಾನ್. ನಿಮ್ಮ ಉತ್ತೇಜಕ ಮಾತುಗಳು ಚಳುವಳಿಯನ್ನು ಬಲಪಡಿಸಲು ಇತರರಿಗೆ ಪ್ರೇರಣೆ ನೀಡುತ್ತದೆ ”ಎಂದು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಪ್ರತಿದಿನ 15,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದರಲ್ಲಿ 9,000 ಟನ್ ನಷ್ಟನ್ನು ಸಂಗ್ರಹಿಸಿ ಮರುಬಳಕೆ ಮಾಡಲಾಗುತ್ತದೆ. ಆದರೆ 6,000 ಟನ್ ಪ್ಲಾಸ್ಟಿಕ್ ತ್ಯಾಜ್ಯವು ಕಸವಾಗಿ ಹಾಗೆಯೇ ಉಳಿಯುತ್ತಿದೆ ಎಂದು 2018 ರಲ್ಲಿ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ರವರು ಹೇಳಿದ್ದರು.

ಈ ಕಸದ ಪ್ಲಾಸ್ಟಿಕ್ ನದಿಗಳು, ಸಾಗರಗಳು ಮತ್ತು ನೆಲದ ಮಣ್ಣಿನಲ್ಲಿ ಉಳಿದು ಪರಿಸರವನ್ನು ಕಲುಷಿತಗೊಳಿಸುತ್ತದೆ. ಸಸ್ಯಗಳ ಬೆಳವಣಿಗೆಗೆ ಅಡ್ಡಿಯಾಗುತ್ತದೆ, ಚರಂಡಿಗಳು ಮತ್ತು ಕಾಲುವೆಗಳನ್ನು ನಿರ್ಬಂಧಿಸುತ್ತದೆ ಮತ್ತು ಪರಿಸರ ವ್ಯವಸ್ಥೆಗಳನ್ನು ಏರು ಪೇರು ಮಾಡುತ್ತಿವೆ.

12 ಹಿಮಾಲಯನ್ ರಾಜ್ಯಗಳಾದ ಸಿಕ್ಕಿಂ, ಮೇಘಾಲಯ, ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್, ಉತ್ತರಾಖಂಡ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಾದ್ಯಂತ ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಯುದ್ಧದಲ್ಲಿ 2018 ರ ಮೇ 26 ರಂದು ನಡೆದ ಎರಡು ಗಂಟೆಗಳ ಕಾರ್ಯಾಚರಣೆಯಲ್ಲಿ ಸ್ವಯಂಸೇವಕರು ಸುಮಾರು ನಾಲ್ಕು ಲಕ್ಷ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದರು.

2.50 ಲಕ್ಷಕ್ಕೂ ಹೆಚ್ಚು (62.67%) ತ್ಯಾಜ್ಯ ವಸ್ತುಗಳು ಚಿಪ್ಸ್, ಮಿಠಾಯಿಗಳು, ಚೂಯಿಂಗ್ ಮತ್ತು ತಂಬಾಕು ಉತ್ಪನ್ನಗಳ ಹೊದಿಕೆಗಳನ್ನು ಒಳಗೊಂಡಿವೆ. ಮಲ್ಟಿ-ಲೇಯರ್ಡ್ ಪ್ಲಾಸ್ಟಿಕ್ ಎಂದು ವರ್ಗೀಕರಿಸಲಾದ ಇಂತಹ ಹೊದಿಕೆಗಳನ್ನು ಮರುಬಳಕೆ ಮಾಡಲಾಗುವುದಿಲ್ಲ ಮತ್ತು ಜೈವಿಕ ವಿಘಟನೀಯವಲ್ಲ ಎಂದು ತಜ್ಞರು ಹೇಳುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನನಗಿದು ಇಷ್ಟವಾಗಲಿಲ್ಲ. ಜನಪರ ಕಾಳಜಿ ತೋರಿಸುತ್ತಲೇ ಬಂದಿರುವ ಅಮೀರ್ ಖಾನ್ ಹೇಳಿದ್ದು ನಿಜವಾದ ಸುದ್ದಿ. ಅದನ್ನು ಈ ಪ್ರಚಾರ ಪ್ರಿಯ ಪ್ರಧಾನಿ ಶ್ಲಾಘಿಸಿದ್ದು ಯಾವ ಸೀಮೆಯ ಸುದ್ದಿ!? ಆತನಿಗೆ ಇನ್ನಷ್ಟು ಪ್ರಚಾರ ಸಿಕ್ಕಿತು ಅಷ್ಟೇ. ಆತನಿಗೆ ನಿಜವಾದ ಕಾಳಜಿ ಇದ್ದರೆ ಏಕ ಬಳಕೆಯ ಪ್ಲಾಸ್ಟಿಕನ್ನು ಮೂಲದಲ್ಲೇ ನಿಷೇಧಿಸಲಿ. Lip serviceಗಳಿಗೆ ಏಕೆ ಪ್ರಚಾರ ಕೊಡುತ್ತೀರಿ?

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...