Homeಮುಖಪುಟಗೋಬೆಲ್ಸ್‌ನಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ 'ನ್ಯಾಯ ಪತ್ರ' ಟೀಕಿಸುತ್ತಿರುವ ಪ್ರಧಾನಿ: ಜೈರಾಮ್ ರಮೇಶ್

ಗೋಬೆಲ್ಸ್‌ನಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ ‘ನ್ಯಾಯ ಪತ್ರ’ ಟೀಕಿಸುತ್ತಿರುವ ಪ್ರಧಾನಿ: ಜೈರಾಮ್ ರಮೇಶ್

ಮೋದಿಯವರ ಧ್ಯೇಯ ಯಾವಾಗಲೂ 'ಅಸತ್ಯಮೇವ ಜಯತೇ'; ಅವರು ಮಾತನಾಡುವಾಗಲೆಲ್ಲಾ ಸತ್ಯದ ಹತ್ಯೆಯಾಗುತ್ತದೆ

- Advertisement -
- Advertisement -

ಲೋಕಸಭೆ ಚುನಾವಣೆಗೆ ಪಕ್ಷದ ನ್ಯಾಯ ಪತ್ರದ ಕುರಿತು ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ನಾಜಿ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, “ಎಂಟೈರ್ ಪೊಲಿಟಿಕಲ್ ಸೈನ್ಸ್‌ ಎಂಎ ಪದವಿಗಾಗಿ, ಶ್ರೀ ನರೇಂದ್ರ ಮೋದಿ ಅವರು ಖಂಡಿತವಾಗಿಯೂ ಪ್ರಚಾರದ ಮೌಲ್ಯದ ಕುರಿತು ಜೋಸೆಫ್ ಗೋಬೆಲ್ಸ್ ಅವರನ್ನು ಓದಿರಬೇಕು ಮತ್ತು ಅವರಿಂದ ಸ್ಫೂರ್ತಿ ಪಡೆದಿರಬೇಕು” ಎಂದು ಲೇವಡಿ ಮಾಡಿದ್ದಾರೆ.

“ನೀವು ಸಾಕಷ್ಟು ದೊಡ್ಡ ಸುಳ್ಳನ್ನು ಹೇಳಿದರೆ ಮತ್ತು ಅದನ್ನು ಪುನರಾವರ್ತಿಸಿದರೆ, ಜನರು ಅಂತಿಮವಾಗಿ ಅದನ್ನು ನಂಬುತ್ತಾರೆ” ಎಂದು ಗೊಬೆಲ್ಸ್ ಹೇಳಿದ್ದಾರೆ ಎಂದರು.

“ಸುಳ್ಳು ಹೇಳಿದಾಗ ದೊಡ್ಡದಾಗಿ ಸುಳ್ಳು ಹೇಳಬೇಕು ಮತ್ತು ಅದಕ್ಕೆ ಅಂಟಿಕೊಳ್ಳಬೇಕು ಎಂಬ ತತ್ವವನ್ನು ಇಂಗ್ಲಿಷರು ಅನುಸರಿಸುತ್ತಾರೆ ಎಂದು ಅವರು 1941ರಲ್ಲಿ ಬರೆದಿದ್ದಾರೆ” ಎಂದು ರಮೇಶ್ ಹೇಳಿದರು.

ಗೊಬೆಲ್ಸ್ ಜರ್ಮನ್ ಆಡಳಿತಗಾರ ಅಡಾಲ್ಫ್ ಹಿಟ್ಲರನ ಪ್ರಚಾರ ಮಂತ್ರಿಯಾಗಿದ್ದರು.

“ಟಿವಿ ಚಾನೆಲ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ನಿರ್ಗಮಿತ ಪ್ರಧಾನಿ ಅವರು ಕಾಂಗ್ರೆಸ್‌ನ ನ್ಯಾಯ ಪತ್ರದ ಬಗ್ಗೆ ಮತ್ತೊಮ್ಮೆ ನಿರ್ಲಜ್ಜವಾಗಿ ಮತ್ತು ನಾಚಿಕೆಯಿಲ್ಲದೆ ಸುಳ್ಳು ಹೇಳಿದ್ದಾರೆ. ಮೋದಿಯವರ ಧ್ಯೇಯ ಯಾವಾಗಲೂ ‘ಅಸತ್ಯಮೇವ ಜಯತೇ’ ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಅವರು ಮಾತನಾಡುವಾಗಲೆಲ್ಲಾ ಸತ್ಯದ ಹತ್ಯೆಯಾಗುತ್ತದೆ” ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

ಇದನ್ನೂ ಓದಿ; ‘ಬಿಜೆಪಿ-ಬಿಜೆಡಿ ಮದುವೆಯಾಗಿದ್ದಾರೆ, ಆಯ್ದ ಕೆಲವರಿಗಾಗಿ ಕೆಲಸ ಮಾಡುತ್ತಿದ್ದಾರೆ..’; ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಮಹಾಲಕ್ಷಿ ಮತ್ತು ಮೆಟ್ರೋ’: ತೆಲಂಗಾಣ ಸರ್ಕಾರ-ಎಲ್‌&ಟಿ ನಡುವೆ ಜೋರಾದ ಜಟಾಪಟಿ

0
ಹೈದರಾಬಾದ್ ಮಹಾನಗರ ಮೆಟ್ರೋ ಸೇವೆ ಸೇರಿದಂತೆ ತೆಲಂಗಾಣ ರಾಜ್ಯದ ಹಲವು ಬೃಹತ್ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತಿರುವ 'ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ)' ಕಂಪನಿ ಮತ್ತು ರಾಜ್ಯ ಸರ್ಕಾರದ...