Homeಕರ್ನಾಟಕಕೊನೆಗೂ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಅರೆಸ್ಟ್‌‌

ಕೊನೆಗೂ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಅರೆಸ್ಟ್‌‌

- Advertisement -
- Advertisement -

ರಾಜ್ಯದಲ್ಲಿ ರಾಜಕೀಯವಾಗಿ ಭಾರಿ ಚರ್ಚೆ ಉಂಟುಮಾಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ಗಾಗಿ ಹಲವು ದಿನಗಳಿಂದ ಬೇಟೆಯಾಡುತ್ತಿದ್ದ ರಾಜ್ಯ ಪೊಲೀಸರು ಶುಕ್ರವಾರದಂದು ಗುಜರಾತ್‌ನಲ್ಲಿ ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ರವಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.

ರವಿ ಕಾರು ಚಾಲಕನನ್ನು ಗುರುವಾರ ಬಂಧಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಾಮನಗರ ಎಸ್ಪಿ ಸಂತೋಷ್ ಬಾಬು ನೇತೃತ್ವದ ಪೊಲೀಸ್ ತಂಡ ಆತನನ್ನು ಬಂಧಿಸಿತ್ತು. ಇದೀಗ ರವಿಯನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಸ್ಯಾಂಟ್ರೋ ರವಿ ವಿರುದ್ಧ FIR ದಾಖಲಾಗಿ ಹತ್ತು ದಿನಗಳಾಗಿವೆ. ಇಷ್ಟಾದರೂ ಸ್ಯಾಂಟ್ರೋ ರವಿಯ ಬಂಧನವಾಗಿಲ್ಲ. ಸ್ಯಾಂಟ್ರೋ ರವಿ BJP ಕಾರ್ಯಕರ್ತ ಎನ್ನುವ ಕಾರಣಕ್ಕೆ ಆತನ ಬಂಧನವಾಗುತ್ತಿಲ್ಲವೇ” ಎಂದು ಕಾಂಗ್ರೆಸ್‌ನ ನಾಯಕ ದಿನೇಶ್‌ ಗುಂಡೂರಾವ್‌ ಬಿಜೆಪಿ ಸರ್ಕಾರಕ್ಕೆ ಗುರುವಾರ ಪ್ರಶ್ನೆ ಮಾಡಿದ್ದರು.

“ಕೆಲ BJPಯವರಿಗೆ ಅವನು ಸಲ್ಲಿಸಿದ ‘ಸೇವೆ’ಯ ಕೃತಾಜ್ಞಾರ್ಥವಾಗಿ ಬಂಧನದಿಂದ ಆತನ ರಕ್ಷಣೆ ಮಾಡಲಾಗುತ್ತಿದೆಯೇ? ಸ್ಯಾಂಟ್ರೋ ರವಿ ಬಂಧನ ಯಾವಾಗ?” ಎಂದು ಅವರು ಕೇಳಿದ್ದರು.

ಕಳೆದ ವರ್ಷ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೋ ರವಿ ಆಲಿಯಾಸ್ ಕೆ.ಎಸ್ ಮಂಜುನಾಥ್ ವಿರುದ್ಧ ದೂರು ದಾಖಲಾಗಿದ್ದ ಸಂದರ್ಭದಲ್ಲಿ ಆತ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿತ್ತು.

ಅಲ್ಲದೆ, ತಾನು ವರ್ಗಾವಣೆ ಮಾಡಿಸಿಕೊಟ್ಟಿರುವುದಾಗಿ ಸ್ವತಃ ಆತನೇ ಒಪ್ಪಿಕೊಂಡಿದ್ದು, ಸಿಎಂ ಮಗನ ಜೊತೆಗಿನ ಸ್ಯಾಂಟ್ರೋ ರವಿ ನಡೆಸಿದ್ದಾನೆ ಎನ್ನಲಾಗಿರುವ ವಾಟ್ಸಾಪ್ ಸಂದೇಶ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...