Homeಮುಖಪುಟಸೂರ್ಯ ನಮಸ್ಕಾರದಿಂದ ಸೋಲಿಸುತ್ತೇನೆ : ರಾಹುಲ್ ಗಾಂಧಿಯನ್ನು"ಟ್ಯೂಬ್ಲೈಟ್"ಎಂದು ಕುಟುಕಿದ ಪ್ರಧಾನಿ

ಸೂರ್ಯ ನಮಸ್ಕಾರದಿಂದ ಸೋಲಿಸುತ್ತೇನೆ : ರಾಹುಲ್ ಗಾಂಧಿಯನ್ನು”ಟ್ಯೂಬ್ಲೈಟ್”ಎಂದು ಕುಟುಕಿದ ಪ್ರಧಾನಿ

- Advertisement -
- Advertisement -

ಆರು ತಿಂಗಳಿನಿಂದ ಸೂರ್ಯ ನಮಸ್ಕಾರ ಮಾಡಿ ನನಗೆ ಹೊಡೆಯಲು ಬರುವವರ ವಿರುದ್ಧ ನಾನು ತಯಾರಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ದೆಹಲಿ ಚುನಾವಣೆಗೆ ಪ್ರಚಾರ ಮಾಡುವಾಗ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ: “ನೀವು ನೋಡುತ್ತಿರಿ ಈಗ ಭಾಷಣಗಳನ್ನು ಮಾಡುತ್ತಿರುವ ನರೇಂದ್ರ ಮೋದಿ ಇನ್ನು ಆರು-ಏಳು ತಿಂಗಳಲ್ಲಿ ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಯುವಭಾರತ ಅವರನ್ನು ಕೋಲುಗಳಿಂದ ಸೋಲಿಸುತ್ತದೆ. ಯುವಕರಿಗೆ ಉದ್ಯೋಗ ನೀಡದಿದ್ದರೆ, ಭಾರತ ಮುಂದೆ ಚಲಿಸಲು ಸಾಧ್ಯವಿಲ್ಲ , ಇದು ಪ್ರಧಾನಿಗೆ ಅರ್ಥವಾಗುವಂತೆ ಅವರು ಮಾಡುತ್ತಾರೆ” ಎಂದಿದ್ದರು.

ಇದಕ್ಕೆ ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ “70 ವರ್ಷಗಳಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರು ಸ್ವಾವಲಂಬಿಗಳಾಗಿಲ್ಲ. ಒಬ್ಬ ನಾಯಕನ ಮಾತನ್ನು ನಾನು ಕೇಳಿದ್ದೇನೆ ಅವರು ನಾವು ಆರು ತಿಂಗಳಲ್ಲಿ ಮೋದಿಯನ್ನು ಕೋಲಿನಿಂದ ಹೊಡೆಯುತ್ತೇವೆ ಎಂದಿದ್ದಾರೆ. ಇದು ಕಷ್ಟಕರ ಎಂದು ನಾನು ಹೇಳಬಲ್ಲೆ, ಅದನ್ನು ಮಾಡಲು ಅವರಿಗೆ ಆರು ತಿಂಗಳುಗಳ ತಯಾರಿ ಬೇಕಾಗುತ್ತವೆ. ಆದರೆ ನಾನು ಆ ಆರು ತಿಂಗಳಲ್ಲಿ ಹೆಚ್ಚು ಸೂರ್ಯ ನಮಸ್ಕಾರ ಮಾಡಿ ಅದನ್ನು ಎದುರಿಸಲು ಸಿದ್ಧನಾಗಿದ್ದೇನೆ… ಕಳೆದ 20 ವರ್ಷಗಳಲ್ಲಿ ನಾನು ಯಾವ ರೀತಿಯ ನಿಂದನೆಗಳಿಗೆ ಒಳಗಾಗಿದ್ದೇನೆಂದರೆ ಈಗ ನಾನು ಗಾಲಿ-ಪ್ರೂಫ್ (ನಿಂದನೆ-ನಿರೋಧಕ) ಮತ್ತು ದಂಡಾ-ಪ್ರೂಫ್ (ಸ್ಟಿಕ್-ಪ್ರೂಫ್) ಆಗಿದ್ದೇನೆ” ಎಂದರು.

ಈ ಮಧ್ಯೆ ರಾಹುಲ್ ಗಾಂಧಿ ಮಧ್ಯಪ್ರವೇಶಿಸಲು ಏಳುತ್ತಿದ್ದಂತೆ “ನಾನು 30-40 ನಿಮಿಷಗಳ ಕಾಲ ಮಾತನಾಡುತ್ತಿದ್ದೇನೆ ಆದರೆ ಕರೆಂಟ್ ತಲುಪಲು ಬಹಳ ಸಮಯ ತೆಗೆದುಕೊಂಡಿತು. ಸಾಧಾರಣವಾಗಿ ‘ಟ್ಯೂಬ್ಲೈಟ್’ ಹೀಗೆ ಇರುತ್ತವೆ” ಎಂದು ವ್ಯಂಗ್ಯವಾಗಿ ಕುಟುಕಿದರು. “ನನಗೆ ಒಂದು ರೀತಿಯಲ್ಲಿ ಮುಂಗಡ ನೋಟಿಸ್ ನೀಡಲಾಗಿದೆ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದೂ ಹೇಳಿದರು.

ರಾಹುಲ್ ಗಾಂಧಿಯನ್ನು ಟ್ಯೂಬ್ಲೈಟ್ ಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸುವಂತೆ ವರದಿಗಾರರು ಕೇಳಿದಾಗ “ದೇಶದ ಮುಂದೆ ಇರುವ ದೊಡ್ಡ ಸಮಸ್ಯೆ ನಿರುದ್ಯೋಗ ಆದರೆ ಪ್ರಧಾನಿ ಮೋದಿ ಈ ಬಗ್ಗೆ ಏನೂ ಹೇಳಿಲ್ಲ. ಸಮಸ್ಯೆಯಿಂದ ಬೇರೆಡೆಗೆ ತಿರುಗುವುದು ಪ್ರಧಾನ ಮಂತ್ರಿಯ ಶೈಲಿಯಾಗಿದೆ” ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...