Homeಚಳವಳಿಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸ್‌ ದಾಳಿ, ಬಂಧನ ಖಂಡಿಸಿ ವ್ಯಾಪಕ ಪ್ರತಿರೋಧ

ಶಾಂತಿಯುತ ಪ್ರತಿಭಟನಕಾರರ ಮೇಲೆ ಪೊಲೀಸ್‌ ದಾಳಿ, ಬಂಧನ ಖಂಡಿಸಿ ವ್ಯಾಪಕ ಪ್ರತಿರೋಧ

- Advertisement -
- Advertisement -

ಇಂದು ದೇಶಾದ್ಯಂತ ಪೌರತ್ವ ಕಾಯ್ದೆಯ ವಿರುದ್ಧ ಶಾಂತಿಯುವ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು ಮತ್ತು ಎಡಪಕ್ಷಗಳು ಪ್ರತಿಭಟನೆಗೆ ಕರೆ ನೀಡಿದ್ದವರು. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಬೆದರಿದ ಸರ್ಕಾರಗಳು ಹಲವು ಬಿಜೆಪಿ ಆಡಳಿತವಿರುವಲ್ಲಿ ಪ್ರತಿಭಟನೆಗಳಿಗೆ ಅನುಮತಿ ರದ್ದುಪಡಿಸಿ 144 ಸೆಕ್ಷನ್‌ ಜಾರಿಗೊಳಿಸಿದ್ದಾರೆ.

ಆದರೆ ನಿಷೇದಾಜ್ಞೆಯನ್ನು ಧಿಕ್ಕರಿಸಿರುವ ಪ್ರತಿಭಟನಾಕಾರರು ಶಾಂತಿಯುತ ಪ್ರತಿಭಟನೆಗೆ ದೇಶದೆಲ್ಲೆಡೆ ಮುಂದಾಗಿದ್ದಾರೆ. ಅದರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಪ್ರತಿಭಟನೆಗಳು ಇನ್ನು ನಡೆಯುತ್ತಲೇ ಇವೆ.

ಈ ನಡುವೆ ಬೆಂಗಳೂರಿನ ಟೌನ್‌ಹಾಲ್‌ ಮುಂದೆ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಪ್ರಪಂಚದ ಖ್ಯಾತ ಇತಿಹಾಸಕಾರರಾದ ರಾಮಚಂದ್ರ ಗುಹರವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.

ದುರಹಂಕಾರಿ ಆಳುವವರೇ, ಇಂತಹ ಚಿತ್ರಗಳು ನಿಮ್ಮ ವಿಶ್ವಗುರುವಿನ ಮರ್ಯಾದೆಯನ್ನು ಜಾಗತಿಕವಾಗಿ ಇನ್ನಷ್ಟು ಹರಾಜು ಹಾಕುತ್ತವೆ. ರಾಮಚಂದ್ರ ಗುಹಾ ಎಂದರೆ ಯಾರು ಎನ್ನುವುದು ನಿಮಗೆ ಗೊತ್ತೇ?

ಶಾಂತಿಯುತ ಪ್ರತಿಭಟನೆಗಳಿಗೂ ಸಹ ಅನುಮತಿ ಇಲ್ಲ. ಮೂಲಭೂತ ಹಕ್ಕುಗಳು ಭಾರತದಲ್ಲಿ ಜೋಕ್‌ಗಳಾಗಿವೆ ಎಂದು ಶ್ರೀನಿವಾಸ್‌ ಕಾರ್ಕಳರವರು ವಿಷಾಧ ವ್ಯಕ್ತಪಡಿಸಿದ್ದಾರೆ.

ಭಾರತದ ಅಗ್ರಗಣ್ಯ ಸಾರ್ವಜನಿಕ ಬುದ್ಧಿಜೀವಿಗಳಲ್ಲಿ ಒಬ್ಬರಾದ ರಾಮಚಂದ್ರ ಗುಹಾ, ಗಾಂಧಿ ಮತ್ತು ಅಂಬೇಡ್ಕರ್‌ರವರ ಪೋಸ್ಟರ್ ಗಳನ್ನು ಎತ್ತಿ ಹಿಡಿದಿದ್ದಕ್ಕಾಗಿ ಮತ್ತು ಸಿಎಎ-ಎನ್ಆರ್ಸಿ ಬಗ್ಗೆ ಪತ್ರಿಕೆಗಳೊಂದಿಗೆ ಮಾತನಾಡಿದ್ದಕ್ಕಾಗಿ ಬೆಂಗಳೂರಿನಲ್ಲಿ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ ಮತ್ತು ಬಂಧಿಸಿದ್ದಾರೆ. ಭಾರತವು ಸರ್ವಾಧಿಕಾರಕ್ಕೆ ಇಳಿಯುತ್ತಿರುವ ಮೈಲಿಗಲ್ಲು ಇದಾಗಿದೆ ಎಂದು ಖ್ಯಾತ ಬರಹಗಾರರ ಶಿವಂ ವಿಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಚಿಕೆಗೆಟ್ಟ ಸರ್ಕಾರ ಒಕ್ಕೂಟದ ರಾಜಧಾನಿ ದೆಹಲಿಯ ಹೆಚ್ಚಿನ ಕಡೆಗಳಲ್ಲಿ ಮೊಬೈಲ್ ಸಂಪರ್ಕ ಸ್ಥಗಿತಗೊಳಿಸಿದೆ . ಲೋಕಪಾಲ್ ಚಳುವಳಿಯ ಸಮಯದಲ್ಲಿ ಹಿಂದಿನ ಸರಕಾರವೂ ಜನ ಸೇರಲು ಬಿಡದೆ ಇಂತದ್ದೊಂದು ಕ್ರಮಕ್ಕೆ ಮುಂದಾಗಬಹುದಿತ್ತು. ಆದರೆ ಮಾಡಿರಲಿಲ್ಲ ಯಾಕೆ? ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ಸರ್ಕಾರವೊಂದು ನಡೆದುಕೊಳ್ಳುವ ರೀತಿಯದು. ಬೆಂಗಳೂರಿನಲ್ಲಿ ನಿಷೇದಾಜ್ಞೆಯ ಹೊರತಾಗಿಯೂ ಪ್ರತಿಭಟನೆಗಳಾಗಿವೆ. ಎಲ್ಲೂ ಹಿಂಸಾಚಾರಕ್ಕೆ ತಿರುಗಿದ ಸುದ್ದಿ ಇದುವರೆಗೆ ಬಂದಿಲ್ಲ . ಈ ಮಧ್ಯೆ ಕರ್ನಾಟಕ ಹೈಕೋರ್ಟಿನಲ್ಲಿ ಸರ್ಕಾರದ ನಿಷೇದಾಜ್ಞೆ ಪ್ರಶ್ನಿಸಿ 40 ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ನಾಳೆ ಅದು ವಿಚಾರಣೆಗೆ ಬರಲಿದೆ. ಅಲ್ಲಿಯ ತನಕ ನಮ್ಮ ಪ್ರತಿಭಟನೆ ಶಾಂತಿಯುತವಾಗಿರಲಿ. ಸರ್ಕಾರಕ್ಕೆ ನಾಳೆ ಕೋರ್ಟಿನಲ್ಲಿ ಕೊಡಲು ಹಿಂಸಾಚಾರದ ಕಾರಣ ಇಲ್ಲದಿರಲಿ ಎಂದು ಕುಂಟಾಡಿ ನಿತೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಇದು ಬಿಜೆಪಿ ಅಡಿಯಲ್ಲಿ ಭಾರತ !!! ರಾಮಚಂದ್ರ ಗುಹಾ ಯಾರೆಂದು ನಿಮಗೆ ತಿಳಿದಿಲ್ಲ- ಅದನ್ನು ಮರೆತುಬಿಡಿ. ಆದರೆ ಅವರು ಗಾಂಧಿಯವರ ಆತ್ಮಚರಿತ್ರೆಯನ್ನು ವಿರೋಧಿಸುತ್ತಿದ್ದರು. ಗಾಂಧೀಜಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದಶಕಗಳಿಂದ ಪ್ರತಿಭಟಿಸಿದ ವ್ಯಕ್ತಿ ಎಂದು ವಿನ್ನೀತ್‌ ಕೊನ್ನಟ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...