Homeಮುಖಪುಟಸುಪ್ರೀಂ ನಲ್ಲಿ ಸಚಿನ್ ಪೈಲಟ್ ಬಣದ ವಿರುದ್ಧ ಸಲ್ಲಿಸಿದ್ದ ಅರ್ಜಿ ಕೈಬಿಟ್ಟ ರಾಜಸ್ಥಾನ ಸ್ಪೀಕರ್..

ಸುಪ್ರೀಂ ನಲ್ಲಿ ಸಚಿನ್ ಪೈಲಟ್ ಬಣದ ವಿರುದ್ಧ ಸಲ್ಲಿಸಿದ್ದ ಅರ್ಜಿ ಕೈಬಿಟ್ಟ ರಾಜಸ್ಥಾನ ಸ್ಪೀಕರ್..

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ನ್ಯಾಯಪೀಠ ಅರ್ಜಿ ವಾಪಸ್ ಪಡೆಯಲು ಅವಕಾಶ ನೀಡಿತು.

- Advertisement -
- Advertisement -

ವಿಧಾನಸಭಾ ಅಧಿವೇಶನ ಕರೆಯುವಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ ಅರ್ಜಿಯನ್ನು ಎರಡನೇ ಬಾರಿ ರಾಜ್ಯಪಾಲ ಕಾಳ್‌ರಾಜ್‌ ಮಿಶ್ರಾ ತಿರಸ್ಕರಿಸಿದ ಬೆನ್ನಲ್ಲೇ ಬಂಡಾಯ ಶಾಸಕರ ವಿರುದ್ಧ ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸ್ಪೀಕರ್ ಸಿಪಿ ಜೋಶಿ ಹಿಂಪಡೆದಿದ್ದಾರೆ.

ರಾಜಸ್ಥಾನದಲ್ಲಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು 18 ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ವಿಚಾರಣೆಯನ್ನು ಮುಂದೂಡಲು ಹೈಕೋರ್ಟ್ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ವಿಧಾನಸಭೆ ಸ್ಪೀಕರ್ ಹಿಂತೆಗೆದುಕೊಂಡಿದ್ದಾರೆ.

ಈ ಮೊದಲು ಅಧಿವೇಶನ ನಡೆಸಲು ಸಾಧ್ಯವಿಲ್ಲ, ಏಕೆಂದರೆ ಈ ವಿಚಾರ ಕೋರ್ಟ್‌ನಲ್ಲಿದೆ ಎಂದು ರಾಜ್ಯಪಾಲರು ಕಾರಣ ನೀಡಿದ್ದರು. ಈ ವಾದವನ್ನು ದುರ್ಬಲಗೊಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷವು ಸುಪ್ರೀಂನಿಂದ ತನ್ನ ಅರ್ಜಿಯನ್ನು ಹಿಂಪಡೆದಿದೆ ಎನ್ನಲಾಗಿದೆ.

“ಹೈಕೋರ್ಟ್‌ಗಳು ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಅನುಸರಿಸುತ್ತಿಲ್ಲ ಎಂಬುದು ನಮಗೆ ನೋವುಂಟು ಮಾಡಿದೆ. ಆದ್ದರಿಂದ ಈ ಮನವಿಯನ್ನು ಹಿಂತೆಗೆದುಕೊಳ್ಳಲು ದಯೆಯಿಂದ ನಮಗೆ ಅನುಮತಿ ನೀಡಿ” ಎಂದು ಜೋಶಿಯನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಸಲಹೆಗಾರ ಕಪಿಲ್ ಸಿಬಲ್ ಸುಪ್ರೀಂನಲ್ಲಿ ಮನವಿ ಮಾಡಿದ್ದಾರೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ನ್ಯಾಯಪೀಠ ಅರ್ಜಿ ವಾಪಸ್ ಪಡೆಯಲು ಅವಕಾಶ ನೀಡಿತು.

ಸದ್ಯಕ್ಕೆ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು 102 ಸದಸ್ಯ ಬಲವನ್ನು ಹೊಂದಿದ್ದು ಸರಳ ಬಹುಮತಕ್ಕಿಂತ 1 ಸ್ಥಾನ ಮಾತ್ರ ಹೆಚ್ಚು ಪಡೆದಿದೆ. ಪೈಲಟ್‌ ಬಣದಲ್ಲಿರುವ ಕಾಂಗ್ರೆಸ್ ಶಾಸಕರು ಜೈಪುರಕ್ಕೆ ವಾಪಸ್ ಬಂದಲ್ಲಿ ಅವರಲ್ಲಿ ಕೆಲವರು ತನ್ನ ಪರವಾಗಿ ಮತ ಚಲಾಯಿಸಬಹುದೆಂಬ ವಿಶ್ವಾಸ ಅವರಿಗಿದೆ.

ಇದೇ ಸಂದರ್ಭದಲ್ಲಿ ಬಿಎಸ್‌ಪಿ ಮುಖ್ಯಸ್ಥೆ ಮಾಯವತಿಯವರು, ರಾಜಸ್ಥಾನದಲ್ಲಿ ಬಿಎಸ್‌ಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿರುವ 6 ಶಾಸಕರಿಗೆ ಒಂದು ವೇಳೆ ವಿಶ್ವಾಸಮತ ಯಾಚನೆ ನಡೆದರೆ ಗೆಹ್ಲೋಟ್ ವಿರುದ್ಧವಾಗಿ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಿದ್ದಾರೆ. ಬಿಎಸ್‌ಪಿಯ ಒಟ್ಟು 6 ಶಾಸಕರಲ್ಲಿ 6 ಜನರು ಕಾಂಗ್ರೆಸ್ ಸೇರಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ ಎಂಬುದು ಕಾಂಗ್ರೆಸ್ ನಿಲುವಾಗಿದೆ. ಬಿಎಸ್‌ಪಿ ಪಕ್ಷವು ರಾಷ್ಟ್ರೀಯ ಅಸ್ತಿತ್ವ ಹೊಂದಿದ್ದು ಕೇವಲ ಒಂದು ರಾಜ್ಯದಲ್ಲಿ ಪಕ್ಷಾಂತರ ಮಾಡಿದರೆ ಅದು ತಾಂತ್ರಿಕವಾಗಿ ತಪ್ಪು ಎಂಬುದು ಮಾಯಾವತಿಯವರ ನಿಲುವಾಗಿದೆ.


ಇದನ್ನೂ ಓದಿ: ಪ್ರಜಾಪ್ರಭುತ್ವಕ್ಕಾಗಿ ಮಾತನಾಡಿ: ರಾಜಸ್ಥಾನ ಬಿಕ್ಕಟ್ಟಿನ ಕುರಿತು ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...