Homeಕರೋನಾ ತಲ್ಲಣಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಮಹಿಳೆಗೆ ಡೆಲ್ಟಾ ಪ್ಲಸ್ ಸೋಂಕು..!

ಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಮಹಿಳೆಗೆ ಡೆಲ್ಟಾ ಪ್ಲಸ್ ಸೋಂಕು..!

- Advertisement -
- Advertisement -

ದೇಶಾದ್ಯಂತ ಕೊರೊನಾ 2ನೇ ಅಲೆ ತೀವ್ರತೆ ಕಡಿಮೆಯಾಗುತ್ತಿರುವ ಮಧ್ಯೆಯೇ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕಿನ ಭಯ ಹೆಚ್ಚಾಗುತ್ತಿದೆ. ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​​ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಲಸಿಕೆಯ 2 ಡೋಸ್  ಪಡೆದಿದ್ದ, ಬಿಕನೇರ್​ ಪ್ರದೇಶದ 65 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೋವ್ಯಾಕ್ಸಿನ್​​ ಲಸಿಕೆಯ 2 ಡೋಸ್ ಪಡೆದ ಬಳಿಕವೂ ಮಹಿಳೆಯಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತೆಯ ಸ್ಯಾಂಪಲ್​​ಗಳನ್ನು ರಾಷ್ಟ್ರೀಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಮಹಿಳೆ ಸ್ಯಾಂಪಲ್​ನಲ್ಲಿ ಡೆಲ್ಟಾ ಪ್ಲಸ್​ ಪತ್ತೆಯಾಗಿದ್ದು, ರಾಜಸ್ಥಾನದಲ್ಲಿ ಮೊದಲ ಡೆಲ್ಟಾ ಪ್ಲಸ್​ ಪ್ರಕರಣ ಇದಾಗಿದೆ. ಡೆಲ್ಟಾ ಪ್ಲಸ್​ ವೈರಸ್​​ ಕಾಣಿಸಿಕೊಂಡಿದ್ದರೂ ಮನೆಯಲ್ಲಿಯೇ ಐಸೋಲೇಷನ್​ಗೆ ಒಳಗಾಗಿ 65 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.

ಕೊರೊನಾ ವ್ಯಾಕ್ಸಿನೇಷನ್​ ಬಳಿಕವೂ ರೂಪಾಂತರಿ ಸೋಂಕು ಕಾಣಿಸಿಕೊಂಡಿದ್ದು, ಮಹಿಳೆಯಲ್ಲಿ ಹೆಚ್ಚಿನ ರೋಗ ಲಕ್ಷಣಗಳು ಇರಲಿಲ್ಲ. ಹೀಗಾಗಿ ಮಹಿಳೆ ಹೋಂ ಐಸೋಲೇಷನ್​ಗೆ ಒಳಗಾಗಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಸ್ಥಳೀಯ ಆರೋಗ್ಯಾಧಿಕಾರಿ ಚಹಾರ್​ ತಿಳಿಸಿದ್ದಾರೆ.

ಇದನ್ನೂ ಓದಿ: ಡೆಲ್ಟಾ ಪ್ಲಸ್ 3ನೇ ಅಲೆ ಸೃಷ್ಟಿಸುತ್ತೆ ಎನ್ನಲು ಆಧಾರವಿಲ್ಲ- ಐಜಿಐಬಿ ನಿರ್ದೇಶಕ

ಕೊರೊನಾ ಲಸಿಕೆ ಪಡೆದ ಬಳಿಕವೂ ಸೋಂಕು ಕಾಣಿಸಿಕೊಂಡಿದೆ ಎಂದು ಮಹಿಳೆಯ ಕುಟುಂಬ ಮನೆಯಲ್ಲಿಯೇ ವೈದ್ಯರ ನೆರವಿನಲ್ಲಿ ಚಿಕಿತ್ಸೆ ಪಡೆದಿದ್ದರು. ಇವರ ಸ್ಯಾಂಪಲನ್ನು ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆ ರೂಪಾಂತರಿ ಸೋಂಕಿಗೆ ಒಳಗಾಗಿದ್ದು ಪತ್ತೆಯಾಗಿದೆ.

ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದ್ದ ಮಹಿಳೆಯ ಕುಟುಂಬದ ಮೂವರಲ್ಲಿ ಸೋಂಕು ತಗುಲಿತ್ತಾದರೂ ರೂಪಾಂತರಿ ವೈರಸ್​​​ ಕಾಣಿಸಿಕೊಂಡಿಲ್ಲ. ಕುಟುಂಬದ ಎಲ್ಲರೂ ಹೋಂ ಐಸೋಲೇಷನ್​ನಲ್ಲಿ ಇದ್ದು ಗುಣಮುಖರಾಗಿದ್ದಾರೆ. ಲಸಿಕೆ ಪಡೆದಿದ್ದರಿಂದಲೇ ರೂಪಾಂತರಿ ಸೋಂಕಿಗೆ ತುತ್ತಾದರೂ 65 ವರ್ಷ ಮಹಿಳೆ ಅಪಾಯವಿಲ್ಲದೆ ಗುಣಮುಖರಾಗಿದ್ದಾರೆ ಎಂದು ಆರೋಗ್ಯಧಿಕಾರಿ ತಿಳಿಸಿದ್ದಾರೆ.

ಲಸಿಕೆ ಪಡೆದ ಬಳಿಕವೂ ಸೋಂಕು ಕಾಣಿಕೊಳ್ಳಬಹುದು. ಆದರೆ ಲಸಿಕೆ ಪಡೆದಿರುವುದರಿಂದ ಹೆಚ್ಚಿನ ಹಾನಿ ಆಗುವುದಿಲ್ಲ ಎಂದು ತಜ್ಞ ವೈದ್ಯರು ಹೇಳುತ್ತಿದ್ದಾರೆ. ಇನ್ನು ಕೊರೊನಾ ಲಸಿಕೆಗಳು ರೂಪಾಂತರಿ ಸೋಂಕಿನ ವಿರುದ್ಧವೂ ಪರಿಣಾಮಕಾರಿಯಾಗಿವೆ. ಹೀಗಾಗಿ ತಡ ಮಾಡದೆ 2 ಡೋಸ್​ ಲಸಿಕೆ ಪಡೆಯುವುದು ಉತ್ತಮ ಎನ್ನುತ್ತಿದ್ದಾರೆ.

ಆದರೆ, ಹೊಸದಾಗಿ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ಡೆಲ್ಟಾ ಪ್ಲಸ್‌ ರೂಪಾಂತರಿ ವಿರುದ್ಧ ಹೋರಾಡುವಲ್ಲಿ ಈಗಿರುವ ವ್ಯಾಕ್ಸಿನ್‌ಗಳು ದುರ್ಬಲವಾಗಿರುವುದು ಕಂಡುಬಂದಿದೆ. ಮುಂದೆ ಹೊಸ ಹೊಸ ಕೊರೋನಾ ರೂಪಾಂತರಿಗಳು ಕಾಣಿಸಿಕೊಂಡರೆ ಅವುಗಳ ವಿರುದ್ಧ ವ್ಯಾಕ್ಸಿನ್‌ಗಳು ಯಾವುದೇ ಪರಿಣಾಮವನ್ನು ಬೀರದೇ ಇರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೊಗ್ಯ ಸಂಸ್ಥೆಯು ಸೋಮವಾರ ಜೂನ್‌ 21 ರಂದು ತಿಳಿಸಿದೆ.


ಇದನ್ನೂ ಓದಿ: ಡೆಲ್ಟಾ ಪ್ಲಸ್‌ ರೂಪಾಂತರಿಗೆ ಮಹಾರಾಷ್ಟ್ರದಲ್ಲಿ ಮೊದಲ ಸಾವು: ನಿರ್ಬಂಧಗಳ ಸಡಿಲಿಕೆಯಿಂದ ಹಿಂದೆ ಸರಿದ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...