ಜನವರಿ 26 ರ ಗಣರಾಜ್ಯೋತ್ಸವದಂದು ಕೆಂಪು ಕೋಟೆ ಬಳಿ ನಡೆದ ದಾಂಧಲೆ ಆರೋಪಿ ಆರೋಪಿ ನಟ ದೀಪ್ ಸಿಧುಗೆ ಜಾಮೀನು ದೊರೆತ ಕೆಲವೇ ಗಂಟೆಗಳಲ್ಲಿ ಮತ್ತೆ ದೆಹಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
30,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಜಾಮೀನು ಬಾಂಡ್ ಮೇರೆಗೆ ವಿಶೇಷ ನ್ಯಾಯಾಧೀಶೆ ನೀಲೋಫರ್ ಅಬಿದಾ ಪರ್ವೀನ್ ಅವರು ದೀಪ್ ಸಿಧು ಅವರಿಗೆ ಜಾಮೀನು ಮಂಜೂರು ಮಾಡಿದ್ದರು. ಜೊತೆಗೆ ಅಗತ್ಯವಿದ್ದಾಗ ಪೊಲೀಸ್ ತನಿಖೆಗೆ ಸಹಕರಿಸಲು ನ್ಯಾಯಾಲಯವು ಆದೇಶಿಸಿತ್ತು.
ಈಗ ಮತ್ತೊಂದು ಪ್ರಕರಣದಲ್ಲಿ ದೆಹಲಿ ಅಪರಾಧ ವಿಭಾಗದ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಗಲಭೆಯಲ್ಲಿ ಪಾರಂಪರಿಕ ರಚನೆಯ ಕೆಲವು ಭಾಗಗಳಿಗೆ ಹಾನಿಯಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿ (ಎಎಸ್‌ಐ) ಸಲ್ಲಿಸಿದ ದೂರಿನಡಿಯಲ್ಲಿ ಬಂಧಿಸಲಾಗಿದೆ.
ಇದನ್ನೂ ಓದಿ: ಕೆಂಪು ಕೋಟೆ ದಾಂಧಲೆ ಪ್ರಕರಣ: ಆರೋಪಿ ದೀಪ್ ಸಿಧುಗೆ ಜಾಮೀನು ನೀಡಿದ ದೆಹಲಿ ಕೋರ್ಟ್
Crime Branch of Delhi Police arrests Deep Sidhu, an accused in the 26th January violence case.
He was granted bail by a Delhi Court earlier today.
(File photo) pic.twitter.com/C1RFIaANX8
— ANI (@ANI) April 17, 2021
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 5 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 26 ರಂದು ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಒಕ್ಕೂಟ ಕರೆ ನೀಡಿತ್ತು. ಈ ಮೆರವಣಿಗೆಯಲ್ಲಿ ದೀಪ್ ಸಿಧುವಿನ ಪ್ರಚೋದಿತ ಗುಂಪೊಂದು ಉದ್ದೇಶಿತ ಮಾರ್ಗ ಬಿಟ್ಟು ಕೆಂಪುಕೋಟೆಗೆ ನುಗ್ಗಿ ಸಿಖ್ ಧಾರ್ಮಿಕ ಬಾವುಟವನ್ನು ಹಾರಿಸಿತ್ತು. ಇಲ್ಲಿ ರೈತರು ಮತ್ತು ಪೊಲೀಸರ ನಡುವೆ ಹಿಂಸಾತ್ಮಕ ಘಟನೆಗಳು ನಡೆದು ಇಬ್ಬರೂ ಗಾಯಗೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 9 ರಂದು ದೀಪ್ ಸಿಧುನನ್ನು ಬಂಧಿಸಲಾಗಿತ್ತು.
ದೀಪ್ ಸಿಧು ಕೇವಲ ಅಲ್ಲಿ ಅವರು ಉಪಸ್ಥಿತರಿದ್ದ ಮಾತ್ರಕ್ಕೆ ಅವರು ಕಾನೂನುಬಾಹಿರ ಘಟನೆ ಭಾಗವಾಗಲು ಸಾಧ್ಯವಿಲ್ಲ. ಅವರು ರೈತ ಪ್ರತಿಭಟನೆಯ ಭಾಗವಾಗಿದ್ದ ಪ್ರಾಮಾಣಿಕ ಪ್ರಜೆ ಎಂದು ಸಿಧು ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಶನಿವಾರ ಬೆಳಗ್ಗೆಯಷ್ಟೇ ದೆಹಲಿ ಸ್ಥಳೀಯ ನ್ಯಾಯಾಲಯ ದೀಪ್ ಸಿಧುಗೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಧ್ವಜ ಹಾರಾಟ – ಸುಳ್ಳು ಸುದ್ದಿ ಹರಡುತ್ತಿರುವ ಬಿಜೆಪಿ ಮತ್ತು ಮಾಧ್ಯಮಗಳು: ಭಾರಿ ಆಕ್ರೋಶ


