Homeಮುಖಪುಟಮುನ್ಸೂಚನೆಯಿಲ್ಲದೆ ’ಕಾಶ್ಮೀರ ಟೈಮ್ಸ್’‌‌ ಕಚೇರಿಗೆ ಸೀಲ್- ಎಡಿಟರ್ಸ್ ಗಿಲ್ಡ್‌ ಖಂಡನೆ

ಮುನ್ಸೂಚನೆಯಿಲ್ಲದೆ ’ಕಾಶ್ಮೀರ ಟೈಮ್ಸ್’‌‌ ಕಚೇರಿಗೆ ಸೀಲ್- ಎಡಿಟರ್ಸ್ ಗಿಲ್ಡ್‌ ಖಂಡನೆ

ಇದು ಕಾಶ್ಮೀರ ಟೈಮ್ಸ್‌ಗೆ ಮಾತ್ರವಲ್ಲ, ಸ್ವತಂತ್ರ ಮಾಧ್ಯಮಕ್ಕೆ ಹಾನಿಕಾರಕ ಎಂದು ಗಿಲ್ಡ್ ಟೀಕಿಸಿದೆ

- Advertisement -
- Advertisement -

ಜಮ್ಮು ಕಾಶ್ಮೀರ ಮೂಲದ ಪತ್ರಿಕೆ ’ಕಾಶ್ಮೀರ ಟೈಮ್ಸ್‌‌’ನ ಶ್ರೀನಗರ ಕಚೇರಿಯನ್ನು ಯಾವುದೇ ಮುನ್ಸೂಚನೆಯಿಲ್ಲದೆ ಅಧಿಕಾರಿಗಳು ಸೀಲ್ ಮಾಡಿದ ಘಟನೆ ಕೆಲವು ದಿನಗಳ ನಂತರ ನಡೆದಿದೆ. ಇದನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿದ್ದು, ಇದು ಕಾಶ್ಮೀರ ಟೈಮ್ಸ್‌ಗೆ ಮಾತ್ರವಲ್ಲ, ಸ್ವತಂತ್ರ ಮಾಧ್ಯಮಕ್ಕೆ ಹಾನಿಕಾರಕ ಎಂದು ಹೇಳಿದೆ.

ಕಾಶ್ಮೀರ ಟೈಮ್ಸ್‌ನ ಶ್ರೀನಗರ ಕಚೇರಿಗೆ ಹಠಾತ್ತಾಗಿ ಮೊಹರು ಹಾಕಿದ್ದು ಖಂಡನೀಯ. ಇದು ಮಾಧ್ಯಮಗಳಲ್ಲಿ ಗೊಂದಲ ಪರಿಣಾಮಗಳನ್ನು ಬೀರುತ್ತದೆ ಎಂದು ಎಡಿಟರ್ಸ್ ಗಿಲ್ಡ್‌ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ಇದನ್ನೂ ಓದಿ: ಸಿವಿಲ್ ವಾರ್‌ ಸುದ್ದಿ: ಭಾರತೀಯ ಮಾಧ್ಯಮವನ್ನು ಟ್ರೋಲ್ ಮಾಡುತ್ತಿರುವ ಪಾಕಿಸ್ತಾನಿಯರು!

ಜಮ್ಮ ಕಾಶ್ಮೀರದಲ್ಲಿ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳು ಈಗಾಗಲೆ ಬಳಲುತ್ತಿದ್ದು, ಸಂಪಾದಕರು ಮತ್ತು ವರದಿಗಾರರು ಕಷ್ಟಕರವಾದ ಪರಿಸ್ಥಿತಿಯ ನಡುವೆ ಕೆಲಸ ಮಾಡುತ್ತಿದ್ದಾರೆ ಎಂದು ಗಿಲ್ಟ್ ಹೇಳಿದೆ.

ಕಳೆದ ಒಂದು ದಶಕದಲ್ಲಿ ಪ್ರತ್ರಿಕೆಗಳು ಸ್ಥಿರವಾಗಿ ಜಾಹೀರಾತನ್ನು ಕಳೆದುಕೊಂಡಿದ್ದು, ಕೊರೊನಾ ಲಾಕ್‌ಡೌನ್ ನಂತರ ಜಮ್ಮು ಕಾಶ್ಮೀರದಲ್ಲಿ ಉಂಟಾದ ಸಂವಹನದ ಸ್ಥಗಿತಗೊಳಿಸುವಿಕೆಯಿಂದ ಪತ್ರಿಕೆಗಳ ಆದಾಯ ಸಂಪೂರ್ಣವಾಗಿ ನಿಂತಿದೆ ಎಂದಿದೆ.

ಸರ್ಕಾರವು ವಿಧಿಸಿರುವ ನಿಧಾನಗತಿಯ ಇಂಟರ್ನೆಟ್‌ನಿಂದಾಗಿ ಆನ್‌ಲೈನ್ ಆವೃತ್ತಿಗಳು ಕೂಡಾ ದುರ್ಬಲಗೊಂಡಿವೆ ಎಂದಿರುವ ಎಡಿಟರ್ಸ್ ಗಿಲ್ಡ್, 55 ವರ್ಷದ ಹಳೆಯ ಕಾಶ್ಮೀರ ಟೈಮ್ಸ್ ತನ್ನ ಶ್ರೀನಗರ ಆವೃತ್ತಿಯನ್ನು ಮಾರ್ಚ್‌ನಲ್ಲಿ ಸ್ಥಗಿತಗೊಳಿಸಿರುವುದನ್ನು ಉಲ್ಲೇಖಿಸಿದೆ.

ಯಾವುದೇ ಮುನ್ಸೂಚನೆಯಿಲ್ಲದೆ ಆಡಳಿತವು ಕಾಶ್ಮೀರ ಟೈಮ್ಸ್ ಕಚೇರಿಯ ಮೇಲೆ ಹಿಡಿತ ಸಾಧಿಸಿ, ಅದಕ್ಕೆ ಬೀಗ ಹಾಕಿದ್ದು, ಪತ್ರಿಕೆ ಸಂಪಾದಕಿ ಅನುರಾಧಾ ಭಾಸಿನ್ ಮತ್ತು ಸಿಬ್ಬಂದಿಗೆ ಕಚೇರಿಯ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಗಿಲ್ಡ್, ಈ ಕರಾಳ ಕಾಲದಲ್ಲಿ ಮಾಧ್ಯಮಗಳಿಗೆ ಸಹಾಯ ಮಾಡುವ ಬದಲು ಪತ್ರಿಕೆಯನ್ನು ಮುಚ್ಚುತ್ತಿರುವುದನ್ನು ಖಂಡನೀಯ ಎಂದಿದೆ.

ಇದನ್ನೂ ಓದಿ: ಇದು ಎಲ್ಲಾ ಮೇಲ್ಜಾತಿ ಜನರೂ ಪ್ರತಿಕ್ರಿಯಿಸಲೇಬೇಕಾದ ಸಮಯ, ಮಾಧ್ಯಮಗಳಲ್ಲಿರುವ ಮೇಲ್ಜಾತಿಯವರನ್ನೂ ಒಳಗೊಂಡು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿಯವರ ಹಲವಾರು ಹೇಳಿಕೆಗಳಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸೀತಾರಾಂ ಯೆಚೂರಿ

0
'ದೇಶದ ವಿವಿಧ ಭಾಗಗಳಲ್ಲಿ ತಮ್ಮ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಹೇಳಿಕೆಗಳನ್ನು ನೀಡಿದ್ದಾರೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ...